ವಿಜಯವಾಡ : ರೋಡ್ ಶೋ ವೇಳೆ ಕಲ್ಲೆಸೆತ ; ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿಗೆ ಗಾಯ

ವಿಜಯವಾಡ: ದೇಶಾದ್ಯಂತ ಲೋಕಸಭಾ ಚುನಾವಣೆಯ ಪ್ರಚಾರ ಬಿರುಸು ಪಡೆಯುತ್ತಿರುವಂತೆಯೇ ಆಂಧ್ರ ಪ್ರದೇಶದ ವಿಜಯವಾಡದಲ್ಲಿ ಶನಿವಾರ ಸಂಜೆ ರೋಡ್ ಶೋ ವೇಳೆಯಲ್ಲಿ ದುಷ್ಕರ್ಮಿಗಳು ಕಲ್ಲು ತೂರಿದ್ದರಿಂದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಗಾಯಗೊಂಡಿದ್ದಾರೆ. ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಎಡಗಣ್ಣಿನ ಮೇಲ್ಬಾಗದಲ್ಲಿ ಗಾಯವಾಗಿರುವ ಫೋಟೋ, ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮೇಮಂತ ಸಿದ್ದಂ” ಬಸ್ … Continued

ಇಸ್ರೇಲ್‌-ಇರಾನ್‌ ಉದ್ವಿಗ್ನತೆ ನಡುವೆ 17 ಭಾರತೀಯರಿದ್ದ ಹಡಗನ್ನು ಯುಎಇ ಕರಾವಳಿಯಲ್ಲಿ ವಶಪಡಿಸಿಕೊಂಡ ಇರಾನ್ : ಮೂಲಗಳು

ದುಬೈ: ಹೋರ್ಮುಜ್‌ ಜಲಸಂಧಿಯಲ್ಲಿ ಹಡಗೊಂದರ ಮೇಲೆ ಕಮಾಂಡೊಗಳು ದಾಳಿ ನಡೆಸಿದ್ದು, ಇರಾನ್ ಈ ಕೃತ್ಯ ಎಸಗಿದೆ ಎಂದು ಮಧ್ಯಪ್ರಾಚ್ಯದ ರಕ್ಷಣಾ ಅಧಿಕಾರಿಗಳು ಆರೋಪಿಸಿದ್ದಾರೆ. ಯುಎಇ ಕರಾವಳಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ಗಳು ಶನಿವಾರ ವಶಪಡಿಸಿಕೊಂಡಿದೆ ಎಂದು ಹೇಳಲಾದ ಕಂಟೇನರ್ ಹಡಗಿನಲ್ಲಿದ್ದ 25 ಸಿಬ್ಬಂದಿಯಲ್ಲಿ 17 ಮಂದಿ ಭಾರತೀಯರು ಎಂದು ಮೂಲಗಳು ತಿಳಿಸಿವೆ. ಹೆಲಿಕಾಪ್ಟರ್‌ ಮೂಲಕ ಬಂದ ಕಮಾಂಡೊಗಳು … Continued

‘ಹೆಲ್ತ್ ಡ್ರಿಂಕ್ಸ್‌’ ಪಟ್ಟಿಯಿಂದ ಬೋರ್ನ್‌ವಿಟಾ ತೆಗೆದುಹಾಕುವಂತೆ ಇ-ಕಾಮರ್ಸ್‌ ಕಂಪನಿಗಳಿಗೆ ಕೇಂದ್ರ ಸರ್ಕಾರ ಆದೇಶ

ನವದೆಹಲಿ: ಬೋರ್ನ್‌ವಿಟಾ ಸೇರಿದಂತೆ ಹಲವು ಪಾನೀಯಗಳನ್ನು ‘ಆರೋಗ್ಯ ಪಾನೀಯʼಗಳ (healthy drinks) ವರ್ಗದಿಂದ ತೆಗೆದುಹಾಕುವಂತೆ ಎಲ್ಲಾ ಇ-ಕಾಮರ್ಸ್ ಕಂಪನಿಗಳಿಗೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಏಪ್ರಿಲ್ 10 ರಂದು ಸೂಚನೆ ನೀಡಿದೆ. ಇದು ಯಾವುದೇ ‘ಆರೋಗ್ಯ ಪಾನೀಯ’ ವರ್ಗಕ್ಕೆ ಸೇರುವುದಿಲ್ಲ ಎಂದು ತಿಳಿಸಿದೆ. ಬೋರ್ನ್‌ವೀಟಾ ಸೇರಿದಂತೆ ಇತರ ಕೆಲ ಪಾನೀಯಗಳ ಕುರಿತು ಅಧ್ಯಯನ ನಡೆಸಿರುವ ಮಕ್ಕಳ … Continued

ಬೆಂಗಳೂರು ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬಂಧಿತ ಪ್ರಮುಖ ಆರೋಪಿಗಳು 10 ದಿನ ಎನ್‌ಐಎ ವಶಕ್ಕೆ

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬಾಂಬ್‌ ಇಟ್ಟ ಮುಸ್ಸಾವಿರ್ ಹುಸೇನ್ ಶಾಜಿಬ್ ಮತ್ತು ಸ್ಫೋಟದ ಮಾಸ್ಟರ್ ಮೈಂಡ್ ಅಬ್ದುಲ್ ಮತೀನ್ ತಾಹಾನನ್ನು ನ್ಯಾಯಾಧೀಶರು 10 ದಿನಗಳ ಕಾಲ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಶಕ್ಕೆ ನೀಡಿ ಆದೇಶಿಸಿದ್ದಾರೆ. ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟಗೊಳಿಸಿ ಪಶ್ಚಿಮ ಬಂಗಾಳದ ಕೊಲ್ಕತ್ತಾ ಬಳಿ … Continued

ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಪ್ರಿಲ್​ 18ರ ವರೆಗೆ ಮಳೆ ಸಾಧ್ಯತೆ

ಬೆಂಗಳೂರು : ಕೆಲವು ದಿನಗಳಿಂದ ರಾಜ್ಯದಲ್ಲಿ ಅಲ್ಲಲ್ಲಿ ಮಳೆಯಾಗುತ್ತಿದ್ದು, ಶನಿವಾರ(ಏಪ್ರಿಲ್‌ 13)ದಿಂದ ಏಪ್ರಿಲ್​ 18ರವರೆಗೆ ಆರು ದಿನಗಳ ಕಾಲ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಏಪ್ರಿಲ್ 13 ರಿಂದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬೀದರ, ಬೆಳಗಾವಿ, ಕಲಬುರಗಿ, ರಾಯಚೂರು, ವಿಜಯಪುರ, … Continued

2024- 25ನೇ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಬಿಡುಗಡೆ : ಮೇ 29 ರಿಂದ ಶಾಲೆಗಳು ಪುನರಾರಂಭ

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ 2024- 25 ನೇ ಸಾಲಿನ ಶೈಕ್ಷಣಿಕ ವರ್ಷದ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದ್ದು, ರಾಜ್ಯ ಪಠ್ಯಕ್ರಮದ ಎಲ್ಲ ಸರ್ಕಾರಿ, ಅನುದಾನಿತ, ಖಾಸಗಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಮೇ 29ರಿಂದ ಪುನಾರಂಭಗೊಳ್ಳಲಿವೆ. ಈ ಶೈಕ್ಷಣಿಕ ವರ್ಷದಲ್ಲಿ 18 ದಿನ ದಸರಾ ರಜೆ, 48 ದಿನ ಬೇಸಿಗೆ ರಜೆ, 244 … Continued

‘ಇಂಡಿಯಾ ಮೈತ್ರಿಕೂಟಕ್ಕೆ ಸಂಪೂರ್ಣ ಬಹುಮತ ಸಿಗದೇ ಇರಬಹುದು, ಆದರೆ…’: ಲೋಕಸಭೆ ಚುನಾವಣೆಗೂ ಮುನ್ನ ಸಿಎಂ ಸಿದ್ದರಾಮಯ್ಯ

ಬೆಂಗಳೂರು : 2024ರ ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಪಕ್ಷಗಳ ಇಂಡಿಯಾ ಮೈತ್ರಿಕೂಟಕ್ಕೆ ಸಂಪೂರ್ಣ ಬಹುಮತ ಸಿಗದೇ ಇರಬಹುದು ಎಂದು ಹೇಳಿದ್ದಾರೆ. ಆದರೆ  ಇದೇ ವೇಳೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಕೂಡ ಸಂಪೂರ್ಣ ಬಹುಮತ  ಪಡೆಯುವುದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಆದ್ದರಿಂದ, ಇಂಡಿಯಾ ಮೈತ್ರಿಕೂಟವು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, … Continued

ಸಿಂಹವೂ ಅಲ್ಲ, ಹುಲಿಯೂ ಅಲ್ಲ : ಈ ಪುಟ್ಟ ಪ್ರಾಣಿಯೇ ವಿಶ್ವದ ಅತ್ಯಂತ ನಿರ್ಭೀತ ಪ್ರಾಣಿ…!

ಹುಲಿಗಳು ಮತ್ತು ಸಿಂಹಗಳಂತಹ ಪರಭಕ್ಷಕಗಳು ಕಾಡಿನಲ್ಲಿ ಅತ್ಯಂತ ಅಪಾಯಕಾರಿ ಮತ್ತು ನಿರ್ಭೀತ ಪ್ರಾಣಿಗಳು ಎಂಬುದು ಜನರಲ್ಲಿ ಒಂದು ಸಾಮಾನ್ಯ ಊಹೆಯಾಗಿದೆ. ಆದರೆ, ಸಿಂಹ ಅಥವಾ ಹುಲಿಗಳ ಮೇಲೆ ದಾಳಿ ಮಾಡಲೂ ಹಿಂಜರಿಯದ ಮತ್ತೊಂದು ಪ್ರಾಣಿ ಜೇನು ಬ್ಯಾಡ್ಜರ್. ಇದು ಪ್ರಪಂಚದ ಅತ್ಯಂತ ನಿರ್ಭೀತ ಪ್ರಾಣಿ ಎಂಬ ಖ್ಯಾತಿ ಗಳಿಸಿದೆ. ಅದರ ಸಣ್ಣ ಗಾತ್ರದ ಹೊರತಾಗಿಯೂ, ಈ … Continued

ವಿಜಯಪುರ ; ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ನಾಲ್ವರು ಸಾವು

ವಿಜಯಪುರ: ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿ ಬಳಿ ಸಂಭವಿಸಿದ ಕಾರು ಹಾಗೂ ಸಿಮೆಂಟ್ ಸಾಗಿಸುತ್ತಿದ್ದ ಲಾರಿ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವಿಜಯಪುರದ ಅರ್ಜುನ ಕುಶಾಲ ಸಿಂಗ್ ರಜಪೂತ (32), ಮೇಘರಾಜ ಅರ್ಜುನ ಸಿಂಗ್ ರಜಪೂತ(12), ರವಿನಾಥ ಸುನಿಲಾಲ ಪತ್ತಾರ (52), ಪುಷ್ಪಾ ರವಿನಾಥ ಪತ್ತಾರ ( … Continued

ಸೌದಿ ಜೈಲಿನಲ್ಲಿ 18 ವರ್ಷದಿಂದ ಇರುವ ವ್ಯಕ್ತಿಯ ಬಿಡುಗಡೆಗಾಗಿ ಸಂಗ್ರಹವಾಯ್ತು 34 ಕೋಟಿ ರೂ…!

ಕೋಝಿಕ್ಕೋಡ್ : ಸೌದಿ ಅರೇಬಿಯಾದಲ್ಲಿ 18 ವರ್ಷಗಳಿಂದ ಜೈಲಿನಲ್ಲಿರುವ ಕೋಝಿಕ್ಕೋಡಿನ ಕೋಡಂಪುಳ ಮೂಲದ ಅಬ್ದುಲ್ ರಹೀಮ್ ಬಿಡುಗಡೆಗೆ ನಿಗದಿತ ಸಮಯಕ್ಕಿಂತ ಎರಡು ದಿನ ಮುಂಚಿತವಾಗಿ 34 ಕೋಟಿ ರೂ. ನಿಧಿ ಸಂಗ್ರಹವಾಗಿದೆ. ರಿಯಾದ್‌ನಲ್ಲಿ ಬಂಧಿಯಾಗಿರುವ ಅಬ್ದುಲ್ ರಹೀಮ್ ಬಿಡುಗಡೆಗಾಗಿ ಕೇರಳ ಹಾಗೂ ರಾಜ್ಯದ ಹೊರಗೆ ಅಪಾರ ನಿಧಿ ಸಂಗ್ರಹವಾಯಿತು. ಪ್ರಪಂಚದ ಹಲವು ಭಾಗಗಳಲ್ಲಿರುವ ಮಲಯಾಳಿಗಳು ಅಬ್ದುಲ್ … Continued