ಕೋವಿಡ್ -19 ಲಸಿಕೆಯ ಭಾರತೀಯ ತಯಾರಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ

ನವದೆಹಲಿ: ಭಾರತದಲ್ಲಿ 100 ಕೋಟಿ ಡೋಸ್ ಕೊವಿಡ್ ಲಸಿಕೆಗಳನ್ನು ನೀಡುವ ಮೂಲಕ ನೂತನ ಮೈಲಿಗಲ್ಲು ದಾಟಿದ ಬೆನ್ನಲ್ಲೇ ಇಂದು (ಶನಿವಾರ) ಪ್ರಧಾನಿ ನರೇಂದ್ರ ಮೋದಿ ಏಳು ಭಾರತೀಯ ಕೊವಿಡ್-19 ಲಸಿಕೆ ತಯಾರಕರ ಜೊತೆ ಸಭೆ ನಡೆಸಿದ್ದಾರೆ. ಭಾರತೀಯ ಕೊರೊನಾ ಲಸಿಕೆ ಉತ್ಪಾದಕರೊಂದಿಗೆ ಸಭೆ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರೆಲ್ಲರ ಸಹಕಾರದಿಂದ ದೇಶದಲ್ಲಿ 100 ಕೋಟಿ … Continued

ಅಮೆರಿಕದ ವೈಟ್‌ಹೌಸ್‌ ಸಿಬ್ಬಂದಿ ಸೆಕ್ರೆಟರಿಯಾಗಿ ಭಾರತೀಯ ಸಂಜಾತೆ ನೀರಾ ಟಂಡನ್ ನೇಮಕ

ವಾಷಿಂಗ್ಟನ್: ರಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ನಿಕಟವರ್ತಿಯಾಗಿರುವ ಭಾರತೀಯ ಮೂಲದ ಅಮೆರಿಕನ್ ನೀತಿ ತಜ್ಞರಾದ ನೀರಾ ಟಂಡೆನ್ ಅವರನ್ನು ಶ್ವೇತಭವನದ ಸಿಬ್ಬಂದಿ ಕಾರ್ಯದರ್ಶಿಯಾಗಿ (White House staff secretary) ನೇಮಿಸಲಾಗಿದೆ. ಅಧ್ಯಕ್ಷ ಬಿಡೆನ್ ಅವರ ಹಿರಿಯ ಸಲಹೆಗಾರರಾದ 51 ವರ್ಷದ ಟಂಡನ್ ಅವರನ್ನು ಶುಕ್ರವಾರ ಬೆಳಿಗ್ಗೆ ಶ್ವೇತಭವನದ ಸಿಬ್ಬಂದಿ ಕಾರ್ಯದರ್ಶಿ ಎಂದು ಹೆಸರಿಸಲಾಗಿದೆ … Continued

ಬಾಂಗ್ಲಾದೇಶ: ದುರ್ಗಾ ಪೂಜೆಯ ಪೆಂಡಾಲಿನಲ್ಲಿ ಕುರಾನ್ ಪ್ರತಿ ಇಟ್ಟ ವ್ಯಕ್ತಿಯ ಬಂಧನ

ಢಾಕಾ: ಬಾಂಗ್ಲಾದೇಶದಲ್ಲಿ ಅಕ್ಟೋಬರ್ 13ರಂದು ಕೊಮಿಲಾ ಜಿಲ್ಲೆಯಲ್ಲಿ ದುರ್ಗಾಪೂಜೆಯ ಪೆಂಡಾಲ್ ನಲ್ಲಿ ಕುರ್ ಆನ್ ಪ್ರತಿ ಇರಿಸಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ದಿ ಢಾಕಾ ಟ್ರಿಬ್ಯೂನಲ್ ಪತ್ರಿಕೆ ವರದಿ ಮಾಡಿದೆ. ಕೊಮಿಲಾ ನಗರದಲ್ಲಿ ದುರ್ಗಾಪೂಜೆಯ ಪೆಂಡಾಲಿನಲ್ಲಿ ಇರಿಸಿದ್ದ ಸಿಸಿಟಿವಿ ದೃಶ್ಯಾವಳಿಯ ಆಧಾರದಲ್ಲಿ ದುಷ್ಕರ್ಮಿಯನ್ನು ಇಕ್ಬಾಲ್ ಹುಸೇನ್ ಎಂದು ಗುರುತಿಸಲಾಗಿತ್ತು. ತಲೆಮರೆಸಿಕೊಂಡಿದ್ದ ಈತನನ್ನು ಕಾಕ್ಸ್ ಬಝಾರ್ … Continued

ಎಂಥ ಕಾಲವಯ್ಯ…ಸ್ಮಾರ್ಟ್​ಫೋನ್ ಖರೀದಿಸಲು ಮದುವೆಯಾಗಿ ಒಂದೇ ತಿಂಗಳಿಗೆ ಹೆಂಡತಿಯನ್ನೇ ಮಾರಿದ ಪತಿರಾಯ..!

ಭುವನೇಶ್ವರ: ಒರಿಸ್ಸಾದಲ್ಲೊಂದು ವಿಚಿತ್ರ ಮತ್ತು ಅಮಾನವೀಯ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಸ್ಮಾರ್ಟ್‌ ಫೋನ್‌ ಖರೀದಿಗಾಗಿ ತನ್ನ ಪತ್ನಿಯನ್ನೇ ಮಾರಿದ್ದಾನೆ…! ಒರಿಸ್ಸಾದ 17 ವರ್ಷದ ವ್ಯಕ್ತಿ 26 ವರ್ಷದ ತನ್ನ ಹೆಂಡತಿಯನ್ನು ರಾಜಸ್ಥಾನದ 55 ವರ್ಷದ ವ್ಯಕ್ತಿಗೆ ಮಾರಾಟ ಮಾಡಿದ್ದಾನೆ. ತಾನು ರಾಜಸ್ಥಾನದಲ್ಲಿ ಕೆಲಸ ಮಾಡುತ್ತಿದ್ದ ಇಟ್ಟಿಗೆ ಫ್ಯಾಕ್ಟರಿಯಲ್ಲಿದ್ದ ವ್ಯಕ್ತಿಗೆ ತನ್ನ ಹೆಂಡತಿಯನ್ನು ಮಾರಿದ್ದಾನೆ…!! ಆದರೆ ಒರಿಸ್ಸಾದ … Continued

ಸಿದ್ದರಾಮಯ್ಯರನ್ನು ಒಂದು ತಿಂಗಳು ತಾಲಿಬಾನ್ ಆಡಳಿತದ ಪ್ರದೇಶಕ್ಕೆ ಕಳುಹಿಸಬೇಕು: ಶ್ರೀನಿವಾಸ್ ಪ್ರಸಾದ್

ಮೈಸೂರು: ತಾಲಿಬಾನ್‌ ಆಡಳಿತವನ್ನು ಪರಿಶೀಲಿಸಲು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಿಕೊಡಲು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಹೇಳಿದರು. ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಸಿಂದಗಿ, ಹಾನಗಲ್ ಉಪಚುನಾವಣೆ ಸಂಬಂಧ ರಾಜ್ಯ ನಾಯಕರ ಮಾತು ಮಿತಿ ಮೀರಿದೆ. ನಾನು ಕೂಡ ಮಾಧ್ಯಮಗಳಲ್ಲಿ ಅವರ ಹೇಳಿಕೆ ನೋಡಿದ್ದೇನೆ. ಚುನಾವಣೆಯಲ್ಲಿ … Continued

ಬೆಳಗಾವಿ ಜಿಲ್ಲೆಯಲ್ಲೊಂದು ಹೃದಯ ವಿದ್ರಾವಕ ಘಟನೆ, ನಾಲ್ವರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ಮಾಜಿ ಯೋಧ

ಬೆಳಗಾವಿ: ತಂದೆಯೊಬ್ಬ ತನ್ನ ನಾಲ್ವರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾವಕ ಘಟನೆ ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಬೋರಗಲ್​​ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಮಕ್ಕಳಾದ ಸೌಮ್ಯಾ ಹಾದಿಮನಿ (19), ಶ್ವೇತಾಹಾದಿಮನಿ (16), ಸಾಕ್ಷಿ ಹಾದಿಮನಿ (11), ಸೃಜನ ಹಾದಿಮನಿಗೆ (8) ವಿಷವುಣಿಸಿ ತಂದೆ ಗೋಪಾಲ ಹಾದಿಮನಿ(46) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬ್ಲಾಕ್ … Continued

ಕೋವಿಡ್‍ನಿಂದಾಗಿ 2 ವರ್ಷ ಕಡಿಮೆಯಾಯ್ತು ಭಾರತೀಯರ ಜೀವಿತಾವಧಿ: ಹೊಸ ಅಧ್ಯಯನದಲ್ಲಿ ಬೆಳಕಿಗೆ…!

ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದಿಂದ ಭಾರತೀಯರ ಜೀವಿತಾವಧಿ ಎರಡು ವರ್ಷ ಕಡಿಮೆಯಾಗಿದೆ ಎಂದು ಹೊಸ ಅಧ್ಯಯನ ತಿಳಿಸಿದೆ. 2019ಕ್ಕೆ ಹೋಲಿಸಿದರೇ 2020ಕ್ಕೆ ಭಾರತೀಯರ ಜೀವಿತಾವಧಿ ಎರಡು ವರ್ಷಗಳಷ್ಟು ಕಡಿಮೆಯಾಗಿದೆ ಎಂದು ಹೊಸ ಅಧ್ಯಯನ ಹೇಳಿದೆ. ಮುಂಬೈ ಮೂಲದ ಇಂಟರ್‌ನ್ಯಾಶನಲ್ ಇನ್‍ಸ್ಟಿಟ್ಯೂಟ್ ಫಾರ್ ಪಾಪ್ಯುಲೇಶನ್ ಸ್ಟಡೀಸ್‍ ಈ ಅಧ್ಯಯನ ನಡೆಸಿದೆ. 145 ರಾಷ್ಟ್ರಗಳ ಗ್ಲೋಬಲ್ ಬರ್ಡನ್ ಆಫ್ … Continued

ಅಮೆರಿಕದಲ್ಲಿ ಹಸಿ ಈರುಳ್ಳಿ ತಿಂದು 650 ಮಂದಿ ಅಸ್ವಸ್ಥ: ಮನೆಯಲ್ಲಿರುವ ಈರುಳ್ಳಿ ಎಸೆಯಲು ಸರ್ಕಾರದಿಂದ ಸೂಚನೆ

ಅಮೆರಿಕ: ಕೋವಿಡ್‌ ಬಳಿಕ ಅಮೆರಿಕದಲ್ಲಿ ಮತ್ತೊಂದು ವಿಚಿತ್ರ ಸೋಂಕು ಕಾಣಿಸಿಕೊಂಡಿದೆ. ಸಾಲ್ಮೋನೆಲ್ಲಾ ಎಂಬ ಬ್ಯಾಕ್ಟೀರಿಯಾದಿಂದ ಈ ಸೋಂಕು ಹರಡುತ್ತಿದ್ದು, ಇದು ಅಮೆರಿಕದ ವಿಜ್ಞಾನಿಗಳಿಗೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿ ಪರಿಗಣಮಿಸಿದೆ. ಹೊಸದಾಗಿ ಕಾಣಿಸಿಕೊಂಡ ಈ ಸೋಂಕು ಈರುಳ್ಳಿ ತಿಂದದವರಿಂದ ಹರಡುತ್ತಿದೆ ಎನ್ನಲಾಗಿದೆ. ಹಸಿ ಈರುಳ್ಳಿ ಸೇವಿಸಿದ ಸುಮಾರು 650 ಮಂದಿ ತೀವ್ರವಾಗಿ ಅಸ್ವಸ್ಥರಾಗಿದ್ದಾರೆ. ಚಿವಾವಾದಿಂದ … Continued

ಯಲ್ಲಾಪುರ: ಬಾರೆ ಗ್ರಾಮದಲ್ಲಿ ಆನೆ ಪ್ರತ್ಯಕ್ಷ, ಗ್ರಾಮಸ್ಥರಿಗೆ ಶುರುವಾದ ಆತಂಕ

ಯಲ್ಲಾಪುರ: ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯತ ವ್ಯಾಪ್ತಿಯ ಬಾರೆ ಗ್ರಾಮ ನೀರಹಕ್ಲು ಸಮೀಪದ ಅರಣ್ಯದಲ್ಲಿ ಎರಡು ಆನೆಗಳು ಕಾಣಿಸಿಕೊಂಡಿವೆ. ಆಹಾರ ಅರಸುತ್ತ ಬಂದ ಆನೆಗಳಿಂದ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ. ನಿನ್ನೆ (ಶುಕ್ರವಾರ) ಕಾರವಾರ ತಾಲೂಕಿನ ಹರೂರು ಬಳಿಯಲ್ಲಿ ಗದ್ದೆಗೆ ಬಂದಿದ್ದ ಈ ಎರಡು ಆನೆಗಳು ಸ್ಥಳೀಯ ಅರಣ್ಯದಲ್ಲಿ ಬೀಡು ಬಿಟ್ಟಿದ್ದು ಶುಕ್ರವಾರ ಸಂಜೆ ಹರೂರಿಂದ ಬರುವಾಗ … Continued

ಸಿರಿಯಾ: ಡ್ರೋಣ್ ದಾಳಿಯಲ್ಲಿ ಅಲ್‌ ಕೈದಾ ಉಗ್ರ ಸಂಘಟನೆ ಹಿರಿಯ ನಾಯಕನ ಹತ್ಯೆ ಮಾಡಿದ ಅಮೆರಿಕ

ವಾಷಿಂಗ್ಟನ್: ಸಿರಿಯಾದಲ್ಲಿ ಅಮೆರಿಕ ಸೇನೆ ನಡೆಸಿದ ಡ್ರೋಣ್‌ ದಾಳಿಯಲ್ಲಿ ಅಲ್‌-ಕೈದಾ ಉಗ್ರ ಸಂಘಟನೆಯ ಹಿರಿಯ ನಾಯಕ ಹತ್ಯೆಯಾಗಿದ್ದಾನೆ ಎಂದು ಪೆಂಟಗಾನ್‌ ತಿಳಿಸಿದೆ. ಇಸ್ಲಾಮಿಕ್‌ ಸ್ಟೇಟ್ ಸಂಘಟನೆ ವಿರುದ್ಧ ಹೋರಾಟ ನಡೆಸುತ್ತಿದ್ದ ಅಮೆರಿಕ ನೇತೃತ್ವದ ಸೇನಾ ಪಡೆಗಳು ಬಳಸುತ್ತಿದ್ದ ದಕ್ಷಿಣ ಸಿರಿಯಾದ ನೆಲೆಯ ಮೇಲೆ ಎರಡು ದಿನಗಳ ಹಿಂದಷ್ಟೇ ದಾಳಿ ನಡೆದಿತ್ತು.ಇದಕ್ಕೆ ಪ್ರತೀಕಾರವಾಗಿ ದಾಳಿ ನಡೆಸಲಾಗಿದೆ. ಸಿರಿಯಾದ … Continued