ಲೋಕಸಭೆ ಚುನಾವಣೆಗೆ ಮುನ್ನ ಬಂಡಿ ಸಂಜಯ, ಸುನಿಲ ಬನ್ಸಾಲ್, ಇತರರಿಗೆ ಪಕ್ಷದಲ್ಲಿ ಮಹತ್ವದ ಹೊಣೆಗಾರಿಕೆ ನೀಡಿದ ಬಿಜೆಪಿ

ನವದೆಹಲಿ: 2024 ರ ಲೋಕಸಭಾ ಚುನಾವಣೆಗೆ ಕೇವಲ ತಿಂಗಳುಗಳು ಬಾಕಿ ಇರುವಾಗ, ಭಾರತೀಯ ಜನತಾ ಪಕ್ಷ (ಬಿಜೆಪಿ) ಬುಧವಾರ ಪಕ್ಷದ ವಿವಿಧ ವಿಭಾಗಗಳಿಗೆ ಪ್ರಮುಖ ನೇಮಕಾತಿಗಳನ್ನು ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಹಲವು ಮುಖಂಡರನ್ನು ವಿವಿಧ ಇಲಾಖೆಗಳ ಉಸ್ತುವಾರಿಗಳನ್ನಾಗಿ ನೇಮಿಸಿದ್ದಾರೆ. ಜೆಪಿ ನಡ್ಡಾ ಅವರು ಅನುಮೋದಿಸಿದ ನೇಮಕಾತಿಗಳ ಪಟ್ಟಿ ಇಲ್ಲಿದೆ: ಸುನಿಲ … Continued

ಗ್ಯಾಂಗ್‌ಸ್ಟರ್‌ ‘ನಕಲಿ’ ಎನ್‌ಕೌಂಟರ್ ಪ್ರಕರಣದಲ್ಲಿ ಜೈಲು ಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ರೂಪದರ್ಶಿಯ ಗುಂಡಿಕ್ಕಿ ಹತ್ಯೆ

ನವದೆಹಲಿ:  2016 ರಲ್ಲಿ ಮುಂಬೈ ಹೋಟೆಲ್ ಕೊಠಡಿಯಲ್ಲಿ ಹರಿಯಾಣ ಮೂಲದ ಗ್ಯಾಂಗ್‌ಸ್ಟರ್‌ನ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಬಿಡುಗಡೆಯಾದ ಐದು ತಿಂಗಳ ನಂತರ, 27 ವರ್ಷದ ಮಾಡೆಲ್ ದಿವ್ಯಾ ಪಹುಜಾಳನ್ನು ಮಂಗಳವಾರ ಗುರುಗ್ರಾಮದ ಹೊಟೇಲ್‌ ಒಂದರಲ್ಲಿ ಗುಂಡಿಕ್ಕಿ ಕೊಲ್ಲಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ದಿವ್ಯಾ ಪಹುಜಾಳ ಸಹೋದರಿ ನೀಡಿದ ದೂರಿನ ಪ್ರಕಾರ, ಜನವರಿ … Continued

ಸರ್ಕಾರಿ ಅಧಿಕಾರಿಗಳಿಗೆ ಸಮನ್ಸ್‌: ಎಸ್ಒಪಿ ರೂಪಿಸಿದ ಸುಪ್ರೀಂ ಕೋರ್ಟ್‌

ನವದೆಹಲಿ: ಸರ್ಕಾರಿ ಅಧಿಕಾರಿಗಳಿಗೆ ಸಮನ್ಸ್ ನೀಡುವಾಗ ನ್ಯಾಯಾಲಯಗಳು ಪಾಲಿಸಬೇಕಾದ ಪ್ರಮಾಣಿತ ಕಾರ್ಯಾಚರಣೆ ವಿಧಾನ (ಎಸ್ಒಪಿ) ಹಾಗೂ ಹಾಗೂ ಮಾರ್ಗಸೂಚಿಗಳನ್ನು ಸುಪ್ರೀಂ ಕೋರ್ಟ್ ಬುಧವಾರ ಪ್ರಕಟಿಸಿದೆ. ಅಲ್ಲದೆ, ಅಧಿಕಾರಿಗಳನ್ನು ಅಪಮಾನಿಸದಂತೆ ಹಾಗೂ ಉಡುಗೆ ತೊಡುಗೆಗಳ ಬಗ್ಗೆ ಅನಗತ್ಯ ಟೀಕೆ ಮಾಡದಂತೆ ನ್ಯಾಯಾಲಯಗಳಿಗೆ ಸೂಚಿಸಿದೆ. ಎಸ್‌ಒಪಿಯನ್ನು ಎಲ್ಲಾ ಹೈಕೋರ್ಟ್‌ಗಳು ಪಾಲಿಸಬೇಕಿದ್ದು ಅಧಿಕಾರಿಗಳಿಗೆ ಮನಬಂದಂತೆ ಸಮನ್ಸ್‌ ನೀಡಬಾರದು ಎಂದು ಭಾರತದ … Continued

ಲೋಕಸಭೆಯಿಂದ ಮಹುವಾ ಮೊಯಿತ್ರಾ ಉಚ್ಚಾಟನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ

ನವದೆಹಲಿ : ‌ತಮ್ಮನ್ನು ಲೋಕಸಭೆಯಿಂದ ಉಚ್ಚಾಟಿಸಿರುವುದನ್ನು ಪ್ರಶ್ನಿಸಿ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂ ಕೋರ್ಟ್ ಬುಧವಾರ ಲೋಕಸಭಾ ಸಚಿವಾಲಯಕ್ಕೆ ಸೂಚಿಸಿದೆ. ಹಾಗೂ ಮೊಯಿತ್ರಾ ಅವರಿಗೆ ಯಾವುದೇ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ ಖನ್ನಾ ಮತ್ತು ದೀಪಾಂಕರ್ ದತ್ತಾ ಅವರ ಪೀಠವು ಲೋಕಸಭಾ ಸಚಿವಾಲು ಎರಡು ವಾರಗಳಲ್ಲಿ … Continued

ಮೊಬೈಲ್‌ ಬ್ಲಾಸ್ಟ್‌ : ಯುವಕನಿಗೆ ಗಾಯ

ಬೆಂಗಳೂರು: ಮೊಬೈಲ್ ಬ್ಲಾಸ್ಟ್ ಆಗಿ ಯುವಕ ಗಾಯಗೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೈಟ್ ಫೀಲ್ಡ್​ನಲ್ಲಿ ವಾಸವಿದ್ದ 24 ವರ್ಷದ ಪ್ರಸಾದ ಎಂಬಾತನೇ ಮೊಬೈಲ್‌ ಬ್ಲಾಸ್ಟ್‌ ಆಗಿ ಗಾಯಗೊಂಡವರಾಗಿದ್ದಾರೆ. ಪ್ರಸಾದ ಅಕ್ಟೋಬರ್ ತಿಂಗಳಲ್ಲಿ ಒನ್​ ಪ್ಲಸ್​ ಕಂಪನಿಯ ಮೊಬೈಲ್ ಖರೀದಿಸಿದ್ದನು. ಮಂಗಳವಾರ ಸ್ಕೂಟರಿ​ನಲ್ಲಿ ತೆರಳುತ್ತಿದ್ದ ವೇಳೆ ಜೇಬಿನಲ್ಲಿ ಇಟ್ಟುಕೊಂಡಿದ್ದ. ಆದರೆ ಅದೇನಾಯ್ತೋ ಗೊತ್ತಿಲ್ಲ ಮೊಬೈಲ್​ ಏಕಾಏಕಿ ಮೊಬೈಲ್‌ … Continued

ಇರಾನ್ ಟಾಪ್ ಜನರಲ್ ಖಾಸೆಮ್ ಸೊಲೈಮಾನಿ ಸಮಾಧಿ ಬಳಿ ಅವಳಿ ಸ್ಫೋಟ : 100 ಕ್ಕೂ ಹೆಚ್ಚು ಜನರು ಸಾವು

ದುಬೈ: 2020 ರಲ್ಲಿ ಅಮೆರಿಕದಿಂದ ಡ್ರೋನ್‌ನಿಂದ ಕೊಲ್ಲಲ್ಪಟ್ಟ ಟಾಪ್ ಕಮಾಂಡರ್ ಖಾಸೆಮ್ ಸೊಲೈಮಾನಿ ಸ್ಮರಣಾರ್ಥ ಇರಾನ್‌ನಲ್ಲಿ ನಡೆದ ಸಮಾರಂಭದಲ್ಲಿ ‘ಭಯೋತ್ಪಾದಕ ದಾಳಿ’ಯಿಂದ ಉಂಟಾದ ಎರಡು ಸ್ಫೋಟಗಳಲ್ಲಿ 100 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ ಎಂದು ಇರಾನ್ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಜನಸಮೂಹದ ಮೇಲೆ ನಡೆದ ಬಾಂಬ್‌ ದಾಳಿಯಲ್ಲಿ ಕನಿಷ್ಠ 103 … Continued

ಚೆಕ್‌ ಬೌನ್ಸ್‌ ಪ್ರಕರಣ: ಸಚಿವ ಮಧು ಬಂಗಾರಪ್ಪಗೆ ವಿಧಿಸಿದ್ದ ಶಿಕ್ಷೆ ಅಮಾನತು

ಬೆಂಗಳೂರು : ಚೆಕ್‌ ಬೌನ್ಸ್‌ ಪ್ರಕರಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಜೈಲು ಶಿಕ್ಷೆ ವಿಧಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶವನ್ನು 56ನೇ ಸೆಷನ್ಸ್‌ ನ್ಯಾಯಾಲಯ ಅಮಾನತಿನಲ್ಲಿ ಇರಿಸಿದೆ. ಮಧು ಬಂಗಾರಪ್ಪ ಅವರು ತಮಗೆ ವಿಧಿಸಲಾಗಿರುವ ದಂಡದ ಮೊತ್ತ ₹6.96 ಕೋಟಿ ಪೈಕಿ ಶೇ. 20ರಷ್ಟು ಹಣವನ್ನು ಒಂದು ತಿಂಗಳ … Continued

ಜನವರಿ13 ರಂದು ಕೆ-ಸೆಟ್ ಪರೀಕ್ಷೆ : ವಸ್ತ್ರ ಸಂಹಿತೆ ಕಡ್ಡಾಯ, ಪ್ರವೇಶಪತ್ರ ಡೌನ್ ಲೋಡ್ ಗೆ ಸೂಚನೆ

ಬೆಂಗಳೂರು: ಜನವರಿ 13ರಂದು ನಡೆಯುವ ಕೆ-ಸೆಟ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ತಿಳಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು, ಅಭ್ಯರ್ಥಿಗಳು ಪರೀಕ್ಷಾ ಕೇಂದ್ರವನ್ನು ಪ್ರವೇಶಿಸುವ ಮುನ್ನ ಪ್ರವೇಶಪತ್ರ ಮತ್ತು ಸರಕಾರದಿಂದ ಮಾನ್ಯವಾಗಿರುವ ನಿಗದಿತ ಬಗೆಯ ಗುರುತಿನ ಪತ್ರವನ್ನು ತೋರಿಸುವುದು ಕಡ್ಡಾಯವಾಗಿದೆ. ಜತೆಗೆ ಪ್ರವೇಶಪತ್ರದಲ್ಲಿ … Continued

ಬಂಧಿತ ಶ್ರೀಕಾಂತ ಪೂಜಾರಿ ಕರಸೇವಕನಲ್ಲ, ಆತನ ವಿರುದ್ಧ 16 ಪ್ರಕರಣಗಳಿವೆ : ಗೃಹ ಸಚಿವ ಪರಮೇಶ್ವರ

ಬೆಂಗಳೂರು: ಹುಬ್ಬಳ್ಳಿಯಲ್ಲಿ ಕರಸೇವಕನ ಬಂಧನ ಖಂಡಿಸಿ ಬಿಜೆಪಿಯ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು, ಬಂಧಿತ ವ್ಯಕ್ತಿ ಕರಸೇವಕನಲ್ಲ ಮತ್ತು ಆತನ ವಿರುದ್ಧ 16 ಪೊಲೀಸ್ ಪ್ರಕರಣಗಳಿವೆ ಎಂದು ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶ್ರೀಕಾಂತ ಪೂಜಾರಿ ಎಂಬ ವ್ಯಕ್ತಿಯನ್ನು ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ಇತರ ದಾಖಲೆಗಳಲ್ಲಿ ಕರಸೇವಕ ಎಂದು … Continued

ಹುಬ್ಬಳ್ಳಿ: ಬಿಜೆಪಿ ಪ್ರತಿಭಟನೆ, ಠಾಣೆಗೆ ನುಗ್ಗಲು ಯತ್ನ: ಆರ್.ಅಶೋಕ ಸೇರಿ ಹಲವರು ವಶಕ್ಕೆ

ಹುಬ್ಬಳ್ಳಿ: ರಾಮಜನ್ಮಭೂಮಿ ಹೋರಾಟಗಾರರ ಬಂಧನ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಯು ಹುಬ್ಬಳ್ಳಿಯಲ್ಲಿ ತೀವ್ರಗೊಂಡಿದೆ. ಹಿಂದೂ ಕಾರ್ಯಕರ್ತನ ಬಂಧನ ಖಂಡಿಸಿ ವಿಪಕ್ಷ ನಾಯಕ ಆರ್‌.ಅಶೋಕ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ಪೋಲಿಸ್ ಠಾಣೆಗೆ ನುಗ್ಗಲು ಯತ್ನಿಸಿದಾಗ ತಡೆದ ಪೊಲೀಸರು, ನಾಯಕ ಆರ್. ಅಶೋಕ್ ಸೇರಿದಂತೆ 90 ಜನರನ್ನು ವಶಕ್ಕೆ ಪಡೆದರು. ಹಿಂದೂ ಕಾರ್ಯಕರ್ತ … Continued