ಪಾಕ್ ಸೈನಿಕನಿಂದ ಭಾರತದ ಪದ್ಮಶ್ರೀ ವರೆಗೆ: ಬಾಂಗ್ಲಾದೇಶ ಸ್ವತಂತ್ರಗೊಳಿಸಲು ಭಾರತಕ್ಕೆ ಸಹಾಯ ಮಾಡಲು ತನ್ನ ಸೇನೆ ತೊರೆದ ಕ್ವಾಜಿ ಸಜ್ಜದ್..! ಇಲ್ಲಿದೆ ವಿವರ

ನವದೆಹಲಿ: ಮಾರ್ಚ್ 1971 ರಲ್ಲಿ ಪೂರ್ವ ಪಾಕಿಸ್ತಾನದಲ್ಲಿ ದುಷ್ಕೃತ್ಯಗಳು ನಡೆದಾಗ ಮತ್ತು ನರಮೇಧವನ್ನು ಯೋಜಿಸಲಾಗುತ್ತಿದ್ದಂತೆ ಸಿಯಾಲ್‌ಕೋಟ್ ಸೆಕ್ಟರ್‌ನಲ್ಲಿ ನಿಯೋಜಿಸಲಾದ ಪಾಕಿಸ್ತಾನದ ಸೇನೆಯ 20 ವರ್ಷದ ಯುವ ಅಧಿಕಾರಿ ತನ್ನ ಬೂಟುಗಳಲ್ಲಿ ದಾಖಲೆಗಳು ಮತ್ತು ನಕ್ಷೆಗಳನ್ನು ತುಂಬಿಕೊಂಡು ಭಾರತಕ್ಕೆ ದಾಟಲು ಯಶಸ್ವಿಯಾದರು. ಪಾಕಿಸ್ತಾನ ಸೇನೆಯ ನಿಯೋಜನೆಯ ವಿವರಗಳು ಮತ್ತು ಆ ಯುವ ಅಧಿಕಾರಿಯ ಜೇಬಿನಲ್ಲಿದ್ದ 20 ರೂಪಾಯಿಗಳು … Continued

ಅಫ್ಘಾನ್ ನೆಲ ಭಯೋತ್ಪಾದನೆಯ ತಾಣವಾಗದಂತೆ ತಡೆಯಲು ಭಾರತದ ನೇತೃತ್ವದ ನಿರ್ಧಾರ

ನವದೆಹಲಿ: ಅಫ್ಘಾನಿಸ್ತಾನ ನೆಲವು ಜಾಗತಿಕ ಭಯೋತ್ಪಾದನೆಗೆ ಪ್ರಶಸ್ತ ಸ್ಥಳವಾಗಲು ಅವಕಾಶ ನೀಡದಂತೆ ಕೆಲಸ ಮಾಡುವುದಕ್ಕೆ ಭಾರತ, ರಷ್ಯಾ, ಇರಾನ್ ಹಾಗೂ ಮಧ್ಯಪ್ರಾಚ್ಯದ ಐದು ರಾಷ್ಟ್ರಗಳು ದೆಹಲಿಯಲ್ಲಿ ನಡೆದ ಸಂವಾದದಲ್ಲಿ ನಿರ್ಧರಿಸಿವೆ. ಫ್ಘಾನಿಸ್ತಾನದ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಭಾರತ ಆಯೋಜಿಸಿದ್ದ ರಾಷ್ಟ್ರೀಯ ಭದ್ರತಾ ಸಲಹೆಗಾರರ ಈ ಸಂವಾದದಲ್ಲಿ ಮುಕ್ತ ಹಾಗೂ ನೈಜ ದೃಷ್ಟಿಯಲ್ಲಿ ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ಅಲ್ಲಿ … Continued

ಕರ್ನಾಟಕದಲ್ಲಿ ಮೂನ್ನೂರರ ಗಡಿದಾಟಿದ ಕೋವಿಡ್‌ ಸೋಂಕು

ಬೆಂಗಳೂರು: ಕರ್ನಾಟಕದಲ್ಲಿ ಇಂದು (ಬುಧವಾರ) ಒಟ್ಟು 328 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 9 ಜನರು ಮೃತಪಟ್ಟಿದ್ದಾರೆ ಹಾಗೂ ಸೋಂಕಿನಿಂದ ಚೇತರಿಸಿಕೊಂಡಿರುವ 247 ಮಂದಿ ಆಸ್ಪತ್ರೆಗಳಿಂದ ಡಿಸ್​ಚಾರ್ಜ್​ ಆಗಿದ್ದಾರೆ. ಈವರೆಗೆ ಒಟ್ಟು 29,90,856 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, 9 ಮಂದಿ ಮೃತಪಟ್ಟಿದ್ದಾರೆ. 29,44,669 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಈವರೆಗೆ 38,131 ಮಂದಿ ಸೋಂಕಿನಿಂದ ಮೃತಪಟ್ಟಿದ್ದು, … Continued

ಮೈಕ್ರೋಸಾಫ್ಟ್​ ಮಾಲೀಕ ಬಿಲ್​ ಗೇಟ್ಸ್​ಗೆ ಟ್ವಟ್ಟರಿನಲ್ಲಿ ಮದುವೆ ಪ್ರಪೋಸ್‌ ಮಾಡಿದ ಕುವೈತಿ ಗಾಯಕಿ..!

ಮೈಕ್ರೋಸಾಫ್ಟ್​ ಸಂಸ್ಥಾಪಕ ಬಿಲ್​ ಗೇಟ್ಸ್​​ (Bill Gates) ತಮ್ಮ ಪತ್ನಿ ಮೆಲಿಂಡಾ ಅವರಿಂದ ಈಗ ವಿಚ್ಛೇದನ ಪಡೆದು ದೂರವಾಗಿದ್ದಾರೆ. ಪತ್ನಿಯಿಂದ ದೂರವಾದ ಬಿಲ್​ ಗೇಟ್ಸ್​ರಿಗೆ ಈಗೊಂದು ಮದುವೆ ಪ್ರಸ್ತಾಪ ಬಂದಿದೆ. ಕುವೈತ್​​ನ ನಟಿ, ಗಾಯಕಿ ಶಾಮ್ಸ್ ಬಂದರ್ ಅಲ್-ಅಸ್ಲಾಮಿ ಬಿಲ್​ ಅವರು ಬಿಲ್‌ ಗೇಟ್ಸ್​​ ಅವರನ್ನು ಮದುವೆಯಾಗುವ ತಮ್ಮ ಇಚ್ಛೆ ವ್ಯಕ್ತಪಡಿಸಿದ್ದಾರೆ. ಅಸ್ಲಾಮಿಯವರಿಗೆ ಈಗ 41ವರ್ಷ. … Continued

ಹ್ಯಾಂಗೊವರ್‌ನಿಂದ ಹೊರಬರಲು ಬಳಸುತ್ತಿದ್ದ ಅಂದಾಜು 1400 ವರ್ಷಗಳಷ್ಟು ಪುರಾತನ ಚಿನ್ನದ ಉಂಗುರ ಇಸ್ರೇಲ್‌ನಲ್ಲಿ ಪತ್ತೆ..!

ಹ್ಯಾಂಗೊವರ್ ತೊಡೆದುಹಾಕಲು ಪ್ರಾಚೀನರು ತಮ್ಮದೇ ಆದ ಮಾರ್ಗವನ್ನು ಹೊಂದಿದ್ದರು. ಇದಕ್ಕೆ ಸಾಕ್ಷಿಯೆಂಬಂತೆ ಇಸ್ರೇಲ್‌ನ ಯವ್ನೆಯಲ್ಲಿನ ಉತ್ಖನನದ ಸಮಯದಲ್ಲಿ ಹರಳಿನಿಂದ ಅಲಂಕರಿಸಲ್ಪಟ್ಟ ಪುರಾತನ ಚಿನ್ನದ ಉಂಗುರವನ್ನು ಇತ್ತೀಚೆಗೆ ಪತ್ತೆಯಾಗಿದೆ..! ಮತ್ತು ಪುರಾತತ್ತ್ವ ಶಾಸ್ತ್ರಜ್ಞರು ಇದನ್ನು ಹ್ಯಾಂಗೊವರ್ ಚಿಕಿತ್ಸೆಯಾಗಿ ಬಳಸಿರಬಹುದು ಎಂದು ನಂಬುತ್ತಾರೆ. ಇಸ್ರೇಲ್ ಆಂಟಿಕ್ವಿಟೀಸ್ ಅಥಾರಿಟಿ ಪ್ರಕಾರ, ಪುರಾತತ್ತ್ವ ತಜ್ಞರು ಯವ್ನೆ ನಗರದಲ್ಲಿ ಬೈಜಾಂಟೈನ್ ಯುಗದ ಹಿಂದಿನ … Continued

ಸಕ್ರೆಬೈಲು ಆನೆ ಬಿಡಾರದ ಮರಿಯಾನೆಗೆ ‘ಪುನೀತ್’ ಎಂದು ನಾಮಕರಣ

ಶಿವಮೊಗ್ಗ : ಸಕ್ರೆಬೈಲು ಆನೆ ಬಿಡಾರದಲ್ಲಿರುವ ಮರಿಯಾನೆಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಎಂದು ನಾಮಕರಣ ಮಾಡುವ ಮೂಲಕ ಅರಣ್ಯ ಇಲಾಖೆ ವಿಶೇಷ ಗೌರವ ಸಲ್ಲಿಸಿದೆ . ಇಂದು ಸಕ್ರೆಬೈಲು ಆನೆ ಬಿಡಾರದಲ್ಲಿ ನಡೆಯುತ್ತಿರುವ ತಾಯಿ‌ ಆನೆಯಿಂದ ಮರಿಯಾನೆಯನ್ನು ಬೇರ್ಪಡಿಸುವ ಬಕಾರ್ಯಕ್ರಮ ನಡೆದಿದೆ. ತಾಯಿ ಆನೆ ನೇತ್ರಾಳಿಂದ ಮರಿಯನ್ನು ಇಂದು ಬೇರ್ಪಡಿಸಲಾಗುತ್ತಿದೆ ಈ ವೇಳೆ … Continued

ಭೂಗತ ಪಾತಕಿ ದಾವೂದ್ ಆಪ್ತ ರಿಯಾಜ್ ಜತೆ ಫಡ್ನವೀಸ್ ನಂಟು: ಸಚಿವ ನವಾಬ್‌ ಮಲಿಕ್ ಆರೋಪ

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ರಿಯಾಜ್ ಭಾಟಿ ಜತೆ ನಿಕಟ ಸಂಪರ್ಕ ಇದೆ ಎಂದು ಹೈಡ್ರೋಜನ್ ಬಾಂಬ್ ಸಿಡಿಸುತ್ತೇನೆ ಎಂದು ಹೇಳಿದ್ದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ತಿಳಿಸಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನವಾಬ್ ಮಲಿಕ್, ರಿಯಾಜ್ ಭಾಟಿ ಯಾರು? ದಾವೂದ್ ಜತೆ ನಿಕಟ … Continued

ದೆಹಲಿಯ ಗಡಿಯಲ್ಲಿ ಮತ್ತೊಬ್ಬ ರೈತನ ಸಾವು: ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆ

ನವದೆಹಲಿ: ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಪೈಕಿ ಮತ್ತೊಬ್ಬ ರೈತ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದಾರೆ. ಮೃತ ರೈತನನ್ನು ಪಂಜಾಬಿನ ಅಮ್ರೋಹ್ ಜಿಲ್ಲೆಯ ನಿವಾಸಿ ಗುರುಪ್ರೀತ್ ಸಿಂಗ್  (45) ಎಂದು ಗುರುತಿಸಲಾಗಿದೆ. ಕುಂಡ್ಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮರಣೋತ್ತರ ಪರೀಕ್ಷೆಯ ಬಳಿಕ ಪಾರ್ಥೀವ ಶರೀರವನ್ನು … Continued

ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋಗಿ ಆಯತಪ್ಪಿ ಬಿದ್ದ ಮಹಿಳೆ ರೈಲಿನಡಿ ಸಿಲುಕುವುದು ತಪ್ಪಿಸಿದ ಪೊಲೀಸರು.. ಸಿಸಿಟಿವಿ ವಿಡಿಯೊ ವೀಕ್ಷಿಸಿ

ಶಿವಮೊಗ್ಗ: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಹೋದ ಮಹಿಳೆಯೊಬ್ಬರು ಆಯತಪ್ಪಿ ಬಿದ್ದ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು, ಅಲ್ಲೇ ಇದ್ದ ರೈಲ್ವೆ ಪೊಲೀಸರು ಸಮಯ ಪ್ರಜ್ಞೆ ತೋರಿ ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ. ತಾಳಗುಪ್ಪ-ಬೆಂಗಳೂರು ಇಂಟರ್ ಸಿಟಿ ರೈಲು ಶಿವಮೊಗ್ಗ ರೈಲ್ವೆ ನಿಲ್ದಾಣದಿಂದ ಹೊರಟಾಗ ಈ ಘಟನೆ ಸಂಭವಿಸಿದೆ. ಸಂಬಂಧಿಕರನ್ನು ರೈಲು ಹತ್ತಿಸಲು ಬಂದಿದ್ದ ಮಹಿಳೆ ತಾನೂ ರೈಲು ಏರಿದ್ದರು … Continued

ಹರಿಕುಮಾರ್ ಭಾರತದ ನೌಕಾ ಪಡೆಯ ನೂತನ ಮುಖ್ಯಸ್ಥ

ನವದೆಹಲಿ: ದೇಶದ ನೌಕಾಪಡೆ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಆರ್ ಹರಿ ಕುಮಾರ್ ನೇಮಕಗೊಂಡಿದ್ದಾರೆ. ನವೆಂಬರ್‌ ೩೦ ರಂದು ಹರಿಕುಮಾರ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನೌಕಾಪಡೆಯ ಹಾಲಿ ಮುಖ್ಯಸ್ಥರಾದ ಅಡ್ಮಿರಲ್ ಕರಮ್ಬಿರ್ ಸಿಂಗ್ ನ.೩೦ ರಂದು ನಿವೃತ್ತರಾಗಲಿದ್ದಾರೆ. ಉಪಅಡ್ಮಿರಲ್ ಕುಮಾರ್ ಅವರು ಪ್ರಸ್ತುತ ವೆಸ್ಟ್ರನ್ ನೌಕಾ ಕಮಾಂಡ್ ಫ್ಲಾಗ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಅಡ್ಮಿರಲ್ ಆರ … Continued