ಪದವಿಪೂರ್ವ ಹಂತದ ಕೋರ್ಸ್‌ಗಳಿಗೆ 12 ಭಾರತೀಯ ಭಾಷೆಗಳಲ್ಲಿ ಪುಸ್ತಕ ಬರೆಯಲು ಲೇಖಕರನ್ನು ಆಹ್ವಾನಿಸಿದ ಯುಜಿಸಿ

ನವದೆಹಲಿ : ವಿಶ್ವವಿದ್ಯಾನಿಲಯ ಅನುದಾನ ಆಯೋಗ(UGC)ವು ಕಲೆ, ವಿಜ್ಞಾನ, ವಾಣಿಜ್ಯ ಮತ್ತು ಸಮಾಜ ವಿಜ್ಞಾನಗಳ ಪದವಿಪೂರ್ವ ಹಂತದ ಕೋರ್ಸ್‌ಗಳಿಗೆ 12 ಭಾರತೀಯ ಭಾಷೆಗಳಲ್ಲಿ ಪಠ್ಯಪುಸ್ತಕಗಳನ್ನು ಬರೆಯಲು ಲೇಖಕರು, ವಿಮರ್ಶಕರು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಆಸಕ್ತ ಅಧ್ಯಾಪಕರನ್ನು ಆಹ್ವಾನಿಸಿದೆ. ಆಯೋಗವು ಅಸ್ಸಾಮಿ, ಬೆಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು … Continued

12 ಮಂದಿ ಐಎಎಸ್ ಅಧಿಕಾರಿಗಳ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯ ಸರ್ಕಾರವು 12 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಪಶುಸಂಗೋಪನೆ ಹಾಗೂ ಮೀನುಗಾರಿಕೆ ಇಲಾಖೆಯ ಕಾರ್ಯದರ್ಶಿ ಸಲ್ಮಾ ಕೆ.ಫಹೀಮ್ ಅವರನ್ನು ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಯಾಗಿ ವರ್ಗಾವಣೆ ಮಾಡಲಾಗಿದೆ. ರಾಜ್ಯ ಹಣಕಾಸು ನಿಗಮದ ವ್ಯವಸ್ಥಾಪಕ ನಿರ್ದೇಶಕ ಉಜ್ವಲ್ ಕುಮಾರ ಘೋಷ್ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ(ಇ-ಆಡಳಿತ)ಯ ಕಾರ್ಯದರ್ಶಿಯಾಗಿ … Continued

8 ವರ್ಷಗಳ ನಂತರ ಆಳ ಸಮುದ್ರದಲ್ಲಿ ಪತ್ತೆಯಾಯ್ತು ನಾಪತ್ತೆಯಾಗಿದ್ದ ವಾಯುಪಡೆ ವಿಮಾನ

ನವದೆಹಲಿ: 2016ರಲ್ಲಿ ಬಂಗಾಳ ಕೊಲ್ಲಿಯಲ್ಲಿ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ ಎಎನ್ -32 ಸಾರಿಗೆ ವಿಮಾನದ ಅವಶೇಷಗಳು ಎಂಟು ವರ್ಷಗಳ ನಂತರ ಪತ್ತೆಯಾಗಿದೆ. ಬಂಗಾಳಕೊಲ್ಲಿಯ ಸಮುದ್ರದಲ್ಲಿ 3.4 ಕಿ.ಮೀ ಆಳದಲ್ಲಿ ವಿಮಾನ ಪತ್ತೆಯಾಗಿದೆ. ಸುತ್ತಲಿನ ನಿಗೂಢವನ್ನು ಚೆನ್ನೈ ಕರಾವಳಿಯಲ್ಲಿ ಪತನಗೊಂಡ ವಿಮಾನದ ಅವಶೇಷಗಳು ಪತ್ತೆಯಾದ ನಂತರ ಭೇದಿಸಬಹುದಾಗಿದೆ. ಕಾರ್ಯಾಚರಣೆಯ ಸಮಯದಲ್ಲಿ ನಾಪತ್ತೆಯಾದ ವಿಮಾನದಲ್ಲಿ ಇಪ್ಪತ್ತೊಂಬತ್ತು ಸಿಬ್ಬಂದಿ ಇದ್ದರು. … Continued

ಆಂಬುಲೆನ್ಸ್ ಗುಂಡಿಗೆ ಬಿದ್ದ ನಂತರ ‘ಸತ್ತ ಮನುಷ್ಯ’ನಿಗೆ ಜೀವ ಬಂತು…!

ಚಂಡೀಗಢ: ಭಾರತದ ಹೆಚ್ಚು ಗುಂಡಿಗಳು ಜನರಿಗೆ ಕಿರಿಕಿರಿ, ಗಾಯಗಳು ಮತ್ತು ಸಾವುಗಳಿಗೆ ಕಾರಣವಾಗಿವೆ. ಆದರೆ ಗುರುವಾರ ಹರಿಯಾಣದ 80 ವರ್ಷದ ವ್ಯಕ್ತಿಯೊಬ್ಬರಿಗೆ ಅಕ್ಷರಶಃ ಜೀವರಕ್ಷಕವಾಗಿ ಪರಿಣಮಿಸಿದೆ ಎಂದು ಅವರ ಕುಟುಂಬವು ಹೇಳಿಕೊಂಡಿದೆ. ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದ ನಂತರ ದರ್ಶನ್ ಸಿಂಗ್ ಬ್ರಾರ್ ಎಂಬವರ ದೇಹವನ್ನು ಪಟಿಯಾಲದಿಂದ ಕರ್ನಾಲ್ ಬಳಿಯ ಅವರ ಮನೆಗೆ ಕೊಂಡೊಯ್ಯಲಾಗುತ್ತಿತ್ತು. ದುಃಖಿತ … Continued

ವೀಡಿಯೊ…| ನಾಸಿಕದ ಕಲಾರಾಮ ಮಂದಿರದಲ್ಲಿ ನೆಲ ಒರೆಸಿ, ರಾಮ ಭಜನೆಯಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ

ನಾಸಿಕ್: ಸ್ವಚ್ಛತಾ ಅಭಿಯಾನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಹಾರಾಷ್ಟ್ರದ ನಾಸಿಕದಲ್ಲಿರುವ ಕಲಾರಾಮ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದರು. ಮೋದಿ ಅವರು ಬಕೆಟ್‌ನೊಂದಿಗೆ ಮಾಪ್ ಸ್ಟಿಕ್ ಹಿಡಿದು ದೇವಾಲಯದ ನೆಲವನ್ನು ಒರೆಸುವ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ದೇಶಾದ್ಯಂತ ದೇವಾಲಯಗಳಲ್ಲಿ ಸ್ವಚ್ಛತಾ ಚಟುವಟಿಕೆಗಳನ್ನು (ಸ್ವಚ್ಛತಾ ಅಭಿಯಾನ) ಕೈಗೊಳ್ಳುವಂತೆ ಪ್ರಧಾನಿ ಜನರಿಗೆ ಕರೆ … Continued

ಒಂದು ಕರು ಹಾಕಿ ಎಂಟು ದಿನದ ನಂತರ ಮತ್ತೊಂದು ಕರುವಿಗೆ ಜನ್ಮ ನೀಡಿದ ಎಮ್ಮೆ…!

ಚಿಕ್ಕಮಗಳೂರು : ಒಂದು ಕರುವಿಗೆ ಜನ್ಮ ನೀಡಿದ್ದ ಎಮ್ಮೆ ಒಂದು ವಾರದ ನಂತರ ಮತ್ತೊಂದು ಕರುವಿಗೆ ಜನ್ಮ ನೀಡಿ ಅಚ್ಚರಿಗೆ ಕಾರಣವಾಗಿದೆ. ಈ ಎಮ್ಮೆ ಒಂದು ಕರು ಹಾಕಿ ಎಂಟು ದಿನಗಳ ನಂತರ ಮತ್ತೊಂದು ಕರುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಶಂಕರಪುರ ಸಮೀಪದ ಮಡುಬ ರಸ್ತೆಯಲ್ಲಿರುವ ಹಳಿಯೂರಿನಲ್ಲಿ ನಡೆದಿದೆ. … Continued

ಲೋಕಸಭೆ ಚುನಾವಣೆಯಲ್ಲಿ ʼಕೈʼ ಅಭ್ಯರ್ಥಿ ಸೋತರೆ ಸಚಿವರ ತಲೆದಂಡ…!

ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸದ ಸಚಿವರ ತಲೆದಂಡ ಆಗಲಿದೆ ಎಂಬ ಎಚ್ಚರಿಕೆಯನ್ನು ಹೈಕಮಾಂಡ್ ನೀಡಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಹೇಳಿದ್ದಾರೆ. ಬೆಂಗಳೂರಿನಲ್ಲಿ ಶುಕ್ರವಾರ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಗೆಲ್ಲಲು ಹೈಕಮಾಂಡ್ ಪ್ರತಿ ಸಚಿವರಿಗೆ ಜವಾಬ್ದಾರಿ ನೀಡಿದೆ. ಈ ಜವಾಬ್ದಾರಿಯನ್ನು ನಿಭಾಯಿಸದ ಸಚಿವರ ತಲೆ … Continued

‘ನಾನು ಕೇವಲ ಸಾರಥಿಯಾಗಿದ್ದೆ…ದೈವಿಕ ಕನಸು ಈಡೇರಿದೆ’ : ರಾಮ ಮಂದಿರ ಉದ್ಘಾಟನೆ ಬಗ್ಗೆ ಎಲ್‌.ಕೆ.ಅಡ್ವಾಣಿ

ನವದೆಹಲಿ: ಅಯೋಧ್ಯೆ ರಾಮಮಂದಿರ ‘ಪ್ರಾಣ ಪ್ರತಿಷ್ಠೆ ‘ ಕುರಿತು ಮಾತನಾಡಿದ ಮಾಜಿ ಗೃಹ ಸಚಿವ ಮತ್ತು ಹಿರಿಯ ಬಿಜೆಪಿ ನಾಯಕ ಎಲ್‌.ಕೆ. ಅಡ್ವಾಣಿ, ಅಯೋಧ್ಯೆಯ ರಾಮಮಂದಿರದ ಉದ್ಘಾಟನೆಯು “ದೈವಿಕ ಕನಸನ್ನು ನನಸಾಗಿಸಿದೆ” ಎಂದು ಹೇಳಿದರು. ಈ ಹೇಳಿಕೆಯು ಎಲ್‌.ಕೆ. ಅಡ್ವಾಣಿಯವರ ರಾಮ ಮಂದಿರಕ್ಕೆ ಮೀಸಲಾದ ಲೇಖನದ ಭಾಗವಾಗಿದೆ, ಇದನ್ನು ಹಿಂದಿ ಸಾಹಿತ್ಯ ಪತ್ರಿಕೆಯಾದ ರಾಷ್ಟ್ರಧರ್ಮದಲ್ಲಿ ಪ್ರಕಟಿಸಲಾಗುತ್ತದೆ. … Continued

‘ಫಿದಾಯೀನ್’ ದಾಳಿ ಸಂಚು ಪ್ರಕರಣದಲ್ಲಿ 8 ಎಲ್‌ಇಟಿ ಕಾರ್ಯಕರ್ತರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್ ಸಲ್ಲಿಕೆ

ನವದೆಹಲಿ: ಕರ್ನಾಟಕದಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ)ದಿಂದ ‘ಫಿದಾಯೀನ್’ (ಆತ್ಮಹತ್ಯೆ) ದಾಳಿಯ ಸಂಚಿನ ಪ್ರಕರಣದಲ್ಲಿ ಇಬ್ಬರು ತಲೆಮರೆಸಿಕೊಂಡವರು ಸೇರಿದಂತೆ ಎಂಟು ಜನರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚಾರ್ಜ್ ಶೀಟ್ ಸಲ್ಲಿಸಿರುವ ಆರೋಪಿಗಳಲ್ಲಿ ಕೇರಳದ ಕಣ್ಣೂರಿನ ಟಿ ನಾಸೀರ್ ಎಂಬಾತ 2013 ರಿಂದ ಪ್ರತ್ಯೇಕ ಪ್ರಕರಣದಲ್ಲಿ ಬೆಂಗಳೂರಿನ … Continued

‘ಹಾನಿಯಾಗಿದೆ, ಚುನಾವಣೆಯಲ್ಲಿ ಗೋಚರಿಸುತ್ತದೆ…’: ರಾಮಮಂದಿರ ಆಹ್ವಾನ ತಿರಸ್ಕರಿಸಿದ ಕಾಂಗ್ರೆಸ್‌ ಬಗ್ಗೆ ಪಕ್ಷದ ನಾಯಕ ದಿಗ್ವಿಜಯ ಸಿಂಗ್‌ ಸಹೋದರ

ಭೋಪಾಲ್‌ : ಅಯೋಧ್ಯೆ ರಾಮಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ್ದಕ್ಕಾಗಿ ಕಾಂಗ್ರೆಸ್ ಮಾಜಿ ಶಾಸಕ ಮತ್ತು ಪಕ್ಷದ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರ ಸಹೋದರ ಲಕ್ಷ್ಮಣ್ ಸಿಂಗ್ ತಮ್ಮದೇ ಪಕ್ಷವಾದ ‘ಕಾಂಗ್ರೆಸ್‌ ‘ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ ಮತ್ತು ಪಕ್ಷದ ಸಲಹೆಗಾರರನ್ನು ಪ್ರಶ್ನಿಸಿದ್ದಾರೆ. ಮಾಜಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸಿಂಗ್ ಅವರು, “… … Continued