ಹಿಜಾಬ್ ನಿಷೇಧ : ಅರ್ಜಿ ವಿಚಾರಣೆಗೆ ಪೀಠ ರಚಿಸುವುದಾಗಿ ತಿಳಿಸಿದ ಸಿಜೆಐ ಚಂದ್ರಚೂಡ

ನವದೆಹಲಿ: ಕಾಲೇಜು ಅವರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವುದಕ್ಕೆ ನಿಷೇಧ ವಿಧಿಸಿರುವುದನ್ನು ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಲು ಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್‌ ಶುಕ್ರವಾರ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಪಿ.ಎಸ್‌. ನರಸಿಂಹ ಅವರ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಅರ್ಜಿದಾರರ ಪರ ವಕೀಲರು … Continued

ಬ್ಯೂಟಿ ಪಾರ್ಲರಿನಲ್ಲಿ ಮೇಕಪ್ ಮಾಡಿದ ನಂತರ ವಧುವಿನ ಮುಖ ವಿರೂಪ : ಮದುವೆಯಾಗಲು ನಿರಾಕರಿಸಿದ ವರ…!

posted in: ರಾಜ್ಯ | 0

ಹಾಸನ: ಜಿಲ್ಲೆಯ ಅರಸೀಕೆರೆಯ ಸ್ಪಾವೊಂದರಲ್ಲಿ ಮದುವೆಗೂ ಮುನ್ನ ಸಿಂಗಾರಕ್ಕೆಂದು ಹೋಗಿದ್ದ ವಧುವಿನ ಮುಖ ವಿರೂಪಗೊಂಡ ಘಟನೆ ನಡೆದಿದ್ದು, ನಂತರ ಮದುಮಗ ಮದುವೆಯನ್ನೇ ರದ್ದುಗೊಳಿಸಿದ್ದಾನೆ ಎಂದು ವರದಿಯಾಗಿದೆ. ಪ್ರವಾಸವು ವಿಕೋಪಕ್ಕೆ ತಿರುಗಿದ ನಂತರ ವಧುವಿನ ವಿವಾಹವನ್ನು ರದ್ದುಗೊಳಿಸಲಾಯಿತು. ಮದುವೆಗೂ ಮುನ್ನ ಮದುಮಗಳು ಸ್ಥಳೀಯ ಬ್ಯೂಟಿ ಪಾರ್ಲರ್‌ಗೆ ಹೋಗಿದ್ದಳು. ಯುವತಿ ನವೀನವಾಗಿ ಏನನ್ನಾದರೂ ಮಾಡಬೇಕು ಎಂದು ಬಯಸಿದ್ದಳು. ಆಗ … Continued

ಮೇಘಾಲಯದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿ ರಾಜ್ಯಪಾಲರಿಗೆ 32 ಶಾಸಕರ ಬೆಂಬಲ ಪತ್ರ ಸಲ್ಲಿಸಿದ ಕಾನ್ರಾಡ್ ಸಂಗ್ಮಾ

ನವದೆಹಲಿ: ನ್ಯಾಷನಲ್ ಪೀಪಲ್ಸ್ ಪಾರ್ಟಿ (National People’s Party) ಅಧ್ಯಕ್ಷ ಕಾನ್ರಾಡ್ ಕೆ ಸಂಗ್ಮಾ ಅವರು ಶುಕ್ರವಾರ ರಾಜ್ಯಪಾಲರನ್ನು ಭೇಟಿಯಾಗಿದ್ದು ಸರ್ಕಾರ ರಚನೆಯ ಹಕ್ಕು ಮಂಡಿಸಿದ್ದಾರೆ. ಈಶಾನ್ಯ ರಾಜ್ಯದಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸುವ ಸಂದರ್ಭದಲ್ಲಿ ಅವರು ಬಿಜೆಪಿ (BJP), ಎನ್‌ಪಿಪಿ, ಎಚ್‌ಎಸ್‌ಪಿಡಿಪಿ ಮತ್ತು ಇಬ್ಬರು ಪಕ್ಷೇತರ ಶಾಸಕರು ಸಹಿ ಮಾಡಿರುವ ‘ಬೆಂಬಲ ಪತ್ರ’ವನ್ನು ಮೇಘಾಲಯದ … Continued

ಹಿಂದುತ್ವ ಪ್ರತಿಪಾದಕ ಪಕ್ಷವಾದ ಬಿಜೆಪಿ ಈಶಾನ್ಯ ಭಾರತದ ರಾಜ್ಯಗಳಲ್ಲಿ ಜನಪ್ರಿಯವಾಗಿದ್ದು ಹೇಗೆ…?

ಮೂರು ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶಗಳು ಗುರುವಾರ ಬರಲು ಆರಂಭವಾಗುತ್ತಿದ್ದಂತೆಯೇ ಕಳೆದ ಸಲಕ್ಕಿಂತ ಕಡಿಮೆ ಸ್ಥಾನಗಳಿಸಿದರೂ ತ್ರಿಪುರವನ್ನು ಬಿಜೆಪಿ ಮೈತ್ರಿಕೂಟ ಉಳಿಸಿಕೊಳ್ಳುವುದು ಸ್ಪಷ್ಟವಾಯಿತು. ನಾಗಾಲ್ಯಾಂಡ್‌ನಲ್ಲಿ, ಬಿಜೆಪಿ-ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ಎನ್‌ಡಿಪಿಪಿ) ನೇತೃತ್ವದ ಆಡಳಿತಾರೂಢ ಒಕ್ಕೂಟ ಅಧಿಕಾರಕ್ಕೆ ಬೇಕಾದ ಬಹುಮತ ಪಡೆಯಲು ಯಶಸ್ವಿಯಾಯಿತು. ಮೇಘಾಲಯದಲ್ಲಿಯೂ ಬಿಜೆಪಿ ಕಿರಿಯ ಪಾಲುದಾರ, ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ (ಎನ್‌ಪಿಪಿ) … Continued

ಶಾಕಿಂಗ್‌…. ಜೋರಾದ ಡಿಜೆ ಮ್ಯೂಸಿಕ್‌ ಶಬ್ದಕ್ಕೆ ಮದುವೆ ಮಂಟಪದಲ್ಲೇ ಕುಸಿದುಬಿದ್ದು ಮೃತಪಟ್ಟ ವರ…!

ಸೀತಾಮರ್ಹಿ: ಬಿಹಾರದ ಸೀತಾಮರ್ಹಿ ಜಿಲ್ಲೆಯಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ವರಮಾಲಾ ಆಚರಣೆ ವೇಳೆ ಡಿಜೆ ಮ್ಯೂಸಿಕ್‌ನ ಹೈ ಡೆಸಿಬಲ್ ಶಬ್ದದಿಂದ ಮದುವೆ ಗಂಡು ಮದುವೆ ಮಂಟಪದಲ್ಲಿಯೇ ಕುಸಿದು ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ. ಇಂದರ್ವಾ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಮೃತನನ್ನು ಅದೇ ಜಿಲ್ಲೆಯ ಮಾಣಿಕ್ತಾರ್ ಗ್ರಾಮದ ಸುರೇಂದ್ರ ಎಂದು ಗುರುತಿಸಲಾಗಿದೆ. ಆತನನ್ನು … Continued

ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಗೆ 50% ರಿಯಾಯಿತಿ 15 ದಿನ ವಿಸ್ತರಣೆ

posted in: ರಾಜ್ಯ | 0

ಬೆಂಗಳೂರು : ಸಂಚಾರ ನಿಯಮ ಉಲ್ಲಂಘನೆಯ ದಂಡ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ನೀಡಲಾಗಿದ್ದು ರಿಯಾಯಿತಿಯನ್ನು ಸಾರಿಗೆ ಇಲಾಖೆ ವಿಸ್ತರಿಸಿದೆ. ಬಾಕಿ ಇರುವ ದಂಡ ಮೊತ್ತದಲ್ಲಿ ಶೇ. 50ರಷ್ಟು ರಿಯಾಯಿತಿ ಅವಧಿ ವಿಸ್ತರಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದ್ದು, ಈ ರಿಯಾಯಿತಿಯು ಮಾರ್ಚ್ 4 ರಿಂದ ಅನ್ವಯವಾಗಲಿದ್ದು 15 ದಿನಗಳ ಕಾಲಾವಕಾಶ ನೀಡಲಾಗಿದೆ. 11-02-2023ರ ಒಳಗಾಗಿ … Continued

ಬೆಂಗಳೂರು : ಮನೆಯಲ್ಲಿ ಸಿಲಿಂಡರ್ ಸ್ಪೋಟ, 10 ಮಂದಿಗೆ ಗಾಯ

posted in: ರಾಜ್ಯ | 0

ಬೆಂಗಳೂರು: ಮನೆಯೊಂದರ ಸಿಲಿಂಡರಿನಿಂದ ಅನಿಲ ಸೋರಿಕೆಯಾಗಿ ಅದು ಸ್ಫೋಟಗೊಂಡು 10 ಮಂದಿ ಗಾಯಗೊಂಡ ಘಟನೆ ರಾಜಾಜಿನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು, ಶುಕ್ರವಾರ ಬೆಳಗ್ಗೆ ನಡೆದ ಬಗ್ಗೆ ವರದಿಯಾಗಿದೆ. ಅಜ್ಮಲ್ (46), ನಾಜೀಂ (42), ಅಮೀನ್‌ಜಾನ್ (52), ರೇಷ್ಮಾಭಾನು (48) ರಿಯಾನ್‌(14), ಅಜ್ವಾನ್ (12), ಫಯಾಜ್ (10), ಶಬನಾಜ್‌ (18), ನಾಸೀಂ (40), ಸಲ್ಮಾ (33) … Continued

ʼಪರಾರಿಯಾಗಿರುವ ಆರ್ಥಿಕ ಅಪರಾಧಿʼ ಎಂದು ಘೋಷಿಸುವುದನ್ನು ಪ್ರಶ್ನಿಸಿದ್ದ ವಿಜಯ ಮಲ್ಯ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ತನ್ನನ್ನು ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಿಸಿ ತನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ಮುಂಬೈ ನ್ಯಾಯಾಲಯದಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ಪ್ರಶ್ನಿಸಿ ಉದ್ಯಮಿ ವಿಜಯ ಮಲ್ಯ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಮಲ್ಯ ಪರವಾಗಿ ಹಾಜರಾದ ವಕೀಲರು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಲು ತಮಗೆ ತಮ್ಮ ಕಕ್ಷಿದಾರರೊಂದಿಗೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಮತ್ತು ಈ … Continued

ಶಾಲೆಗಳಲ್ಲಿ ‘ಐ ಲವ್ ಮನೀಶ್ ಸಿಸೋಡಿಯಾ’ ಡೆಸ್ಕ್‌ ಸ್ಥಾಪಿಸುತ್ತಿರುವ ದೆಹಲಿ ಸರ್ಕಾರ : ಬಿಜೆಪಿ ಆರೋಪ, ಎಎಪಿ ನಿರಾಕರಣೆ

ನವದೆಹಲಿ: ಜೈಲಿನಲ್ಲಿರುವ ಎಎಪಿ ನಾಯಕನಿ ಮನೀಶ ಸಿಸೋಡಿಯಾ ಅವರಿಗೆ ಬೆಂಬಲ ಸೂಚಿಸಲು ದೆಹಲಿ ಸರ್ಕಾರವು ಸರ್ಕಾರಿ ಶಾಲೆಗಳಲ್ಲಿ ‘ಐ ಲವ್ ಮನೀಶ್ ಸಿಸೋಡಿಯಾ’ ಡೆಸ್ಕ್‌ಗಳನ್ನು ಸ್ಥಾಪಿಸುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಆದರೆ, ಎಎಪಿ ಬಿಜೆಪಿಯ ಹೇಳಿಕೆಗಳನ್ನು ನಿರಾಕರಿಸಿದೆ, “ಯಾವುದೇ ಚಟುವಟಿಕೆಯಲ್ಲಿ ಯಾವುದೇ ಸರ್ಕಾರಿ ಇಲಾಖೆ ಅಥವಾ ಸರ್ಕಾರಿ ನೌಕರರು ಭಾಗಿಯಾಗಿಲ್ಲ. ಇದು ಕೇವಲ ಬಿಜೆಪಿ ಅಜೆಂಡಾ” … Continued

ಬಿಜೆಪಿ ಶಾಸಕರ ಪುತ್ರನ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ : ಸಿಎಂ ಬೊಮ್ಮಾಯಿ ಭರವಸೆ

posted in: ರಾಜ್ಯ | 0

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ ಮಾಡಾಳ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. 40 ಲಕ್ಷ ರೂ.ಗಳನ್ನು ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಶಾಂತ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ … Continued