ಬೆಳಗಾವಿ ನಗರದ ಮಧ್ಯೆ ಚಿರತೆ ದಾಳಿ: ಕಟ್ಟಡ ಕಾರ್ಮಿಕನಿಗೆ ಗಾಯ

ಬೆಳಗಾವಿ: ಬೆಳಗಾವಿಯ ಜಾಧವ ನಗರದಲ್ಲಿ ಶುಕ್ರವಾರ ಮಧ್ಯಾಹ್ನ ಚಿರತೆ ದಾಳಿ ಮಾಡಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾರೆ. ನಗರದ ಮಧ್ಯ ಭಾಗದಲ್ಲಿಯೇ ಚಿರತೆ ದಾಳಿ ಮಾಡಿರುವುದರಿಂದ ಜನರು ಆತಂಕ್ಕೀಡಾಗಿದ್ದಾರೆ. ಜಾಧವ ನಗರದಲ್ಲಿ ಕಟ್ಟಡ ಕೆಲಸ ಮಾಡುತ್ತಿದ್ದ ಖನಗಾವಿ ಗ್ರಾಮದ ನಿವಾಸಿ ಸಿದರಾಯಿ ಲಕ್ಷ್ಮಣ ಮಿರಜಕರ್ (38) ಎಂಬವರು ಚಿರತೆ ದಾಳಿಯಿಂದ ಗಾಯಗೊಂಡಿದ್ದಾರೆ. ಅವರು ಕೆಲಸ ಮಾಡುತ್ತಿದ್ದ ವೇಳೆ … Continued

ಪಂಚಾಯತ್ ಚುನಾವಣೆಗಳಲ್ಲಿ ಗೆದ್ದಿದ್ದು ಮಹಿಳೆಯರು.. ಆದರೆ ಪ್ರಮಾಣ ವಚನ ಸ್ವೀಕರಿಸಿದ್ದು ಗಂಡಂದಿರು, ಸಂಬಂಧಿಕರು…!

ದಾಮೋಹ್ (ಮಧ್ಯಪ್ರದೇಶ): ಹಲವು ಪ್ರಶ್ನೆಗಳಿಗೆ ಕಾರಣವಾಗಿರುವ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಗ್ರಾಮ ಪಂಚಾಯತದಲ್ಲಿ ಹೊಸದಾಗಿ ಆಯ್ಕೆಯಾದ ಮಹಿಳಾ ಸರಪಂಚ್‌ ಅವರ ಪತಿ ತನ್ನ ಪತ್ನಿಯ ಬದಲಿಗೆ ಪ್ರಮಾಣ ವಚನ ಸ್ವೀಕರಿಸಿದ ಆರೋಪದ ಮೇಲೆ ಈ ಬಗ್ಗೆ ವರದಿ ನೀಡುವಂತೆ ಜಿಲ್ಲಾ ಅಧಿಕಾರಿಗಳು ವಿವರ ಕೋರಿದ್ದಾರೆ. . ಈ ವಿಷಯವು ದಾಮೋಹ್ ಜಿಲ್ಲೆಯ ಗೈಸಾಬಾದ್ ಪಂಚಾಯತ್‌ಗೆ … Continued

ಪ್ರತಿಭಟನೆ ನಡೆಸುತ್ತಿದ್ದ ಪ್ರಿಯಾಂಕಾ ಗಾಂಧಿಯನ್ನು ರಸ್ತೆಯಲ್ಲೇ ಎಳೆದೊಯ್ದ ಪೊಲೀಸರು; ವೀಡಿಯೊ ವೈರಲ್

ನವದೆಹಲಿ: ಸಂಸತ್‌ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಜೈರಾಮ್ ರಮೇಶ್ ಮತ್ತು ರಂಜೀತ್ ರಂಜನ್ ಸೇರಿದಂತೆ ಅನೇಕ ಕಾಂಗ್ರೆಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಲೆ ಏರಿಕೆ ಮತ್ತು ಹಣದುಬ್ಬರವನ್ನು ವಿರೋಧಿಸಿ ರಾಷ್ಟ್ರಪತಿ ಭವನದ ಕಡೆಗೆ ಮೆರವಣಿಗೆ ನಡೆಸಲು ಯತ್ನಿಸಿದ ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಬಟ್ಟೆಗಳನ್ನು … Continued

ತಂದೆಯಿಂದಲೇ ಅತ್ಯಾಚಾರಕ್ಕೊಳಗಾಗಿ ಮಗುವಿಗೆ ಜನ್ಮ ನೀಡಿದ 8 ನೇ ತರಗತಿ ಬಾಲಕಿ

ವೆಲ್ಲೂರ್‌ : ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ 44 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ತನ್ನ 13 ವರ್ಷದ ಮಗಳ ಮೇಲೆ ಅತ್ಯಾಚಾರ ಮಾಡಿದ ಪ್ರಕರಣದಲ್ಲಿ ಬಂಧಿಸಿದ್ದಾರೆ. ಕಳೆದ ಹತ್ತು ತಿಂಗಳಿನಿಂದ ಪದೇ ಪದೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಆಕೆಯನ್ನು ಗರ್ಭಧರಿಸುವಂತೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಬಾಲಕಿ … Continued

ರಾಜಕುಮಾರ್ ಟಾಕಳೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬೆಳಗಾವಿ: ತೋಟಗಾರಿಕಾ ಇಲಾಖೆಯ ಖಾನಾಪುರ ಸಸ್ಯಪಾಲನಾಲಯದ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಳಗಾವಿಯ ಎಂಟನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ವಜಾ ಮಾಡಿದೆ. ನವ್ಯಶ್ರೀ ಅವರು ದಾಖಲಿಸಿದ್ದ ಅತ್ಯಾಚಾರ, ಗರ್ಭಪಾತ ಹಾಗೂ ದೈಹಿಕ ಹಲ್ಲೆ ಸೇರಿ ಮೊದಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ … Continued

ಬೆಲೆ ಏರಿಕೆ, ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಳ ವಿರೋಧಿಸಿ ಸಂಸತ್ತಿನ ಹೊರಗೆ ಕಾಂಗ್ರೆಸ್‌ ಧರಣಿ: ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕರ ಬಂಧನ

ನವದೆಹಲಿ: ಬೆಲೆ ಏರಿಕೆ, ನಿರುದ್ಯೋಗ ಮತ್ತು ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಳದ ವಿರುದ್ಧ ಕಾಂಗ್ರೆಸ್ ಪಕ್ಷದಿಂದ ಬೃಹತ್ ಪ್ರತಿಭಟನೆಯ ನಡುವೆಯೇ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯನ್ನು ವಶಕ್ಕೆ ಪಡೆಯಲಾಯಿತು. ಕಾಂಗ್ರೆಸ್ ಪ್ರಧಾನ ಕಚೇರಿಯ ಹೊರಗೆ ಪ್ರತಿಭಟನೆ ನಡೆಸುತ್ತಿದ್ದಾಗ ಪಕ್ಷದ ಮುಖಂಡರನ್ನು ದೆಹಲಿ ಪೊಲೀಸರು ತಡೆದರು. ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ … Continued

ಭಾರತಕ್ಕೆ ಕಚ್ಚಾ ತೈಲ ಪೂರೈಕೆ: ಸೌದಿ ಅರೇಬಿಯಾ ಹಿಂದಿಕ್ಕಿದ ರಷ್ಯಾ

ನವದೆಹಲಿ: ರಷ್ಯಾ ತನ್ನ ಒಪೆಕ್ ಮಿತ್ರ ಸೌದಿ ಅರೇಬಿಯಾಕ್ಕಿಂತ ತೈಲ ಬೆಲೆಯನ್ನು ಕಡಿಮೆಗೊಳಿಸಿದ್ದು, ಇದು ಅತಿದೊಡ್ಡ ಕಚ್ಚಾ ಆಮದುದಾರರಲ್ಲಿ ಒಬ್ಬರಾದ ಭಾರತದಲ್ಲಿ ತನ್ನ ಮಾರುಕಟ್ಟೆ ಪಾಲನ್ನು ವಿಸ್ತರಿಸಲು ಮಾಸ್ಕೋಗೆ ದಾರಿ ಮಾಡಿಕೊಟ್ಟಿದೆ. ಭಾರತೀಯ ಸರ್ಕಾರದ ಅಂಕಿಅಂಶಗಳ ಆಧಾರದ ಮೇಲೆ ಬ್ಲೂಮ್‌ಬರ್ಗ್ ಲೆಕ್ಕಾಚಾರಗಳ ಪ್ರಕಾರ, ರಷ್ಯಾದ ಬ್ಯಾರೆಲ್‌ಗಳು ಸೌದಿಯ ಕಚ್ಚಾ ತೈಲಕ್ಕಿಂತ ಏಪ್ರಿಲ್‌ನಿಂದ ಜೂನ್‌ವರೆಗೆ ಅಗ್ಗವಾಗಿದ್ದು, ಮೇ … Continued

ರಾಜ್ಯ ‘ಸ್ಥಳೀಯ ಸಂಸ್ಥೆ’ಗಳ ನೌಕರರಿಗೆ ಗುಡ್ ನ್ಯೂಸ್ : ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಪಂಚಾಯತ್‌ರಾಜ್‌ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಹಾಗೂ ಆ ವ್ಯಾಪ್ತಿಯ ಉದ್ದಿಮೆಗಳಲ್ಲಿ ದುಡಿಯುವ ಕಾರ್ಮಿಕರ ನೀಡಲಾಗುವ ಕನಿಷ್ಠ ವೇತನವನ್ನು ರಾಜ್ಯ ಸರ್ಕಾರ ಪರಿಷ್ಕರಿಸಿದೆ. ಕನಿಷ್ಠ ವೇತನ ಕಾಯ್ದೆ 1948ರ ಅಡಿ 2016ರಲ್ಲಿ ಕೊನೆಯದಾಗಿ ವೇತನ ಪರಿಷ್ಕರಿಸಲಾಗಿತ್ತು. ಸಾಮಾನ್ಯವಾಗಿ ಐದು ವರ್ಷಕ್ಕೊಮ್ಮೆ ಕನಿಷ್ಠ ವೇತನ ಪರಿಷ್ಕರಿಸಲಾಗುತ್ತದೆ. ಕನಿಷ್ಠ ವೇತನ ದರಗಳನ್ನು ಪರಿಷ್ಕರಿಸಲು ಕರಡು … Continued

ಮತ್ತೆ ರೆಪೊ ದರ ಹೆಚ್ಚಿಸಿದ ಆರ್​ಬಿಐ, ಹೆಚ್ಚಾಗಲಿದೆ ಬ್ಯಾಂಕ್‌ಗಳ ಬಡ್ಡಿ ದರ

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ತನ್ನ ಪ್ರಮುಖ ಸಾಲದ ದರವನ್ನು 50 ಬೇಸಿಸ್ ಪಾಯಿಂಟ್‌ಗಳಿಂದ ಸಾಂಕ್ರಾಮಿಕ ಪೂರ್ವ ಮಟ್ಟಕ್ಕೆ 5.40 ಶೇಕಡಾಕ್ಕೆ ಹೆಚ್ಚಿಸಿದೆ. ಆರ್‌ಬಿಐ ಏರುತ್ತಿರುವ ಹಣದುಬ್ಬರ ನಿಯಂತ್ರಿಸಲು ಈ ವರ್ಷ ಸತತ ಮೂರನೇ ಸಲ ಹೆಚ್ಚಳ ಮಾಡಿದೆ. ಪ್ರಸ್ತುತ ರೆಪೊ ದರಗಳು ಶೇ 5.4ರಷ್ಟು ಇರುತ್ತವೆ. ಈ ದರ ಹೆಚ್ಚಳವು ತಕ್ಷಣದಿಂದಲೇ ಜಾರಿಗೆ … Continued

ಯಾದಗಿರಿಯಲ್ಲಿ ಭೀಕರ ಅಪಘಾತ: ಒಂದೇ ಕುಟುಂಬದ ಆರು ಮಂದಿ ಸಾವು

ಯಾದಗಿರಿ: ಕಾರು ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ 1 ವರ್ಷದ ಹೆಣ್ಣುಮಗು ಸೇರಿ 6 ಜನ ಮೃತಪಟ್ಟ ಘಟನೆ ಯಾದಗಿರಿ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಅರಕೇರಾ(ಕೆ) ಬಳಿ ನಿನ್ನೆ ತಡರಾತ್ರಿ ನಡೆದಿದೆ. ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೇ ಮೂರು ಜನ ಮೃತಪಟ್ಟರೆ ಹಾಗೂ ಮತ್ತೆ ಮೂವರು ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಗಂಭೀರ ಗಾಯಗೊಂಡ ಬಾಲಕನನ್ನು ಕಲಬುರಗಿಯ … Continued