ಶ್ರೀರಾಮಜನ್ಮಭೂಮಿ ಟ್ರಸ್ಟ್‌ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ ದಾಸರ ಆರೋಗ್ಯ ಗಂಭೀರ

ಲಖನೌ: ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲದಾಸ್ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದು, ಲಖನೌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಭಾನುವಾರ ಬೆಳಗ್ಗೆ ಏಕಾಏಕಿ ಆರೋಗ್ಯ ಬಿಗಡಾಯಿಸಿದ್ದು ಕೂಡಲೇ ಉತ್ತರಾಧಿಕಾರಿ ಕಮಲ ನಯನ ದಾಸ್, ಮಹಾಂತರನ್ನು ಆಸ್ಪತ್ರೆಗೆ ದಾಖಲಿಸಿದರು. ಅವರಿಗೆ ೮೩ ವರ್ಷ ವಯಸ್ಸಾಗಿದೆ. ಗೋಪಾಲದಾಸ್‌ಗೆ ಸೂಕ್ತ ಚಿಕಿತ್ಸೆ ನೀಡಲು ಉತ್ತರ ಪ್ರದೇಶ ಮುಖ್ಯಮಂತ್ರಿ … Continued

ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆ ಪುನರಾರಂಭದ ಕುರಿತು ಆರೋಗ್ಯ ಸಚಿವರು ಹೇಳಿರುವುದೇನು..?

ಬೆಂಗಳೂರು: ರಾಜ್ಯದಲ್ಲಿ 1ರಿಂದ 5ನೇ ತರಗತಿವರೆಗೆ ಶಾಲೆಗಳನ್ನು ಪುನರಾರಂಭ ಮಾಡುವ ಕುರಿತು ಹಬ್ಬಗಳು ಮುಗಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ. ರಾಜ್ಯ ಸರ್ಕಾರ ಶಿಕ್ಷಣ ಸಂಸ್ಥೆಗಳನ್ನು ಆತುರದಲ್ಲಿ ಪುನರಾರಂಭಿಸಿಲ್ಲ. ಪೋಷಕರು ಹಾಗೂ ತಜ್ಞರೊಂದಿಗೆ ಚರ್ಚಿಸಿದ ನಂತರವೇ ಹಂತಹಂತವಾಗಿ ತೆರೆಯಲಾಗುತ್ತಿದೆ ಎಂದು ಅವರು ತಿಳಿಸಿದರು. ಮೊದಲು ಕೇಂದ್ರ … Continued

500 ರೂ.ಗಳಿಗೆ ಪತ್ನಿಯನ್ನೇ ಮಾರಾಟ ಮಾಡಿದ ಭಂಡ ಪತಿ..!: ಖರೀದಿಸಿದವನಿಂದ ಅತ್ಯಾಚಾರ

ಅಹಮದಾಬಾದ್: ಗುಜರಾತಿನಲ್ಲಿ ತನ್ನ ಪತ್ನಿಯನ್ನು 500 ರೂ.ಗಳಿಗೆ ಮಾರಿದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಹಿಳೆಗೆ ಹಣ ನೀಡಿದ ಪುರುಷರು ಏಕಾಂತ ಸ್ಥಳಕ್ಕೆ ಕರೆದೊಯ್ದು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಶುಕ್ರವಾರ ಪ್ರಕರಣದ ಬಗ್ಗೆ ಮಾಹಿತಿ ಪಡೆದ ಪೊಲೀಸರು, ದೂರಿನ ಮೇಲೆ ತಕ್ಷಣ ಕ್ರಮ ಕೈಗೊಂಡರು ಮತ್ತು 24 ಗಂಟೆಗಳಲ್ಲಿ ಘಟನೆಯಲ್ಲಿ ಪಾಲ್ಗೊಂಡವರನ್ನು ಬಂಧಿಸಿದ್ದಾರೆ. … Continued

ಮುಂದಿನ ವರ್ಷದಿಂದ ಪ್ರಾಥಮಿಕಪ್ರೌಢ ಶಿಕ್ಷಣದಲ್ಲೂ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ : ಶಿಕ್ಷಣ ಸಚಿವ ನಾಗೇಶ

ಮೈಸೂರು: ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಹಂತದಲ್ಲೂ ಜಾರಿ ಮಾಡಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷ ಸಚಿವ ಬಿ.ಸಿ ನಾಗೇಶ್ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವರ್ಷದಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವ ಸಂಬಂಧ ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ … Continued

ಡ್ರಗ್ಸ್​ ಕೇಸ್​ನಲ್ಲಿ ಬಾಲಿವುಡ್‌ ನಟ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಬಂಧನ

ಮುಂಬೈ: ಡ್ರಗ್ಸ್​​ ಪಾರ್ಟಿಗೆ ತೆರಳಿದವರಲ್ಲಿ ಬಾಲಿವುಡ್‌ ನಟ ಶಾರುಖ್​ ಖಾನ್​ ಮಗ ಆರ್ಯನ್​ ಖಾನ್​ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದ ಎನ್​ಸಿಬಿ ಅಧಿಕಾರಿಗಳು ಈಗ ಅವರನ್ನು ಬಂಧಿಸಿದ್ದಾರೆ ಎಂಬ ಮಾಹಿತಿ ಹೊರಬಂದಿದೆ. ಇದರಿಂದ ನಟ ಶಾರುಖ್​ ಖಾನ್​ಗೆ ಸಂಕಷ್ಟ ಹೆಚ್ಚಿದೆ. ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಶನಿವಾರ (ಅ.2) ರಾತ್ರಿ ನಡೆಯುತ್ತಿದ್ದ ರೇವ್​ … Continued

ಭಾರತದಲ್ಲಿ ಜಾತ್ಯತೀತತೆ ವ್ಯಾಖ್ಯಾನ ವಿರೂಪಗೊಳಿಸಲಾಗಿದೆ … ‘ಕಠಿಣ ಹಿಂದುತ್ವ’ ಎಂಬುದು ಏನೂ ಇಲ್ಲ: ರಾಮ ಮಾಧವ್

ನವದೆಹಲಿ: ಹಿಂದುತ್ವವು ‘ಭಾರತ’ದ ಮೂಲಭೂತ ಸಿದ್ಧಾಂತವಾಗಿದೆ ಮತ್ತು ಭಾರತದಲ್ಲಿ ಈ ನಂಬಿಕೆಯ ಬಗ್ಗೆ ಸಾಕಷ್ಟು ತಪ್ಪುಗ್ರಹಿಕೆಗಳಿವೆ, ಅದನ್ನೇ ನಾನು ನನ್ನ ಹೊಸ ಪುಸ್ತಕ’ ಹಿಂದುತ್ವ ಮಾದರಿ ‘ಮೂಲಕ ಹೋಗಲಾಡಿಸಲು ಬಯಸಿದ್ದೇನೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕ ರಾಮ್ ಮಾಧವ್ ಹೇಳಿದ್ದಾರೆ. ಈ ಪುಸ್ತಕದಲ್ಲಿ ನಾನು ಸ್ಪರ್ಶಿಸಲು ಪ್ರಯತ್ನಿಸಿದ್ದು ಹಿಂದುತ್ವದ ಬಗ್ಗೆ ಮತ್ತು ದೀನ್ … Continued

ಭವಾನಿಪುರದಲ್ಲಿ 50 ಸಾವಿರಕ್ಕೂ ಅಧಿಕ ಮತಗಳಿಂದ ಮಮತಾ ಬ್ಯಾನರ್ಜಿ ಭರ್ಜರಿ ಜಯ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭವಾನಿಪುರ ಚುನಾವಣೆಯಲ್ಲಿ 50 ಸಾವಿರಕ್ಕೂ ಅಧಿಕ ಮತಗಳಿಂದ ಜಯಗಳಿಸಿದ್ದಾರೆ, ಅವರ ಎದುರಾಳಿ ಅಭ್ಯರ್ಥಿ ಬಿಜೆಪಿಯ ಪ್ರಿಯಾಂಕಾ ಟಿಬ್ರೆವಾಲ್ ಅವರನ್ನು ಭರ್ಹರಿ ಅಂತರದಿಂದ ಸೋಲಿಸಿದ್ದಾರೆ. ಅಂತಿಮ ಸುತ್ತಿನ ಮತ ಎಣಿಕೆ ಭಬಾನಿಪುರದಲ್ಲಿ ಮುಕ್ತಾಯವಾಗುತ್ತಿದ್ದಂತೆ, ಮಮತಾ ಬ್ಯಾನರ್ಜಿ 58,000 ಮತಗಳ ಮುನ್ನಡೆ ಸಾಧಿಸಿದ್ದಾರೆ. ಭವಾನಿಪುರದಲ್ಲಿ 21 ನೇ ಸುತ್ತಿನ … Continued

ರೋಗಿಯ ಹೊಟ್ಟೆಯಿಂದ 1 ಕೆಜಿಗಿಂತ ಹೆಚ್ಚು ಕಬ್ಬಿಣದ ತುಂಡು-ಉಗುರು ಹೊರತೆಗೆದ ವೈದ್ಯರು..!

ಹೊಟ್ಟೆ ನೋವಿನಿಂದ ಬಳಲುತ್ತಿರುವ ರೋಗಿಯ ಹೊಟ್ಟೆಯಲ್ಲಿ 1 ಕೆಜಿಗಿಂತಲೂ ಹೆಚ್ಚಿನ ಉಗುರು ಮತ್ತು ಕಬ್ಬಿಣದ ತುಂಡುಗಳು ಇರುವುದು ಪತ್ತಯಾಗಿದೆ. ಇದು ಲಿಥುವೇನಿಯಾದ ಕ್ಲೈಪೆಡಾ ನಗರದಲ್ಲಿ ವರದಿಯಾಗಿದೆ. ವ್ಯಕ್ತಿಯನ್ನು ಹೊಟ್ಟೆ ನೋವಿನಿಂದ ಬಾಲ್ಟಿಕ್ ಬಂದರು ನಗರ ಕ್ಲೈಪೆಡಾ ಆಸ್ಪತ್ರೆಗೆ ದಾಖಲಾಗಿದ್ದ. ಆತ ಕುಡಿಯುವುದನ್ನು ನಿಲ್ಲಿಸಿದ ನಂತರ ಲೋಹದ ತುಂಡುಗಳನ್ನು ನುಂಗಲು ಪ್ರಾರಂಭಿಸಿದನೆಂದು ಆ ವ್ಯಕ್ತಿ ಒಪ್ಪಿಕೊಂಡಿದ್ದಾನೆ. ತೀವ್ರವಾದ … Continued

ಭಾರತದ 72 ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಖಾಲಿ:ಮುಂದೆ ವಿದ್ಯುತ್‌ ಕೊರತೆ ಸಂಕಷ್ಟ..?

ನವದೆಹಲಿ : ಭಾರತದಲ್ಲಿ ಕಲ್ಲಿದ್ದಲು (coal) ಬಿಕ್ಕಟ್ಟು ಗಂಭೀರವಾಗಿದೆ. ಇದರಿಂದಾಗಿ ಹಲವು ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆಯನ್ನು (power supply )ನಿಲ್ಲಿಸುವ ನಿರೀಕ್ಷೆ ಇದೆ. ಕಲ್ಲಿದ್ದಲು ಗಣಿಗಾರಿಕೆ ಕಂಪನಿಯಾದ ಕೋಲ್ ಇಂಡಿಯಾ ಲಿಮಿಟೆಡ್ ನಲ್ಲಿ ಸಮಸ್ಯೆ ಕಂಡು ಬಂದಿದೆ. ವಿದ್ಯುತ್ ಸ್ಥಾವರಕ್ಕೆ ನಿಯಮಿತವಾಗಿ ಕಲ್ಲಿದ್ದಲು ಪೂರೈಸುವಂತೆ ಕೇಂದ್ರ ಸರ್ಕಾರ ಕೋಲ್ ಇಂಡಿಯಾವನ್ನು ಕೇಳಿಕೊಂಡಿದೆ. ಕೇಂದ್ರ ಸಂಸ್ಥೆ … Continued

ಸತತ ನಾಲ್ಕನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

ನವದೆಹಲಿ : ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಭಾನುವಾರ ದೇಶಾದ್ಯಂತ ದಾಖಲೆಯ ಪ್ರಮಾಣದಲ್ಲಿ ಬೆಲೆ ಏರಿಕೆಯಾಗಿದೆ ಸರ್ಕಾರಿ ಸ್ವಾಮ್ಯದ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್‌ಗೆ 102.39 ರೂ. ಮತ್ತು ಮುಂಬೈನಲ್ಲಿ 108.43 ರೂ. ದಾಖಲಾಗಿದೆ. ಡೀಸೆಲ್ ದರಗಳು ಕೂಡ ಏರಿಕೆಯನ್ನು ಕಂಡಿದ್ದು, ದೆಹಲಿಯಲ್ಲಿ 90.77 ರೂ. ಮತ್ತು … Continued