ಖ್ಯಾತ ಸಂಗೀತ ಸಂಯೋಜಕ ಇಳಯರಾಜ ಪುತ್ರಿ, ರಾಷ್ಟ್ರ ಪ್ರಶಸ್ತಿ ವಿಜೇತ ಗಾಯಕಿ ಭವತಾರಿಣಿ ನಿಧನ

ಚೆನ್ನೈ: ರಾಷ್ಟ್ರಪ್ರಶಸ್ತಿ ವಿಜೇತ ಹಿನ್ನೆಲೆ ಗಾಯಕಿ ಭವತಾರಿಣಿ (47) ಅನಾರೋಗ್ಯದಿಂದ ಶ್ರೀಲಂಕಾದಲ್ಲಿ ಗುರುವಾರ ನಿಧನರಾದರು. ಭವತಾರಿಣಿ ಅವರು ಸಂಗೀತ ಮಾಂತ್ರಿಕ ಇಳಯರಾಜಾ ಅವರ ಪುತ್ರಿ. ಅವರು ತಮಿಳು ಮಾತ್ರವಲ್ಲದೆ ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲೂ ಹಲವು ಗೀತೆಗಳನ್ನು ಹಾಡಿದ್ದಾರೆ. ಕ್ಯಾನ್ಸರ್‌ಗೆ ತುತ್ತಾಗಿದ್ದ ಭವತಾರಿಣಿ, ಕಳೆದ ಕೆಲವು ತಿಂಗಳುಗಳಿಂದ ಶ್ರೀಲಂಕಾದಲ್ಲಿ ಆಯುರ್ವೇದ ಚಿಕಿತ್ಸೆ ಪಡೆಯುತ್ತಿದ್ದರು ಎಂದು … Continued

ಶೃಂಗೇರಿ ಶಾರದ ಪೀಠಕ್ಕೆ ನೂತನ ಆಡಳಿತಾಧಿಕಾರಿ ನೇಮಕ

ಶೃಂಗೇರಿ: ಶೃಂಗೇರಿ ಶಾರದಾಪೀಠಕ್ಕೆ ನೂತನ ಆಡಳಿತಾಧಿಕಾರಿಯನ್ನು ನೇಮಕ ಮಾಡಲಾಗಿದೆ. ಜನವರಿ 25 ರಿಂದ ಜಾರಿಗೆ ಬರುವಂತೆ ಪಿ.ಎ ಮುರಳಿ ಅವರನ್ನು ಮಠದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಆಡಳಿತಾಧಿಕಾರಿಯನ್ನಾಗಿ ಜಗದ್ಗುರು ಭಾರತೀ ತೀರ್ಥ ಸ್ವಾಮಿಗಳು ನೇಮಕ ಮಾಡಿದ್ದಾರೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ. ಮಠದ ಈ ಹಿಂದಿನ ಗುರು ಅಭಿನವ ವಿದ್ಯಾತೀರ್ಥ ಸ್ವಾಮೀಜಿ ಅವರ ನಿರ್ದೇಶನದಂತೆ 1989ರಲ್ಲಿ … Continued

ವಾರಾಣಸಿ ಜ್ಞಾನವಾಪಿ ಮಸೀದಿಗೂ ನಿರ್ಮಾಣಕ್ಕೂ ಮುನ್ನ ಅಲ್ಲಿ ಬೃಹತ್ ಹಿಂದೂ ದೇಗುಲವಿತ್ತು: ಎಎಸ್ಐ ಸರ್ವೆಯಲ್ಲಿ ಉಲ್ಲೇಖ-ವಕೀಲ ವಿಷ್ಣು ಶಂಕರ ಜೈನ್

ವಾರಾಣಸಿ: ಜ್ಞಾನವಾಪಿ ಮಸೀದಿಯ ಸಮೀಕ್ಷೆಯು ವಿವಿಧ ಭಾಷೆಗಳಲ್ಲಿ 34 ಶಾಸನಗಳು ಇದ್ದ ದೇವಾಲಯ ಇತ್ತೆಂದು ಬಹಿರಂಗಪಡಿಸಿದೆ, ಅದನ್ನು ಮಸೀದಿಯಾಗಿ ಮರುರೂಪಿಸಲಾಗಿದೆ ಎಂದು ಮಹಿಳಾ ಅರ್ಜಿದಾರರ ವಕೀಲರಾದ ವಿಷ್ಣು ಜೈನ್ ಅವರು ಸಮೀಕ್ಷೆಯ ವರದಿಯ ಹಾರ್ಡ್ ಕಾಪಿ ಸ್ವೀಕರಿಸಿದ ನಂತರ ತಿಳಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಾರಾಣಸಿ ಜಿಲ್ಲಾ ನ್ಯಾಯಾಧೀಶರು ಪ್ರಕರಣದ ಸೂಕ್ಷ್ಮತೆಯ ದೃಷ್ಟಿಯಿಂದ ಸಾಮಾಜಿಕ … Continued

ಪದ್ಮ ಪ್ರಶಸ್ತಿಗಳು ಪ್ರಕಟ..: ವೆಂಕಯ್ಯ ನಾಯ್ಡು, ವೈಜಯಂತಿಮಾಲಾ ಬಾಲಿ, ಪದ್ಮಾ ಸುಬ್ರಹ್ಮಣ್ಯಂ, ಚಿರಂಜೀವಿಗೆ ಪದ್ಮವಿಭೂಷಣ, ಮಿಥುನ್‌ ಚಕ್ರವರ್ತಿಗೆ ಪದ್ಮಭೂಷಣ: ಪೂರ್ಣ ಪಟ್ಟಿ ಇಲ್ಲಿದೆ

ನವದೆಹಲಿ: ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮತ್ತು ನಟರಾದ ಚಿರಂಜೀವಿ ಮತ್ತು ವೈಜಯಂತಿಮಾಲಾ ಬಾಲಿ ಅವರಿಗೆ ರಾಷ್ಟ್ರದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಗಿದೆ ಎಂದು ಕೇಂದ್ರ ಗುರುವಾರ ಪ್ರಕಟಿಸಿದೆ. ಬಿಂದೇಶ್ವರ ಪಾಠಕ್ (ಮರಣೋತ್ತರ) ಮತ್ತು ಪದ್ಮಾ ಸುಬ್ರಹ್ಮಣ್ಯಂ ಅವರಿಗೂ ಪದ್ಮವಿಭೂಷಣ ಪ್ರಶಸ್ತಿ ನೀಡಲಾಗಿದೆ. ಈ ವರ್ಷ ಐವರಿಗೆ ಪದ್ಮವಿಭೂಷಣ, 17 … Continued

ಬಿಜೆಪಿ ನಾವೇ ಕಟ್ಟಿ ಬೆಳೆಸಿದ ಮನೆ…ಈ ಮನೆಗೆ ಸಂತೋಷದಿಂದಲೇ ವಾಪಸ್‌ ಬಂದಿದ್ದೇನೆ :ಶೆಟ್ಟರ

ಬೆಂಗಳೂರು: ದೇಶಕ್ಕೆ ಸುರಕ್ಷತೆ ದೃಷ್ಟಯಿಂದ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಬೇಕೆಂದು ಆಶಿಸಿ ಬಿಜೆಪಿಗೆ ಮರಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ ಹೇಳಿದ್ದಾರೆ. ಇಲ್ಲಿನ ವಿಮಾನನಿಲ್ದಾಣದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಬಿಜೆಪಿ ನಮ್ಮ ಮನೆ, ನಾವೇ ಕಟ್ಟಿ ಬೆಳೆಸಿದ ಮನೆ. ಆ ಮನೆಗೆ ಸಂತೋಷದಿಂದ ವಾಪಸಾಗಿದ್ದೇನೆ. ರಾಷ್ಟ್ರದ -ರಾಜ್ಯದ ನಾಯಕರು … Continued

ಸಾಹಿತಿ ನಾ. ಡಿಸೋಜಾಗೆ ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರಕಟ ; ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ಪ್ರಶಸ್ತಿ ಪ್ರಕಟ : ಪಟ್ಟಿ ಇಲ್ಲಿದೆ

ಬೆಂಗಳೂರು: ಹಲವಾರು ಪ್ರಶಸ್ತಿಗಳನ್ನು ನಾಲ್ಕು ವರ್ಷಗಳ ನಂತರ ಏಕಕಾಲಕ್ಕೆ ಸರ್ಕಾರ ಪ್ರಕಟಿಸಿದೆ. ಒಟ್ಟು 75 ಸಾಧಕರ ಹೆಸರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗುರುವಾರ ಪ್ರಕಟಿಸಿದೆ. ಹಿರಿಯ ಸಾಹಿತಿ, ನಾ. ಡಿಸೋಜಾ ಅವರನ್ನು ರಾಜ್ಯ ಸರ್ಕಾರ ನೀಡುವ 2023-24ನೇ ಸಾಲಿನ ಪಂಪ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೊದಲ ಬಾರಿಗೆರಾಜ್ಯ ಸರ್ಕಾರ 21 ವಿಭಾಗದ ಸಾಧಕರ ಪಟ್ಟಿಯನ್ನು … Continued

ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ಈಗ ಒಡೆದ ಮನೆ..? ಎಎಪಿ, ಟಿಎಂಸಿ ನಂತ್ರ ಈಗ ಪ್ಲಗ್‌ ಎಳೆಯಲು ನಿತೀಶಕುಮಾರ ತಯಾರಿ..?!

ನವದೆಹಲಿ /ಪಾಟ್ನಾ: ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿಮಾಡಿಕೊಳ್ಳಲು ಒಪ್ಪದೆ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ ನಂತರ ವಿಪಕ್ಷಗಳ ಮೈತ್ರಿಕೂಟವಾದ ಇಂಡಿಯಾ ಬಣದಲ್ಲಿ ಚುನಾವಣೆ ಮೊದಲೇ ಅಲುಗಾಟ ಶುರುವಾಗಿದೆ. ಇಂದು, ಗುರುವಾರ, ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ಮಾರ್ಚ್ 30 ರಂದು ಭಾರತ ಜೋಡಿ … Continued

ವೀಡಿಯೊ..| ರಾಜ್ಯ ರಾಜಕಾರಣದಲ್ಲಿ ಸಂಚಲನ ; ಕಾಂಗ್ರೆಸ್ಸಿಗೆ ಜಗದೀಶ ಶೆಟ್ಟರ ಗುಡ್‌ ಬೈ; ಪುನಃ ಬಿಜೆಪಿ ಸೇರ್ಪಡೆ

ನವದೆಹಲಿ : ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ವಿಧಾನ ಪರಿಷತ್‌ ಸದಸ್ಯ ಜಗದೀಶ ಶೆಟ್ಟರ (Jagadish Shettar) ಬಿಜೆಪಿಗೆ ಪುನಃ ಸೇರ್ಪಡೆಯಾಗಿದ್ದಾರೆ. ಇಂದು ಗುರುವಾರ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರನಾಯಕರನ್ನು ಭೇಟಿ ಮಾಡಿದ ನಂತರ ಬಿಜೆಪಿಗೆ ಮತ್ತೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ … Continued

ವೀಡಿಯೊ…| ಭೀಕರ ಸರಣಿ ಅಪಘಾತದಲ್ಲಿ ಒಂದಕ್ಕೊಂದು ಗುದ್ದಿಕೊಂಡ ನಾಲ್ಕು ವಾಹನಗಳು ; ನಾಲ್ವರು ಸಾವು, 8 ಮಂದಿಗೆ ಗಾಯ

ಧರ್ಮಪುರಿ : ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ತೊಪ್ಪೂರ್ ಘಾಟ್ ರಸ್ತೆಯಲ್ಲಿ ಬುಧವಾರ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದಾರೆ ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ. ಸಿಸಿಟಿವಿ ವೀಡಿಯೊದಲ್ಲಿ ಟ್ರಕ್‌ ಸೇರಿದಂತೆ ನಾಲ್ಕು ವಾಹನಗಳು ಒಂದಕ್ಕೊಂದು ಗುದ್ದಿಕೊಂಡ ನಂತರ ಈ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಟ್ರಕ್ ಮತ್ತೊಂದು ಟ್ರಕ್‌ಗೆ ಡಿಕ್ಕಿ ಹೊಡೆದಿರುವುದನ್ನು … Continued

ಚಿತ್ರದುರ್ಗ : ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಕ್ಕಳು ಸೇರಿ ನಾಲ್ವರು ಸಾವು

ಚಿತ್ರದುರ್ಗ : ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮಕ್ಕಳು ಸೇರಿ ನಾಲ್ಕು ಮಂದಿ ಮೃತಪಟ್ಟ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಸಾಣಿಕೆರೆ ರಾಷ್ಟ್ರೀಯ ಹೆದ್ದಾರಿ ಬಳಿ ನಡೆದಿದೆ ಎಂದು ವರದಿಯಾಗಿದೆ. ಇಂದು, ಶುಕ್ರವಾರ ನಸುಕಿನ ಜಾವ ಅಪಘಾತ ಸಂಭವಿಸಿದ್ದು ಒಂದೇ ಕುಟುಂಬದ ಆರು ಮಂದಿ ಕಾರಿನಲ್ಲಿ ಬೆಂಗಳೂರಿನ ಕಡೆ ಬರುತ್ತಿದ್ದಾಗ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿದೆ … Continued