ಇಂದು ಭಾರತದಲ್ಲಿ ಮೊದಲ ಬಾರಿಗೆ ನೀರೊಳಗೆ ಹೋಗುವ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರ

ಭಾರತದ ಮೊದಲ ನೀರೊಳಗಿನ ರೈಲು ಶೀಘ್ರ ಪ್ರಾರಂಭವಾಗಲಿದೆ. ಏಪ್ರಿಲ್ 9 ಭಾನುವಾರ ಪರೀಕ್ಷಾರ್ಥ ಓಡಾಟ ನಡೆಸಲಿದೆ. ಈ ಮೆಟ್ರೋ ಹೂಗ್ಲಿ ನದಿಯಲ್ಲಿ ನಿರ್ಮಿಸಲಾದ ಸುರಂಗದ ಮೂಲಕ ಹಾದುಹೋಗುತ್ತದೆ. ಈ ಮೆಟ್ರೋ ರೈಲಿಗೆ 6 ಬೋಗಿಗಳನ್ನು ಜೋಡಿಸಲಾಗುತ್ತದೆ. ಹಲವು ವಿಶೇಷತೆಗಳು ಈ ಮೆಟ್ರೋದಲ್ಲಿವೆ. ಕೋಲ್ಕತ್ತಾ ಪೂರ್ವ-ಪಶ್ಚಿಮ ಮೆಟ್ರೋ ಯೋಜನೆಯಡಿ ತಲಾ ಆರು ಬೋಗಿಗಳ ಎರಡು ರೈಲುಗಳನ್ನು ಪರೀಕಾರ್ಥ … Continued

ಕುಡಿದ ಅಮಲಿನಲ್ಲಿ ಮರ್ಮಾಂಗ ಕತ್ತರಿಸಿಕೊಂಡ…!!

ಮೈಸೂರು: ಕುಡಿದ ಅಮಲಿನಲ್ಲಿ ವ್ಯಕ್ತಿಯೊರ್ವ ತನ್ನ ಮರ್ಮಾಂಗವನ್ನೇ ಕೊಯ್ದುಕೊಂಡ ಘಟನೆ ನಡೆದಿದೆ. ಹುಣಸೂರು ತಾಲೂಕಿನ ತೊಂಡಾಳು ಗ್ರಾಮದ ರಾಜಶೆಟ್ಟಿ(41) ಎಂಬವರು ಮರ್ಮಾಂಗ ಕತ್ತರಿಸಿಕೊಂಡಿದ್ದು, ಮೈಸೂರು ಕೆ.ಆರ್.ಆಸ್ಪತ್ರೆಯ ಚುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಕುಡಿತಕ್ಕೆ ದಾಸನಾಗಿದ್ದ ರಾಜಶೆಟ್ಟಿ, ಕೆ.ಆರ್.ನಗರ ಬಾರ್‌ನಲ್ಲಿ ಮದ್ಯ ಸೇವಿಸಿ ಚಾಕುವಿನಿಂದ ತನ್ನ ಮರ್ಮಾಂಗವನ್ನು ಕೊಯ್ದುಕೊಂಡು ಅಸ್ಪಸ್ಥನಾಗಿ ಬಿದ್ದಿದ್ದನ್ನು ಕಂಡವರು … Continued

ವೀಡಿಯೊ : ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಕಾನೂನು ಸಚಿವರ ಕಾರಿಗೆ ಟ್ರಕ್ ಡಿಕ್ಕಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ತಮ್ಮ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದ್ದು, ಕಾನೂನು ಸಚಿವ ಕಿರಣ್ ರಿಜಿಜು ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜಮ್ಮು-ಶ್ರೀನಗರ ಹೆದ್ದಾರಿಯ ರಾಂಬನ್ ಬಳಿ ಸಂಪೂರ್ಣ ಲೋಡ್ ಆಗಿದ್ದ ಟ್ರಕ್ ಅವರ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಅವರು … Continued

ಮುಂದಿನ 5 ದಿನಗಳಲ್ಲಿ ತಾಪಮಾನದಲ್ಲಿ ದಿಢೀರ್‌ ಏರಿಕೆ : ಐಎಂಡಿ ಮುನ್ಸೂಚನೆ

ನವದೆಹಲಿ : ಮುಂದಿನ ಐದು ದಿನಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ತಾಪಮಾನವು 2 ರಿಂದ 4 ಡಿಗ್ರಿ ಸೆಲ್ಸಿಯಸ್‌ನಷ್ಟು ಕ್ರಮೇಣ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಇಂದು, ಶನಿವಾರ ತಿಳಿಸಿದೆ. “ಮುಂದಿನ 5 ದಿನಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಗರಿಷ್ಠ ತಾಪಮಾನದಲ್ಲಿ 2-4 ಡಿಗ್ರಿ ಸೆಲ್ಸಿಯಸ್ ಕ್ರಮೇಣ ಏರಿಕೆಯಾಗಲಿದೆ” ಎಂದು ಐಎಂಡಿ … Continued

ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಸಿ ರಾಜಗೋಪಾಲಾಚಾರಿ ಮರಿಮೊಮ್ಮಗ ಬಿಜೆಪಿಗೆ ಸೇರ್ಪಡೆ

ನವದೆಹಲಿ: ಮಾಜಿ ಕಾಂಗ್ರೆಸ್ ನಾಯಕ ಮತ್ತು ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಸಿ ರಾಜಗೋಪಾಲಾಚಾರಿ ಅವರ  ಮರಿ ಮೊಮ್ಮಗ, ಸಿ.ಆರ್. ಕೇಶವನ್ ಅವರು ಶನಿವಾರ ದೆಹಲಿಯಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡ ನಂತರ, ಕೇಶವನ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದರು ಮತ್ತು ಪ್ರಧಾನಿ ಮೋದಿಯವರ ಜನಕೇಂದ್ರಿತ ನೀತಿಗಳು, ಭ್ರಷ್ಟಾಚಾರ ಮುಕ್ತ ಆಡಳಿತ … Continued

ಉಲ್ಬಣಗೊಂಡ ಥೈರಾಯ್ಡ್ ಗಂಟಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ : ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ವೈದ್ಯರ ಸಾಧನೆ

ಬೆಳಗಾವಿ : ಗಂಟಲು ನೋವು, ಊತ, ನುಂಗಲು ತೊಂದರೆ ಎದುರಿಸುತ್ತಿದ್ದ 49 ವರ್ಷದ ಮಹಿಳೆಗೆ ಕೆಎಲ್ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಹೆಮಿಥೈರೊಡಕ್ಟಮಿ (ಎಡಗಡೆಯ) ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮಾಡಲಾಗಿದೆ. ಮೂಲತಃ ಖಾನಾಪುರ ತಾಲೂಕಿನ ರಹವಾಸಿಯಾದ ಮಹಿಳೆಯು ಕಳೆದ 20 ವರ್ಷಗಳಿಂದ ಗಂಟಲಿನ ಸಮೀಪ ಒಂದು ಸಣ್ಣ ಗಂಟಿನಾಕಾರದಲ್ಲಿದ್ದ ಥೈರಾಯ್ಡ ಸಮಸ್ಯೆಯು ಕಳೆದ 2 ರಿಂದ 3 … Continued

ಬಾಗೇಪಲ್ಲಿಯಲ್ಲಿ 2.66 ಕೋಟಿ ರೂ. ಮೌಲ್ಯದ ಚಿನ್ನ ಜಪ್ತಿ

ಬೆಂಗಳೂರು: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಚೆಕ್‌ಪೋಸ್ಟ್‌ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 2.66 ಕೋಟಿ ಮೌಲ್ಯದ 5.59 ಕೆ.ಜಿ ಚಿನ್ನಾಭರಣಗಳನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಶಪಡಿಸಿಕೊಂಡಿರುವ ಚಿನ್ನಾಭರಣಗಳನ್ನು ಆಂಧ್ರಪ್ರದೇಶದ ಕರ್ನೂಲಿನ ಚಿನ್ನಾಭರಣ ಮಾರಾಟ ಅಂಗಡಿಯಿಂದ ವಿಜಯವಾಡದ ಚಿನ್ನಾಭರಣ ಮಾರಾಟ ಅಂಗಡಿಗೆ ಕೊಂಡೊಯ್ಯಲಾಗುತ್ತಿತ್ತು ಎಂದು ಕಾರಿನಲ್ಲಿದ್ದವರು ತಿಳಿಸಿದ್ದಾರೆ. ಆದರೆ, ಗಡಿ ಭಾಗದ ಬಾಗೇಪಲ್ಲಿ ಚೆಕ್‌ ಪೋಸ್ಟ್‌ಗೆ ಏಕೆ ಬಂದರು ಎಂದು … Continued

ಚನ್ನಗಿರಿ : ಆನೆ ದಾಳಿಗೆ ಹುಡುಗಿ ಸಾವು

ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮ್ಲಾಪುರ ಎಂಬ ಗ್ರಾಮದ ಬಳಿ, ಕಾಡಾನೆ ದಾಳಿಯಲ್ಲಿ ಸೋಮ್ಲಾಪುರದ ನಿವಾಸಿಯಾದ ಕವನ (17) ಎಂಬ ಹುಡುಗಿ ಮೃತಪಟ್ಟಿದ್ದಾಳೆ. ಜಮೀನಿನಲ್ಲಿ ಅವರೇಕಾಯಿ ಬಿಡಿಸಲು ಹೋಗಿದ್ದ ಕವನಳನ್ನು ಆನೆಯು ಅಟ್ಟಾಸಿಕೊಂಡು ತನ್ನ ಸೊಂಡಿಲಿನಿಂದ ದೂರಕ್ಕೆ ಎಸೆದಿದೆ ಎಂದು ಹೇಳಲಾಗಿದೆ. ಸೋಮ್ಲಾಪುರ ಹಾಗೂ ಅದರ ಸಮೀಪವಿರುವ ಕಾಶೀಪುರದ ಸುತ್ತಮುತ್ತ ಶನಿವಾರ ಮುಂಜಾನೆ ಕಾಡಾನೆಯೊಂದು ಓಡಾಡಿದೆ. … Continued

ದಾವಣಗೆರೆಯಲ್ಲಿ ಚಿತ್ರ ನಿರ್ಮಾಪಕ ಬೋನಿ ಕಪೂರಗೆ ಸೇರಿದ 39 ಲಕ್ಷ ರೂ ಮೌಲ್ಯದ ಬೆಳ್ಳಿ ವಸ್ತುಗಳು ವಶ

ದಾವಣಗೆರೆ : ಶುಕ್ರವಾರ ಬೆಳ್ಳಂಬೆಳಗ್ಗೆ ಕರ್ನಾಟಕದ ದಾವಣಗೆರೆಯ ಹೊರವಲಯದಲ್ಲಿರುವ ಹೆಬ್ಬಾಳು ಟೋಲ್ ಬಳಿಯ ಚೆಕ್ ಪೋಸ್ಟ್‌ನಲ್ಲಿ ಬಾಲಿವುಡ್ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರಿಗೆ ಸೇರಿದ್ದು ಎನ್ನಲಾದ 39 ಲಕ್ಷ ರೂಪಾಯಿ ಮೌಲ್ಯದ 66 ಕೆಜಿ ಬೆಳ್ಳಿ ವಸ್ತುಗಳನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ವಶಪಡಿಸಿಕೊಂಡಿದೆ. ಚೆನ್ನೈನಿಂದ ಮುಂಬೈಗೆ ಬಿಎಂಡಬ್ಲ್ಯು ಕಾರಿನಲ್ಲಿ ಐದು ಬಾಕ್ಸ್‌ಗಳಲ್ಲಿ ಸರಿಯಾದ … Continued

ಸೋಮವಾರ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ

ರಾಮನಗರ : ಸೋಮವಾರ ಜೆಡಿಎಸ್ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ರಾಮನಗರದ ಕೇತಗಾನಹಳ್ಳಿಯಲ್ಲಿ ಇಂದು, ಸೋಮವಾರ ಮಾತನಾಡಿದ ಎಚ್.ಡಿ ಕುಮಾರಸ್ವಾಮಿ ಅವರು, ಜೆಡಿಎಸ್ ಮುಳುಗಿಸಲು ಕಾಂಗ್ರೆಸ್‌ನವರು ನಮ್ಮ ಶಾಸಕರನ್ನ ಕರೆದುಕೊಂಡು ಹೋದರು. ಇದೀಗ ಕಾಂಗ್ರೆಸ್‌ನಿಂದಲೇ ಜೆಡಿಎಸ್‌ಗೆ ಬರುತ್ತಿದ್ದಾರೆ. ರಘು ಆಚಾರ್ ನಮ್ಮ ಜೊತೆ ಮಾತನಾಡಿದ್ದಾರೆ. ಜೆಡಿಎಸ್ … Continued