ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರನ್ನು ಪಾಕಿಸ್ತಾನದ ಹಂಗಾಮಿ ಪ್ರಧಾನಿಯಾಗಿ ನಾಮನಿರ್ದೇಶನ ಮಾಡಿದ ಇಮ್ರಾನ್ ಖಾನ್

ಇಸ್ಲಾಮಾಬಾದ್‌: ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಹಂಗಾಮಿ ಪ್ರಧಾನಿ ಸ್ಥಾನಕ್ಕೆ ಸೋಮವಾರ ಪಾಕಿಸ್ತಾನದ ಮಾಜಿ ಮುಖ್ಯ ನ್ಯಾಯಮೂರ್ತಿ ಗುಲ್ಜಾರ್ ಅಹ್ಮದ್ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಭಾನುವಾರ ರಾತ್ರಿ ತಕ್ಷಣವೇ ಜಾರಿಗೆ ಬರುವಂತೆ ಇಮ್ರಾನ್ ಖಾನ್ ಅವರನ್ನು ದೇಶದ ಪ್ರಧಾನಿಯಾಗಿ ಡಿ-ನೋಟಿಫಿಕೇಶನ್ ಮಾಡಿ ಪಾಕಿಸ್ತಾನ ಅಧ್ಯಕ್ಷ ಅಲ್ವಿ ಆದೇಶ ಹೊರಡಿಸಿದ ನಂತರ ಈ ಬೆಳವಣಿಗೆ ನಡೆದಿದೆ. … Continued

ಕಾಶ್ಮೀರ: ಶೋಪಿಯಾನದಲ್ಲಿ ಕಾಶ್ಮೀರಿ ಪಂಡಿತನ ಮೇಲೆ ಉಗ್ರರು ಗುಂಡಿನ ದಾಳಿ

ಕಾಶ್ಮೀರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚೋಟೋಗಾಮ್ ಪ್ರದೇಶದಲ್ಲಿ ಸೋಮವಾರ ಸಂಜೆ ಭಯೋತ್ಪಾದಕರು ಕಾಶ್ಮೀರಿ ಪಂಡಿತ ಹಾಗೂ ಅಂಗಡಿ ಮಾಲೀಕನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಗಾಯಗೊಳಿಸಿದ್ದಾರೆ. ಗಾಯಾಳು ಕಾಶ್ಮೀರಿ ಪಂಡಿತ ಸೋನು ಕುಮಾರ್ ಬಲ್ಜಿ ಎಂದು ಗುರುತಿಸಲಾಗಿದೆ ಹಾಗೂ ಗಂಭೀರ ಸ್ಥಿತಿಯಲ್ಲಿ ಶ್ರೀನಗರದ ಸೇನಾ ಆಸ್ಪತ್ರೆಗೆ ಸಾಗಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ, ಪುಲ್ವಾಮಾದಲ್ಲಿ … Continued

ಅನಾಮಧೇಯ ವ್ಯಕ್ತಿ ಟಿಪ್ಪಣಿಯೊಂದಿಗೆ ಲಂಡನ್ ಗ್ರಂಥಾಲಯಕ್ಕೆ ಬರೋಬ್ಬರಿ 50 ವರ್ಷಗಳ ನಂತರ ಮರಳಿದ ಬಹಳ ಹಳೆಯ ಪುಸ್ತಕ..!

ಯೂನಿವರ್ಸಿಟಿ ಕಾಲೇಜ್ ಲಂಡನ್‌ ಲೈಬ್ರರಿಯಿಂದ ತೆಗೆದುಕೊಂಡು ಹೋಗಿದ್ದ ಬಹಳ ಹಳೆಯ ಪುಸ್ತಕವೊಂದು ಬರೋಬ್ಬರಿ 50 ವರ್ಷಗಳ ನಂತರ ಇತ್ತೀಚೆಗೆ ಯೂನಿವರ್ಸಿಟಿ ಕಾಲೇಜ್ ಲಂಡನ್‌ಗೆ (ಯುಸಿಎಲ್) ಪುನಃ ಹಿಂದಿರುಗಿದೆ. ಪುಸ್ತಕವನ್ನು ಅಪರಿಚಿತ ವ್ಯಕ್ತಿಯೊಬ್ಬರು ಯುಸಿಎಲ್ ಲೈಬ್ರರಿಗೆ ಮೇಲ್ ಮಾಡಿದ್ದಾರೆ. ಅದರ ಜೊತೆಗೆ ಅನಾಮಧೇಯ ವ್ಯಕ್ತಿ ಒಂದು ಟಿಪ್ಪಣಿಯನ್ನೂ ಬರೆದಿದ್ದಾರೆ. ಆತ್ಮೀಯ ಗ್ರಂಥಪಾಲಕರೇ, ಈ ಪುಸ್ತಕವು ತಲುಪಲು ಸುಮಾರು … Continued

ಹುಬ್ಬಳ್ಳಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ ಜೇನು ದಾಳಿ- ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ: ಕೇಶ್ವಾಪುರದ ಸೇಂಟ್ ಮೈಕಲ್ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಜೇನು ಹುಳುಗಳು ದಾಳಿ ನಡೆಸಿವೆ. ಪರೀಕ್ಷೆ ಕೊಠಡಿಗೆ ನುಗ್ಗಿದ ಜೇನುಹುಳುಗಳು ಪರೀಕ್ಷೆ ವಿದ್ಯಾರ್ಥಿಗಳು, ಪೊಲೀಸ್​ ಸಿಬ್ಬಂದಿ, ಶಿಕ್ಷಕರ ಮೇಲೆ ದಾಳಿ ಮಾಡಿವೆ. ಸೋಮವಾರ ಗಣಿತ ವಿಷಯ ಪರೀಕ್ಷೆ ನಡೆಯುತ್ತಿತ್ತು. ಜೇನುಹುಳುಗಳು, ಪರೀಕ್ಷಾ ಕೇಂದ್ರಕ್ಕೆ​ ದಾಳಿ ಮಾಡಿದೆ. ಭಯದಿಂದ ವಿದ್ಯಾರ್ಥಿಗಳು ದಿಕ್ಕಾಪಾಲಾಗಿ ಹೊರ ಓಡಿದರು. ಇಬ್ಬರು … Continued

ಸಾರ್ವಜನಿಕರ‌ ಮೊಬೈಲ್‌ ಕಸಿದುಕೊಳ್ಳಬೇಡಿ: ಪೊಲೀಸರಿಗೆ ಬೆಂಗಳೂರು ಆಯುಕ್ತರಿಂದ ಟ್ವೀಟ್​

ಬೆಂಗಳೂರು : ತಪಾಸಣೆ‌ ನಡೆಸುವಾಗ ಪೊಲೀಸರು ಅನುಮತಿಯಿಲ್ಲದೇ ಸಾರ್ವಜನಿಕರ‌‌ ಮೊಬೈಲ್​​ಗಳನ್ನು ಬಲವಂತವಾಗಿ ಕಸಿದುಕೊಂಡು ಪರಿಶೀಲಿಸುವುದು ಸರಿಯಾದ ಕ್ರಮವಲ್ಲ ಎಂದು ನಗರ ಪೊಲೀಸ್ ಆಯುಕ್ತ ಕಮಲ್‌ ಪಂತ್ ಟ್ವೀಟ್‌ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಪಾಸಣೆ ನಡೆಸುವಾಗ ಸಾರ್ವಜನರಿಂದ ಪೊಲೀಸರು ಮೊಬೈಲ್ ಕಸಿದುಕೊಂಡು, ವೈಯಕ್ತಿಕ ವಿಚಾರಗಳ ಬಗ್ಗೆ ಪ್ರಶ್ನಿಸುತ್ತಿರುವ ದೂರುಗಳು ಕೇಳಿ ಬಂದಿತ್ತು. ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ … Continued

ದೇಶಕ್ಕೆ ಅವರ ಅಗತ್ಯವಿದೆ…: ತನ್ನ ಎಲ್ಲ ಆಸ್ತಿಯನ್ನೂ ರಾಹುಲ್​ ಗಾಂಧಿ ಹೆಸರಿಗೆ ಬರೆದಿಟ್ಟ ಡೆಹ್ರಾಡೂನಿನ 78 ವರ್ಷದ ಮಹಿಳೆ…!

ಡೆಹ್ರಾಡೂನ್‌: ಉತ್ತರಾಖಂಡ್‌ನ ಡೆಹ್ರಾಡೂನ್‌ನ 78 ವರ್ಷದ ಮಹಿಳೆಯೊಬ್ಬರು 50 ಲಕ್ಷ ರೂ.ಗಳ ಮೌಲ್ಯದ ಆಸ್ತಿ ಮತ್ತು 10 ತೊಲೆ ಚಿನ್ನ ಸೇರಿದಂತೆ ತಮ್ಮ ಎಲ್ಲ ಆಸ್ತಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೆಸರಿಗೆ ಬರೆದಿದ್ದಾರೆ. ಪುಷ್ಪಾ ಮುಂಜಿಯಾಲ್ ಎಂಬ ಮಹಿಳೆ ಡೆಹ್ರಾಡೂನ್ ನ್ಯಾಯಾಲಯಕ್ಕೆ ವಿಲ್ ಸಲ್ಲಿಸಿದ್ದು, ರಾಹುಲ್ ಗಾಂಧಿಗೆ ತಮ್ಮ ಆಸ್ತಿಯ ಮಾಲೀಕತ್ವದ ಕಾಗದಪತ್ರಗಳನ್ನು ನೀಡಿದ್ದಾರೆ. … Continued

ರಾಜ್ಯದಲ್ಲಿ ಗ್ರಾಹಕರಿಗೆ ವಿದ್ಯುತ್‌ ಶಾಕ್ ; ಪ್ರತಿ ಯೂನಿಟ್‌ಗೆ ದರ ಹೆಚ್ಚಳ‌, ಏ.1ರಿಂದಲೇ ಜಾರಿ

ಬೆಂಗಳೂರು : ದೇಶಾದ್ಯಂತ ಇಂಧನ ಹಾಗೂ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದ್ದು, ಈಗ ಇದರ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಶಾಕಿಂಗ್‌ ಸುದ್ದಿ ಹೊರಬಿದ್ದಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿಯು ನಾಡಿನ ಜನತೆಗೆ ವಿದ್ಯುತ್‌ ಬೆಲೆ ಏರಿಕೆ ಮಾಡಿದೆ. ಬೆಸ್ಕಾಂ ಪರಿಷ್ಕೃತ ದರದಲ್ಲಿ ಏರಿಕೆ ಮಾಡಲಾಗಿದ್ದು, ಏ.1ರಿಂದಲೇ ಈ ಪರಿಷ್ಕೃತ ದರ ಜಾರಿಯಾಗಿದೆ. ವಿದ್ಯುತ್ … Continued

2020-21ನೇ ಸಾಲಿನ ಏಕಲವ್ಯ, ಜೀವಮಾನದ ಸಾಧನೆ, ಕರ್ನಾಟಕ ಕ್ರೀಡಾರತ್ನ, ಕರ್ನಾಟಕ ಕ್ರೀಡಾ ಪೋಷಕ ಪ್ರಶಸ್ತಿಗಳ ಘೋಷಣೆ

ಬೆಂಗಳೂರು: ಕರ್ನಾಟಕ ಸರ್ಕಾರದ ಕ್ರೀಡಾ ಇಲಾಖೆ ವತಿಯಿಂದ ನೀಡುವ 2020-21 ನೇ ಸಾಲಿನ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ, ಕ್ರೀಡಾರತ್ನ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗೆ ಆಯ್ಕೆಯಾದ ಪಟ್ಟಿಯನ್ನು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಪ್ರಕಟಿಸಿದ್ದಾರೆ. ಇಂದು, ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಕ್ರೀಡಾ … Continued

ರಾಜಸ್ಥಾನದ ಹಿಂಸಾಚಾರದಲ್ಲಿ ಬೆಂಕಿ ಕೆನ್ನಾಲಿಗೆಗೆ ಸುಡುತ್ತಿರುವ ಕಟ್ಟಡಗಳ ಮಧ್ಯೆ ಪುಟ್ಟ ಮಗು ಎತ್ತಿಕೊಂಡು ಓಡಿ ರಕ್ಷಣೆ ಮಾಡಿದ ಪೊಲೀಸ್‌ ಪೇದೆ.. ಈ ಹೃದಯಸ್ಪರ್ಶಿ ಘಟನೆಗೆ ಎಲ್ಲೆಡೆ ಪ್ರಶಂಸೆ

ನವದೆಹಲಿ: ಒಂದು ಚಿತ್ರ ಸಾವಿರ ಪದಗಳನ್ನು ಹೇಳುತ್ತದೆ ಎಂಬುದಕ್ಕೆ ಈ ಫೋಟೋ ಒಂದು ಉತ್ತಮ ನಿದರ್ಶನ. ರಾಜಸ್ಥಾನದ ಹಿಂಸಾಚಾರ-ಪೀಡಿತ ಕರೌಲಿಯ ಈ ಫೋಟೋವು ಗಲಭೆಕೋರರು ಬೆಂಕಿ ಹಚ್ಚಿದ ನಂತರ ಸುಡುತ್ತಿರುವ ಕಟ್ಟಡಗಳ ಮಧ್ಯೆ ರಾಜಸ್ಥಾನದ ಪೊಲೀಸ್ ಪೇದೆಯೊಬ್ಬರು ಪುಟ್ಟ ಮಗುವನ್ನು ಎತ್ತಿಕೊಂಡು ಕಿರಿದಾದ ಕಾಲುದಾರಿಗಳ ಮೂಲಕ ಓಡುತ್ತ ಹಾನಿಯಿಂದ ರಕ್ಷಣೆ ಮಾಡಿದ್ದಕ್ಕೆ ಸಾಕ್ಷಿಯಾಗಿದ್ದು, ಎಲ್ಲಾ ಪ್ರಶಂಸೆಗೆ … Continued

ಮಡಿಲಲ್ಲಿ ಪುಟ್ಟ ತಂಗಿಯೊಂದಿಗೆ ತರಗತಿಗಳಿಗೆ ಹಾಜರಾಗುವ 10 ವರ್ಷದ ಮಣಿಪುರದ ಹುಡುಗಿ..! ಅರ್ಪಣಾ ಭಾವಕ್ಕೆ ಶ್ಲಾಘಿಸಿ ಅವಳ ಪದವಿ ವರೆಗಿನ ಶಿಕ್ಷಣದ ಹೊಣೆ ಹೊತ್ತ ಸಚಿವರು

ಇಂಫಾಲ್: ಮಣಿಪುರದ 10 ವರ್ಷದ ಬಾಲಕಿ ಮೈನಿಂಗ್‌ಸಿನ್ಲಿಯು ಪಮೇಯ್ ತನ್ನ ಸಹೋದರಿಯನ್ನು ಮಡಿಲಲ್ಲಿ ಕೂರಿಸಿಕೊಂಡು ಶಾಲೆಯಲ್ಲಿ ಕಲಿಯುತ್ತಾಳೆ. 4ನೇ ತರಗತಿಯ ವಿದ್ಯಾರ್ಥಿನಿ, ತನ್ನ ತಂಗಿಯನ್ನು ಮಡಿಲಲ್ಲಿ ಇಟ್ಟುಕೊಂಡು ಪ್ರಾಥಮಿಕ ಶಾಲೆ ತರಗತಿಗಳಿಗೆ ಹಾಜರಾಗುತ್ತಿರುವ ಪಮೇಯ ಫೋಟೋ ಮತ್ತು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮಣಿಪುರದ ವಿದ್ಯುತ್, ಅರಣ್ಯ ಮತ್ತು ಪರಿಸರ ಸಚಿವ ಟಿ. ಬಿಸ್ವಜಿತ್ … Continued