ಉಗಾಂಡಾದಲ್ಲಿ ಮೂರು ಕೊಂಬಿನ ಹಸು ಪತ್ತೆ : ಈ ಅಪರೂಪದ ದೃಶ್ಯ ವೀಕ್ಷಿಸಿ

ಅಂತರ್ಜಾಲವು ಆಗಾಗ್ಗೆ ಅಚ್ಚರಿಯ ವೀಡಿಯೊಗಳಿಂದ ತುಂಬಿರುತ್ತದೆ. ಈ ಕೆಲವು ವಿಲಕ್ಷಣ ಕ್ಲಿಪ್‌ಗಳು ವಿಶಿಷ್ಟವಾದ ಜೈವಿಕ ರಚನೆಗಳನ್ನು ಹೊಂದಿರುವ ಪ್ರಾಣಿಗಳನ್ನು ಒಳಗೊಂಡಿರುತ್ತವೆ. ಇಂಥದ್ದೇ ವೀಡಿಯೊ ಕ್ಲಿಪ್‌ಗಳಲ್ಲಿ ಮೂರು ಕೊಂಬಿನ ಹಸುವನ್ನು ತೋರಿಸುವ ವೀಡಿಯೊವೊಂದು ವೈರಲ್ ಆಗಿದೆ . “ಮೂರು ಕೊಂಬುಗಳನ್ನು ಹೊಂದಿರುವ ಹಸುವನ್ನು ಎಂದಾದರೂ ನೋಡಿದ್ದೀರಾ?” ಎಂಬ ಬರಹದ ಮೂಲಕ ಹಂಚಿಕೊಳ್ಲಲಾಗಿದೆ. ವಿಲಕ್ಷಣ ಹಸುವು ತನ್ನ ಮೂರು … Continued

ರಿಟೇಲ್ ಹಣದುಬ್ಬರ ಜನವರಿಯಲ್ಲಿ 6.52%ಕ್ಕೆ ಏರಿಕೆ

ನವದೆಹಲಿ: ಚಿಲ್ಲರೆ ಹಣದುಬ್ಬರವು ಜನವರಿಯಲ್ಲಿ ತೀವ್ರವಾಗಿ ಏರಿಕೆ ಕಂಡಿದ್ದು, ಎರಡು ತಿಂಗಳ ನಂತರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಂದಾಜು ಮಾಡಿದ್ದ 6%ರಷ್ಟನ್ನು ಮೀರಿದೆ. ಗ್ರಾಹಕರ ಬೆಲೆ ಆಧಾರಿತ ಹಣದುಬ್ಬರವು ಮೂರು ತಿಂಗಳ ಗರಿಷ್ಠ ಮಟ್ಟಕ್ಕೆ ಏರಿದ್ದು, ಜನವರಿಯಲ್ಲಿ ಅದು 6.52%ಕ್ಕೆ ಏರಿದೆ. ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್‌ಎಸ್‌ಒ) ಸೋಮವಾರ ಬಿಡುಗಡೆ ಮಾಡಿದ ಅಂಕಿಅಂಶಗಳು ಸತತ … Continued

ಕರ್ನಾಟಕ ವಿಧಾನಸಭೆ ಚುನಾವಣೆ: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿ ಎಸ್‌ ಡಿಪಿಐ ಅಭ್ಯರ್ಥಿ

ಮಂಗಳೂರು: ಮುಂಬರುವ ಕರ್ನಾಟಕದ ವಿಧಾನಸಭೆ ಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ತನ್ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಪುತ್ತೂರಿನ ಅಭ್ಯರ್ಥಿಯಾಗಿ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಯನ್ನು ಹೆಸರಿಸಿದೆ. ಆರೋಪಿ ಶಾಫಿ ಬೆಳ್ಳಾರೆ ಎನ್‌ಐಎ ಕಸ್ಟಡಿಯಲ್ಲಿದ್ದಾನೆ.ಕಳೆದ ವರ್ಷ ಜುಲೈನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವಮೋರ್ಚಾ ಮುಖಂಡನ ಹತ್ಯೆಯಲ್ಲಿ ಶಾಫಿ ಬೆಳ್ಳಾರೆ … Continued

ಎಲ್‌ಟಿಟಿಇ ಪ್ರಭಾಕರನ್ ಬದುಕಿದ್ದಾನೆ, ಕೆಲವೇ ದಿನಗಳಲ್ಲಿ ಜನರೆದುರು ಬರ್ತಾನೆ: ನೆಡುಮಾರನ್ ಸೆನ್ಸೇಶನಲ್‌ ಹೇಳಿಕೆ

ತಂಜಾವೂರು: ಎಲ್‌ಟಿಟಿಇ ಮುಖ್ಯಸ್ಥ ವಿ ಪ್ರಭಾಕರನ್ ಜೀವಂತವಾಗಿದ್ದಾರೆ ಮತ್ತು ಚೆನ್ನಾಗಿದ್ದಾರೆ ಎಂದು ವಿಶ್ವ ತಮಿಳರ ಒಕ್ಕೂಟದ ಅಧ್ಯಕ್ಷ ಪಿ ನೆಡುಮಾರನ್ ಸೋಮವಾರ ಹೇಳಿದ್ದಾರೆ. ಪ್ರಭಾಕರನ್‌ ಶೀಘ್ರದಲ್ಲೇ ಶೀಘ್ರದಲ್ಲೇ ಜನರೆದುರು ಬರುತ್ತಾರೆ ಮತ್ತು ಈಳಂ ತಮಿಳರ ಉತ್ತಮ ಜೀವನಕ್ಕಾಗಿ ಮುಂದಿನ ಯೋಜನೆ ಘೋಷಿಸುತ್ತಾರೆ ಎಂದು ಅವರು ಹೇಳಿದ್ದಾರೆ. ತಂಜಾವೂರು ನೆಡುಮಾರನ್‌ನ ಮುಳ್ಳಿವೈಕ್ಕಲ್ ಸ್ಮಾರಕದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ … Continued

ಸುಪ್ರೀಂ ಕೋರ್ಟ್ ನೂತನ ನ್ಯಾಯಮೂರ್ತಿಗಳಾಗಿ ಅರವಿಂದಕುಮಾರ, ರಾಜೇಶ ಬಿಂದಾಲ್ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಕನ್ನಡಿಗ ಅರವಿಂದಕುಮಾರ ಹಾಗೂ ರಾಜೇಶ ಬಿಂದಾಲ್‌ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈಗ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ಸಂಖ್ಯಾಬಲ 34ಕ್ಕೆ ಏರಿದ್ದು ಪೂರ್ಣ ಸಾಮರ್ಥ್ಯದೊಂದಿಗೆ ಅದು ಕಾರ್ಯ ನಿರ್ವಹಿಸಲಿದೆ.ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ ಅವರು ಇಬ್ಬರು ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಬೋಧಿಸಿದರು. ಜನವರಿ … Continued

ಕೊಡಗು: ಹುಲಿ ದಾಳಿಗೆ ಮತ್ತೊಬ್ಬ ಕಾರ್ಮಿಕ ಸಾವು, 24 ತಾಸಿನಲ್ಲಿ ಇದು 2ನೇ ಪ್ರಕರಣ

ಮಡಿಕೇರಿ: 24 ಗಂಟೆಗಳ ಅವಧಿಯಲ್ಲಿ ಹುಲಿ ದಾಳಿ(Tiger Attack)ಗೆ ಸಿಲುಕಿ ಮತ್ತೊಬ್ಬರು ಮೃತಪಟ್ಟಿದ್ದಾರೆ. ಹುಲಿ ದಾಳಿಗೆ ಸೋಮವಾರ ಬೆಳಿಗ್ಗೆ ಕೊಡಗು ಹಾಗೂ ಕೇರಳ ಗಡಿಭಾಗದ ಪಲ್ಲೇರಿ ಗ್ರಾಮದಲ್ಲಿ ಮತ್ತೊಬ್ಬರು ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಕೃಷಿ ಕಾರ್ಮಿಕ ರಾಜು (75) ಎಂದು ಗುರುತಿಸಲಾಗಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಹುಲಿ ದಾಳಿಗೆ ಸಿಲುಕಿ ಮೃತಪಟ್ಟವರ ಸಂಖ್ಯೆ 2ಕ್ಕೆ ಏರಿದೆ. … Continued

ಜಮ್ಮು-ಕಾಶ್ಮೀರದಲ್ಲಿ ಪ್ರಸ್ತಾವಿತ ಕ್ಷೇತ್ರ ವಿಂಗಡಣೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ : ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ಷೇತ್ರ ವಿಂಗಡಣೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಲಿಮಿಟೇಶನ್ ಪ್ರಕ್ರಿಯೆ ಪ್ರಶ್ನಿಸಿ ಕಾಶ್ಮೀರದ ನಿವಾಸಿಗಳಾದ ಅಬ್ದುಲ್ ಗನಿ ಖಾನ್ ಮತ್ತು ಮುಹಮ್ಮದ್ ಅಯೂಬ್ ಮಟ್ಟೋ ಎಂಬವರು ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರು ಇದು ಭಾರತೀಯ ಸಂವಿಧಾನದ 81, 82, 170, 330 … Continued

ಬೆಂಗಳೂರು: ಭಾರತದ ಅತಿದೊಡ್ಡ ವೈಮಾನಿಕ ಪ್ರದರ್ಶನ ಉದ್ಘಾಟಿಸಿದ ಪ್ರಧಾನಿ ; ಇದು ‘ಶತಕೋಟಿ ಅವಕಾಶಗಳಿಗೆ ರನ್‌ ವೇ’ ಎಂದು ಬಣ್ಣಿಸಿದ ಮೋದಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಭಾರತದ ಅತಿದೊಡ್ಡ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನದ 14ನೇ ಆವೃತ್ತಿ ಏರೋ ಇಂಡಿಯಾ- 2023 ಅನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ, ಪ್ರಧಾನ ಮಂತ್ರಿಗಳು ‘ಮೇಕ್ ಇನ್ ಇಂಡಿಯಾ’ ಅಭಿಯಾನ ಉತ್ತೇಜಿಸಿದರು. ಐದು ದಿನಗಳ ಈ ಕಾರ್ಯಕ್ರಮದಲ್ಲಿ ವಿಮಾನ ಮತ್ತು ಹೆಲಿಕಾಪ್ಟರ್‌ಗಳ ವೈಮಾನಿಕ ಪ್ರದರ್ಶನಗಳು ಮತ್ತು ಏರೋಸ್ಪೇಸ್ ಮತ್ತು ರಕ್ಷಣಾ … Continued

ವಾರದೊಳಗೆ ಅತಿಕ್ರಮಣ ತೆರವು ಮಾಡಿ : ಭಗವಾನ್‌ ಬಜರಂಗ ಬಲಿಗೆ ನೋಟಿಸ್ ನೀಡಿದ ರೈಲ್ವೆ ಇಲಾಖೆ…!

ಮೊರೆನಾ: ಭೂ “ಅತಿಕ್ರಮಣ” ತೆರವು ಮಾಡಲು ಸೂಚಿಸಿ ರೈಲ್ವೇ ಇಲಾಖೆಯು ಬಜರಂಗ ಬಲಿ(ಹನುಮಂತ) ದೇವರಿಗೆ ನೋಟಿಸ್ ನೀಡಿದ ವಿದ್ಯಮಾನ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಸಬಲ್ಗಢ್ ಪಟ್ಟಣದಲ್ಲಿ ನಡೆದಿದೆ. ತಪ್ಪಿನ ಅರಿವಾದ ನಂತರ ನೋಟಿಸ್ ಅನ್ನು ಹಿಂಪಡೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ. ಫೆಬ್ರವರಿ 8 ರಂದು ಭಗವಾನ್‌ ಬಜರಂಗ ಬಲಿ(ಹನುಮಂತ ದೇವರು)ಗೆ ನೋಟಿಸ್ ಕಳುಹಿಸಲಾಗಿತ್ತು, ಅದರಲ್ಲಿ … Continued

ಹುಲಿ ದಾಳಿಗೆ ಹದಿಹರೆಯದ ಕಾರ್ಮಿಕ ಸಾವು

ಮಡಿಕೇರಿ: ನರಭಕ್ಷಕ ಹುಲಿ ದಾಳಿಗೆ ಸಿಲುಕಿ ಹದಿಹರೆಯದ ಕಾರ್ಮಿಕನೊಬ್ಬ ಮೃತಪಟ್ಟ ಘಟನೆ ಕೊಡಗು-ಕೇರಳ ಗಡಿಭಾಗವಾದ ಚೂರಿಕಾಡು ಬಳಿ ನಡೆದ ವರದಿಯಾಗಿದೆ. ಪಿರಿಯಾಪಟ್ಟಣ ತಾಲೂಕಿನ ಪಂಚವಳ್ಳಿ ಗ್ರಾಮದ ಕಾರ್ಮಿಕ ಚೇತನ್ (18) ಹುಲಿ ದಾಳಿಗೆ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಭಾನುವಾರ ಮಧ್ಯಾಹ್ನದ ವೇಳೆ ಈತ ಕಾಫಲಿ ಪ್ಲಾಂಟ್‌ನಲ್ಲಿ ತನ್ನ ದೈನಂದಿನ ಕೆಲಸದಲ್ಲಿ ನಿರತನಾಗಿದ್ದಾಗ ತೋಟದಲ್ಲಿದ್ದ ಹುಲಿ … Continued