ತಮಿಳುನಾಡು : ವಿಜಯ ನೇತೃತ್ವದ ಟಿವಿಕೆಗೆ ವಿಸಿಕೆ ಬೆಂಬಲ ; ಸರ್ಕಾರ ರಚನೆಗೆ ಹಾದಿ ಸುಗಮ

ಚೆನ್ನೈ : ಟಿವಿಕೆ ಪಕ್ಷದ ಮುಖ್ಯಸ್ಥ ವಿಜಯ ಅವರ ‘ಸಂಖ್ಯಾಬಲದ ಆತಂಕ’ ಕೊನೆಗೂ ಮುಗಿದಿದ್ದು, ತಮಿಳುನಾಡಿನಲ್ಲಿ ಸರ್ಕಾರ ರಚನೆ ಹಾದಿ ಸುಗಮವಾಗಿದೆ. ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಬೇಕಾದ ಮ್ಯಾಜಿಕ್ ನಂಬರ್ 118 ಆಗಿದ್ದು, ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಮೈತ್ರಿಕೂಟವು ಈ ಮೊದಲು 116 ಸದಸ್ಯರ ಬಲ ಹೊಂದಿತ್ತು. ಈಗ ವಿಸಿಕೆ (VCK) … Continued

ರಾಜ್ಯಪಾಲರಿಗೆ ಮನವರಿಕೆಯಾಗದ ಟಿವಿಕೆ ಸಂಖ್ಯಾ ಬಲ ; ಅಧಿಕಾರಕ್ಕಾಗಿ ತಮಿಳುನಾಡಿನಲ್ಲಿ ಮುಂದುವರಿದ ಕಸರತ್ತು

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ರಾಜಕಾರಣದಲ್ಲಿ ಅನಿರೀಕ್ಷಿತ ತಿರುವುಗಳು ಕಂಡುಬರುತ್ತಿವೆ. ಚಿತ್ರರಂಗದಿಂದ ರಾಜಕೀಯಕ್ಕೆ ಪದಾರ್ಪಣೆ ಮಾಡಿ ಮೊದಲ ಚುನಾವಣೆಯಲ್ಲೇ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ನಟ ವಿಜಯ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (ಟಿವಿಕೆ)ಪಕ್ಷವು ಸರಳ ಬಹುಮತದ ಸಮೀಪ ಬಂದಿದ್ದರೂ ಸರ್ಕಾರ ರಚಿಸಲು ಅಗತ್ಯವಿರುವ ಮ್ಯಾಜಿಕ್ ನಂಬರ್ ತಲುಪಲು ಹೆಣಗಾಡುತ್ತಿದೆ. ಏಪ್ರಿಲ್ … Continued

ಟಿವಿಕೆಗೆ ಕಾಂಗ್ರೆಸ್‌ ಬೆಂಬಲ ; ಇದು ಅಪ್ಪಟ ವಿಶ್ವಾಸ ದ್ರೋಹ ಎಂದ ಡಿಎಂಕೆ

ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ದಶಕಗಳ ಕಾಲದ ಡಿಎಂಕೆ ಮತ್ತು ಎಐಎಡಿಎಂಕೆ ಏಕಸ್ವಾಮ್ಯವನ್ನು ಮುರಿದು ಇತಿಹಾಸ ಸೃಷ್ಟಿಸಿರುವ ನಟ ವಿಜಯ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷದ ಜೊತೆ ಕಾಂಗ್ರೆಸ್ ಮೈತ್ರಿಗೆ ಮುಂದಾಗಿರುವುದು ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ. ತನ್ನ ದೀರ್ಘಕಾಲದ ಮಿತ್ರಪಕ್ಷವಾದ ಕಾಂಗ್ರೆಸ್‌ನ ಈ ನಡೆಯನ್ನು ಡಿಎಂಕೆ “ಅಪ್ಪಟ ವಿಶ್ವಾಸದ್ರೋಹ” ಎಂದು ಕರೆದಿದೆ. … Continued

ಪಹಲ್ಗಾಮ್ ದಾಳಿ: ‘ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮಕ್ಕೆ ಸಂಪೂರ್ಣ ಬೆಂಬಲ’; ಸರ್ವಪಕ್ಷಗಳ ಸಭೆಯಲ್ಲಿ ವಿಪಕ್ಷಗಳು

ನವದೆಹಲಿ: 26 ಜೀವಗಳನ್ನು ಬಲಿತೆಗೆದುಕೊಂಡ ಪಹಲ್ಗಾಮ್ ಹತ್ಯಾಕಾಂಡವನ್ನು ಖಂಡಿಸಿರುವ ಪ್ರತಿಪಕ್ಷಗಳು ಸರ್ಕಾರದ “ಯಾವುದೇ ಕ್ರಮ”ಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿವೆ. ಗುರುವಾರ ಸಂಜೆ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಿದ ನಂತರ ಗುಪ್ತಚರ ಮತ್ತು ಸರ್ಕಾರಿ ಅಧಿಕಾರಿಗಳಿಂದ ವಿಪಕ್ಷಗಳ ನಾಯಕರಿಗೆ ಮಾಹಿತಿ ನೀಡಲಾಯಿತು. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, “ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಒಕ್ಕೊರಲಿನಿಂದ … Continued

ನೀವು ಪ್ರಧಾನಿಯಾಗಲು ಬಯಸಿದ್ರೆ ನಿಮ್ಮನ್ನು ಬೆಂಬಲಿಸ್ತೇವೆ ಎಂದಿದ್ದರು : ಕೇಂದ್ರ ಸಚಿವ ನಿತಿನ್ ಗಡ್ಕರಿ

ನಾಗ್ಪುರ: ‘ನೀವು ಪ್ರಧಾನಿಯಾಗುವುದಾದರೆ ನಾವು ನಿಮಗೆ ಬೆಂಬಲ ನೀಡುತ್ತೇವೆ’ ಎಂದು ರಾಜಕೀಯ ನಾಯಕರೊಬ್ಬರು ಲೋಕಸಭಾ ಚುನಾವಣೆ ವೇಳೆ ನನಗೆ ಭರವಸೆ ನೀಡಿದ್ದರು. ಆದರೆ, ಅವರ ಪ್ರಸ್ತಾಪವನ್ನು ನಾನು ತಿರಸ್ಕರಿಸಿದ್ದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ” ನನಗೆ ಒಂದು ಘಟನೆ ನೆನಪಿದೆ. ನಾನು ಯಾರನ್ನೂ ಹೆಸರಿಸುವುದಿಲ್ಲ. ಆ ವ್ಯಕ್ತಿ ನೀವು ಪ್ರಧಾನಿಯಾಗಲು ಬಯಸಿದರೆ … Continued