ಬಿಜೆಪಿ ಶಾಸಕನಿಗೆ ವಯೋವೃದ್ಧನಿಂದ ಕಪಾಳಮೋಕ್ಷದ‌ ವಿಡಿಯೊ ವೈರಲ್…! ತನ್ನ ಚಿಕ್ಕಪ್ಪ ಪ್ರೀತಿಯಿಂದ ಕೆನ್ನೆಗೆ ತಟ್ಟಿದ್ದಾರೆ ಎಂದ ಶಾಸಕ

ಉನ್ನಾವೋ (ಉತ್ತರಪ್ರದೇಶ): ಬಿಜೆಪಿ ಶಾಸಕ ಪಂಕಜ್ ಗುಪ್ತಾ ಅವರಿಗೆ ಕಾರ್ಯಕ್ರಮದ ವೇಳೆ ರೈತನೊಬ್ಬ ಕಪಾಳಮೋಕ್ಷ ಮಾಡಿರುವುದನ್ನು ತೋರಿಸುವ ವಿಡಿಯೋ ತುಣುಕೊಂದು ವೈರಲ್ ಆಗಿದ್ದು, ಶಾಸಕ ತನ್ನ ಚಿಕ್ಕಪ್ಪ ತನ್ನ ಕೆನ್ನೆಯ ಮೇಲೆ ಪ್ರೀತಿಯಿಂದ ತಟ್ಟಿದ್ದಾರೆ ಎಂದು ಹೇಳಿದ್ದಾರೆ. ವಿಡಿಯೊ ವ್ಯಾಪಕವಾಗಿ ವೈರಲ್‌ ಆಗಿದ್ದು, ಶುಕ್ರವಾರ ಉನ್ನಾವೊದ ಸದರ್ ಕ್ಷೇತ್ರದ ಶಾಸಕರು ನಕಾರಾತ್ಮಕ ಅನಿಸಿಕೆಗಳನ್ನು ಹೋಗಲಾಡಿಸಲು ಪತ್ರಿಕಾಗೋಷ್ಠಿಯನ್ನು … Continued

ಹುಬ್ಬಳ್ಳಿ-ಧಾರವಾಡ ಬೈಪಾಸ್ 6 ಪಥದ ಎಕ್ಸ್ ಪ್ರೆಸ್‌ ಹೆದ್ದಾರಿ, 4 ಪಥದ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಟೆಂಡರ್: ಪ್ರಹ್ಲಾದ್ ಜೋಶಿ

posted in: ರಾಜ್ಯ | 0

ಹುಬ್ಬಳ್ಳಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನವದೆಹಲಿ ಅವರು ಹುಬ್ಬಳ್ಳಿ-ಧಾರವಾಡ ಬೈಪಾಸ್ 31ಕಿಮೀ ರಸ್ತೆಯನ್ನು ಷಟ್ಪಥ ಎಕ್ಸ್ ಪ್ರೆಸ್‌ ಹೆದ್ದಾರಿಯಾಗಿ ಮಾರ್ಪಡಿಸಲು ಟೆಂಡರ್ ಕರೆಯಲಾಗಿದೆ. ಜೊತೆಗೆ ಇ.ಪಿ.ಸಿ (ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ) ಮಾದರಿಯಲ್ಲಿ ಈ ರಸ್ತೆ ನಿರ್ಮಿಸಲುಎರಡೂ ಬದಿಯಲ್ಲಿ ದ್ವಿಪಥದ ಸರ್ವಿಸ್ ರಸ್ತೆಯನ್ನು ನಿರ್ಮಿಸಲು ಟೆಂಡರ್ ಕರೆಯಲಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದ್ದಾರೆ. … Continued

ಅಗರ್ತಲದಲ್ಲಿ ನಡೆಯುವ ರಾಷ್ಟ್ರೀಯ ಯುವ ಪರಂಪರೆ ಉತ್ಸವಕ್ಕೆ ಸಂಜಯಕುಮಾರ ಬಿರಾದಾರ ಆಯ್ಕೆ

posted in: ರಾಜ್ಯ | 0

ಧಾರವಾಡ: ತ್ರಿಪುರ ರಾಜ್ಯದ ಅಗರ್ತಲದಲ್ಲಿ ಜನೆವರಿ 15ರಿಂದ 21ರ ವರೆಗೆ ಆಯೋಜಿಸಿರುವ ರಾಷ್ಟ್ರೀಯ ಯುವ ಪರಂಪರೆಯ ಉತ್ಸವದಲ್ಲಿ ಧಾರವಾಡ ಜಿಲ್ಲೆಯ ಕರ್ನಾಟಕ ವಿಶ್ವವಿದ್ಯಾಲಯದ ಎನ್ಎಸ್ಎಸ್ ಘಟಕದ ಸಂಜಯಕುಮಾರ ವೈ. ಬಿರಾದಾರ ಅವರು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ಕಲಾ ಯುವ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನು ತ್ರಿಪುರದ ತ್ರಿಪುರದ ಯುವ ವಿಕಾಸ ಕೇಂದ್ರವು ಆಯೋಜಿಸಿದೆ. ಸಂಜಯಕುಮಾರ ವೈ. ಬಿರಾದಾರ … Continued

ಮತ್ತೊಂದು ಕರಾಳ ಆದೇಶ… ಕಾಫಿ ಶಾಪ್‌ಗಳಿಗೆ ಮಹಿಳೆಯರು ಹೋಗುವುದನ್ನು ನಿಷೇಧಿಸಿದ ತಾಲಿಬಾನ್..!

ಅಫ್ಘಾನಿಸ್ತಾನದ ಹೆರಾತ್ ಪ್ರಾಂತ್ಯದಲ್ಲಿ ಹತ್ತಿರದ ಪುರುಷ ಸಂಬಂಧಿ ಇಲ್ಲದ ಮಹಿಳೆಯರು ಮತ್ತು ಹುಡುಗಿಯರು ಕಾಫಿ ಶಾಪ್‌ಗಳಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ರಾಹಾ ಪ್ರೆಸ್ ವರದಿ ಮಾಡಿದೆ. ಹೆರಾತ್‌ನಲ್ಲಿರುವ ತಾಲಿಬಾನ್ ಕಚೇರಿಯ ಮೌಲ್ಯ ಇಲಾಖೆ ಮುಖ್ಯಸ್ಥ ಶೇಖ್ ಅಜೀಜಿ ಉರ್ ರಹಮಾನ್ ಅಲ್-ಮೊಹಜರ್, ಇನ್ನು ಮುಂದೆ ಸಂಗೀತ ನುಡಿಸುವುದು ಮತ್ತು ‘ಮಹ್ರಂ’ (ಸಂಬಂಧಿ) ಇಲ್ಲದ ಮಹಿಳೆಯರು ಮತ್ತು … Continued

ಭಾರತದ ಮತ್ತೊಂದು ಮೈಲಿಗಲ್ಲು: ದೇಶದಲ್ಲಿ 150 ಕೋಟಿಗೂ ಹೆಚ್ಚು ಡೋಸ್ ಕೋವಿಡ್‌ ಲಸಿಕೆ ನೀಡಲಾಗಿದೆ ಎಂದ ಪ್ರಧಾನಿ

ನವದೆಹಲಿ: ದೇಶದಲ್ಲಿ ಈವರೆಗೆ 150 ಕೋಟಿ‌ ಡೋಸ್ ಲಸಿಕೆ ನೀಡಿರುವುದು ಮಹತ್ವದ ಮೈಲುಗಲ್ಲು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಲಸಿಕೆ ನೀಡಿಕೆ ಆರಂಭವಾದ ಒಂದು ವರ್ಷದ ಅವಧಿಯಲ್ಲಿ 150 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಇದು ಆಶಾದಾಯಕ ಬೆಳವಣಿಗೆ ಎಂದು ಅವರು ಹೇಳಿದ್ದಾರೆ. ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ ಎರಡನೇ ಕ್ಯಾನ್ಸರ್ ಘಟಕಕ್ಕೆ ಚಾಲನೆ … Continued

ದೇಶದಲ್ಲಿ ಕೋವಿಡ್ ಪ್ರಕರಣಗಳು ಘಾತೀಯವಾಗಿ ಹೆಚ್ಚಳ, ಆರ್-ನಾಟ್ ಮೌಲ್ಯವು ಈಗಲೇ ಎರಡನೇ ಅಲೆಗಿಂತ ಹೆಚ್ಚಾಗಿದೆ..!-.ಆರ್-ಮೌಲ್ಯದ ಅರ್ಥವೇನು ?

ಆರ್-ನಾಟ್, ಅಥವಾ ಆರ್0, ಸೋಂಕಿಗೆ ಒಳಗಾಗುವ ಜನರ ಸರಾಸರಿ ಸಂಖ್ಯೆಯನ್ನು ಸೂಚಿಸುತ್ತದೆ ಮತ್ತು ಕೋವಿಡ್ ಧನಾತ್ಮಕ ವ್ಯಕ್ತಿಯಿಂದ ಎಷ್ಟು ಆರೋಗ್ಯವಂತ ಜನರು ಸೋಂಕಿಗೆ ಒಳಗಾಗಬಹುದು ಎಂಬುದನ್ನು ಹೇಳುತ್ತದೆ. ನವದೆಹಲಿ: ದೇಶದಲ್ಲಿ ಕೋವಿಡ್-19 ಪ್ರಕರಣಗಳು ದಿನದಿಂದ ದಿನಕ್ಕೆ ಘಾತೀಯವಾಗಿ ಏರುತ್ತಿವೆ. ಓಮಿಕ್ರಾನ್‌ ರೂಪಾಂತರವು ತನ್ನ ರಂಪಾಟವನ್ನು ಪ್ರಾರಂಭಿಸುತ್ತಿದ್ದಂತೆ, ದೇಶವನ್ನು ಧ್ವಂಸಗೊಳಿಸಿದ ಎರಡನೇ ಅಲೆಯ ಉತ್ತುಂಗದಲ್ಲಿದ್ದುದಕ್ಕಿಂತ R-0 (R-naught) … Continued

ಕರ್ನಾಟಕದಲ್ಲಿ ಶುಕ್ರವಾರ 8,449 ಕೊರೊನಾ ಸೋಂಕು ದಾಖಲು…ಬೆಂಗಳೂರಿನಲ್ಲಿ ಆರೂವರೆ ಸಾವಿರಕ್ಕೂ ಹೆಚ್ಚು ಪ್ರಕರಣ

posted in: ರಾಜ್ಯ | 0

ಬೆಂಗಳೂರು: ಬೆಂಗಳೂರಿನಲ್ಲಿ ಒಂದೇ ದಿನದಲ್ಲಿ ಆರು ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕು ದಾಖಲಾಗಿದ್ದು, ಕರ್ನಾಟಕದಲ್ಲಿ ಕೊರೊನಾ ಏರುತ್ತಲೇ ಸಾಗಿದ್ದು, ಶುಕ್ರವಾರ (ಜ.7) ಒಂದೇ ದಿನ 8449 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ಸಮಯದಲ್ಲಿ ಸೋಂಕಿನಿಂದ ನಾಲ್ವರು ಸಾವನ್ನಪ್ಪಿದ್ದಾರೆ. 505 ಮಂದಿ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ​ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ 4.15 ಇದ್ದು, … Continued

ಮಾರ್ಚ್‌ 15ರಿಂದ 23ರ ವರೆಗೆ ಸುಪ್ರಸಿದ್ಧ ಶಿರಸಿ ಮಾರಿಕಾಂಬಾದೇವಿ ಜಾತ್ರೆ

posted in: ರಾಜ್ಯ | 0

ಶಿರಸಿ: ರಾಜ್ಯದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀಮಾರಿಕಾಂಬಾ ದ್ವೈವಾರ್ಷಿಕ ಜಾತ್ರಾ ಮಹೋತ್ಸವ ಈ ವರ್ಷ ಮಾ.೧೫ರಿಂದ ಮಾ.೨೩ರ ವರೆಗೆ ನಡೆಯಲಿದೆ. ನಗರದ ಮಾರಿಕಾಂಬಾ ದೇವಾಲಯದ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಾತ್ರಾ ಮುಹೂರ್ತ ಘೋಷಣಾ ಸಭೆಯಲ್ಲಿ ವಿದ್ವಾನ್ ರಾಮಕೃಷ್ಣ ಭಟ್ಟ ಕೆರೇಕೈ ಮುಹೂರ್ತ ಘೋಷಿಸಿದರು. ಜಾತ್ರಾ ಮುಹೂರ್ತ ನಿಗದಿ ಆಗುತ್ತಿದ್ದಂತೆ ಸಂಪ್ರದಾಯದ … Continued

ಇಟಲಿಯಿಂದ ಮತ್ತೊಂದು ವಿಮಾನದಲ್ಲಿ ಅಮೃತಸರಕ್ಕೆ ಬಂದಿಳಿದ ಪ್ರಯಾಣಿಕರಲ್ಲಿ 150 ಜನರಿಗೆ ಕೋವಿಡ್‌ ಸೋಂಕು..!

ಅಮೃತಸರ: ಇಟಲಿಯಿಂದ ಸುಮಾರು 150 ಅಂತಾರಾಷ್ಟ್ರೀಯ ಪ್ರಯಾಣಿಕರು ಪಂಜಾಬ್‌ಗೆ ಆಗಮಿಸಿದ ನಂತರ ಕೋವಿಡ್ -19ಕ್ಕೆ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ. 290 ಪ್ರಯಾಣಿಕರಿದ್ದ ವಿಮಾನವು ರೋಮ್‌ನಿಂದ ಅಮೃತಸರಕ್ಕೆ ಬಂದಿದೆ. ಪ್ರೋಟೋಕಾಲ್ ಪ್ರಕಾರ ನಗರದಾದ್ಯಂತ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾದ ಪ್ರತ್ಯೇಕ ವಾರ್ಡ್‌ಗಳಿಗೆ ರೋಗಿಗಳನ್ನು ಸ್ಥಳಾಂತರಿಸುವ ಸಾಧ್ಯತೆಯಿದೆ. ಗುರುವಾರ ಮುಂಜಾನೆ, ಇಟಲಿಯ ಮಿಲನ್‌ನಿಂದ ಚಾರ್ಟರ್ ಫ್ಲೈಟ್‌ನಲ್ಲಿ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದ … Continued

ಪ್ರಧಾನಿ ಮೋದಿ ಪಾಕಿಸ್ತಾನದ ಫೈರಿಂಗ್‌ ವ್ಯಾಪ್ತಿಯಲ್ಲಿದ್ದರು’: ಬೆದರಿಕೆ ಇರಲಿಲ್ಲ ಎಂಬ ಪಂಜಾಬ್‌ ಸಿಎಂ ಹೇಳಿಕೆ ತಳ್ಳಿಹಾಕಿದ ಕಾಂಗ್ರೆಸ್‌ನ ಮನೀಶ್ ತಿವಾರಿ

ಚಂಡೀಗಢ: ಫಿರೋಜ್‌ಪುರದ ಫ್ಲೈಓವರ್ ಮೇಲೆ 20 ನಿಮಿಷಗಳ ಕಾಲ ಪ್ರಧಾನಿ ನರೇಂದ್ರ ಮೋದಿ ಬೆಂಗಾವಲು ಪಡೆ ತಡೆಹಿಡಿಲ್ಪಟ್ಟಾಗ ಅವರ ಭದ್ರತೆಗೆ ಯಾವುದೇ ಅಪಾಯವಿರಲಿಲ್ಲ ಎಂಬ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಹೇಳಿಕೆಯನ್ನು ಅವರದ್ದೇ ಪಕ್ಷದ ಹಿರಿಯ ನಾಯಕ ಮನೀಶ್ ತಿವಾರಿ ಶುಕ್ರವಾರ ತಳ್ಳಿಹಾಕಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್‌ ನಾಯಕ ತಿವಾರಿ, ಪ್ರಧಾನಿಯ ಭದ್ರತೆಯನ್ನು ಬೇರೆಯವರ … Continued