ಕೊರೋನಾ ಅಂತ್ಯಕಾಲ ಎಂದು ಘೋಷಿಸಲಿದೆ ಥೈಲ್ಯಾಂಡ್

ಕೊರೋನಾ ಅಂತ್ಯಕಾಲ ಎಂದು ಈ ವರ್ಷಾಂತ್ಯದೊಳಗೆ ಘೋಷಿಸಲು ಥೈಲ್ಯಾಂಡ್ ಸರ್ಕಾರ ನಿರ್ಧರಿಸಿದೆ. ಅಲ್ಲದೆ ಅಲ್ಲಿಯ ಕೋವಿಡ್ ನಿಯಮಾವಳಿಗಳನ್ನು ತಿದ್ದುಪಡಿ ಮಾಡಲು ಸಿದ್ಧತೆ ನಡೆಸಿದೆ. ಈ ಮೂಲಕ ಜನಜೀವನ ಕೋವಿಡ್ ಪೂರ್ವ ಹಂತಕ್ಕೆ ಮರಳಲು ಅನುವು ಮಾಡಿಕೊಡಲಿದೆ. ತಮಗೆ ಬಂದ ಮಾಹಿತಿ, ಅಧ್ಯಯನ ವರದಿಗಳಿಂದ 2022ರ ಕೊನೆಯಲ್ಲಿ ಕೋವಿಡ್-19 ಪ್ರಸರಣ ಅಂತ್ಯವಾಗಬಹುದು. ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಲಿ … Continued

ಹೊಸ ವೈರಸ್ ನಿಯೋಕೋವ್ ಅಪಾಯಕಾರಿಯೇ?

ಬೀಜಿಂಗ್: ದಕ್ಷಿಣ ಆಫ್ರಿಕಾದಲ್ಲಿ ಕೋವಿಡ್-19ಗಿಂತ ಅಪಾಯಕಾರಿಯಾದ ವೈರಸ್ ಕಾಣಿಸಿಕೊಂಡಿದೆ ಎಂದು ಚೀನಾದ ವಿಜ್ಞಾನಿಗಳು ಹೇಳಿದ್ದಾರೆ. ನಿಯೋಕೋವ್ ಹೆಸರಿನ ಈ ವೈರಸ್ ಸದ್ಯ ಬಾವಲಿಗಳಲ್ಲಿ ಮಾತ್ರ ಕಾಣಿಸಿಕೊಂಡಿದೆ, ಮನುಷ್ಯನಿಗೆ ಹಬ್ಬಿಲ್ಲ ಎಂದು ಹೇಳಿದ್ದಾರೆ. ಆದರೆ ರೂಪಾಂತರಗೊಳ್ಳುವ ಮತ್ತು ಮನುಷ್ಯನಿಗೆ ಸೋಂಕು ಬರುವ ಎಲ್ಲ ಸಾಧ್ಯತೆಗಳಿವೆ ಎಂದು ಎಚ್ಚರಿಸಿದ್ದಾರೆ. ಆದರೆ ಭಾರತೀಯ ವಿಜ್ಞಾನಿಗಳು, ವೈದ್ಯರು, ಈ ವೈರಸ್ ಬಗ್ಗೆ … Continued

ಗೋವಾ- ಶೇ. 53 ಮರಣ ಲಸಿಕೆ ಪಡೆಯದವರು

ಪಣಜಿ: ಗೋವಾ ರಾಜ್ಯದಲ್ಲಿ ಮೂರನೇ ಅಲೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟವರಲ್ಲಿ ಶೇ. 53 ಜನರು ಲಸಿಕೆ ಪಡೆದಿರಲಿಲ್ಲ ಎಂದು ಗೋವಾ ಆರೋಗ್ಯ ಇಲಾಖೆ ಹೇಳಿದೆ. ಮೂರನೇ ಅಲೆಯಲ್ಲಿ ಈ ವರೆಗೆ 91 ಜನರು ಮೃತಪಟ್ಟಿದ್ದು, 49 ಜನರು ಲಸಿಕೆ ಪಡೆಯದವರಾಗಿದ್ದಾರೆ ಎಂದು ಹೇಳಿದೆ. ಎರಡನೇ ಅಲೆಯಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಿತ್ತು. ಶೇ. 75 ಜನರು … Continued

ಎಲೆಕ್ಟ್ರಾನಿಕ್ ವಸ್ತು ರಫ್ತು ಡಿಸೆಂಬರ್ ತಿಂಗಳಲ್ಲಿ ಶೇ. 33 ಹೆಚ್ಚಳ

ನವದೆಹಲಿ: ಭಾರತದಿಂದ ಎಲೆಕ್ಟ್ರಾನಿಕ್ ವಸ್ತುಗಳ ರಫ್ತು ಡಿಸೆಂಬರ್ ತಿಂಗಳಲ್ಲಿ ಶೇ. 33ರಷ್ಟು ಹೆಚ್ಚಳವಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಹೇಳಿದೆ. ಡಿಸೆಂಬರ್ ತಿಂಗಳಲ್ಲಿ 1.67 ಬಿಲಿಯನ್ ಯುಎಸ್ ಡಾಲರ್ ಮೊತ್ತದ ವಹಿವಾಟ ದಾಖಲಾಗಿದೆ. ಅದರಲ್ಲಿ ಮೊಬೈಲ್ ಫೋನ್ ವಿಭಾಗದಲ್ಲೇ ಗರಿಷ್ಠ ರಫ್ತು ಆಗಿದೆ. ಅಲ್ಲದೆ ಲ್ಯಾಪ್ ಟಾಪ್, ಟ್ಯಾಬ್ಲೆಟ್, ಟಿವಿ, ಆಡಿಯೋ ಉಪಕರಣಗಳು, ಕೈಗಾರಿಕೆಗೆ ಸಂಬಂಧಿಸಿದ … Continued

ವೈನ್ ಮದ್ಯವಲ್ಲ, ವೈನ್ ಮಾರಾಟ ಹೆಚ್ಚಾದರೆ ರೈತರಿಗೆ ಲಾಭ

ಮುಂಬೈ: ವೈನ್ ಮದ್ಯವಲ್ಲ, ವೈನ್ ಮಾರಾಟ ಹೆಚ್ಚಿದರೆ ರೈತರಿಗೆ ಹೆಚ್ಚಿನ ಲಾಭ ಬರುತ್ತದೆ ಎಂದು ಶಿವಸೇನೆಯ ಮುಖಂಡ ಸಂಜಯ ರಾವತ್ ಹೇಳಿದ್ದಾರೆ. ರಾಜ್ಯದ ಸೂಪರ್ ಮಾರ್ಕೆಟುಗಳಲ್ಲಿ ವೈನ್ ಮಾರಾಟಕ್ಕೆ ಅವಕಾಶ ನೀಡಲು ಮಹಾರಾಷ್ಟ್ರ ಸಚಿವ ಸಂಪುಟ ಅನುಮೋದನೆ ನೀಡಿದ ಬೆನ್ನಲ್ಲಿ ರಾವತ್ ಈ ರೀತಿ ಸಮರ್ಥಿಸಿಕೊಂಡಿದ್ದಾರೆ. ಈ ಕ್ರಮದಿಂದ ರೈತರ ಆದಾಯ ದ್ವಿಗೊಳ್ಳಲಿದೆ. ಆದರೆ ಬಿಜೆಪಿ … Continued

ಜಗತ್ತಿನ 2ನೇ ಅತಿದೊಡ್ಡ ಐಟಿ ಸೇವಾ ಕಂಪನಿಯಾಗಿ ಹೊರಹೊಮ್ಮಿದ ಟಿಸಿಎಸ್

ನವದೆಹಲಿ: ಭಾರತೀಯ ಹೆಮ್ಮೆಯ ಸಂಸ್ಥೆ, ಟಿಸಿಎಸ್ ಜಗತ್ತಿನ ಎರಡನೇ ಅತಿದೊಡ್ಡ ಐಟಿ ಸೇವಾ ಕಂಪನಿಯಾಗಿ ಹೊರಹೊಮ್ಮಿದೆ. ಬ್ರ್ಯಾಂಡ್ ಫೈನಾನ್ಸ್ ಸಂಸ್ಥೆ 2022ರ ಪ್ರಮುಖ 500 ಐಟಿ ಸೇವಾ ಕಂಪನಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಂತೆ ಇನ್ ಫೋಸಿಸ್ ಕಂಪನಿ ಮೂರನೇ ಸ್ಥಾನದಲ್ಲಿದೆ. ಈ ಮೂಲಕ ಜಗತ್ತಿನ ಐದು ಪ್ರಮುಖ ಕಂಪನಿಗಳಲ್ಲಿ ಎರಡು ಭಾರತೀಯ ಕಂಪನಿಗಳು ಸ್ಥಾನ … Continued

ಬೆಂಗಳೂರು ನಗರದಲ್ಲಿ ಮತ್ತೆ ಶಾಲೆ ಆರಂಭ?

posted in: ರಾಜ್ಯ | 0

ಬೆಂಗಳೂರು: ಬೆಂಗಳೂರು ನಗರದ ಶಾಲೆಗಳು ಮುಂದಿನ ವಾರದಿಂದ ಮತ್ತೆ ಆರಂಭವಾಗುವ ಸಾಧ್ಯತೆಗಳಿವೆ. ಶಿಕ್ಷಣ ಸಚಿವ ಬಿ.ಸಿ. ನಾಗೇಶ ಅವರು ಬುಧವಾರ ಮಡಿಕೇರಿಯಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ. ಆದರೆ ಜ. 29ರಂದು ನಡೆಯುವ ಉನ್ನತ ಮಟ್ಟದ ಸಭೆಯಲ್ಲಿ ಈ ಬಗ್ಗೆ ತೀರ್ಮಾನವಾಗಲಿದೆ. ಕೋವಿಡ್ ಸೋಂಕು ಹೆಚ್ಚಿದಂತೆ ಹಲವು ಶಾಲಾ ವಿದ್ಯಾರ್ಥಿಗಳಿಗೂ ಸೋಂಕು ತಗುಲಿತ್ತು. ಅದು ಪಾಲಕರಲ್ಲಿ … Continued

ಸಂವಿಧಾನಾತ್ಮಕವಾಗಿ ಕಾನೂನಿನ ಚೌಕಟ್ಟಿನಲ್ಲಿ ಮೀಸಲಾತಿಗೆ ಕ್ರಮ: ಸಚಿವ ಬಸವರಾಜ ಬೊಮ್ಮಾಯಿ

posted in: ರಾಜ್ಯ | 0

ಬೆಂಗಳೂರು: ಎಸ್ ಸಿ, ಎಸ್ ಟಿ, ಲಿಂಗಾಯತ ಪಂಚಮಸಾಲಿ, ಕುರುಬ, ಒಕ್ಕಲಿಗ ಸೇರಿದಂತೆ ಮೀಸಲಾತಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿರುವ ಹಲವು ಸಮುದಾಯಗಳ ಆಶೋತ್ತರಗಳಿಗೆ ಪೂರಕವಾಗಿ ಕಾನೂನಿನ ಚೌಕಟ್ಟಿನಲ್ಲಿ ಸಂವಿಧಾನಾತ್ಮಕವಾಗಿ ಮೀಸಲಾತಿಯನ್ನು ಕಲ್ಪಿಸಲಾಗುವುದು ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹೇಳಿದರು. ಬುಧವಾರ ವಿಧಾನಸಭೆಯಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ನಡೆದ ಪ್ರಸ್ತಾವನೆಗೆ … Continued