ಕಾಂಗ್ರೆಸ್-ಎಸ್‌ಪಿ ಬಿಕ್ಕಟ್ಟು ಇನ್ನಷ್ಟು ತೀವ್ರ ; ಅಖಿಲೇಶ ನೀಡುವ ಸ್ಥಾನಗಳಿಗೆ ಕಾಂಗ್ರೆಸ್‌ ಭಿಕ್ಷೆ ಬೇಡುವ ಪಕ್ಷವಲ್ಲ : ಇಮ್ರಾನ್‌ ಮಸೂದ್‌ ಕಿಡಿ

ನವದೆಹಲಿ: 2027ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ನಡುವಿನ ಸ್ಥಾನ ಹಂಚಿಕೆ ಮಾತುಕತೆಗೆ ಮತ್ತೊಂದು ಹಿನ್ನಡೆ ಎದುರಾಗಿದೆ. ಮಾತುಕತೆ ಇನ್ನೂ ಪ್ರಗತಿಯಲ್ಲಿರುವಾಗಲೇ ಸಮಾಜವಾದಿ ಪಕ್ಷ ಐವರು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿರುವುದಕ್ಕೆ ಕಾಂಗ್ರೆಸ್‌ ಸಂಸದ ಇಮ್ರಾನ್‌ ಮಸೂದ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕಾಂಗ್ರೆಸ್‌ ಪಕ್ಷವು ಅಖಿಲೇಶ … Continued

ತಿರುಪ್ಪರಂಕುಂದ್ರಂ ಬೆಟ್ಟದ ದೀಪಸ್ತಂಭದಲ್ಲಿ ದೀಪ ಬೆಳಗದ ವಿಚಾರ ; ಸುಪ್ರೀಂ ಕೋರ್ಟ್‌ನಲ್ಲಿ ತಮಿಳುನಾಡು ಸರ್ಕಾರ ಕ್ಷಮೆಯಾಚನೆ

ನವದೆಹಲಿ: ಮಧುರೈನ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ ವಿವಾದಿತ ದೀಪಸ್ತಂಭದಲ್ಲಿ (ದೀಪತ್ತೂನ್) ನವೆಂಬರ್ 24ರಂದು ಸಾಂಪ್ರದಾಯಿಕ ದೀಪ ಬೆಳಗದೆ ಇರುವುದಕ್ಕೆ ತಮಿಳುನಾಡು ಸರ್ಕಾರ ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಕ್ಷಮೆಯಾಚಿಸಿದೆ. ದೀಪ ಬೆಳಗಿಸುವ ಕಾರ್ಯಕ್ಕಾಗಿ ಉದ್ದೇಶಿಸಲಾಗಿದ್ದ ತಂಡಕ್ಕೆ ದೇವಾಲಯದ ಆಡಳಿತ ಮಂಡಳಿಯ ಟ್ರಸ್ಟಿಗಳು ಅನುಮತಿ ನೀಡದ ಕಾರಣ ಸುಪ್ರೀಂ ಕೋರ್ಟ್‌ನ ಆದೇಶವನ್ನು ಜಾರಿಗೊಳಿಸಲು ಸಾಧ್ಯವಾಗಲಿಲ್ಲ ಎಂದು ರಾಜ್ಯ ಸರ್ಕಾರ … Continued

ವಿನಯ ಕುಲಕರ್ಣಿಗೆ ಬಿಗ್ ಶಾಕ್ ; ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್, 2 ವಾರದಲ್ಲಿ ಶರಣಾಗಲು ಸೂಚನೆ

ನವದೆಹಲಿ: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರಿಗೆ ಸುಪ್ರೀಂ ಕೋರ್ಟ್ ಜಾಮೀನು ರದ್ದು ಮಾಡಿದೆ. ಹಾಗೂ   ವಾರಗಳ ಒಳಗಾಗಿ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಶರಣಾಗುವಂತೆ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಪ್ರಶಾಂತಕುಮಾರ ಮಿಶ್ರಾ ಮತ್ತು ಚಂದ್ರಶೇಖರ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್ ಪೀಠ ಈ ಮಹತ್ವದ ಆದೇಶ … Continued

ಭಾರತ ಸೇರಿದಂತೆ 16 ದೇಶಗಳ ಮೇಲೆ ಮತ್ತೆ ಸುಂಕ ವಿಧಿಸಲು ಅಮೆರಿಕ ಸಿದ್ಧತೆ

ವಾಷಿಂಗ್ಟನ್: ಭಾರತ ಸೇರಿದಂತೆ ವಿಶ್ವದ 16 ಪ್ರಮುಖ ರಾಷ್ಟ್ರಗಳ ಮೇಲೆ ಅಮೆರಿಕ ಮತ್ತೊಮ್ಮೆ ಆಮದು ಸುಂಕ ವಿಧಿಸಲು ಸಿದ್ಧತೆ ನಡೆಸಿದೆ. ಬೇರೆ ದೇಶಗಳ ಸರ್ಕಾರಗಳು ತಮ್ಮ ತಮ್ಮ ದೇಶದ ಕೈಗಾರಿಕೆಗಳಿಗೆ ಹೆಚ್ಚಿನ ಆರ್ಥಿಕ ನೆರವು ಮತ್ತು ಸಬ್ಸಿಡಿ ನೀಡುತ್ತಿರುವುದರಿಂದ ಅಮೆರಿಕದ ಕಂಪನಿಗಳಿಗೆ ನಷ್ಟವಾಗುತ್ತಿದೆ ಎಂಬುದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ಆರೋಪ. ಈ ಕಾರಣಕ್ಕೆ ಹೊಸ … Continued

ಭಾರತದಲ್ಲಿ ಚಿನ್ನದ ಆಮದು ಶೇ. 40ರಷ್ಟು ಕುಸಿತ, ದರವೂ ಕುಸಿತ ; ಮೋದಿ ಮನವಿಗೆ ಜನರು ಸ್ಪಂದಿಸಿದ್ದು ಕಾರಣ ?

ನವದೆಹಲಿ: ಭಾರತದಲ್ಲಿ ಚಿನ್ನದ ಆಮದು ಪ್ರಮಾಣದಲ್ಲಿ ಈ ವರ್ಷದ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗಿನ ಏಳು ತಿಂಗಳ ಅವಧಿಯಲ್ಲಿ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸುಮಾರು ಶೇ. 40ರಷ್ಟು ಭಾರಿ ಇಳಿಕೆಯಾಗಿದೆ. ಈ ಅವಧಿಯಲ್ಲಿ ಭಾರತ 24.7 ಬಿಲಿಯನ್ ಡಾಲರ್ (ಅಂದಾಜು 2.47 ಲಕ್ಷ ಕೋಟಿ ರೂ.) ಮೌಲ್ಯದ ಚಿನ್ನವನ್ನು ಆಮದು ಮಾಡಿಕೊಂಡಿದೆ ಎಂದು ಚೇಂಬರ್ ಆಫ್ … Continued