ಕರ್ನಾಟಕ, ತಮಿಳುನಾಡು, ಕೇರಳದ 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಎನ್‌ಐಎ ದಾಳಿ

ನವದೆಹಲಿ: 2022ರ ಅಕ್ಟೋಬರ್‌ನಲ್ಲಿ ನಡೆದ ಕೊಯಮತ್ತೂರು ಕಾರ್ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬುಧವಾರ ದಕ್ಷಿಣ ಭಾರತದ ಮೂರು ರಾಜ್ಯಗಳಲ್ಲಿನ 60 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ತಮಿಳುನಾಡು, ಕೇರಳ ಮತ್ತು ಕರ್ನಾಟಕ ಸೇರಿದಂತೆ ದಾಳಿಗಳನ್ನು ನಡೆಸಲಾಯಿತು. ಇಂದು, ಬುಧವಾರ ಬೆಳಿಗ್ಗೆ 6 ಗಂಟೆಗೆ 60 ಕ್ಕೂ ಹೆಚ್ಚು … Continued

ತಿಪಟೂರು: ಬಟ್ಟೆ ತೊಳೆಯಲು ಹೋಗಿದ್ದ ಅತ್ತೆ- ಸೊಸೆ ನೀರಲ್ಲಿ ಮುಳುಗಿ ಸಾವು

ತುಮಕೂರು: ಬಟ್ಟೆ ತೊಳೆಯಲು ಹೋಗಿದ್ದ ಅತ್ತೆ- ಸೊಸೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನ ಟಿ.ಎಂ. ಮಂಜುನಾಥ ನಗರದಲ್ಲಿ ನಡೆದ ವರದಿಯಾಗಿದೆ. ಸೋಮವಾರ (ನಿನ್ನೆ) ಮಧ್ಯಾಹ್ನದ ವೇಳೆ ಮನೆಯಿಂದ ಬಟ್ಟೆಗಳನ್ನು ತುಂಬಿಕೊಂಡು ಕಟ್ಟೆಯ ಬಳಿ ತೊಳೆದುಕೊಂಡು ಬರಲು ಅತ್ತೆ- ಸೊಸೆ ಹೋಗಿದ್ದಾರೆ. ಆದರೆ, 3 ಗಂಟೆ ಸುಮಾರಿಗೆ ಸೊಸೆ ನೀರಿಗೆ ಬಿದ್ದಿದ್ದಾರೆ. ಸೊಸೆಯನ್ನು … Continued

2024ರ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಬಿಡ್ ಘೋಷಿಸಿದ ಭಾರತೀಯ ಮೂಲದ ಅಮೆರಿಕನ್ ನಿಕ್ಕಿ ಹ್ಯಾಲೆ

ಚಾರ್ಲ್ಸ್ಟನ್ (ಅಮೆರಿಕ) : ವಿಶ್ವಸಂಸ್ಥೆಯ ಅಮೆರಿಕದ ಮಾಜಿ ರಾಯಭಾರಿ ನಿಕ್ಕಿ ಹ್ಯಾಲೆ ಅವರು 2024 ರಲ್ಲಿ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ ಮಂಗಳವಾರ ಘೋಷಿಸಿದ್ದಾರೆ, ವಾಷಿಂಗ್ಟನ್‌ನಲ್ಲಿ “ಹೊಸ ತಲೆಮಾರಿನ” ನಾಯಕತ್ವವನ್ನು ಪ್ರಸ್ತಾಪಿಸುವ ಮೂಲಕ ಸಹ ರಿಪಬ್ಲಿಕನ್ ಅಭ್ಯರ್ಥಿ 76 ವರ್ಷದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಸವಾಲು ಹಾಕಿದ್ದಾರೆ. “ನಾನು ನಿಕ್ಕಿ ಹ್ಯಾಲಿ ಮತ್ತು … Continued

ದೀರ್ಘಕಾಲದಿಂದ ಬಿಬಿಸಿ ಐಟಿ ರಾಡಾರ್‌ನಲ್ಲಿತ್ತು ; ವರ್ಗಾವಣೆ ಬೆಲೆಯ ಬಗ್ಗೆ ವಿವಿಧ ಸೂಚನೆಗಳ ಹೊರತಾಗಿಯೂ ಅನುಸರಿಸಿಲ್ಲ: ಮೂಲಗಳು

ನವದೆಹಲಿ: ನರೇಂದ್ರ ಮೋದಿ ಮತ್ತು ಗುಜರಾತ್ ಗಲಭೆಗಳ ಕುರಿತು ಬಿಬಿಸಿಯ ಸಾಕ್ಷ್ಯಚಿತ್ರದ ವಿವಾದದ ನಡುವೆ ಆದಾಯ ತೆರಿಗೆ (ಐ-ಟಿ) ಅಧಿಕಾರಿಗಳು ಮಂಗಳವಾರ ಬಿಬಿಸಿ ಇಂಡಿಯಾ ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ವರ್ಗಾವಣೆ ಬೆಲೆ(transfer pricing) ಷರತ್ತಿನ ಉಲ್ಲಂಘನೆಗಾಗಿ ಸಂಸ್ಥೆಯು ದೀರ್ಘಕಾಲದವರೆಗೆ ಐ-ಟಿ ರಾಡಾರ್‌ನಲ್ಲಿದೆ ಎಂದು ಮೂಲಗಳು ಬಹಿರಂಗಪಡಿಸಿವೆ. ಆದಾಯ ತೆರಿಗೆ ಅಧಿಕಾರಿಗಳು ಪ್ರಸ್ತುತ ನವದೆಹಲಿ ಮತ್ತು ಮುಂಬೈನಲ್ಲಿರುವ … Continued

ಪೋರ್ಚುಗಲ್‌: ಕ್ಯಾಥೋಲಿಕ್ ಚರ್ಚ್ ಪಾದ್ರಿಗಳಿಂದ 5,000 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ…!

ಲಿಸ್ಬನ್(ಪೋರ್ಚುಗಲ್): ಪೋರ್ಚುಗಲ್‌ನ ಕ್ಯಾಥೋಲಿಕ್ ಪಾದ್ರಿಗಳು 1950ರಿಂದ ಸುಮಾರು 5,000 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಅಥವಾ ಅತ್ಯಾಚಾರ ಎಸಗಿದ್ದಾರೆ ಎಂದು ನೂರಾರು ಸಂತ್ರಸ್ತರ ಬಗ್ಗೆ ತನಿಖೆ ನಡೆಸಿದ ನಂತರ ಸ್ವತಂತ್ರ ಆಯೋಗ ಸೋಮವಾರ ಹೇಳಿದೆ. ಸ್ವತಂತ್ರ ಆಯೋಗ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿದೆ. ಚರ್ಚ್‌ಗಳ ಪಾದ್ರಿಗಳ ಲೈಂಗಿಕ ದೌರ್ಜನ್ಯದ ಬಗ್ಗೆ ಪೋರ್ಚುಗಲ್‌ನ ಕ್ಯಾಥೋಲಿಕ್‌ … Continued

ಏರೋ ಇಂಡಿಯಾ 2023 : HLFT-42 ಯುದ್ಧ ವಿಮಾನದ ಹಿಂಬದಿಯಲ್ಲಿದ್ದ ಹನುಮಂತನ ಚಿತ್ರ ತೆಗೆದ ಹೆಚ್‌ಎಎಲ್

ಬೆಂಗಳೂರು: ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಇಂದು, ಮಂಗಳವಾರ ಬೆಂಗಳೂರಿನಲ್ಲಿ ನಡೆದ ಏರೋ ಇಂಡಿಯಾ 2023ರಲ್ಲಿ ತಮ್ಮ ವಿಮಾನವೊಂದರಲ್ಲಿದ್ದ ಹನುಮಂತನ ಸ್ಟಿಕ್ಕರ್ ತೆಗೆದುಹಾಕಿದೆ. ಆಂತರಿಕ ಚರ್ಚೆಯ ನಂತರ ಹನುಮಂತನ ಚಿತ್ರವನ್ನು ಈಗ ಹಾಕುವುದು ಸೂಕ್ತವಲ್ಲದ ಕಾರಣ ಅದನ್ನು ತೆಗೆದುಹಾಕಲು ನಿರ್ಧರಿಸಿಸಲಾಗಿದೆ ಎಂದು ಹೇಳಲಾಗಿದೆ. ಏರೋ ಇಂಡಿಯಾ 2023 ರ ಮೊದಲ ದಿನದಂದು, HAL ತನ್ನ ಸೂಪರ್ಸಾನಿಕ್ ತರಬೇತುದಾರ … Continued

ಉದ್ಯೋಗ ಹುಡುಕಲು ಸಹಕರಿಸುವ ಸಾಮಾಜಿಕ ಪ್ಲಾಟ್‌ಫಾರ್ಮ್‌ ಲಿಂಕ್ಡ್‌ಇನ್‌ ನಲ್ಲೂ ಉದ್ಯೋಗಿಗಳ ಕಡಿತ..!

ಜನರು ಉದ್ಯೋಗಗಳಿಗಾಗಿ ಸೈನ್ ಅಪ್ ಮಾಡುವ ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿರುವ ಮತ್ತು ಈಗ ಉದ್ಯೋಗಗಳನ್ನು ಪಡೆಯಲು ಜನರಿಗೆ ಸಹಾಯ ಮಾಡುವ ಲಿಂಕ್ಡ್‌ಇನ್‌ ಸಹ ತನ್ನ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ. ಟೆಕ್ ದೈತ್ಯ ಮೈಕ್ರೋಸಾಫ್ಟ್ ಮಾರ್ಚ್ ವೇಳೆಗೆ ಸುಮಾರು 10,000 ಜನರನ್ನು ವಜಾಗೊಳಿಸುವುದಾಗಿ ಘೋಷಿಸಿದ ನಂತರ ಈ ಸುದ್ದಿ ಬಂದಿದೆ. ವರದಿಯ ಪ್ರಕಾರ, … Continued

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಬಳಸಿ ಮಾನವ ರಹಿತ ಯುದ್ಧ ವಿಮಾನದ ಯಶಸ್ವಿ ಹಾರಾಟ ನಡೆಸಿದ ಲಾಕ್ಹೀಡ್ ಮಾರ್ಟಿನ್…!

ಏರೋಸ್ಪೇಸ್ ಮತ್ತು ರಕ್ಷಣಾ ಉತ್ಪಾದನಾ ದೈತ್ಯ ಲಾಕ್ಹೀಡ್ ಮಾರ್ಟಿನ್ ಕಂಪನಿ ಕೃತಕ ಬುದ್ಧಿಮತ್ತೆ (Artificial Intelligence) ಮೂಲಕ ಕಾರ್ಯನಿರ್ವಹಿಸುವ ಯುದ್ಧತಂತ್ರದ ತರಬೇತಿ ವಿಮಾನ ಹಾರಾಟದ ಯಶಸ್ವಿ ಪರೀಕ್ಷೆ ನಡೆಸಿದೆ. ಕಂಪನಿಯ ಪ್ರಕಾರ ಇದೇ ಮೊದಲ ಬಾರಿಗೆ ಯುದ್ಧತಂತ್ರದ ವಿಮಾನ ಹಾರಾಟ ನಡೆಸಲು ಕೃತಕ ಬುದ್ಧಿಮತ್ತೆ (AI) ಬಳಸಲಾಗಿದೆ. ಇದು ವೇರಿಯಬಲ್ ಇನ್-ಫ್ಲೈಟ್ ಸಿಮ್ಯುಲೇಶನ್ ಟೆಸ್ಟ್ ಏರ್‌ಕ್ರಾಫ್ಟ್ … Continued

ಕೊಡಗು: ಇಬ್ಬರನ್ನು ಕೊಂದಿದ್ದ ನರಭಕ್ಷಕ ಹುಲಿಯನ್ನು ಸೆರೆ ಹಿಡಿದ ಅರಣ್ಯ ಇಲಾಖೆ ಸಿಬ್ಬಂದಿ

  ಕೊಡಗು: 24 ತಾಸಿನೊಳಗೆ ಇಬ್ಬರನ್ನು ಕೊಂದಿದ್ದ ನರ ಭಕ್ಷಕ ಹುಲಿಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. ಇಂದು, ಮಂಗಳವಾರ (ಫೆ.14) ಪೊನ್ನಂಪೇಟೆ ತಾಲೂಕಿನ ನಾಣಚ್ಚಿಗೇಟ್ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಿದ್ದಾರೆ. ಕೆಲವು ದಿನಗಳಿಂದ ಕೊಡಗಿನಲ್ಲಿ ಜನರು ನರಭಕ್ಷಕ ಹುಲಿಯ ಭಯದಲ್ಲಿ ಜನರು ಓಡಾಡುತ್ತಿದ್ದರು. ಇದೀಗ ಆ ಹುಲಿ ಸೆರೆಯಾಗಿದ್ದು ಎಲ್ಲರೂ ನಿಟ್ಟುಸಿರು ಬಿಡುವಂತಾಗಿದೆ. … Continued

ಡಿಜಿಟಲ್ ಪೇಮೆಂಟ್‌ಗಳಿಗೆ ಭಾರತದ ಯುಪಿಐ ಅಳವಡಿಸಲು ಬಯಸುವ 13 ದೇಶಗಳ ಜೊತೆ ಎಂಒಯುಗಳಿಗೆ ಸಹಿ : ಅಶ್ವಿನಿ ವೈಷ್ಣವ್

ನವದೆಹಲಿ: ಡಿಜಿಟಲ್ ಪಾವತಿಗಾಗಿ ಯುನಿಫೈಡ್ ಪೇಮೆಂಟ್ಸ್ ಇಂಟರ್‌ಫೇಸ್ (ಯುಪಿಐ) ಅಳವಡಿಸಿಕೊಳ್ಳಲು ಬಯಸುವ 13 ದೇಶಗಳೊಂದಿಗೆ ಭಾರತವು ತಿಳುವಳಿಕೆ ಪತ್ರ (ಎಂಒಯು) ಗೆ ಸಹಿ ಹಾಕಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ರಂದು ತಿಳಿಸಿದ್ದಾರೆ. ಲಕ್ನೋದಲ್ಲಿ ಜಿ20 ಡಿಜಿಟಲ್ ಎಕಾನಮಿ ವರ್ಕಿಂಗ್ ಗ್ರೂಪ್ ಸಭೆಯ ನೇಪಥ್ಯದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ವೈಷ್ಣವ್, ಸಿಂಗಾಪುರವು ಈಗಾಗಲೇ ತನ್ನ … Continued