ಇಸ್ರೇಲ್‌ ದಾಳಿಯಲ್ಲಿ ಹತನಾದ 4 ತಿಂಗಳ ನಂತರ ಹೊರಹೊಮ್ಮಿದ ಹಮಾಸ್‌ ಮುಖ್ಯಸ್ಥ ಯುದ್ಧ ಭೂಮಿಯಲ್ಲಿ ಮರೆಮಾಚಿಕೊಂಡು ಓಡಾಡುತ್ತಿದ್ದ ವೀಡಿಯೊ…

ಹತ್ಯೆಗೀಡಾದ ಹಮಾಸ್ ಮುಖ್ಯಸ್ಥ ಯಾಹ್ಯಾ ಸಿನ್ವಾರನ ನೋಡಿದ ವೀಡಿಯೊ ತುಣುಕನ್ನು ಶುಕ್ರವಾರ ಪ್ರಕಟಿಸಲಾಗಿದ್ದು, ಇಸ್ರೇಲ್ ಮತ್ತು ಗಾಜಾಪಟ್ಟಿಯಲ್ಲಿ ಉಗ್ರಗಾಮಿ ಗುಂಪಿನ ನಡುವಿನ ಯುದ್ಧದ ಸಮಯದಲ್ಲಿ ಆತ ಯುದ್ಧಭೂಮಿಯಲ್ಲಿ ನಡೆದಾಡುತ್ತಿರುವುದನ್ನು ಮತ್ತು ಗೊತ್ತಾಗದಂತೆ ಮರೆಮಾಚಿಕೊಂಡಿದ್ದನ್ನು ಇದು ತೋರಿಸುತ್ತದೆ.
ಅಲ್ ಜಜೀರಾ ಬಿಡುಗಡೆ ಮಾಡಿದ ದೃಶ್ಯಾವಳಿಗಳು ಸಿನ್ವಾರ್, ಗಾಜಾದ ರಫಾದಲ್ಲಿ ಕೊಲ್ಲಲ್ಪಟ್ಟ ನಾಲ್ಕು ತಿಂಗಳ ನಂತರ ಬೆಳಕಿಗೆ ಬಂದಿವೆ. “ನಾರ್ಥ್‌ (North)” ಎಂಬುದಕ್ಕೆ ಹೀಬ್ರೂ ಪದವು ಕಟ್ಟಡದ ಗೋಡೆಯ ಮೇಲಿನ ಗೀಚುಬರಹವಾಗಿದೆ ಎಂದು ಸೂಚಿಸಿ, ಇದು ಸಿನ್ವಾರ್‌ ಅಲ್ಲಿಗೆ ಬರುವ ಮೊದಲು ಇಸ್ರೇಲಿ ಪಡೆಗಳು ಮನೆಯ ಮೇಲೆ ದಾಳಿ ಮಾಡಿರುವುದನ್ನು ಸೂಚಿಸುತ್ತದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಐಡಿಎಫ್‌ (IDF) ಈ ಪ್ರದೇಶವನ್ನು ತೊರೆದ ನಂತರ ಹಮಾಸ್ ಮುಖ್ಯಸ್ಥ ರಫಾ ಮನೆಯಲ್ಲಿ ಉಳಿಯಲು ಪ್ರಾರಂಭಿಸಿದರು ಎಂದು ಟೈಮ್ಸ್ ಆಫ್ ಇಸ್ರೇಲ್ ಹೇಳಿದೆ.

ಸಿನ್ವಾರ್ ಮಿಲಿಟರಿ ಡ್ರೆಸ್‌ ಧರಿಸಿ ಅದರ ಮೇಲೆ ಕಂಬಳಿ ಹೊದ್ದುಕೊಂಡು ವಾಕಿಂಗ್ ಸ್ಟಿಕ್ ಅನ್ನು ಹಿಡಿದುಕೊಂಡು ಬರುತ್ತಿರುವುದನ್ನು ವೀಡಿಯೊ ತೋರಿಸಿದೆ. ಮತ್ತೊಂದು ದೃಶ್ಯದಲ್ಲಿ ಸಿನ್ವಾರ್ ಪೋಲೋ ಶರ್ಟ್‌ನಲ್ಲಿ ನೆಲದ ಮೇಲೆ ಮಂಡಿಯೂರಿ ನಕ್ಷೆಯಲ್ಲಿ ಸ್ಥಳವನ್ನು ವೀಕ್ಷಿಸುತ್ತಿದ್ದಾರೆ. ಅಲ್ ಜಜೀರಾ ಹಂಚಿಕೊಂಡ ವೀಡಿಯೊವು ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ದಾಳಿಯನ್ನು ಪ್ರಾರಂಭಿಸಲು ಸಿನ್ವಾರ್ ಸಹಿ ಮಾಡಿದ ಆದೇಶವನ್ನು ತೋರಿಸಿದೆ.
ಕತಾರ್ ಮೂಲದ ಅಲ್ ಜಜೀರಾ ನೆಟ್‌ವರ್ಕ್ ಹಮಾಸ್ ಕಾರ್ಯಕರ್ತರೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ ಎಂದು ಇಸ್ರೇಲ್‌ ಪದೇಪದೇ ಮಾಡಿದ ಆರೋಪಗಳ ಮಧ್ಯೆ ಇದು ಬಂದಿದೆ, ಆರು ವರದಿಗಾರರು ಉಗ್ರಗಾಮಿ ಸಂಘಟನೆಗಳ ಸದಸ್ಯರಾಗಿದ್ದಾರೆ ಎಂದು ಇಸ್ರೇಲ್‌ ಆರೋಪಿಸಿದೆ.

ಹಮಾಸ್‌ಗೆ ಸಂಪರ್ಕವಿದೆ ಎಂದು ಆರೋಪಿಸಿ ಅಲ್ ಜಜೀರಾವನ್ನು ದೇಶದಲ್ಲಿ ಇಸ್ರೇಲ್ ನಿಷೇಧಿಸಿದೆ ಮತ್ತು ಪಶ್ಚಿಮ ದಂಡೆಯಲ್ಲಿರುವ ಪ್ಯಾಲೆಸ್ತೀನ್ ಪ್ರಾಧಿಕಾರವು ಉಗ್ರಗಾಮಿಗಳ ವಿರುದ್ಧ ಮಹಮೂದ್ ಅಬ್ಬಾಸ್ ಆಡಳಿತದ ಕ್ರಮದ ಬಗ್ಗೆ ಪ್ರಸಾರ ಮಾಡಿದ್ದಕ್ಕೆ ಅಲ್ ಜಜೀರಾ ನೆಟ್‌ವರ್ಕ್ ಅನ್ನು ಅಮಾನತುಗೊಳಿಸಿದೆ.
ಅಕ್ಟೋಬರ್ 2024 ರಲ್ಲಿ, ಖಾನ್ ಯೂನಿಸ್ ಮೇಲೆ ಭೂಗತ ಸುರಂಗದ ಮೂಲಕ ಸಿನ್ವಾರ್ ಹೋಗುತ್ತಿರುವ ವೀಡಿಯೊವನ್ನು ಐಡುಎಫ್‌ ಬಿಡುಗಡೆ ಮಾಡಿತ್ತು. ಅದರಲ್ಲಿ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಆಹಾರ, ನೀರು, ಬಟ್ಟೆ ಮತ್ತು ಟಿವಿಯ ಚೀಲಗಳನ್ನು ಹೊತ್ತುಕೊಂಡು ತಮ್ಮ ಬಂಕರ್‌ಗೆ ನಡೆದುಕೊಂಡು ಹೋಗುತ್ತಿರುವುದು ಕಂಡುಬಂದಿತ್ತು. ಬಂಕರ್‌ನಲ್ಲಿ ಅಡುಗೆ ಮನೆ, ಶೌಚಾಲಯಗಳು ಮತ್ತು ಶವರ್‌ಗಳು ಇದ್ದವು, ಇದು ಸಿನ್ವಾರ್‌ನ ದೀರ್ಘಕಾಲ ಉಳಿಯುವ ಯೋಜನೆಯನ್ನು ಸೂಚಿಸುತ್ತದೆ ಎಂದು ಇಸ್ರೇಲ್‌ ಹೇಳಿತ್ತು.

ಪ್ರಮುಖ ಸುದ್ದಿ :-   ವೀಡಿಯೊ...| : 21 ಕಿಮೀ ಅರ್ಧ ಮ್ಯಾರಥಾನ್‌ನಲ್ಲಿ ಮಾನವರ ಜೊತೆ ಓಡಿದ ಚೀನಾದ ಮಾನವರೂಪಿ ರೋಬೋಟ್‌ಗಳು...!

ಟೆಲ್ ಅಲ್-ಸುಲ್ತಾನ್‌ ಪ್ರದೇಶದಲ್ಲಿ ಇಸ್ರೇಲಿನ ಐಡಿಎಫ್‌ (IDF) ಡ್ರೋನ್‌ನಿಂದ ಪತ್ತೆಹಚ್ಚುವವರೆಗೂ
ಸಿನ್ವಾರ್ ಒಂದು ವರ್ಷಕ್ಕೂ ಹೆಚ್ಚು ಕಾಲ ಅಡಗಿಕೊಂಡಿದ್ದ.
ಅಕ್ಟೋಬರ್ 18 ರಂದು ಇಸ್ರೇಲ್ ಬಿಡುಗಡೆ ಮಾಡಿದ ದೃಶ್ಯಾವಳಿಗಳು ಅಂತಿಮ ಕ್ಷಣಗಳಲ್ಲಿ ದುರ್ಬಲವಾದ ಸಿನ್ವಾರ್ ಅವರನ್ನು ತೋರಿಸಿತ್ತು. ಗಾಯಗೊಂಡಿದ್ದ ಸಿನ್ವಾರ್‌ ಹಮಾಸ್ ಮುಖ್ಯಸ್ಥ ತನ್ನ ತಲೆಗೆ ಹೊಡೆದ ಗುಂಡೇಟಿನಿಂದ ಸಾಯುವ ಮೊದಲು ಕೊನೆಯ ಪ್ರಯತ್ನದಲ್ಲಿ ಡ್ರೋನ್‌ಗೆ ಕೈಯಲ್ಲಿದ್ದ ವಸ್ತುವನ್ನು ಎಸೆಯುವುದು ವೀಡಿಯೊದಲ್ಲಿ ಕಂಡುಬಂದಿತ್ತು.
ಸಿನ್ವಾರ್‌ ಅವರನ್ನು ಅಕ್ಟೋಬರ್ 7 ರ ದಾಳಿಯ ಮಾಸ್ಟರ್ ಮೈಂಡ್ ಎಂದು ಇಸ್ರೇಲ್ ಆರೋಪಿಸಿದೆ. ಇದು ಇಸ್ರೇಲ್‌ ಇತಿಹಾಸದಲ್ಲಿ ಮಧ್ಯಪ್ರಾಚ್ಯ ಸಂಘರ್ಷಕ್ಕೆ ಕಾರಣವಾಯಿತು. ಮತ್ತು ಪಶ್ಚಿಮ ಮತ್ತು ಇತರ ಪ್ಯಾಲೆಸ್ತೀನ್‌ ಪರ ದೇಶಗಳ ನಡುವೆ ತೀಕ್ಷ್ಣವಾದ ಅಭಿಪ್ರಾಯ ಭೇದಕ್ಕೆ ಕಾರಣವಾಯಿತು.
ಗಾಜಾದಲ್ಲಿ ಅಕ್ಟೋಬರ್ 7, 2023 ರಿಂದ ಯುದ್ಧ ನಡೆಯುತ್ತಿದೆ. ಹಮಾಸ್ ಸದಸ್ಯರು ಮತ್ತು ಅವರ ಮಿತ್ರರು ಗಾಜಾ ಗಡಿಯುದ್ದಕ್ಕೂ ಇಸ್ರೇಲಿ ಪಟ್ಟಣಗಳಲ್ಲಿ ವಿನಾಕಾರಣ ದಾಳಿ ನಡೆಸಿ ಕನಿಷ್ಠ 1,200 ಜನರನ್ನು ಕೊಂದರು ಮತ್ತು 250 ನಾಗರಿಕರು ಮತ್ತು ಸೈನಿಕರನ್ನು ಅಪಹರಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಇಸ್ರೇಲ್ ಭೂ ಕಾರ್ಯಾಚರಣೆಗಳ ಜೊತೆಗೆ ವೈಮಾನಿಕ ದಾಳಿಗಳೊಂದಿಗೆ ಗಾಜಾವನ್ನು ಧ್ವಂಸಗೊಳಿಸಿತು. ಇಸ್ರೇಲಿ ದಾಳಿಯಿಂದ ಗಾಜಾ ಪಟ್ಟಿಯಲ್ಲಿ 47,000 ಕ್ಕೂ ಹೆಚ್ಚು ಸಾವುಗಳಿಗೆ ಸಮಭವಿಸಿವೆ ಎಂದು ಹಮಾಸ್ ಹೇಳಿಕೊಂಡಿದೆ.

ಪ್ರಮುಖ ಸುದ್ದಿ :-   ವೀಡಿಯೊ...| : 21 ಕಿಮೀ ಅರ್ಧ ಮ್ಯಾರಥಾನ್‌ನಲ್ಲಿ ಮಾನವರ ಜೊತೆ ಓಡಿದ ಚೀನಾದ ಮಾನವರೂಪಿ ರೋಬೋಟ್‌ಗಳು...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement