ಭಾರೀ ಮಳೆಯ ನಡುವೆ ಪ್ರಬಲ ಗಾಳಿಗೆ ರೋಪ್‌ ವೇಯಲ್ಲಿ ಸಿಲುಕಿಕೊಂಡ 28 ಭಕ್ತರು | ವೀಕ್ಷಿಸಿ

ಭೋಪಾಲ್ :‌ ಮಧ್ಯಪ್ರದೇಶದ ಸತ್ನಾ ಜಿಲ್ಲೆಯಲ್ಲಿ ಬಲವಾದ ಗಾಳಿ ಮತ್ತು ಭಾರೀ ಮಳೆಯ ನಡುವೆ ಮೈಹಾರ್ ಬೆಟ್ಟದ ಮಾ ಶಾರದಾ ದೇವಿ ದೇವಸ್ಥಾನಕ್ಕೆ ಭೇಟಿಗೆ ಸುಮಾರು 28 ಭಕ್ತರು ಪ್ರಯಾಣಿಸುತ್ತಿದ್ದ ರೋಪ್‌ವೇ ಟ್ರಾಲಿ ಗಾಳಿಯಲ್ಲಿ ಸಿಲುಕಿಕೊಂಡಿತು. ತಲಾ ನಾಲ್ಕು ಜನರನ್ನು ಒಳಗೊಂಡ ಏಳು ಟ್ರಾಲಿಗಳು ಸುಮಾರು 40 ನಿಮಿಷಗಳ ಕಾಲ ಗಾಳಿಯ ರಭಸಕ್ಕೆ ತೂಗಾಡುತ್ತಲೇ ಇದ್ದವು. … Continued

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ವಿನಯಕುಮಾರ ಸಕ್ಸೇನಾ ನೇಮಕ

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ವಿನಯಕುಮಾರ್ ಸಕ್ಸೇನಾ ಅವರನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕ ಮಾಡಿದ್ದಾರೆ. ‘ವೈಯಕ್ತಿಕ ಕಾರಣಗಳನ್ನು’ ಉಲ್ಲೇಖಿಸಿ ಅನಿಲ್ ಬೈಜಾಲ್ ಅವರು ಹುದ್ದೆಗೆ ರಾಜೀನಾಮೆ ನೀಡಿದ ಕೆಲವೇ ದಿನಗಳಲ್ಲಿ ಈ ನೇಮಕ ನಡೆದಿದೆ. ಕಳೆದ ವಾರ, ಹಲವಾರು ವಿಷಯಗಳಲ್ಲಿ ದೆಹಲಿ ಸರ್ಕಾರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಅನಿಲ್ ಬೈಜಾಲ್ ಅವರು ವೈಯಕ್ತಿಕ … Continued

ಶಿವಮೊಗ್ಗದಲ್ಲಿ 4 ಮಕ್ಕಳಿಗೆ ಜನ್ಮ ನೀಡಿದ ತಾಯಿ…!

ಶಿವಮೊಗ್ಗ: 22 ವರ್ಷದ ತಾಯಿಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆಲ್ಮಾಸ್ ಬಾನು ಎಂಬವರು ಇಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸಿಸೇರಿಯನ್ ಮೂಲಕ ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಆರೀಫ್ ಮತ್ತು ಅಲ್ಮಾ ಬಾನು ದಂಪತಿ ಭದ್ರಾವತಿ ತಾಲೂಕಿನ ತಡಸ ಗ್ರಾಮದವರಾಗಿದ್ದಾರೆ. ಆಲ್ಮಾಸ್ ಬಾನು ಸೋಮವಾರ ಬೆಳಗ್ಗೆ ಹೆರಿಗೆ ನೋವಿನಿಂದ ಸರ್ಜಿ … Continued

ಪರಿಷತ್ ಚುನಾವಣೆ : ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಹೆಸರು ಘೋಷಿಸಿದ ಜೆಡಿಎಸ್‌

ಬೆಂಗಳೂರು: ಜೆಡಿಎಸ್ ಅಭ್ಯರ್ಥಿಗಳ ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಶ್ರೀಶೈಲ ನಿಂಗಪ್ಪ ಗಡದಿನ್ನಿ ಹಾಗೂ ವಾಯವ್ಯ ಶಿಕ್ಷಕರ ಕ್ಷೇತ್ರದಿಂದ ಚಂದ್ರಶೇಖರ ಲೋಣಿ ಅವರಿಗೆ ಟಿಕೆಟ್ ನೀಡಲಾಗಿದೆ. ಜೆಡಿಎಸ್‌ ಪಕ್ಷದಿಂದ ಬಸವರಾಜ ಹೊರಟ್ಟಿ ಪ್ರತಿನಿಧಿಸುತ್ತಿದ್ದ ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಶ್ರೀಶೈಲ ಅವರಿಗೆ ಟಿಕೆಟ್ ನೀಡಲಾಗಿದೆ. ಹೊರಟ್ಟಿ ಬಿಜೆಪಿ ಸೇರ್ಪಡೆಯಾದ … Continued

ವಿಧಾನ ಪರಿಷತ್‌ ಚುನಾವಣೆ: ಕಾಂಗ್ರೆಸ್‌ನಿಂದ ಅಭ್ಯರ್ಥಿಗಳ ಆಯ್ಕೆ

ಬೆಂಗಳೂರು: ರಾಜ್ಯ ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು. ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್ ಹಾಗೂ ಕೆಪಿಸಿಸಿ ವಕ್ತಾರ ನಾಗಾರಾಜ್ ಯಾದವ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಹಲವು ದಿನಗಳಿಂದ ಕಾಂಗ್ರೆಸ್‍ನ ಹಿರಿಯ ನಾಯಕರು ಟಿಕೆಟ್‍ಗಾಗಿ ಹೈಕಮಾಂಡ್ ಕದತಟ್ಟಿದ್ದರು. ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಘಟಾನುಘಟಿ ನಾಯಕರು ತಮ್ಮ … Continued

ಯುವಕನ ಕೈಗೆ ಮಗುಕೊಟ್ಟು ಮಹಿಳೆ ನಾಪತ್ತೆಯಾಗಿದ್ದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಪ್ರೀತಿಗೆ ಅಡ್ಡಿಯಾದ ಮಗುವನ್ನು ದೂರ ಮಾಡಲು ಪ್ರೇಮಿ-ಪ್ರೇಮಿಕಾ ಮಾಡಿದ ಬೃಹನ್ನಾಟಕ ಬೆಳಕಿಗೆ..!

ಮೈಸೂರು : ಅಪರಿಚಿತ ಮಹಿಳೆ ಬಸ್ ನಿಲ್ದಾಣದಲ್ಲಿ ಮಗುವನ್ನ ಕೊಟ್ಟು ನಾಪತ್ತೆಯಾಗಿದ್ದಾಳೆ. ನಾನು ದಾರಿ ಕಾಣದೆ ಮಗುವನ್ನು ಮೈಸೂರಿಗೆ ತಂದಿರುವುದಾಗಿ ಕೆಲವು ದಿನಗಳ ಹಿಂದೆ ಹೇಳಿ ಪೊಲೀಸರಿಗೆ ಮಗುವನ್ನು ಒಪ್ಪಿಸಿದ್ದ ಯುವಕ ನಿಜ ಬಣ್ಣ ಈಗ ಬಯಲಾಗಿದೆ..! ಹೀಗೆ ಹೇಳಿ ಎಚ್‌.ಡಿ.ಕೋಟೆಯ ಯುವಕ ರಘು ಎಂಬಾತ ಎಲ್ಲರನ್ನೂ ನಂಬಿಸಿದ್ದಲ್ಲದೆ ಅನಾಥ ಮಗುವಂದೆ ಬಿಂಬಿಸಿ ನಗರದ ಲಷ್ಕರ್ … Continued

ಶಿವಲಿಂಗ ಎಂಬುದು ‘ತಮಾಷೆ’ ವಿಷಯವಲ್ಲ : ʼಉದಾರವಾದಿʼ ಕಾಂಗ್ರೆಸ್‌ ನಾಯಕರ ಟೀಕಿಸಿದ ಕಾಂಗ್ರೆಸ್ಸಿನ ಪ್ರಮೋದ್ ಕೃಷ್ಣಂ

ನವದೆಹಲಿ: ಶಿವಲಿಂಗ ಎಂಬುದು ‘ತಮಾಷೆ’ ವಿಷಯವಲ್ಲ ಎಂದು ಕಾಂಗ್ರೆಸ್ಸಿನ ಹಿರಿಯ ಮತ್ತು ‘ಅಧ್ಯಾತ್ಮಿಕ ಗುರು’ ಪ್ರಮೋದ ಕೃಷ್ಣಂ ಹೇಳಿದ್ದಾರೆ. ಜ್ಞಾನವಾಪಿ ಪ್ರಕರಣದ ಕುರಿತು ಪಕ್ಷದ ಕೆಲವು ನಾಯಕರ ಪ್ರತಿಕ್ರಿಯೆಗಳ ಬಗ್ಗೆ ಬಲವಾಗಿ ಟೀಕಿಸಿದ್ದಾರೆ. ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಆಗಿರಲಿ ಅಥವಾ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆಗಿರಲಿ, ‘ಶಿವಲಿಂಗ’ವನ್ನು ‘ತಮಾಷೆ’ ಎಂದು ಕರೆಯಲಾಗುವುದಿಲ್ಲ. ಇದು … Continued

ಗಂಡನಿಗಿಂತ ಹೆಂಡತಿಗೇ ಹೆಚ್ಚು ಆದಾಯ: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಲ್ಲಿ ಗುಜರಾತ್‌ ರಾಜ್ಯ ದೇಶದಲ್ಲೇ ಮೊದಲು…! ಕರ್ನಾಟಕಕ್ಕೆ ಎಷ್ಟನೇ ಸ್ಥಾನ..?

ಅಹಮದಾಬಾದ್: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್) -5 ಫಲಿತಾಂಶಗಳು ಭಾರತದ ವಿವಿಧ ರಾಜ್ಯಗಳಲ್ಲಿ ಗುಜರಾತ್‌ನಲ್ಲಿ ಅತಿ ಹೆಚ್ಚು ಮಹಿಳೆಯರು ತಮ್ಮ ಗಂಡನಿಗಿಂತ ಸಮಾನ ಅಥವಾ ಹೆಚ್ಚಿನ ವೇತನ ಗಳಿಸುತ್ತಾರೆ ಎಂದು ಕಂಡುಕೊಂಡಿದೆ. ತಮ್ಮ ಗಂಡಂದಿರಿಗಿಂತ ಹೆಚ್ಚು ಸಂಬಳ ಪಡೆಯುವ ಮಹಿಳೆಯರ ರಾಷ್ಟ್ರೀಯ 39.9%ರಷ್ಟಿದ್ದು, ಗುಜರಾತ್‌ನಲ್ಲಿ 53.2% ಮಹಿಳೆಯರು ಪ್ರತಿಕ್ರಿಯಿಸಿದವರು ತಾವು ವೇತನ ಸಮಾನತೆ ಹೊಂದಿದ್ದೇವೆ … Continued

ಟಿಪ್ಪು ಮತಾಂತರ ಮಾಡಿರುವ ಸತ್ಯವನ್ನೂ ಪಠ್ಯದಲ್ಲಿ ಅಳವಡಿಸಿದ್ದೇವೆ: ಸಚಿವ ಬಿ.ಸಿ. ನಾಗೇಶ

ಬೆಂಗಳೂರು: ಭಗತ್ ಸಿಂಗ್ ಅವರ ಬಗ್ಗೆ ಇರುವ ಪಾಠವನ್ನು ಪಠ್ಯದಿಂದ ತೆಗೆದು ಹಾಕಿಲ್ಲ. ಆದರೆ ಹೆಗಡೇವಾರ್ ಅವರ ಕುರಿತ ವಿಚಾರವನ್ನು ಪಠ್ಯ ಪುಸ್ತಕದಲ್ಲಿ ಸೇರಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟ ಪಡಿಸಿದ್ದಾರೆ. ಇಂದು, ಸೋಮವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹಿಂದಿನ ಸಮಿತಿಯವರು ಪಠ್ಯದಲ್ಲಿದ್ದ ಡಾ.ಬಿ.ಆರ್.‌ ಅಂಬೇಡ್ಕರ ಮತ್ತು … Continued

ಮೇಕೆದಾಟು ಪಾದಯಾತ್ರೆ : ಸಿದ್ದರಾಮಯ್ಯ, ಡಿಕೆಶಿ ಸೇರಿ 29 ನಾಯಕರಿಗೆ ಕೋರ್ಟ್​ ಸಮನ್ಸ್

ಬೆಂಗಳೂರು: ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿದ ಆರೋಪದ ಮೇಲೆ ದಾಖಲಾದ ದೂರಿಗೆ ಸಂಬಂಧಿಸಿದಂತೆ ರಾಜ್ಯ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಸೇರಿದಂತೆ ಕಾಂಗ್ರೆಸ್ ನಾಯಕರು ಖುದ್ದು ಹಾಜರಾಗುವಂತೆ ಕೋರ್ಟ್‌ ಸಮನ್ಸ್ ನೀಡಿದೆ. . ಕಾಂಗ್ರೆಸ್ ಪ್ರಮುಖ ನಾಯಕರಾದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಸಂಸದ ಡಿ.ಕೆ.ಸುರೇಶ್ … Continued