ಭೂತ ಓಡಿಸುತ್ತೇನೆಂದು ಬಾಲಕಿಗೆ ಥಳಿಸಿ ಧೂಪದ ಕಡ್ಡಿಯಿಂದ ದೇಹ ಸುಟ್ಟ ಮಂತ್ರವಾದಿ ಬಂಧನ: ಬಾಲಕಿ ಆಸ್ಪತ್ರೆಗೆ ದಾಖಲು

ರಾಂಚಿ: ದುಷ್ಟಶಕ್ತಿಗಳನ್ನು ಓಡಸಿಲು 14 ವರ್ಷದ ಬಾಲಕಿಯನ್ನು ಥಳಿಸಿ, ಆಕೆಯ ದೇಹದ ಭಾಗಗಳನ್ನು ಅಗರಬತ್ತಿಗಳಿಂದ ಸುಟ್ಟ ಆರೋಪದ ಮೇಲೆ ಜಾರ್ಖಂಡ್‌ನ ಛತ್ರಾ ಜಿಲ್ಲೆಯಲ್ಲಿ ಮಂತ್ರವಾದಿಯೋರ್ವನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಕಳೆದ ವಾರ ಹೋಳಿ ಆಡಿದ್ದ ಬಾಲಕಿ ನಂತರ ಬಾಲಕಿ ಅಸ್ವಸ್ಥಳಾಗಿದ್ದಳು. ಮಾಂತ್ರಿಕ ಮೌಲಾನಾ ಎಂ.ಡಿ ವಾಹಿದ್ ಎಂಬಾತ ಅವಳ ಮೈಯಲ್ಲಿ ಭೂತ ಹೊಕ್ಕಿದ್ದು. … Continued

ಕಾಶ್ಮೀರಿ ಪಂಡಿತರು ಶೀಘ್ರದಲ್ಲೇ ತಮ್ಮ ಮೂಲ ನೆಲೆ ಕಾಶ್ಮೀರ ಕಣಿವೆಗೆ ಮರಳುವ ಸಮಯ ಬಂದಿದೆ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗ್ವತ್‌

ಜಮ್ಮು: ಕಾಶ್ಮೀರಿ ಪಂಡಿತರು ಶೀಘ್ರದಲ್ಲೇ ಕಣಿವೆಯಲ್ಲಿರುವ ತಮ್ಮ ಮನೆಗಳಿಗೆ ಮರಳಲು ಸಾಧ್ಯವಾಗುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ, ಅವರು ಮತ್ತೆ ಸ್ಥಳಾಂತರಗೊಳ್ಳದಂತೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುವ ಕೆಲಸ ನಡೆಯುತ್ತಿದೆ ಎಂದು ಪ್ರತಿಪಾದಿಸಿದ್ದಾರೆ. 1990ರಲ್ಲಿ ಕಣಿವೆಯಿಂದ ಕಾಶ್ಮೀರಿ ಪಂಡಿತರ ನಿರ್ಗಮನದ ಹಿಂದಿನ ವಾಸ್ತವತೆಯ ಬಗ್ಗೆ ದೇಶಾದ್ಯಂತ ಮತ್ತು ಹೊರಗೆ ಸಾರ್ವಜನಿಕ ಜಾಗೃತಿ ಮೂಡಿಸಿದೆ … Continued

ಕಾರ್ಖಾನೆ ಯಂತ್ರಕ್ಕೆ ವೇಲ್ ಸಿಲುಕಿ ಯುವತಿ ಸಾವು

ಬೆಂಗಳೂರು: ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಯಂತ್ರಕ್ಕೆ ವೇಲ್ ಸಿಲುಕಿಕೊಂಡು ಯುವತಿಯೊಬ್ಬರು ಮೃತಪಟ್ಟ ಘಟನೆ ಚಂದ್ರಾಲೇಔಟ್‌ನ ನಾಯಂಡಹಳ್ಳಿಯಲ್ಲಿ ಇಂದು, ಭಾನುವಾರ ಬೆಳಿಗ್ಗೆ ನಡೆದಿದೆ. ಗಂಗೊಂಡನಹಳ್ಳಿಯ ಶಾಜಿಯಾ ಬಾನು(೨೮)ಮೃತಪಟ್ಟವರು ಎಂದು ಗುರುತಿಸಲಾಗಿದೆ. ನಾಯಂಡಹಳ್ಳಿಯ ಕೈಗಾರಿಕಾ ಪ್ರದೇಶದ ಜಡ್ ಎಸ್ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಶಾಜಿಯಾ ಬಾನು ಕೆಲಸ ಮಾಡುತ್ತಿದ್ದ ವೇಳೆ ಅವರ ವೇಲ್ ಮಷಿನ್‌ಗೆ ಸಿಲುಕಿ ತಲೆಗೆ ಗಂಭೀರವಾಗಿ … Continued

ಇಂಗ್ಲೆಂಡ್ ತಂಡವನ್ನು 71 ರನ್‌ಗಳಿಂದ ಸೋಲಿಸಿ 7ನೇ ಮಹಿಳಾ ವಿಶ್ವಕಪ್ ಪ್ರಶಸ್ತಿ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ

ಭಾನುವಾರ ಹ್ಯಾಗ್ಲಿ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು 71 ರನ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ ಮಹಿಳಾ ತಂಡ ದಾಖಲೆಯ 7ನೇ ಮಹಿಳಾ ವಿಶ್ವಕಪ್ ಪ್ರಶಸ್ತಿ ಗೆದ್ದುಕೊಂಡಿತು. ಅಲಿಸ್ಸಾ ಹೀಲಿ ಅವರು ಬಿರುಸಿನ 170 ರನ್ ಗಳಿಸಿ ಆಸ್ಟ್ರೇಲಿಯಾ ಹಾಲಿ ಚಾಂಪಿಯನ್ ಇಂಗ್ಲೆಂಡ್ ಅನ್ನು ಸೋಲಿಸಿ ದಾಖಲೆಯ ಏಳನೇ ಐಸಿಸಿ ಮಹಿಳಾ ವಿಶ್ವಕಪ್ ಪ್ರಶಸ್ತಿಯನ್ನು ಗಳಿಸಲು ಮಹತ್ವದ … Continued

ಮುಂಬರುವ ವಿಧಾನ ಪರಿಷತ್ತು ಚುನಾವಣೆ ವೇಳೆಗೆ ಬಿಜೆಪಿಗೆ ಸೇರ್ಪಡೆ : ಬಸವರಾಜ ಹೊರಟ್ಟಿ

.ಹುಬ್ಬಳ್ಳಿ: ಮುಂಬರುವ ವಿಧಾನಪರಿಷತ್ತು ಚುನಾವಣೆ ವೇಳೆಗೆ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗುವುದಾಗಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ವಿಷಯ ಖಚಿತ ಪಡಿಸಿ ಅವರು, ನಾನು ಬಿಜೆಪಿ ಸೇರ್ಪಡೆಯಾಗುವ ಕುರಿತು ಚರ್ಚೆಗಳು ನಡೆಯುತ್ತಿವೆ. ಸೇರ್ಪಡೆಯಾಗುವುದು ಬಹುತೇಕ ಖಚಿತ. ಸಭಾಪತಿ ಸ್ಥಾನದಲ್ಲಿರುವುದರಿಂದ ಚುನಾವಣೆ ವೇಳೆ ಅಧಿಕೃತ ಘೋಷಣೆ ಮಾಡಲಾಗುವುದು ಎಂದು … Continued

ನಿವೃತ್ತ ಐಪಿಎಸ್ ಅಧಿಕಾರಿ ಬಿ.ಭಾಸ್ಕರ್ ರಾವ್ ನಾಳೆ ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ:ವರದಿ

ಬೆಂಗಳೂರು : ರೈಲ್ವೆ ಪೊಲೀಸ್ ಎಡಿಜಿಪಿ ಆಗಿದ್ದ ಐಪಿಎಸ್ ಅಧಿಕಾರಿ ಬಿ.ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷ (ಎಎಪಿ) ಸೇರಲಿದ್ದಾರೆ. 2021ರ ಸೆಪ್ಟೆಂಬರ್ ನಲ್ಲಿ ತಮ್ಮ ಹುದ್ದೆಗೆ ಭಾಸ್ಕರರಾವ್ ಸಲ್ಲಿಸಿದ್ದ ರಾಜೀನಾಮೆಯನ್ನು ಸರ್ಕಾರ ಕಳೆದ ವಾರ‌ವಷ್ಟೇ ಅಂಗೀಕರಿಸಿತ್ತು. ನವದೆಹಲಿಯ ದೀನ್ ದಯಾಳ್ ಉಪಾದ್ಯಾಯ ಮಾರ್ಗದಲ್ಲಿರುವ ಆಮ್‌ ಆದ್ಮಿ ಪಕ್ಷದ‌ ಕಚೇರಿಯಲ್ಲಿ ನಾಳೆ ಸೋಮವಾರ ಬೆಳಗ್ಗೆ 11 … Continued

ಪಾಕ್‌ನಲ್ಲಿ ಅನಿರೀಕ್ಷಿತ ಬೆಳವಣಿಗೆ: ಇಮ್ರಾನ್‌ ಸರ್ಕಾರದ ವಿರುದ್ಧ ಅವಿಶ್ವಾಸ ಮತ ತಿರಸ್ಕಾರ, ಪಾಕಿಸ್ತಾನ ಸಂಸತ್ತು ವಿಸರ್ಜಿಸುವಂತೆ ಅಧ್ಯಕ್ಷರಿಗೆ ಶಿಫಾರಸು ಮಾಡಿದ ಇಮ್ರಾನ್ ಖಾನ್ ..!

ಅನಿರೀಕ್ಷಿತ ಬೆಳವಣಿಗೆಯಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಡೆಪ್ಯುಟಿ ಸ್ಪೀಕರ್ ಭಾನುವಾರ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸಿದ್ದಾರೆ ಮತ್ತು ಅದು ಅಸಾಂವಿಧಾನಿಕ ಎಂದು ಘೋಷಿಸಿದ್ದಾರೆ. ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಡೆಪ್ಯುಟಿ ಸ್ಪೀಕರ್ ಖಾಸಿಂ ಖಾನ್ ಸೂರಿ ಅವರು ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ವಜಾಗೊಳಿಸಿದರು, ಇದು ಸಂವಿಧಾನದ 5 … Continued

ಇಮ್ರಾನ್ ಖಾನ್‌ಗೆ ಬಂಧನದ ಭೀತಿ? ಅವಿಶ್ವಾಸ ನಿರ್ಣಯದಲ್ಲಿ ಸೋಲನುಭವಿಸಿದರೆ ಪಾಕ್ ಪ್ರಧಾನಿ ಬಂಧನವಾಗಬಹುದು ಎಂದ ಸಚಿವ ಶೇಖ್ ರಶೀದ್

ನವದೆಹಲಿ: ಪಾಕಿಸ್ತಾನದ ಸಂಸತ್ತಿನಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ಅವಿಶ್ವಾಸ ನಿರ್ಣಯದಲ್ಲಿ ಅವರು ವಿಶ್ವಾಸ ಮತವನ್ನು ಕಳೆದುಕೊಂಡರೆ ಅವರನ್ನು ಬಂಧಿಸಬಹುದು ಎಂದು ಆಂತರಿಕ ಸಚಿವ ಶೇಖ್ ರಶೀದ್ ಅಹ್ಮದ್ ಭಾನುವಾರ ಹೇಳಿದ್ದಾರೆ. ಇಂಡಿಯಾ ಟುಡೇ ಟಿವಿ ಜೊತೆ ಮಾತನಾಡಿದ ಶೇಖ್ ರಶೀದ್ ಅಹ್ಮದ್ ಅವರು, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ನೇತೃತ್ವದ ಆಡಳಿತಾರೂಢ ಒಕ್ಕೂಟದ … Continued

ಇಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಸರ್ಕಾರದ ಭವಿಷ್ಯ ನಿರ್ಧಾರ

ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲೆ ಇಂದು ಭಾನುವಾರ, ಮತದಾನ ನಡೆಯಲಿದ್ದು, ಇಮ್ರಾನ್ ಸರ್ಕಾರದ ಅಳಿವು ಅಥವಾ ಉಳಿವು ನಿರ್ಣಯವಾಗಲಿದೆ. ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಮತದಾನ ನಡೆಯಲಿದ್ದು, ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ ಸುಮಾರು ಒಂದು ತಿಂಗಳ ನಂತರ ಮತದಾನ ನಡೆಯುತ್ತಿದೆ. 342 ಸಂಖ್ಯಾ ಬಲವನ್ನು ಹೊಂದಿರುವ ಪಾಕ್ ಸಂಸತ್ತಿನಲ್ಲಿ … Continued

ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸನನ್ನು ಎತ್ತಿ ಒಗೆದ ದೈತ್ಯಾಕಾರಾದ ಗೂಳಿ: ಆಸ್ಪತ್ರೆಗೆ ದಾಖಲು…ದೃಶ್ಯ ಸಿಸಿಟಿವಿಯಲ್ಲಿ ಸೆರೆ

ನವದೆಹಲಿ: ನಗರದ ದಯಾಳಪುರ ಪ್ರದೇಶದಲ್ಲಿ ಗುರುವಾರ ಸಂಜೆ ದೆಹಲಿ ಪೊಲೀಸರೊಬ್ಬರ ಮೇಲೆ ಗೂಳಿಯೊಂದು ದಾಳಿ ಮಾಡಿದೆ. ಕಾನ್‌ಸ್ಟೇಬಲ್ ಜ್ಞಾನ್ ಸಿಂಗ್ ದಯಾಳ್‌ಪುರದ ಶೇರ್‌ಪುರ್ ಚೌಕದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಈ ಘಟನೆ ನಡೆದಿದೆ. ಗೂಳಿಯು ಪೊಲೀಸ್‌ ಪೇದೆಯು ಹಿಂದಿನಿಂದ ದಾಳಿ ಮಾಡಿ ಗಾಳಿಯಲ್ಲಿ ಹಾರಿಸಿತು. ಪೇದೆ ನೆಲಕ್ಕೆ ಬಿದ್ದ ನಂತರ, ಕರ್ತವ್ಯದಲ್ಲಿದ್ದ ಇತರ ಪೊಲೀಸರು ಹಾಗೂ ಸಾರ್ವಜನಿಕರು … Continued