ವೀಡಿಯೊ | ಪರೀಕ್ಷೆ ಸಮಯದಲ್ಲಿ ಸ್ಫೋಟಗೊಂಡು ಬೆಂಕಿ ಉಂಡೆಯಾದ ಸ್ಪೇಸ್‌ ಎಕ್ಸ್ ನ ಸ್ಟಾರ್‌ ಶಿಪ್ ಬಾಹ್ಯಾಕಾಶ ನೌಕೆ-ವೀಕ್ಷಿಸಿ

ಗುರುವಾರ ಟೆಕ್ಸಾಸ್‌ನ ಮ್ಯಾಸ್ಸೆಯಲ್ಲಿರುವ ಎಲೋನ್ ಮಸ್ಕ್‌ ಅವರರ ಸ್ಪೇಸ್‌ಎಕ್ಸ್ ಪರೀಕ್ಷಾ ಸ್ಥಳದಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, ಹೀಗಾಗಿ ಕಂಪನಿಯ ಮುಂದಿನ ಸ್ಟಾರ್‌ಶಿಪ್ ಉಡಾವಣೆಗೆ ಸಿದ್ಧತೆಗಳನ್ನು ಸ್ಥಗಿತಗೊಳಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದ ಪ್ರಕಾರ, ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಸ್ಟಾರ್‌ಶಿಪ್ ಸ್ಥಿರ ಅಗ್ನಿ ಪರೀಕ್ಷೆಯ ಸಮಯದಲ್ಲಿ ಬೃಹತ್‌ ಸ್ಫೋಟದಲ್ಲಿ ಕೊನೆಗೊಂಡಿದೆ. ಬಾಹ್ಯಾಕಾಶ ನೌಕೆಯು ಸ್ಥಿರವಾಗಿದ್ದಾಗ … Continued

ಬಾಹ್ಯಾಕಾಶದಿಂದ ತೆಗೆದ ಭೂಮಿಯ ಉತ್ತರ-ದಕ್ಷಿಣ ಧ್ರುವಗಳ ಇದೇ ಮೊದಲ ಅದ್ಭುತ ವೀಡಿಯೊ ಹಂಚಿಕೊಂಡ ಸ್ಪೇಸ್‌ ಎಕ್ಸ್ | ವೀಕ್ಷಿಸಿ

ಫ್ರಮ್‌2 (Fram2) ಮಿಷನ್ ಅನ್ನು ಯಶಸ್ವಿಯಾಗಿ ಪ್ರಾರಂಭಿಸಿದ ನಂತರ ಸ್ಪೇಸ್‌ಎಕ್ಸ್ ಬಾಹ್ಯಾಕಾಶದಿಂದ ತೆಗೆದ ಭೂಮಿಯ ಧ್ರುವ ಪ್ರದೇಶಗಳ ಮೊದಲ ವೀಡಿಯೊವನ್ನು ಬಿಡುಗಡೆ ಮಾಡಿದೆ. ಫ್ರಮ್‌ 2 (Fram2) ಮಿಷನ್‌ ಸೋಮವಾರ, ಮಾರ್ಚ್ 31 ರಂದು ಪ್ರಾರಂಭವಾಯಿತು ಹಾಗೂ ನಾಲ್ವರು ಗಗನಯಾತ್ರಿಗಳನ್ನು ಭೂಮಿಯ ಧ್ರುವೀಯ ಕಕ್ಷೆಗೆ ಕಳುಹಿಸಿತು. ಅಮೆರಿಕದ ಫ್ಲೋರಿಡಾದ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ರೆಸಿಲಿಯನ್ಸ್ … Continued

ಸ್ಟಾರ್‌ ಲಿಂಕ್ ಇಂಟರ್ನೆಟ್ ಭಾರತಕ್ಕೆ ತರಲು ಸ್ಪೇಸ್‌ ಎಕ್ಸ್‌ ಜೊತೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡ ರಿಲಯನ್ಸ್ ಜಿಯೋ, ಏರ್‌ ಟೆಲ್

ನವದೆಹಲಿ: ರಿಲಯನ್ಸ್-ಮಾಲೀಕತ್ವದ ಟೆಲಿಕಾಂ ಕಂಪನಿ ಜಿಯೋ ಭಾರತದಲ್ಲಿ ಸ್ಟಾರ್‌ಲಿಂಕ್‌ನ ಬ್ರಾಡ್‌ಬ್ಯಾಂಡ್ ಸೇವೆಗಳನ್ನು ನೀಡಲು ಅಮೆರಿಕ ಮೂಲದ ಸ್ಪೇಸ್‌ಎಕ್ಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದೆ ಎಂದು ಬುಧವಾರ (ಮಾರ್ಚ್ 12) ಪ್ರಕಟಿಸಿದೆ. ಭಾರತದಲ್ಲಿನ ತನ್ನ ಗ್ರಾಹಕರಿಗೆ ಸ್ಟಾರ್‌ಲಿಂಕ್‌ನ ಹೈ-ಸ್ಪೀಡ್ ಇಂಟರ್ನೆಟ್ ಸೇವೆಗಳನ್ನು ತರಲು ಎಲೋನ್ ಮಸ್ಕ್ ಸ್ಥಾಪಿಸಿದ ಸ್ಪೇಸ್‌ಎಕ್ಸ್‌ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಭಾರ್ತಿ ಏರ್‌ಟೆಲ್ ಪ್ರಕಟಿಸಿದ ಒಂದು … Continued

ವೀಡಿಯೊಗಳು…| ಬೆಂಕಿ ಉಂಡೆಯಂತಾದ ಎಲಾನ್ ಮಸ್ಕ್ ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆ ; ಉಡಾವಣೆಗೊಂಡ ಕೆಲವೇ ಕ್ಷಣಗಳಲ್ಲಿ ಸ್ಫೋಟ

ಎಲೋನ್‌ ಮಸ್ಕ್‌ ಅವರ ಸ್ಪೇಸ್‌ ಎಕ್ಸ್‌ನ ಬೃಹತ್ ಸ್ಟಾರ್‌ಶಿಪ್ ಬಾಹ್ಯಾಕಾಶ ನೌಕೆಯು ಗುರುವಾರ ಟೆಕ್ಸಾಸ್‌ನಿಂದ ಉಡಾವಣೆಗೊಂಡ ಕೆಲವೇ ನಿಮಿಷಗಳಲ್ಲಿ ಬಾಹ್ಯಾಕಾಶದಲ್ಲಿ ಸ್ಫೋಟಗೊಂಡಿದೆ. ಇದರಿಂದ, ಇದರಿಂದಾಗಿ ಎಫ್‌ಎಎ (FAA) ಫ್ಲೋರಿಡಾದ ಕೆಲವು ಭಾಗಗಳಲ್ಲಿ ವಾಯು ಸಂಚಾರವನ್ನು ಸ್ಥಗಿತಗೊಳಿಸಿತು. ಸೋಶಿಯಲ್ ಮೀಡಿಯಾದಲ್ಲಿನ ಹಲವಾರು ವೀಡಿಯೊಗಳು ದಕ್ಷಿಣ ಫ್ಲೋರಿಡಾ ಮತ್ತು ಬಹಾಮಾಸ್ ಬಳಿಯ ಮುಸ್ಸಂಜೆಯ ಆಕಾಶದಲ್ಲಿ ಉರಿಯುತ್ತಿರುವ ಶಿಲಾಖಂಡರಾಶಿಗಳನ್ನು ತೋರಿಸಿವೆ., … Continued