ತೃಣಮೂಲ ಭದ್ರಕೋಟೆಯಲ್ಲೇ ಮಮತಾ ಸೋಲಿಸಿದ ಸುವೇಂದು ; ಭವಾನಿಪುರದಲ್ಲಿ ʼದೀದಿʼಯನ್ನು ಬಿಜೆಪಿ ‘ಚಕ್ರವ್ಯೂಹ’ದಲ್ಲಿ ಕೆಡವಿದ್ದು ಹೇಗೆ ?

ಕೋಲ್ಕತ್ತಾ: ಸರಿಯಾಗಿ ಐದು ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಸೋಲಿನ ಕಹಿ ಉಣಿಸಿದ್ದ ಬಿಜೆಪಿ ನಾಯಕ ಸುವೇಂದು ಅಧಿಕಾರಿ, ಈಗ 2026ರಲ್ಲಿ ಅದನ್ನು ಮರುಕಳಿಸಿದ್ದಾರೆ. ಈ ಬಾರಿ ನಂದಿಗ್ರಾಮದಲ್ಲಲ್ಲ, ಬದಲಿಗೆ ಮಮತಾ ಅವರ ಭದ್ರಕೋಟೆಯಾದ ಕೋಲ್ಕತ್ತಾದ ಭವಾನಿಪುರ ಕ್ಷೇತ್ರದಲ್ಲಿ ಸುವೇಂದು ಗೆಲುವಿನ ನಗೆ ಬೀರಿದ್ದಾರೆ. 2021ರಲ್ಲಿ ನಂದಿಗ್ರಾಮದ ಸೋಲಿನ ನಂತರ … Continued

ಪಶ್ಚಿಮ ಬಂಗಾಳ ಚುನಾವಣೆ : ಮಮತಾಗೆ ಭಾರೀ ಮುಖಭಂಗ ; ಸುವೇಂದು ಅಧಿಕಾರಿ ವಿರುದ್ಧ ದೊಡ್ಡ ಅಂತರದಲ್ಲಿ ಸೋಲು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲೇ ಮಮತಾ ಬ್ಯಾನರ್ಜಿ ಅವರು ಅತ್ಯಂತ ದೊಡ್ಡರಾಜಕೀಯ ಸೋಲನ್ನು ಅನುಭವಿಸಿದ್ದಾರೆ. ಹೈಪ್ರೊಫೈಲ್ ಕ್ಷೇತ್ರವೆಂದೇ ಗುರುತಿಸಲ್ಪಟ್ಟಿದ್ದ ಭವಾನಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಹಾಗೂ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸುಮಾರು 15,105 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯೆಂದೇ ಪರಿಗಣಿಸಲ್ಪಟ್ಟಿದ್ದ ಭವಾನಿಪುರದಲ್ಲಿ … Continued

ಪಶ್ಚಿಮ ಬಂಗಾಳದಲ್ಲಿ ದೀದಿ ಕೋಟೆಯಲ್ಲಿ ಕಮಲ ಅರಳಿಸಿದ ‘5 M’ ಮಂತ್ರ ! ಫಲಿತಾಂಶ ಬದಲಿಸಿದ ಆ ಐದು ʼMʼ ಯಾವುವು?

ಪಶ್ಚಿಮ ಬಂಗಾಳದಲ್ಲಿ ಬದಲಾದ ರಾಜಕೀಯ ಗಾಳಿ: ತೃಣಮೂಲಕ್ಕೆ ಮುಳುವಾಯಿತೇ ‘5-M’ ತಂತ್ರ? ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಪ್ರಗತಿಯಲ್ಲಿದ್ದು, ಬಿಜೆಪಿ ಭರ್ಜರಿ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ. ಸದ ಲಭ್ಯವಿರುವ ಟ್ರೆಂಡ್‌ಗಳ ಪ್ರಕಾರ ಭಾರತೀಯ ಜನತಾ ಪಾರ್ಟಿ (BJP) 190ರ ಆಸುಪಾಸು ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಸ್ಪಷ್ಟ ಬಹುಮತದತ್ತ (ಮ್ಯಾಜಿಕ್ … Continued

ಪಶ್ಚಿಮ ಬಂಗಾಳದಲ್ಲಿ ಭರ್ಜರಿ ಜಯದತ್ತ ಬಿಜೆಪಿ, ತಮಿಳುನಾಡಿನಲ್ಲಿ ವಿಜಯ ಕಮಾಲ್‌, ಕೇರಳದ ಕಾಂಗ್ರೆಸ್ಸಿಗೆ ಜೈ, ಅಸ್ಸಾಂನಲ್ಲಿ ಬಿಜೆಪಿ ಮುನ್ನಡೆ

ನವದೆಹಲಿ: ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಡೆದ 2026 ರ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಆರಂಭವಾಗಿದೆ.  4 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ ರಾಜಕೀಯ ದಿಕ್ಕನ್ನು ಸೂಚಿಸುವ ಆರಂಭಿಕ ಟ್ರೆಂಡ್‌ಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಆಡಳಿತಾರೂಢ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯನ್ನು ಹಿಂದಿಕ್ಕಿ ಅಧಿಕಾರದತ್ತ ದಾಪುಗಾಲು ಇಡುತ್ತಿರುವುದು ಕಂಡುಬಂದಿದೆ.  … Continued

ಪಶ್ಚಿಮ ಬಂಗಾಳ ಮತ ಎಣಿಕೆಗೆ ಕೇಂದ್ರ ಸರ್ಕಾರಿ ನೌಕರರ ನೇಮಕ ವಿಚಾರ ; ಟಿಎಂಸಿಗೆ ಸುಪ್ರೀಂ ಕೋರ್ಟಿನಲ್ಲಿ ಹಿನ್ನಡೆ

ನವದೆಹಲಿ: ಪಶ್ಚಿಮ ಬಂಗಾಳದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರಿ ನೌಕರರನ್ನು ನಿಯೋಜಿಸುವ ಚುನಾವಣಾ ಆಯೋಗದ (EC) ನಿರ್ಧಾರವನ್ನು ಪ್ರಶ್ನಿಸಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶನಿವಾರ ತಿರಸ್ಕರಿಸಿದೆ. ಚುನಾವಣಾ ಆಯೋಗದ ನಿರ್ಧಾರದಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಾಲಯ, ಈ ವಿಷಯದಲ್ಲಿ ಹೆಚ್ಚಿನ ಆದೇಶಗಳನ್ನು … Continued

ಪಶ್ಚಿಮ ಬಂಗಾಳ ಚುನಾವಣೆ ; ಮತ ಎಣಿಕೆ ಸಿಬ್ಬಂದಿ ನೇಮಕ ವಿಚಾರ : ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಟಿಎಂಸಿ

ನವದೆಹಲಿ: ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಮತ ಎಣಿಕೆ ಸಿಬ್ಬಂದಿ ನೇಮಕಾತಿ ವಿಷಯದಲ್ಲಿ ಈಗ ಕಾನೂನು ಸಮರ ಶುರುವಾಗಿದೆ. ಮೇ 4ರಂದು ನಡೆಯಲಿರುವ ಮತ ಎಣಿಕೆ ಕಾರ್ಯಕ್ಕೆ ಕೇವಲ ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ವಲಯದ ಉದ್ದಿಮೆಗಳ (PSU) ನೌಕರರನ್ನು ಮಾತ್ರ ಮೇಲ್ವಿಚಾರಕರು ಮತ್ತು ಸಹಾಯಕರನ್ನಾಗಿ ನೇಮಿಸುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ತೃಣಮೂಲ ಕಾಂಗ್ರೆಸ್ (TMC) … Continued

ಪಶ್ಚಿಮ ಬಂಗಾಳ ಚುನಾವಣೆ ; ಹೊರಬಿದ್ದ ಮತ್ತೊಂದು ಎಕ್ಸಿಟ್‌ ಪೋಲ್‌; ಈ ಬಾರಿ ಬಿಜೆಪಿ ಸುನಾಮಿ ಎಂದ ಟುಡೇಸ್ ಚಾಣಕ್ಯ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಅಬ್ಬರ ಮುಗಿದು ಈಗ ಫಲಿತಾಂಶದ ಕುತೂಹಲ ಮನೆಮಾಡಿದೆ. ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ನಡೆದ ಮತದಾನದ ನಂತರ ಹೊರಬಿದ್ದಿರುವ ಮತಗಟ್ಟೆ ಸಮೀಕ್ಷೆಗಳು (Exit Polls) ರಾಜ್ಯದಲ್ಲಿ ದೊಡ್ಡ ರಾಜಕೀಯ ಕಂಪನದ ಮುನ್ಸೂಚನೆ ನೀಡಿವೆ. ವಿಶೇಷವಾಗಿ ಗುರುವಾರ ಹೊರಬಿದ್ದ ‘ಟುಡೇಸ್ ಚಾಣಕ್ಯ’ ಸಮೀಕ್ಷೆಯು ರಾಜ್ಯದಲ್ಲಿ ಬಿಜೆಪಿ … Continued

ಪಶ್ಚಿಮ ಬಂಗಾಳ ಚುನಾವಣೆ : ಈ ಬಾರಿ ಬಿಜೆಪಿ ಎಂದ 4 ಎಕ್ಸಿಟ್ ಪೋಲ್ ; ಮಮತಾಗೆ ಮತ್ತೆ ಅಧಿಕಾರ ಎಂದ 2 ಎಕ್ಸಿಟ್ ಪೋಲ್

ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ಮತಗಟ್ಟೆ ಸಮೀಕ್ಷೆಗಳು (Exit Polls) ಹೊರಬಂದಿದ್ದು ನಾಲ್ಕು ಪ್ರಮುಖ ಸಮೀಕ್ಷೆಗಳು ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಬಿಜೆಪಿ ಭೇದಿಸಲಿದೆ ಎಂದು ಭವಿಷ್ಯ ನುಡಿದಿದ್ದರೆ, ಎರಡು ಸಮೀಕ್ಷೆಗಳು ತೃಣಮೂಲ ಕಾಂಗ್ರೆಸ್ (TMC) ಸತತ ನಾಲ್ಕನೇ ಬಾರಿಗೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿವೆ. ಒಟ್ಟಾರೆಯಾಗಿ, ಬಂಗಾಳದಲ್ಲಿ ಈ ಬಾರಿ … Continued

ಪಶ್ಚಿಮ ಬಂಗಾಳ: 2ನೇ ಹಂತದ ಮತದಾನಕ್ಕೂ ಮುನ್ನ ʼಟಿಎಂಸಿ ಕಾರ್ಯಕರ್ತʼನ ಮನೆಯಲ್ಲಿ 100 ಕಚ್ಚಾ ಬಾಂಬ್‌ಗಳು ವಶಕ್ಕೆ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವಾಗ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ. ಇಲ್ಲಿನ ಭಾಂಗರ್ ಪ್ರದೇಶದಲ್ಲಿ ಟಿಎಂಸಿ ಕಾರ್ಯಕರ್ತನೆನ್ನಲಾದ ರಫಿಕುಲ್ ಇಸ್ಲಾಂ ಎಂಬುವವರ ಮನೆಯಿಂದ ಪೊಲೀಸರು ಸುಮಾರು 100 ಕಚ್ಚಾ ಬಾಂಬ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ನಿರ್ದಿಷ್ಟ ಮಾಹಿತಿ ಮೆರೆಗೆ … Continued

ರಾಹುಲ್ ಗಾಂಧಿ ಕೋಲ್ಕತ್ತಾ ಭೇಟಿ ರದ್ದು: ಮಮತಾ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿ

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಏಪ್ರಿಲ್ 23 ರ ಕೋಲ್ಕತ್ತಾ ಭೇಟಿ ರದ್ದಾಗಿದೆ. ಸ್ಥಳೀಯ ಆಡಳಿತವು ಕಾರ್ಯಕ್ರಮಕ್ಕೆ ಅನುಮತಿ ನೀಡಲು ನಿರಾಕರಿಸಿದ್ದೇ ಇದಕ್ಕೆ ಕಾರಣ ಎಂದು ಕಾಂಗ್ರೆಸ್ ಮೂಲಗಳು ಮಂಗಳವಾರ ತಿಳಿಸಿವೆ. ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಮತ್ತು ಎಡರಂಗದ ಮೈತ್ರಿಕೂಟದ ಪರವಾಗಿ … Continued