ಉಡುಪಿ: ಸೀತಾನದಿ ಬಳಿ ಭೀಕರ ಅಪಫಾತ ; ಇಬ್ಬರು ಶಿಕ್ಷಕರು ಸಾವು, ಮತ್ತೊಬ್ಬರು ಗಂಭೀರ

ಉಡುಪಿ: ಖಾಸಗಿ ಬಸ್‌ ಮತ್ತು ಕಾರಿನ ನಡುವೆ ನಡೆದ ಡಿಕ್ಕಿಯಲ್ಲಿ ಇಬ್ಬರು ಶಿಕ್ಷಕರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಉಡುಪಿ ಜಿಲ್ಲೆಯ ಹೆಬ್ರಿ–ಆಗುಂಬೆ ರಾಷ್ಟ್ರೀಯ ಹೆದ್ದಾರಿ 169ಎ ಮಾರ್ಗದ ಸೋಮೇಶ್ವರದ ಸೀತಾನದಿ ಎಂಬಲ್ಲಿ ಭಾನುವಾರ ಸಂಭವಿಸಿದೆ ಎಂದು ವರದಿಯಾಗಿದೆ. ಸೀತಾನದಿ ಜಕ್ಕನಮಕ್ಕಿ ಬಳಿ ನಡೆದ ಈ ಅಪಘಾತದಲ್ಲಿ ಉಡುಪಿ ಮೂಲದ ಇಬ್ಬರು ಶಿಕ್ಷಕರು ಮೃತಪಟ್ಟಿದ್ದು, … Continued

ರಾಜ್ಯದ ಕರಾವಳಿ ಭಾಗದಲ್ಲಿ ಬಿಸಿಗಾಳಿ, ತಾಪಮಾನ ಹೆಚ್ಚಳ ಸಾಧ್ಯತೆ: ಕರಾವಳಿ ಜಿಲ್ಲೆಗಳಿಗೆ ಮುನ್ನೆಚ್ಚರಿಕೆ

ಬೆಂಗಳೂರು: ಬಿಸಿಲಿನ ಬೇಗೆಗೆ ತತ್ತರಿಸಿರುವ ರಾಜ್ಯದ ಜನತೆ ಮತ್ತಷ್ಟು ತಾಪಮಾನದ ಬೇಗೆ ಎದುರಿಸಬೇಕಿದೆ. ರಾಜ್ಯದಲ್ಲಿ ತಾಪಮಾನ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಗರಿಷ್ಠ ಉಷ್ಣಾಂಶದಲ್ಲಿ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಳವಾಗುವ ಸಾಧ್ಯತೆ ಇದೆ. ಅಂದರೆ ಕರಾವಳಿ ಜಿಲ್ಲೆಗಳಲ್ಲಿ ‘ಉಷ್ಣ ಅಲೆ’ ಗರಿಷ್ಠ … Continued

ಸಾಹಿತಿ-ಯಕ್ಷಗಾನ ಕಲಾವಿದ ಅಂಬಾತನಯ ಮುದ್ರಾಡಿ ನಿಧನ

ಉಡುಪಿ: ಸಾಹಿತಿ, ಕವಿ, ನಾಟಕಕಾರ, ಯಕ್ಷಗಾನ ಪ್ರಸಂಗಕರ್ತ, ಯಕ್ಷಗಾನ ಅರ್ಥಧಾರಿಯಾಗಿದ್ದ ಅಪರೂಪದ ವ್ಯಕ್ತಿತ್ವದ ಅಂಬಾತನಯ ಮುದ್ರಾಡಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಅವರು ಮಂಗಳವಾರ ಮುದ್ರಾಡಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಮೂವರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಹಾಗೂ ಶಿಷ್ರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ. ಅಂಬಾತನಯ ಮುದ್ರಾಡಿ ಅವರು 1935ರ … Continued

ಉಡುಪಿಯಲ್ಲಿ ಫೆಬ್ರವರಿ 11, 12ರಂದು ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ, 1300 ಕಲಾವಿದರು ಭಾಗಿ

ಕುಮಟಾ: ರಾಜ್ಯ ಸರ್ಕಾರದ ವತಿಯಿಂದ ರಾಜ್ಯಮಟ್ಟದ ಪ್ರಥಮ ಯಕ್ಷಗಾನ ಸಮ್ಮೇಳನ ಫೆಬ್ರವರಿ 11ಮತ್ತು 12ರಂದು ಉಡುಪಿಯ ಎ. ಎಲ್. ಎಂ ಕಾಲೇಜಿನ ಎ. ಎಲ್. ಎನ್. ರಾವ್‌ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಸಮ್ಮೇಳನದ ಕಾರ್ಯಾಧ್ಯಕ್ಷ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ. ಜಿ.ಎಲ್‌.ಹೆಗಡೆ ತಿಳಿಸಿದ್ದಾರೆ. ಕುಮಟಾದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ … Continued

ಫೆಬ್ರವರಿ ಕೊನೆಯೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಘೋಷಣೆ ಸಾಧ್ಯತೆ: ಬಿ.ಕೆ ಹರಿಪ್ರಸಾದ

ಉಡುಪಿ : ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಫೆಬ್ರವರಿ ತಿಂಗಳ ಕೊನೆಯೊಳಗೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ ಹೇಳಿದ್ದಾರೆ. ಇಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಅಭ್ಯರ್ಥಿಗಳ ಪಟ್ಟಿಗಳು ಈಗಾಗಲೇ ನಿನ್ನೆ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ 37 ಜನರ ಸಮ್ಮುಖ ಬಂದಿದ್ದು, ನಿನ್ನೆ ಸಂಜೆ … Continued

ಹುಡುಗಿಯ ಜೊತೆ ಆಟವಾಡಿದ್ದಕ್ಕೆ ನಾಯಿಯನ್ನೇ ಕೊಂದು ಹಾಕಿದ…!

ಊಡುಪಿ: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಮೂಕ ಪ್ರಾಣಿ ನಾಯಿಯನ್ನು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನಲ್ಲಿರುವ ಕಾಲೇಜು ವಠಾರದಲ್ಲಿ ನಾಯಿಯೊಂದು ಹುಡುಗಿಯ ಜೊತೆ ಆಟವಾಡಿದ್ದಕ್ಕೆ ಕಾಲೇಜು ವಾರ್ಡನ್ ನಾಯಿಯನ್ನೇ ಕೊಂದಿದ್ದು, ಈ ಅಮಾನವೀಯ ಘಟನೆ ಕಾಪು ತಾಲೂಕಿನ ಬಂಟಕಲ್​ನ ಕಾಲೇಜಿನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಹುಡುಗಿ ಜೊತೆ ಆಟ ಆಡಿದ ಕಾರಣಕ್ಕೆ … Continued

ಮೊದಲ ಬಾರಿಗೆ ಸರ್ಕಾರದಿಂದಲೇ ಉಡುಪಿಯಲ್ಲಿ ಫೆಬ್ರವರಿ 11ರಿಂದ ಎರಡು ದಿನಗಳ ಕರ್ನಾಟಕ ಸಮಗ್ರ ಯಕ್ಷಗಾನ ಸಮ್ಮೇಳನ

ಬೆಂಗಳೂರು : ಯಕ್ಷಗಾನ ರಂಗದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರಾಜ್ಯಮಟ್ಟದ ಕರ್ನಾಟಕ ಸಮಗ್ರ ಯಕ್ಷಗಾನ ಸಮ್ಮೇಳನ ಆಯೋಜಿಸಲು ನಿರ್ಧರಿಸಲಾಗಿದೆ. ಕರ್ನಾಟಕದ ಗಂಡುಕಲೆ ಯಕ್ಷಗಾನದ ಸಮಸ್ಯೆ, ಭವಿಷ್ಯ ಹಾಗೂ ಸಮಕಾಲೀನ ಸ್ಥಿತಿಗತಿಗಳನ್ನು ಅವಲೋಕಿಸುವ ಪ್ರಯತ್ನದ ಭಾಗವಾಗಿ ಮೊದಲ ಬಾರಿಗೆ ರಾಜ್ಯ ಸರ್ಕಾರ ಈ ಸಮ್ಮೇಳನ ಆಯೋಜಿಸುತ್ತಿದೆ. ಕನ್ನಡ ಮತ್ತು … Continued

ಫಾಜಿಲ್ ಹತ್ಯೆಗೆ ಬಳಸಿದ ಕಾರು ಪಡುಬಿದ್ರೆಯ ನಿರ್ಜನ ಪ್ರದೇಶದಲ್ಲಿ ಪತ್ತೆ

ಉಡುಪಿ: ಮಂಗಳೂರಿನ ಸುರತ್ಕಲ್‌ನಲ್ಲಿ ನಡೆದ ಫಾಝಿಲ್ ಹತ್ಯೆಗೆ ಬಳಸಿದ ಬಿಳಿ ಬಣ್ಣದ ಇಯಾನ್ ಕಾರು ಪಡುಬಿದ್ರೆ ಸಮೀಪದ ಇನ್ನಾ ಗ್ರಾಮದ ನಿರ್ಜನ ಪ್ರದೇಶದಲ್ಲಿ ಭಾನುವಾರ ಪತ್ತೆಯಾಗಿದೆ. ಭಾನುವಾರ ಬೆಳಿಗ್ಗೆ ಸ್ಥಳೀಯರು ಉಡುಪಿ ಜಿಲ್ಲಾ ಪೋಲಿಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ತಕ್ಷಣವೇ ಪೋಲಿಸರು ಸ್ಥಳಕ್ಕೆ ತೆರಳಿ ಕಾರನ್ನು ಪರಿಶೀಲಿಸಿದ್ದಾರೆ. ನಂತರ ಇದು ಫಾಜಿಲ್ ಹತ್ಯೆಗೆ ಬಳಸಿದ … Continued

ನೀರಿನ ಹೊಂಡಕ್ಕೆ ಬಿದ್ದು 5 ವರ್ಷದ ಮಗು ಸಾವು

ಉಡುಪಿ: ಆಟವಾಡುತ್ತಿದ್ದ ಐದು ವರ್ಷದ ಮಗುವೊಂದು ನೀರಿನ‌ ಹೊಂಡಕ್ಕೆ ಬಿದ್ದುಮೃತಪಟ್ಟ‌ ದುರ್ಘಟನೆ ಜಿಲ್ಲೆಯ ಬ್ರಹ್ಮಾವರದ ಉಪ್ಪೂರು ತೆಂಕಬೆಟ್ಟುನಲ್ಲಿ ನಡೆದ ಬಗ್ಗೆ ವರದಿಯಾಗಿದೆ. ನಾರ್ಮನ್ ಹಾಗೂ ಸಿಲ್ವಿಯಾ ದಂಪತಿಯ ಪುತ್ರ ಲಾರೆನ್ ಲೆವಿಸ್(5) ಮೃತ ಬಾಲಕ ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಮನೆ ಸಮೀಪ ಆಟವಾಡುತ್ತಿದ್ದ ಮಗು ನಾಪತ್ತೆಯಾಗಿತ್ತು ಎಂದು ಹೇಳಲಾಗಿದೆ. ಎಷ್ಟೇ ಹುಡುಕಾಟ ನಡೆಸಿದರೂ ಬಾಲಕ … Continued

ಉರುಳಿ ಬೈಕ್ ಮೇಲೆ ಬಿದ್ದ ಕಾರ್‌ : ಬೈಕ್‌ ಸವಾರ ಸ್ಥಳದಲ್ಲೇ ಸಾವು

ಉಡುಪಿ: ಉಡುಪಿಯ ಕರಾವಳಿ ಬೈಪಾಸಿನಲ್ಲಿ ಹೋಗುತ್ತಿದ್ದ ಕಾರೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ  ಉರುಳಿ ಬೈಕ್ ನ ಮೇಲೆ ಬಿದ್ದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಘಟನೆ ಭಾನುವಾರ ಸಂಜೆ ನಡೆದಿದೆ. ಮೃತ ಯುವಕ  ವಿಜಯಪುರ ಮೂಲದ ಸುನೀಲಕುಮಾರ್ (24) ಎಂದು ಹೇಳಲಾಗಿದೆ. ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ತಾಯಿ‌ ಮತ್ತು … Continued