ವೀಡಿಯೊ…| ಭಾರತದ ದಾಳಿಯಲ್ಲಿ ಸತ್ತ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಪಾಕಿಸ್ತಾನ ಸೇನೆ ಭಾಗಿ ; ಉಗ್ರರ ಶವಗಳ ಮೇಲೆ ಪಾಕ್‌ ಧ್ವಜ…!

ಲಾಹೋರ್‌: ಪಹಲ್ಗಾಮ್‌ ಉಗ್ರರ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಕ್ಯಾಂಪ್‌ಗಳ ಮೇಲೆ ಭಾರತ ನಡೆಸಿದ ಆಪರೇಷನ್ ಸಿಂಧೂರ(Operation Sindoor) ಹೆಸರಿನ ವಾಯು ದಾಳಿಯಲ್ಲಿ ಹತರಾದ ಹಲವಾರು ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಬುಧವಾರ ಪಾಕಿಸ್ತಾನ ಸೇನಾ ಸಿಬ್ಬಂದಿ ಮತ್ತು ನಿಷೇಧಿತ ಹಫೀಜ್ ಸಯೀದ್ ಜಮಾತ್-ಉದ್-ದವಾ (JDU) ಸದಸ್ಯರು ಭಾಗವಹಿಸಿದ್ದರು. ಭಾರತದ ಸಶಸ್ತ್ರ ಪಡೆಗಳು … Continued

ಟೆಸ್ಟ್‌ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ರೋಹಿತ್‌ ಶರ್ಮಾ

ನವದೆಹಲಿ : ಭಾರತದ ತಂಡದ ನಾಯಕ ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ್ದಾರೆ. ಬುಧವಾರ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದ ಅವರು, ಏಕದಿನ ಮಾದರಿಯಲ್ಲಿ ಮಾತ್ರ ಆಡುವುದಾಗಿ ಸ್ಪಷ್ಟಪಡಿಸಿದ್ದಾರೆ. 2024 ರ ಟಿ20 ವಿಶ್ವಕಪ್ ನಂತರ ರೋಹಿತ್ ಶರ್ಮಾ ಟಿ20 ಸ್ವರೂಪದ ಅಂತಾರಾಷ್ಟ್ರೀಯ ಪಂದ್ಯಗಳಿಂದ ನಿವೃತ್ತರಾಗಿದ್ದರು. ಆಸ್ಟ್ರೇಲಿಯಾದಲ್ಲಿ ನಡೆದ 2024-25ರ … Continued

ಪಾಕಿಸ್ತಾನ, ಪಾಕ್‌ ಆಕ್ರಮಿತ ಕಾಶ್ಮೀರದ ಭಯೋತ್ಪಾದಕ ಶಿಬಿರಗಳ ಮೇಲಿನ ಕ್ಷಿಪಣಿ ದಾಳಿಗಳ ವೀಡಿಯೊ ಹಂಚಿಕೊಂಡ ಭಾರತೀಯ ಸೈನ್ಯ | ವೀಕ್ಷಿಸಿ

ನವದೆಹಲಿ: ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಒಂಬತ್ತು ಭಯೋತ್ಪಾದಕ ಶಿಬಿರಗಳ ಮೇಲೆ ಬುಧವಾರ ಬೆಳಗಿನ ಜಾವ ನಡೆಸಿದ ದಾಳಿಯ ವೀಡಿಯೊಗಳನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ಇದು ಲಷ್ಕರ್-ಎ-ತೈಬಾ ಮತ್ತು ಜೈಶ್-ಎ-ಮೊಹಮ್ಮದ್‌ನಂತಹ ಭಯೋತ್ಪಾದಕ ಗುಂಪುಗಳು ಭಯೋತ್ಪಾದಕರ ತರಬೇತಿಗೆ ಬಳಸುತ್ತಿದ್ದ ಸ್ಥಳಗಳ ಮೇಲೆ ನಿಖರವಾದ ದಾಳಿಗಳನ್ನು ನಡೆಸಿದೆ. ದಾಳಿಯ ನಂತರ, ಭಾರತೀಯ ಸೇನೆಯ ಅಧಿಕೃತ ಹ್ಯಾಂಡಲ್ … Continued

ಭಾರತದ ದಾಳಿಯಲ್ಲಿ ಉಗ್ರ ಸಂಘಟನೆ ಜೈಷ್ ಮುಖ್ಯಸ್ಥ-ಮುಂಬೈ ದಾಳಿ ಮಾಸ್ಟರ್‌ ಮೈಂಡ್‌ ಮಸೂದ್ ಅಜರ್ 10 ಸಂಬಂಧಿಗಳ ಸಾವು

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತ ನಡೆಸಿದ ವಾಯುದಾಳಿಯಲ್ಲಿ ತನ್ನ ಕುಟುಂಬದ 10 ಸದಸ್ಯರು ಮತ್ತು ತನ್ನ ನಾಲ್ವರು ಸಹಾಯಕರು ಸಾವಿಗೀಡಾಗಿದ್ದಾರೆ ಎಂದು ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಹಾಗೂ ಮುಂಬೈ ಭಯೋತ್ಪಾದಕ ದಾಳಿಯ ಮಾಸ್ಟರರ ಮೈಂಡ್‌ ಮೌಲಾನಾ ಮಸೂದ್ ಅಜರ್ ಹೇಳಿಕೊಂಡಿದ್ದಾನೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ … Continued

ವೀಡಿಯೊಗಳು..| ಭಾರತದ ವಾಯು ದಾಳಿಯಲ್ಲಿ ಮುಂಬೈ ದಾಳಿ ಮಾಸ್ಟರ್‌ ಮೈಂಡ್‌ ಮಸೂದ್‌ ಅಜರ್‌ ಮದರಸಾ ಧ್ವಂಸ ; ಉಗ್ರ ಅಜ್ಮಲ್‌ ಕಸಬ್‌ ತರಬೇತಿ ಪಡೆದಿದ್ದ ಉಗ್ರರ ನೆಲೆ ಉಡೀಸ್‌

ನವದೆಹಲಿ: 26 ಜನರನ್ನು ಕೊಂದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಬುಧವಾರ ರಾತ್ರಿ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ದಾಳಿ ನಡೆಸಿದೆ. 9 ಉಗ್ರರ ನೆಲೆಗಳನ್ನು ಗುರಿಯಾಗಿಸಿ ಬರೋಬ್ಬರಿ 24 ಕ್ಷಿಪಣಿ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿಸುಮಾರು 80ಕ್ಕೂ ಹೆಚ್ಚು ಭಯೋತ್ಪಾದಕರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ. ದಾಳಿಯಲ್ಲಿ ಜೈಶ್‌ … Continued

ಆಪರೇಷನ್ ಸಿಂಧೂರ್‌ ; ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತ ದಾಳಿ ; ಹ್ಯಾಮರ್, ಸ್ಕಲ್ಪ್ ಶಸ್ತ್ರಾಸ್ತ್ರಗಳ ಬಳಕೆ

 ನವದೆಹಲಿ: ಬುಧವಾರ ಬೆಳಗಿನ ಜಾವ, ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (POK) ದಾದ್ಯಂತ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡು ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಆಪರೇಷನ್ ಸಿಂಧೂರ್ ಎಂಬ ಸಂಕೇತನಾಮ ಹೊಂದಿರುವ ಈ ಕಾರ್ಯಾಚರಣೆಯಲ್ಲಿ ವಾಯು, ನೌಕಾ ಮತ್ತು ಭೂ ಸೇನೆಗಳ ತ್ರಿವಳಿಗಳ ನಿಯೋಜನೆ ಸೇರಿತ್ತು. 2019 ರಲ್ಲಿ ಬಾಲಕೋಟ್ ಕಾರ್ಯಾಚರಣೆಯ ನಂತರ ಭಾರತ ನಡೆಸಿದ … Continued

ವೀಡಿಯೊಗಳು..| ಆಪರೇಶನ್‌ ಸಿಂಧೂರ್‌ : ಪಾಕಿಸ್ತಾನ, ಪಿಒಕೆಯ 9 ಭಯೋತ್ಪಾಕರ ನೆಲೆ ಮೇಲೆ ಭಾರತ ಸೇನೆಯಿಂದ ಕ್ಷಿಪಣಿ ದಾಳಿ, 80ಕ್ಕೂ ಹೆಚ್ಚು ಉಗ್ರರು ಸಾವು..?

ನವದೆಹಲಿ: ಪಹಲ್ಗಾಮ್ ಉಗ್ರ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದ 9 ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದೆ. ಇದಕ್ಕೆ ʼಆಪರೇಷನ್ ಸಿಂಧೂರ್ʼ (‌Operation Sindoor) ಎಂದು ಹೆಸರಿಡಲಾಗಿದೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕರ ತಾಣಗಳ ಮೇಲೆ ಬುಧವಾರ ಬೆಳಗಿನ ಜಾವ ಭಾರತ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಆರಂಭಿಸಿದೆ ಎಂದು ರಕ್ಷಣಾ ಸಚಿವಾಲಯ … Continued

ಮದುವೆಯಲ್ಲಿ ತಂದೂರಿ ರೊಟ್ಟಿ ವಿಚಾರಕ್ಕೆ ಹೊಡೆದಾಟ : ಇಬ್ಬರು ಹುಡುಗರ ಕೊಲೆ, 6 ಜನರ ಬಂಧನ

ಅಮೇಥಿ: ಅಮೇಥಿ ಜಿಲ್ಲೆಯಲ್ಲಿ ಮದುವೆಯ ಹಬ್ಬದ ಸಂದರ್ಭದಲ್ಲಿ ತಂದೂರಿ ರೊಟ್ಟಿ ನೀಡುವ ವಿಚಾರದಲ್ಲಿ ನಡೆದ ಮಾತಿನ ಚಕಮಕಿ ಹಿಂಸಾಚಾರಕ್ಕೆ ತಿರುಗಿ, ಓರ್ವ ಅಪ್ರಾಪ್ತ ವಯಸ್ಕ ಸೇರಿದಂತೆ ಇಬ್ಬರು ಸಾವಿಗೀಡಾಗಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಈ ಸಾವುಗಳಿಗೆ ಸಂಬಂಧಿಸಿದಂತೆ ಇದುವರೆಗೆ ಆರು ಜನರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮೇ 3 ರ ರಾತ್ರಿ ಸರೈ … Continued