ಚಿತ್ರದುರ್ಗ: ಮಾನವ ರಹಿತ ಡ್ರೋನ್‌ ವಿಮಾನ ಪತನ

ಚಿತ್ರದುರ್ಗ: ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಮಾನವ ರಹಿತ ಡ್ರೋನ್‌ ಮಾದರಿ ವಿಮಾನ ಚಿತ್ರದುರ್ಗ ಹಿರಿಯೂರು ತಾಲೂಕಿನ ವದ್ದಿಕೆರೆ ಗ್ರಾಮದ ಬಳಿ ಭಾನುವಾರ ಬೆಳಿಗ್ಗೆ ಪತನವಾಗಿದೆ ಎಂದು ವರದಿಯಾಗಿದೆ. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ ಡಿಒ) ಸಿದ್ಧಪಡಿಸಿದ್ಧ ಯುದ್ಧ ವಿಮಾನ ನಾಯಕನಹಟ್ಟಿ ಸಮೀಪದ ಕುದಾಪುರ ವಾಯುನೆಲೆಯಿಂದ ಭಾನುವಾರ ಬೆಳಿಗ್ಗೆ ಹಾರಾಟ ಆರಂಭಿಸಿತ್ತು. ನಿಯಂತ್ರಣ ತಪ್ಪಿ … Continued

ಕೊನೆಯ ಹಂತದ ಚಂದ್ರನ ಕಕ್ಷೆಯ ಕಾರ್ಯಾಚರಣೆ ಪೂರ್ಣಗೊಳಿಸಿದ ಚಂದ್ರಯಾನ-3 : ಈಗ ಚಂದ್ರನ ಮೇಲೆ ಇಳಿಯುವುದೊಂದೇ ಬಾಕಿ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ವಿಜ್ಞಾನಿಗಳು ಬುಧವಾರ ಚಂದ್ರನ ಮೇಲ್ಮೈಯಲ್ಲಿ ಬಾಹ್ಯಾಕಾಶ ನೌಕೆ ಇಳಿಯುವ ನಿರ್ಣಾಯಕ ಹಂತದ ಚಂದ್ರಯಾನ-3 ರ ಎರಡನೇ ಮತ್ತು ಅಂತಿಮ ಡಿ-ಬೂಸ್ಟ್ ಕಾರ್ಯಾಚರಣೆ ಇಂದು, ಭಾನುವಾರ ಬೆಳಿಗ್ಗೆ ಯಶಸ್ವಿಯಾಗಿ ಪೂರ್ಣಗೊಂಳಿಸಿದೆ. ಡಿ-ಬೂಸ್ಟ್ ಕಾರ್ಯಾಚರಣೆ ವಿಕ್ರಂ ಲ್ಯಾಂಡರ್ ಚಂದ್ರನಿಗೆ ಅತ್ಯಂತ ಸಮೀಪದ 25 ಕಿಮೀ x 134 ಕಿಮೀ ಕಕ್ಷೆಯಲ್ಲಿ … Continued

ನಟ ಚೇತನ್ ವಿರುದ್ಧ ನ್ಯಾಯಾಂಗ ನಿಂದನಾ ಪ್ರಕ್ರಿಯೆ ಆರಂಭಿಸಲು ಸಮ್ಮತಿ

ಬೆಂಗಳೂರು : ಹಿಜಾಬ್ ಪ್ರಕರಣದಲ್ಲಿ ತೀರ್ಪು ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ಮಾಡಿದ ಆರೋಪದ ಸಂಬಂಧ ಕನ್ನಡ ಚಿತ್ರನಟ ಚೇತನ್‌ ವಿರುದ್ಧ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಈಚೆಗೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ಒಪ್ಪಿಗೆ ನೀಡಿದ್ದಾರೆ. ಹಾಗೂ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ತಮಿಳುನಾಡಿನ … Continued

ಲಡಾಖ್‌ ಬಳಿ ವಾಹನ ಕಮರಿಗೆ ಉರುಳಿ 9 ಸೇನಾ ಸಿಬ್ಬಂದಿ ಸಾವು

ಲಡಾಖ್‌: ಭಾರತೀಯ ಸೇನಾ ಸಿಬ್ಬಂದಿ ತೆರಳುತ್ತಿದ್ದ ವಾಹನವು ಲೇಹ್‌ ಸಮೀಪದಲ್ಲಿ ಅಪಘಾತಕ್ಕೀಡಾಗಿ 9 ಸೈನಿಕರು ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಒಬ್ಬರಿಗೆ ಗಂಭೀರ ಗಾಯವಾಗಿದೆ. ಲೇಹ್‌ನಿಂದ ನ್ಯೋಮಾಗೆ ಬೆಂಗಾವಲು ಪಡೆಯ ಭಾಗವಾಗಿ ಚಲಿಸುತ್ತಿದ್ದ ಎಎಲ್‌ಎಸ್‌ ವಾಹನವು ಕಿಯಾರಿಯಿಂದ 7 ಕಿಮೀ ದೂರದಲ್ಲಿ ಸುಮಾರು ಸಂಜೆ 6:30 ಸುಮಾರಿಗೆ ಸ್ಕಿಡ್ ಆಗಿ ಕಂದಕದಲ್ಲಿ ಬಿದ್ದಿದೆ. ವಾಹನದಲ್ಲಿ 10 ಮಂದಿ … Continued

ಅತಿ ದೊಡ್ಡ ಅಲ್ಪಸಂಖ್ಯಾತ ವಿದ್ಯಾರ್ಥಿವೇತನ ಹಗರಣ ಬೆಳಕಿಗೆ, 53% ಸಂಸ್ಥೆಗಳು ‘ನಕಲಿ’ : ಸಿಬಿಐ ತನಿಖೆಗೆ

ನವದೆಹಲಿ: ಭಾರತದ ಅತಿದೊಡ್ಡ ಅಲ್ಪಸಂಖ್ಯಾತ ವಿದ್ಯಾರ್ಥಿ ವೇತನ ಹಗರಣವೊಂದು ಬೆಳಕಿಗೆ ಬಂದಿದ್ದು, ಅಲ್ಪಸಂಖ್ಯಾತರ ವಿದ್ಯಾರ್ಥಿವೇತನ ಕಾರ್ಯಕ್ರಮದ ಅಡಿಯಲ್ಲಿ ಸಕ್ರಿಯವಾಗಿರುವ ಸುಮಾರು 53 ಪ್ರತಿಶತ ಸಂಸ್ಥೆಗಳು ‘ನಕಲಿ’ ಎಂದು ಕಂಡುಬಂದಿದೆ. ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ನಡೆಸಿದ ಆಂತರಿಕ ತನಿಖೆಯು ಅಂತಹ 830 ಸಂಸ್ಥೆಗಳಲ್ಲಿ ಆಳವಾಗಿ ಬೇರೂರಿರುವ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದೆ. ಇದು ಕಳೆದ 5 ವರ್ಷಗಳಲ್ಲಿ 144.83 ಕೋಟಿ … Continued

ಬಿಜೆಪಿ ತೊರೆದು 1200 ಕಾರುಗಳ ಬೆಂಗಾವಲಿನಲ್ಲಿ ಬಂದು ಕಾಂಗ್ರೆಸ್‌ ಸೇರ್ಪಡೆಯಾದ ಸಿಂಧಿಯಾ ನಿಷ್ಠ ಸಮಂದರ ಪಟೇಲ್

ಭೋಪಾಲ: ಮಧ್ಯಪ್ರದೇಶದ ವಿದಾನಸಭೆ ಚುನಾವಣೆ ಸನಿಹದಲ್ಲಿರುವಾಗಲೇ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರ ಆಪ್ತ ಹಾಗೂ ಮಧ್ಯಪ್ರದೇಶದ ಶಾಸಕ ಸಮಂದರ್ ಸಿಂಗ್ ಅವರು ಬಿಜೆಪಿ ತೊರೆದು, ಕಾಂಗ್ರೆಸ್‌ ಪಕ್ಷೆಕ್ಕೆ ಮರಳಿದ್ದಾರೆ. ಬಿಜೆಪಿ ಕಚೇರಿಗೆ ರಾಜೀನಾಮೆ ಪತ್ರ ಸಲ್ಲಿಸುವ ವೇಳೆ ಶುಕ್ರವಾರ ಅವರು ತಮ್ಮ ವಿಧಾನಸಭಾ ಕ್ಷೇತ್ರವಾದ ಜವಾದ್‌ನಿಂದ ಭೋಪಾಲ ವರೆಗೆ ಅವರು ಸುಮಾರು 1200 ಕಾರುಗಳ … Continued

ಬೆಲೆ ಏರಿಕೆ ಹಿನ್ನೆಲೆ : ಈರುಳ್ಳಿ ರಫ್ತಿನ ಮೇಲೆ 40%ರಷ್ಟು ಸುಂಕ ವಿಧಿಸಿದ ಸರ್ಕಾರ

ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಏರುತ್ತಿರುವ ಬೆಲೆಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಕೇಂದ್ರವು ಡಿಸೆಂಬರ್ 31 ರವರೆಗೆ ಈರುಳ್ಳಿ ರಫ್ತಿನ ಮೇಲೆ ಶೇಕಡಾ 40 ರಷ್ಟು ಸುಂಕವನ್ನು ವಿಧಿಸಿದೆ. ಡಿಸೆಂಬರ್ 31 ರವರೆಗೆ ಈರುಳ್ಳಿ ರಫ್ತಿನ ಮೇಲೆ ಸರ್ಕಾರವು ಶೇಕಡಾ 40 ರಷ್ಟು ಸುಂಕವನ್ನು ವಿಧಿಸುತ್ತದೆ ಎಂದು ಶನಿವಾರ ಸರ್ಕಾರ ಬಿಡುಗಡೆ ಮಾಡಿದ ಅಧಿಸೂಚನೆಯಲ್ಲಿ ತಿಳಿಸಿದೆ. ಸೆಪ್ಟೆಂಬರ್‌ನಲ್ಲಿ ಈರುಳ್ಳಿ … Continued

ವಿಧಾನ ಪರಿಷತ್ತಿಗೆ ಉಮಾಶ್ರೀ, ಸೀತಾರಾಂ, ಸುಧಾಮ ದಾಸ್ ನಾಮನಿರ್ದೇಶನ

ಬೆಂಗಳೂರು: ವಿಧಾನಪರಿಷತ್ ಸ್ಥಾನಕ್ಕೆ ಮೂವರ ನಾಮ ನಿರ್ದೇಶನಕ್ಕೆ ರಾಜ್ಯಪಾಲ ಥಾವರಚಂದ್ ಗೆಹ್ಲೋತ್‌ ಅವರು ಅನುಮೋದನೆ ನೀಡಿದ್ದಾರೆ. ವಿಧಾನಪರಿಷತ್ ಸ್ಥಾನಕ್ಕೆ ಹಿರಿಯ ನಟಿ ಉಮಾಶ್ರೀ, ಕಾಂಗ್ರೆಸ್ ಮುಖಂಡ ಎಂ.ಆರ್ ಸೀತಾರಾಂ ಹಾಗೂ ಮಾಜಿ ಇಡಿ ಅಧಿಕಾರಿ ಸುಧಾಮ ದಾಸ್ ಅವರನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿತ್ತು. ಈ ಮೂವರು ನಾಮನಿರ್ದೇಶನಕ್ಕೆ ರಾಜ್ಯಪಾಲ ಥಾವರ ಚಂದ್ ಅವರು ಅನುಮೋದನೆ … Continued

ವೀಡಿಯೊ.. : ಏಷ್ಯಾ ಕಪ್ ಕ್ರಿಕೆಟ್‌ 2023-ಬೆಚ್ಚಿ ಬೀಳುವಂತಹ ಸಿದ್ಧತೆ : ನಿಗಿ ನಿಗಿ ಕೆಂಡದ ಮೇಲೆ ನಡೆದಾಡಿದ ಬಾಂಗ್ಲಾದೇಶದ ಕ್ರಿಕೆಟಿಗ | ವೀಕ್ಷಿಸಿ

ಏಷ್ಯಾ ಕಪ್ ಕ್ರಿಕೆಟ್‌ 2023 ಆರಂಭವಾಗಲು ಎರಡು ವಾರಗಳೂ ಇಲ್ಲ. ಈ ಟೂರ್ನಿಯಲ್ಲಿ ಭಾಗವಹಿಸುವ ಬಹುತೇಕ ಎಲ್ಲ ತಂಡಗಳು ಅಂತಿಮ ಹಂತದ ಸಿದ್ಧತೆಯಲ್ಲಿವೆ. ಈ ಪಂದ್ಯಾವಳಿಯು 2023 ರ ಏಕ ದಿನದ ಪಂದ್ಯದ ವಿಶ್ವಕಪ್‌ಗೆ ಮುಂಚಿತವಾಗಿ ಆಟಗಾರರು ಸ್ಪರ್ಧೆಗೆ ತಮ್ಮ ವಿಭಿನ್ನ ವಿಧಾನಗಳಲ್ಲಿ ತಯಾರಿ ನಡೆಸುತ್ತಿರುವಾಗ, ಬಾಂಗ್ಲಾದೇಶದ ಆರಂಭಿಕ ಆಟಗಾರ ಮೊಹಮ್ಮದ್ ನಯಿಮ್ ಶೇಖ್ ನಡೆಸಿದ … Continued

ಕೇರಳದ ಕಣ್ಣೂರಿನಲ್ಲಿ ಆಫ್ರಿಕನ್‌ ಹಂದಿ ಜ್ವರ ಪತ್ತೆ : ಹಂದಿಗಳನ್ನು ಕೊಲ್ಲಲು ಜಿಲ್ಲಾಡಳಿತ ಆದೇಶ

ಕಣ್ಣೂರು: ಉತ್ತರ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಆಫ್ರಿಕನ್‌ ಹಂದಿ ಜ್ವರ ಪತ್ತೆಯಾಗಿದೆ. ಆಫ್ರಿಕನ್‌ ಹಂದಿ ಜ್ವರ ಪತ್ತೆಯಾಗುತ್ತಿದ್ದಂತೆ ಅಲ್ಲಿನ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದ್ದು, ಎರಡು ಫಾರ್ಮ್‌ ಗಳಲ್ಲಿ ಇರುವ ಹಂದಿಗಳನ್ನು ಕೊಲ್ಲಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಆಫ್ರಿಕನ್‌ ಹಂದಿ ಜ್ವರ ಕಣ್ಣೂರು ಜಿಲ್ಲೆಯ ಮಲೆಯಂಪಾಡಿಯಲ್ಲಿರುವ ಖಾಸಗಿ ಫಾರ್ಮ್‌ ಗಳಲ್ಲಿ ಪತ್ತೆಯಾಗಿದೆ ಎಂದು ಜಿಲ್ಲಾ ಪಶುಸಂಗೋಪನಾ ಅಧಿಕಾರಿಗಳು ದೃಢಪಡಿಸಿದ್ದಾರೆ. ಈ … Continued