‘ದೇವಾಲಯಗಳು ಪಿಕ್ನಿಕ್ ಸ್ಪಾಟ್ ಅಲ್ಲ’: ಪಳನಿ ದೇವಸ್ಥಾನಕ್ಕೆ ಹಿಂದೂಯೇತರರ ಪ್ರವೇಶ ನಿರ್ಬಂಧಿಸುವಂತೆ ಮದ್ರಾಸ್‌ ಹೈಕೋರ್ಟ್ ಸೂಚನೆ

ಚೆನ್ನೈ: ತಮಿಳುನಾಡು ಸರ್ಕಾರ ಮತ್ತು ರಾಜ್ಯ ಹಿಂದೂ ಧಾರ್ಮಿಕ ಮತ್ತು ದತ್ತಿ (HR&CE) ಇಲಾಖೆಗೆ ನಿರ್ದೇಶನ ನೀಡಿರುವ ಮದ್ರಾಸ್ ಹೈಕೋರ್ಟ್ ಪಳನಿ ದೇವಸ್ಥಾನ ಮತ್ತು ಅದರ ಉಪ ದೇವಾಲಯಗಳಿಗೆ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸುವಂತೆ ಸೂಚನೆ ನೀಡಿದೆ. ಈ ಸ್ಥಳಗಳು “ಪಿಕ್ನಿಕ್ ಅಥವಾ ಪ್ರವಾಸಿ ತಾಣವಲ್ಲ” ಎಂದು ಒತ್ತಿಹೇಳಿರುವ ನ್ಯಾಯಮೂರ್ತಿ ಎಸ್. ಶ್ರೀಮತಿ ಅವರ ನೇತೃತ್ವದ ಪೀಠವು … Continued

ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಪಿ.ಎಸ್‌. ದಿನೇಶಕುಮಾರ ನೇಮಕ

ಬೆಂಗಳೂರು : ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪಿ.ಎಸ್‌. ದಿನೇಶಕುಮಾರ ಅವರನ್ನು ಮುಖ್ಯ ನ್ಯಾಯಮೂರ್ತಿಯಾಗಿ ರಾಷ್ಟ್ರಪತಿಯವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕೇಂದ್ರ ಸರ್ಕಾರ ಈ ಸಂಬಂಧ ಬುಧವಾರ ಅಧಿಸೂಚನೆ ಪ್ರಕಟಿಸಿದೆ. ಫೆಬ್ರವರಿ 24ರಂದು ನ್ಯಾ. ದಿನೇಶಕುಮಾರ ಅವರು ಸೇವೆಯಿಂದ ನಿವೃತ್ತರಾಗಲಿದ್ದಾರೆ. ಅವರು 2015ರಿಂದ ಕರ್ನಾಟಕ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದಾರೆ. ಅವರು 24 ದಿನಗಳ … Continued

ಹೇಮಂತ್ ಸೊರೇನ್ ಇ.ಡಿ. ವಶಕ್ಕೆ; ಜಾರ್ಖಂಡ್ ನೂತನ ಸಿಎಂ ಆಗಿ ಚಂಪೈ ಸೊರೇನ್ ಆಯ್ಕೆ

ರಾಂಚಿ : ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್‌ ಅವರನ್ನು ಬುಧವಾರ ಸಂಜೆ ಜಾರಿ ನಿರ್ದೇಶನಾಲಯವು ಅವರು ಹುದ್ದೆ ತ್ಯಜಿಸಿದ ಕೆಲವೇ ನಿಮಿಷಗಳಲ್ಲಿ ಕಸ್ಟಡಿಗೆ ತೆಗೆದುಕೊಂಡಿತು.  ಅವರ  ರಾಜೀನಾಮೆ ನಂತರ ಅವರ ಆಪ್ತ ಹಾಗೂ ಪಕ್ಷದ ಹಿರಿಯ ನಾಯಕ ಚಂಪೈ ಸೊರೇನ್ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ನೀಡಿದ ಕೆಲವೇ ನಿಮಿಷಗಳಲ್ಲಿ ಭೂ ಹಗರಣಕ್ಕೆ … Continued

ಹಿರಿಯ ಸಹಕಾರಿ ಧುರೀಣ, ಎಲ್ಲರ ʼಶಾಂತಣ್ಣʼ ಟಿಎಸ್‌ಎಸ್‌ ಮಾಜಿ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಇನ್ನಿಲ್ಲ

ಶಿರಸಿ: ʼಶಾಂತಣ್ಣʼ ಎಂದೇ ಆಪ್ತವಲಯದಲ್ಲಿ ಜನಪ್ರಿಯರಾಗಿದ್ದ ಹಿರಿಯ ಸಹಕಾರಿ ಧುರೀಣ, ಸಜ್ಜನ ರಾಜಕಾರಣಿ, ಸಹೃದಯಿ ಟಿಎಸ್‌ಎಸ್‌ ಮಾಜಿ ಅಧ್ಯಕ್ಷರಾಗಿದ್ದ ಶಾಂತಾರಾಮ ಹೆಗಡೆ ಶೀಗೇಹಳ್ಳಿ ವಯೋ ಸಹಜ ಖಾಯಿಲೆಯಿಂದ ಬುಧವಾರ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ, ಒಬ್ಬ ಪುತ್ರ ಇಬ್ಬರು ಪುತ್ರಿಯರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಇವರು ಶಿಕ್ಷಣ, ಸಹಕಾರ, … Continued

“ದಯವಿಟ್ಟು ಬೇರೆ ಕಾಲೋನಿಗೆ ಹೋಗಿ…”: ರಾಮಮಂದಿರ ವಿರೋಧಿ ಪೋಸ್ಟ್‌ ನಂತರ ಮಣಿಶಂಕರ್ ಅಯ್ಯರ್ ಮಗಳಿಗೆ ಮನೆ ತೊರೆಯುವಂತೆ ನೋಟಿಸ್‌

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರ ಪುತ್ರಿ ಸುರಣ್ಯಾ ಅಯ್ಯರ್ ಅವರು ಅಯೋಧ್ಯೆಯಲ್ಲಿ ರಾಮಮಂದಿರವನ್ನು ತೆರೆಯುವುದನ್ನು ಖಂಡಿಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ದೆಹಲಿಯ ಜಂಗ್‌ಪುರದ ನಿವಾಸಿ ಕಲ್ಯಾಣ ಸಂಘ (ಆರ್‌ಡಬ್ಲ್ಯೂಎ) ಅವರಿಗೆ ತಮ್ಮ ಮನೆ ಬಿಟ್ಟು ಹೋಗುವಂತೆ ಸೂಚಿಸಿದೆ. ಈ ಕುರಿತು ದೆಹಲಿಯ ಜಂಗ್ಪುರ ವಿಸ್ತರಣೆಯ ನಿವಾಸಿಗಳ ಕಲ್ಯಾಣ ಸಂಘ(RWA)ವು … Continued

ಹಿಂದೂ ಪಕ್ಷಕಾರರಿಗೆ ದೊಡ್ಡ ಗೆಲುವು : ಕಾಶಿಯ ಜ್ಞಾನವಾಪಿ ಮಸೀದಿ ನೆಲಮಾಳಿಗೆಯಲ್ಲಿ ಪೂಜೆಗೆ ಅವಕಾಶ ನೀಡಿದ ಕೋರ್ಟ್‌

ವಾರಾಣಸಿ: ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ಹಿಂದೂ ಪಕ್ಷದವರಿಗೆ ದೊಡ್ಡ ಜಯ ಸಿಕ್ಕಿದ್ದು ಮಸೀದಿಯ ನೆಲಮಾಳಿಗೆಯಲ್ಲಿ ಪೂಜೆ ಮಾಡಲು ವಾರಾಣಸಿ ಕೋರ್ಟ್ ಅವಕಾಶ ನೀಡಿದೆ. ವಾರಾಣಸಿ ನ್ಯಾಯಾಲಯವು ಬುಧವಾರ ಹಿಂದೂ ಭಕ್ತರಿಗೆ ಜ್ಞಾನವಾಪಿ ಮಸೀದಿಯ ಮೊಹರು ಮಾಡಿದ ನೆಲಮಾಳಿಗೆಯೊಳಗೆ ಪೂಜೆ ಮಾಡಲು ಅನುಮತಿ ನೀಡಿದೆ. ನ್ಯಾಯಾಲಯದ ಆದೇಶದ ಪ್ರಕಾರ, ವಾರಾಣಸಿಯ ಜ್ಞಾನವಾಪಿ ಮಸೀದಿಯೊಳಗಿನ ನಿರ್ಬಂಧಿತ ಪ್ರದೇಶವಾದ ‘ವ್ಯಾಸ್ … Continued

ವೀಡಿಯೊ..| ಲಡಾಖ್‌ ಗಡಿಯಲ್ಲಿ ಧೈರ್ಯದಿಂದ ಚೀನಾ ಸೈನಿಕರ ಜತೆ ಘರ್ಷಣೆಗೆ ಇಳಿದ ಭಾರತದ ಕುರಿಗಾಹಿಗಳು : ಲಕ್ಷಾಂತರ ಜನರ ಹೃದಯ ಗೆದ್ದ ವೈರಲ್‌ ವೀಡಿಯೊ

ಶ್ರೀನಗರ : ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (ಎಲ್‌ಎಸಿ) ಬಳಿ ಕುರಿಗಳನ್ನು ಮೇಯಿಸುವುದನ್ನು ತಡೆಯಲು ಯತ್ನಿಸಿದ ಚೀನಾ ಸೈನಿಕರನ್ನು ಲಡಾಖ್ ಕುರುಬರ ಗುಂಪು ಧೈರ್ಯದಿಂದ ಎದುರಿಸಿದೆ. ಅವರು ಚೀನಾದ ಪಿಎಲ್‌ಎ ಪಡೆಗಳೊಂದಿಗೆ ಜಗಳವಾಡುತ್ತಿರುವ ಮತ್ತು ತಾವು ಭಾರತದ ಭೂಪ್ರದೇಶದಲ್ಲಿದ್ದೇವೆ ಎಂದು ಪ್ರತಿಪಾದಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದ್ದು, ಲಕ್ಷಾಂತರ ಭಾರತೀಯರ ಹೃದಯಗಳನ್ನು ಗೆದ್ದಿದೆ. ಕಳೆದ … Continued

ಟಿಪ್ಪು ಸುಲ್ತಾನ್‌ ನಾಮಫಲಕಕ್ಕೆ ಚಪ್ಪಲಿ ಹಾರ ಹಾಕಿದ ಕಿಡಿಗೇಡಿಗಳು: ಪ್ರತಿಭಟನೆ

ರಾಯಚೂರು : ಟಿಪ್ಪು ಸುಲ್ತಾನ್ ನಾಮಫಲಕಕ್ಕೆ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿದ ಘಟನೆ ರಾಯಚೂರು ಜಿಲ್ಲೆಯ ಸಿರವಾರದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಇದರಿಂದಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಸಿರವಾರ ಪಟ್ಟಣದ ಮಟನ್ ಮಾರ್ಕೆಟ್ ಬಳಿಯ ಟಿಪ್ಪು ಸರ್ಕಲ್​ನಲ್ಲಿನ ಭಾವಚಿತ್ರಕ್ಕೆ ಮಂಗಳವಾರ ರಾತ್ರಿ ಕಿಡಿಗೇಡಿಗಳು ಚಪ್ಪಲಿ ಹಾರ ಹಾಕಿ ಪರಾರಿಯಾಗಿದ್ದಾರೆ. ಇದನ್ನು ಬೆಳಗ್ಗೆ ನೋಡಿದ ಸಮುದಾಯದ … Continued

ಅಥಣಿ : ಮಾರಕಾಸ್ತ್ರದಿಂದ ಕೊಚ್ಚಿ ನವ ದಂಪತಿ ಕೊಲೆ

ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರು ಗ್ರಾಮದಲ್ಲಿ ಮಂಗಳವಾರ ನವ ದಂಪತಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅವರ ರಕ್ಷಣೆಗೆ ಬಂದ ಇನ್ನಿಬ್ಬರ ಮೇಲೂ ಹಲ್ಲೆ ಮಾಡಲಾಗಿದೆ. ಕೊಲೆಯಾದವರನ್ನು ಯಾಸಿನ್‌ ಬ್ಯಾಗೋಡೆ (21) ಹಾಗೂ ಹೀನಾಕೌಸರ್‌ (19) ಎಂದು ಗುರುತಿಸಲಾಗಿದೆ. ಇದೇ ಊರಿನ ತೌಫಿಕ್‌ ಕ್ಯಾಡಿ (24) ಎಂಬಾತ ಕೊಲೆ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. … Continued

ವೀಡಿಯೊ…| ಎರಡು ಹುಲಿಗಳ ಭೀಕರ ಕಾಳಗ : ಗೆದ್ದಿದ್ದು ಯಾರು..? ; ವೀಕ್ಷಿಸಿ

ಪ್ರಾಣಿಗಳು ಸಹ ಪ್ರಾಬಲ್ಯಕ್ಕಾಗಿ ಪರಸ್ಪರ ಹೋರಾಡುತ್ತವೆ. ಹುಲಿ ಆಕಸ್ಮಿಕವಾಗಿ ಮತ್ತೊಂದು ಹುಲಿಯ ಪ್ರದೇಶವನ್ನು ಪ್ರವೇಶಿಸಿದರೆ, ಆಗ ಅವುಗಳ ನಡುವೆ ಕಾದಾಟ ಖಚಿತ. ಆ ಪ್ರದೇಶದ ಮೇಲೆ ಅಧಿಕಾರ ಸ್ಥಾಪಿಸಲು ಒಂದು ಮತ್ತೊಂದನ್ನು ಕೊಲ್ಲಲು ಮುಂದಾಗುತ್ತದೆ. ಮತ್ತು ಅದರಲ್ಲಿ ಒಂದು ಆ ಸ್ಥಳದಿಂದ ಬಿಟ್ಟು ಹೋಗುವ ವರೆಗೂ ಅಥವಾ ಸಾಯುವ ವರೆಗೂ ಹೋರಾಟ ಮುಂದುವರಿಯುತ್ತದೆ. ಪ್ರಸ್ತುತ, ಅಂತಹ … Continued