ಏಪ್ರಿಲ್ 8, 9ರಂದು ಗುಜರಾತಿನಲ್ಲಿ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧಿವೇಶನ

ನವದೆಹಲಿ: ಮಂಗಳವಾರ(ಏಪ್ರಿಲ್‌ 8)ದಿಂದ ಗುಜರಾತಿನ ಅಹಮದಾಬಾದ್‌ನಲ್ಲಿ ನಡೆಯಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧಿವೇಶನಕ್ಕೆ ಕಾಂಗ್ರೆಸ್ ಸಜ್ಜಾಗುತ್ತಿದೆ. ಏಪ್ರಿಲ್ 8 ಮತ್ತು 9 ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯಲಿರುವ ಎರಡು ದಿನಗಳ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧಿವೇಶನದಲ್ಲಿ ಕಾಂಗ್ರೆಸ್ 2027 ರಲ್ಲಿ ಗುಜರಾತಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಗುಜರಾತ್‌ನ ಇಬ್ಬರು … Continued

ನಾಳೆ (ಏ.8) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ ; ಈ ವೆಬ್‌ಸೈಟ್‌ಗಳಲ್ಲಿ ರಿಸಲ್ಟ್ ನೋಡಬಹುದು…

ಬೆಂಗಳೂರು: ರಾಜ್ಯದಲ್ಲಿ ದ್ವಿತೀಯ ಪಿಯು ಫಲಿತಾಂಶ ನಾಳೆ (ಏಪ್ರಿಲ್‌  8) ಮಂಗಳವಾರ ಮಧ್ಯಾಹ್ನ 12:30ಕ್ಕೆ ಪ್ರಕಟವಾಗಲಿದೆ. . ಕೆಎಸ್ಇಎಬಿ ಕರ್ನಾಟಕ ಮಂಡಳಿಯ 12ನೇ ತರಗತಿಯ ಪರೀಕ್ಷಾ ಫಲಿತಾಂಶ 2025 ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆಯಾಗಲಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸುದ್ದಿಗೋಷ್ಠಿ ನಡೆಯಲಿದೆ. ನಂತರ ಮಂಗಳವಾರ ಮಧ್ಯಾಹ್ನ 1:30ರ ಬಳಿಕ ವಿದ್ಯಾರ್ಥಿಗಳಿಗೆ ಇಂಟರ್‌ನೆಟ್‌ನಲ್ಲಿ ಫಲಿತಾಂಶ ನೋಡಬಹುದಾಗಿದೆ. … Continued

ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ

ನವದೆಹಲಿ: ಸಬ್ಸಿಡಿ ಮತ್ತು ಸಬ್ಸಿಡಿ ರಹಿತ ಗ್ರಾಹಕರಿಗೆ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು 50 ರೂ. ಹೆಚ್ಚಿಸಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್‌ದೀಪ್ ಸಿಂಗ್ ಪುರಿ ಸೋಮವಾರ ಪ್ರಕಟಿಸಿದ್ದಾರೆ. ಈ ಹೆಚ್ಚಳವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (ಪಿಎಂಯುವೈ) ಫಲಾನುಭವಿಗಳು ಮತ್ತು ಫಲಾನುಭವಿಗಳಲ್ಲದವರಿಗೆ ಅನ್ವಯಿಸುತ್ತದೆ. ಪರಿಷ್ಕೃತ ಬೆಲೆಗಳು ಏಪ್ರಿಲ್ 8 ರಿಂದ ಜಾರಿಗೆ ಬರಲಿವೆ. “ಪಿಎಂಯುವೈ … Continued

ವೀಡಿಯೊ..| ಬಾಯಾರಿದ್ದ ಚಿರತೆಗಳಿಗೆ ಬಹಳ ಹತ್ತಿರ ಹೋಗಿ ನೀರು ಕುಡಿಸಿದ ತಪ್ಪಿಗೆ ಕೆಲಸ ಕಳೆದುಕೊಂಡ ರಾಷ್ಟ್ರೀಯ ಉದ್ಯಾನವನದ ಸಿಬ್ಬಂದಿ..!

ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ (ಕೆಎನ್‌ಪಿ) ಚಿರತೆ ಮತ್ತು ಅದರ ಮರಿಗಳಿಗೆ ನೀರು ನೀಡುತ್ತಿರುವ ವೈರಲ್ ವೀಡಿಯೊದಲ್ಲಿ ಕಾಣಿಸಿಕೊಂಡ ಚಾಲಕನ ವಿರುದ್ಧ ಅಧಿಕೃತ ಶಿಸ್ತು ಕ್ರಮ ಕೈಗೊಳ್ಳಲಾಗಿದ್ದು, ನಂತರ ಆತನನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಅರಣ್ಯ ಇಲಾಖೆಯಲ್ಲಿ ಚಾಲಕನಾಗಿದ್ದ ಈತ ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ನಮೀಬಿಯಾದಿಂದ ತರಲಾಗಿದ್ದ ಚೀತಾಗಳಲ್ಲಿ ಒಂದಾದ ಜ್ವಾಲಾ ಮತ್ತು ಅದರ ನಾಲ್ಕು … Continued

ಭಾರತ ಸೇರಿ 14 ದೇಶಗಳಿಗೆ ತಾತ್ಕಾಲಿಕವಾಗಿ ವೀಸಾ ಸ್ಥಗಿತಗೊಳಿಸಿದ ಸೌದಿ ಸೌದಿ ಅರೇಬಿಯಾ

ರಿಯಾದ್‌: ಈ ಬಾರಿ ಹಜ್‌ ಯಾತ್ರೆ ಸಮೀಪಿಸುತ್ತಿದ್ದಂತೆ ಸೌದಿ ಅರೇಬಿಯಾವು ಭಾರತ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಸೇರಿದಂತೆ 14 ದೇಶಗಳ ನಾಗರಿಕರಿಗೆ ವೀಸಾ ನೀಡುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಸರಿಯಾದ ನೋಂದಣಿ ಹಾಗೂ ದಾಖಲೆ ಇಲ್ಲದ ವ್ಯಕ್ತಿಗಳು ಹಜ್ ಯಾತ್ರೆ ಮಾಡಲು ಪ್ರಯತ್ನಿಸುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಭಾರತ, ಪಾಕಿಸ್ತಾನ, ಬಾಂಗ್ಲಾದೇಶ, ಈಜಿಪ್ಟ್, … Continued

ಟ್ರಂಪ್ ಸುಂಕದ ಹೊಡೆತಕ್ಕೆ ಕಂಗೆಟ್ಟ ಶೇರು ಮಾರುಕಟ್ಟೆ ; ಕರಗಿಹೋದ ಹೂಡಿಕೆದಾರರ 20.16 ಲಕ್ಷ ಕೋಟಿ ರೂ.ಸಂಪತ್ತು…!

ಮುಂಬೈ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪ್ರತಿ ಸುಂಕಗಳು ಜಗತ್ತಿನಾದ್ಯಂತ ಹಣಕಾಸು ವ್ಯವಸ್ಥೆಯಲ್ಲಿ ಅವ್ಯವಸ್ಥೆಯನ್ನು ಉಂಟುಮಾಡಿದ್ದು, ಭಾರತೀಯ ಶೇರು ಮಾರುಕಟ್ಟೆಗಳನ್ನು 10 ತಿಂಗಳಲ್ಲೇ ಅತಂತ್ಯ ಕಡಿಮೆ ಮಟ್ಟಕ್ಕೆ ಕುಸಿದಿದೆ. ಮತ್ತು 10 ಸೆಕೆಂಡುಗಳಲ್ಲಿ 20 ಲಕ್ಷ ಕೋಟಿ ರೂ.ಗಳ ಹೂಡಿಕೆದಾರರ ಸಂಪತ್ತನ್ನು ಕರಗಿಸಿ ಹಾಕಿದೆ. ಸೋಮವಾರ ಬೆಳಿಗ್ಗೆ ಸೆನ್ಸೆಕ್ಸ್ ಸುಮಾರು 4,000 ಪಾಯಿಂಟ್‌ಗಳ ಕುಸಿತ … Continued

ಮೈ ಜುಂ ಎನ್ನುವ ವೀಡಿಯೊ..| ವಾಹನ ದಟ್ಟಣೆ ರಸ್ತೆಯಲ್ಲಿ ಲಾರಿ-ಕಾರುಗಳ ಮಧ್ಯೆ ಒಮ್ಮೆಲೇ ಆಗಸದಿಂದ ಇಳಿದ ವಿಮಾನ…!

ಎಂಜಿನ್ ನಲ್ಲಿ ತೊಂದರೆ ಕಾಣಿಸಿಕೊಂಡ ನಂತರ ವಿಮಾನವೊಂದನ್ನು ವಾಹನ ನಿಬಿಡ ರಸ್ತೆಯಲ್ಲಿ ಕಾರುಗಳು ಮತ್ತು ಲಾರಿಗಳ ನಡುವೆ ವಿಮಾನವನ್ನು ತುರ್ತಾಗಿ ಇಳಿಸಿದ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ. ಲಘು ವಿಮಾನದ ಹಿಂದೆ ಪ್ರಯಾಣಿಸುತ್ತಿದ್ದ ವಾಹನ ಚಾಲಕರು ಇದನ್ನು ಚಿತ್ರೀಕರಣ ಮಾಡಿದ್ದಾರೆ. ಅನೇಕ ವಾಃನ ಚಾಲಕರು ವಿಮಾನವು ಇಳಿಯುವಾಗ ವಾಹನಗಳಿಗೆ ಡಿಕ್ಕಿ ಹೊಡೆಯಲಿದೆ ಎಂದು ಭಯಪಟ್ಟರು. ಆದರೆ ಇಂತಹ … Continued

ವಿಶ್ವದ ಅತ್ಯಂತ ದುಬಾರಿ ಕಾರಿನ ಬೆಲೆ 100 ಕೋಟಿ ರೂ..200 ಕೋಟಿ ರೂ…ಅಲ್ವೇ ಅಲ್ಲ, ಅದಕ್ಕಿಂತ ಹೆಚ್ಚು..! ಟಾಪ್‌ 10 ದುಬಾರಿ ಕಾರುಗಳ ಪಟ್ಟಿ

ಐಷಾರಾಮಿ ಆಟೋಮೊಬೈಲ್‌ಗಳ ಜಗತ್ತಿನಲ್ಲಿ, ಕೆಲವು ಕಾರುಗಳು ವಿನ್ಯಾಸ, ವೇಗ ಮತ್ತು ವೈಶಿಷ್ಟ್ಯಗಳು ಅವುಗಳನ್ನು ಅತ್ಯಂತ ದುಬಾರಿ ಕಾರುಗಳ ಸಾಲಿನಲ್ಲಿ ನಿಲ್ಲಿಸುತ್ತವೆ. ಈ ಕಾರುಗಳು ಕೇವಲ ಸಾರಿಗೆ ಬಳಕೆಗಷ್ಟೇ ಅಲ್ಲ, ಇವುಗಳಲ್ಲಿ ಕೊಳ್ಳುವವರ ಪ್ರತಿಷ್ಠೆಯೂ ಇರುತ್ತದೆ. ಈ ಇಂಜಿನಿಯರಿಂಗ್ ಅದ್ಭುತಗಳ ಕಾರುಗಳನ್ನು ಸಾಮಾನ್ಯವಾಗಿ ಸೀಮಿತ ಆವೃತ್ತಿಗಳಲ್ಲಿ ಹೊರತರುವುದರಿಂದ ಆಯ್ದ ಕೆಲವರು ಮಾತ್ರ ಅದನ್ನು ಖರೀದಿಸಬಹುದು. ಜಾಗತಿಕ ಮಾರುಕಟ್ಟೆಯಲ್ಲಿ … Continued

ನಕಲಿ ಶಸ್ತ್ರಚಿಕಿತ್ಸಕನಿಂದ ಹೃದಯ ಶಸ್ತ್ರಚಿಕಿತ್ಸೆ ನಂತರ 7 ಸಾವು..? ; ತನಿಖೆ ಪ್ರಾರಂಭ

ದಾಮೋಹ್: ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯ ಮಿಷನರಿ ಆಸ್ಪತ್ರೆಯಲ್ಲಿ ನಕಲಿ ಹೃದ್ರೋಗ ತಜ್ಞರಿಂದ ಚಿಕಿತ್ಸೆ ಪಡೆದ ಏಳು ಜನರು ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದ್ದು, ಈ ಬಗ್ಗೆ ತನಿಖೆಯನ್ನು ಪ್ರಾರಂಭಿಸಲು ರಾಷ್ಟ್ರೀಯ ಮಾನವ ಹಕ್ಕು ಆಯೋಗ (NHRC) ಮುಂದಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ತಂಡವು ಏಪ್ರಿಲ್ … Continued

ವೀಡಿಯೊ…| ಬೆಂಗಳೂರಿನ ಬೀದಿಯಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ; ನಂತರ ಪರಾರಿ

ಬೆಂಗಳೂರು : ನಡು ರಸ್ತೆಯಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಂಗಳೂರಿನ ಬಿಟಿಎಂ ಲೇಔಟ್ ಪ್ರದೇಶದಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಈ ಘಟನೆಯ ವೀಡಿಯೊ ಕೂಡ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ವ್ಯಕ್ತಿಯೊಬ್ಬ ಇಬ್ಬರು ಮಹಿಳೆಯರನ್ನು ಹಿಂಬಾಲಿಸಿ ಹತ್ತಿರ ಬರುವುದನ್ನು ವೀಡಿಯೊ ತೋರಿಸುತ್ತದೆ, ಆತ ಅವರಲ್ಲಿ ಒಬ್ಬರನ್ನು ತಬ್ಬಿಕೊಳ್ಳಲು ಹಿಡಿದುಕೊಂಡಿದ್ದು ಕ್ಷಣಗಳ ನಂತರ ಓಡಿಹೋಗಿದ್ದಾನೆ. ಘಟನೆ … Continued