ಸ್ಟಾರ್ಟ್‌ ಅಪ್‌ ಇಕೊ ಸಿಸ್ಟಂ: ಡಿಪಿಐಐಟಿ ಶ್ರೇಯಾಂಕದಲ್ಲಿ ಗುಜರಾತ್‌, ಕರ್ನಾಟಕ ಅತ್ಯುತ್ತಮ ರಾಜ್ಯಗಳು

ನವದೆಹಲಿ: ಉದಯೋನ್ಮುಖ ಉದ್ಯಮಿಗಳಿಗೆ ಅತ್ಯುತ್ತಮ ಸ್ಟಾರ್ಟಪ್ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಗುಜರಾತ್ ಮತ್ತು ಕರ್ನಾಟಕವು ಅತ್ಯುತ್ತಮ ಕಾರ್ಯಕ್ಷಮತೆಯನ್ನು ತೋರಿವೆ ಎಂದು ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನಕ್ಕಾಗಿ (ಡಿಪಿಐಐಟಿ) ಇಲಾಖೆಯ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶ್ರೇಯಾಂಕ ವರದಿ ಹೇಳಿದೆ. ಒಂದು ಕೋಟಿಗಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಸಣ್ಣ ರಾಜ್ಯಗಳಲ್ಲಿ, ಮೇಘಾಲಯ ರಾಜ್ಯವು ಅತ್ಯುತ್ತಮ … Continued

ಅಮೆರಿಕದ ಚಿಕಾಗೋ ಉಪನಗರದಲ್ಲಿ ಮೆರವಣಿಗೆ ಮೇಲೆ ಗುಂಡಿನ ದಾಳಿ: ಐವರು ಸಾವು, 16 ಮಂದಿಗೆ ಗಾಯ

ಇಂದು, ಸೋಮವಾರ ಅಮೆರಿಕದ ಚಿಕಾಗೋ ಉಪನಗರದಲ್ಲಿ ಜುಲೈ 4ರ ಪರೇಡ್‌ನಲ್ಲಿ ಗುಂಡೇಟಿನಿಂದ ಐದು ಜನರು ಸಾವಿಗೀಡಾಗಿದ್ದಾರೆ ಮತ್ತು ಕನಿಷ್ಠ 16 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ, ಆಚರಣೆಗಳು ಪ್ರಾರಂಭವಾದ ಕೆಲವೇ ನಿಮಿಷಗಳ ನಂತರ ಬಂದೂಕುಧಾರಿಯು ಅಂಗಡಿಯ ಮೇಲ್ಛಾವಣಿಯಿಂದ ಮೆರವಣಿಗೆ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ. ಶ್ರೀಮಂತ ಉಪನಗರ ನಗರವಾದ … Continued

ಜುಲೈ 11ರಿಂದ ಪದವಿ ಕಾಲೇಜು ದಾಖಲಾತಿ ಆರಂಭ: ಆನ್‍ಲೈನ್ ನಲ್ಲಿ ಅರ್ಜಿ ಸಲ್ಲಿಕೆ: ಡಾ. ಅಶ್ವತ್ಥ ನಾರಾಯಣ

ಬೆಂಗಳೂರು: ಪದವಿ ಕಾಲೇಜುಗಳಿಗೆ ಜುಲೈ 11ರಿಂದ 2022-23ನೇ ಸಾಲಿನ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ತಿಳಿಸಿದ್ದಾರೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಏಕೀಕೃತ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ ಮೂಲಕ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ ಹಾಗೂ ಎಲ್ಲವೂ ಆನ್ ಲೈನ್ ನಲ್ಲಿ ನಡೆಯಲಿದೆ … Continued

ಬಿಜೆಪಿ ನಾಯಕ ಕಪಿಲ್ ಮಿಶ್ರಾಗೆ ಕೊಲೆ ಬೆದರಿಕೆಯ ಇ ಮೇಲ್

ನವದೆಹಲಿ: ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಸೋಮವಾರ ಟ್ವಿಟರ್‌ನಲ್ಲಿ ಅಕ್ಬರ್ ಆಲಂ ಎಂಬವರಿಂದ ಕೊಲೆ ಬೆದರಿಕೆ ಇ ಮೇಲ್ ಸ್ವೀಕರಿಸಿದ್ದಾರೆ ಎಂದು ತಿಳಿಸಿದ್ದಾರೆ. ಮೇಲ್‌ನ ವಿಷಯದಲ್ಲಿ ಮಿಶ್ರಾ ಅವರು, ಕಪಿಲ್ ಮಿಶ್ರಾ, ಭಯೋತ್ಪಾದಕ, ನಾವು ನಿನ್ನನ್ನು ಬದುಕಲು ಬಿಡುವುದಿಲ್ಲ. ನಿನ್ನನ್ನು ಶೂಟ್ ಮಾಡಲು ನನ್ನ ಜನರು ಈಗಾಗಲೇ ಯೋಜಿಸಿದ್ದಾರೆ (“ಕಪಿಲ್ ಮಿಶ್ರಾ ಆತಂಕವಾದಿ ತುಮ್ … Continued

ಕರ್ನಾಟಕಕ್ಕೆ ಜುಲೈ 10ರಂದು ಎನ್‌ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಆಗಮನ

ಬೆಂಗಳೂರು: ಜುಲೈ 18ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದ್ದು, ಜುಲೈ 10ರಂದು ಎನ್‍ಡಿಎ ಬೆಂಬಲಿತ ಅಭ್ಯರ್ಥಿ ದ್ರೌಪದಿ ಮುರ್ಮು ಕರ್ನಾಟಕಕ್ಕೆ ಬರಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದರು. ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು ಮತಗಳನ್ನು ಗಮನಿಸಿದರೆ ನಮ್ಮ ಗೆಲುವು ಖಚಿತ ಎಂದರು. ದ್ರೌಪದಿ ಮುರ್ಮು ಅವರನ್ನು ಬೆಂಬಲಿಸುವ ಇಂಗಿತವನ್ನು ಜೆಡಿಎಸ್ … Continued

ಹೊಟೇಲ್‌-ರೆಸ್ಟೋರೆಂಟ್‌ಗಳಲ್ಲಿ ಸೇವಾ ಶುಲ್ಕ ವಿಧಿಸುವಂತಿಲ್ಲ: ಮಾರ್ಗಸೂಚಿ ಬಿಡುಗಡೆ

ನವದೆಹಲಿ : ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಸೋಮವಾರ ಹೋಟೆಲ್‌ಗಳು ಅಥವಾ ರೆಸ್ಟೋರೆಂಟ್‌ಗಳು ಆಹಾರ ಬಿಲ್‌ನಲ್ಲಿ ಸ್ವಯಂಚಾಲಿತವಾಗಿ ಅಥವಾ ಪೂರ್ವನಿಯೋಜಿತವಾಗಿ ಸೇವಾ ಶುಲ್ಕವನ್ನು ವಿಧಿಸುವುದನ್ನು ನಿಷೇಧಿಸಿದೆ. ನಿಯಮ ಉಲ್ಲಂಘಿಸಿದಲ್ಲಿ ದೂರು ಸಲ್ಲಿಸಲು ಗ್ರಾಹಕರಿಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಹೆಚ್ಚುತ್ತಿರುವ ದೂರುಗಳ ನಡುವೆ, CCPA ಅನ್ಯಾಯದ ವ್ಯಾಪಾರ ಅಭ್ಯಾಸಗಳು ಮತ್ತು ಸೇವಾ ಶುಲ್ಕಗಳನ್ನು ವಿಧಿಸುವುದಕ್ಕೆ ಸಂಬಂಧಿಸಿದಂತೆ ಗ್ರಾಹಕರ … Continued

ಆಂಧ್ರಪ್ರದೇಶದಲ್ಲಿ ಪ್ರಧಾನಿ ಮೋದಿ ಹೆಲಿಕಾಪ್ಟರ್ ಬಳಿ ಹಾರಿದ ಕಪ್ಪು ಬಲೂನ್‌ಗಳು : 4 ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಹೈದರಾಬಾದ್‌ : ಆಂಧ್ರಪ್ರದೇಶದ ಗನ್ನವರಂ ವಿಮಾನ ನಿಲ್ದಾಣದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಹೆಲಿಕಾಪ್ಟರ್ ಟೇಕಾಫ್ ಆದ ನಂತರ ಕಪ್ಪು ಬಲೂನ್‌ಗಳನ್ನು ಬಿಡುಗಡೆ ಮಾಡಿದ್ದಕ್ಕಾಗಿ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಧಾನಿ ಮೋದಿ ಅವರ ಆಂಧ್ರಪ್ರದೇಶ ಭೇಟಿಯ ವೇಳೆ ಗನ್ನವರಂ ವಿಮಾನ ನಿಲ್ದಾಣದಲ್ಲಿ ಭದ್ರತಾ ಲೋಪವಾಗಿದೆ ಎಂಬ ಹೇಳಿಕೆಯನ್ನು ನಿರಾಕರಿಸಿದ ಪೊಲೀಸರು, ಪ್ರಧಾನಿ ಮೋದಿ … Continued

GST ಜಾರಿಯಿಂದ ರಾಜ್ಯಗಳಿಗೆ ಪ್ರಯೋಜನವಾಗಿಲ್ಲ …ಒಂದು ರಾಷ್ಟ್ರ – ಒಂದು ತೆರಿಗೆ” ಕಲ್ಪನೆ ಬದಲಾವಣೆ ಸನ್ನಿಹಿತವೇ

ಪರಿಪೂರ್ಣ ಸಿದ್ಧತೆಗಳಿಲ್ಲದೆ ತರತುರಿಯಲ್ಲಿ ಅರಬೆಂದ ಸರಕು ಮತ್ತು ಸೇವಾ ತೆರಿಗೆ (GST ) ಕಾಯ್ದೆ ಜಾರಿಯಿಂದ ಐದು ವರ್ಷಗಳ ನಂತರವೂ ಯಾವುದೇ ಪ್ರಯೋಜನವಾಗಿಲ್ಲವೆಂದು ದೇಶದ ಹೆಸರಾಂತ ರೇಟಿಂಗ್ ಸಂಸ್ಥೆ ವರದಿ ಮಾಡಿದೆ. ರಾಜ್ಯ ಸರಕು ಮತ್ತು ಸೇವಾ ತೆರಿಗೆಯಲ್ಲಿ ರಾಜ್ಯಗಳ ಸ್ವಂತ ತೆರಿಗೆ ಆದಾಯ ಹಣಕಾಸು ವರ್ಷ 2014-2017 ರಲ್ಲಿ 55.20% ರಷ್ಟಿದ್ದಿದ್ದು 2018-2021ರಲ್ಲಿ 55.40% … Continued

ಸಿಎಂ ಆಗಿ ವಿಧಾನಸಭೆಯಲ್ಲಿ ತಮ್ಮ ಮೊದಲ ಭಾಷಣದಲ್ಲಿ ಮೃತಪಟ್ಟ ತಮ್ಮ ಮಕ್ಕಳ ಸ್ಮರಿಸಿ ಕಣ್ಣೀರಿಟ್ಟ ಏಕನಾಥ ಶಿಂಧೆ

ಮುಂಬೈ: ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಇಂದು, ಸೋಮವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಭಾವನಾತ್ಮಕ ಮಾತನಾಡುತ್ತ ಕುಸಿದರು. ಸುಲಭವಾದ ವಿಶ್ವಾಸ ಮತದ ಗೆಲುವಿನ ನಂತರ ಮುಖ್ಯಮಂತ್ರಿಯಾಗಿ ಅವರು ತಮ್ಮ ಮೊದಲ ಭಾಷಣ ಮಾಡಿದರು. ಏಕನಾಥ್ ಶಿಂಧೆ ಅವರು ತಮ್ಮ ದಂಗೆಯ ಪರಿಣಾಮವಾಗಿ ತಮ್ಮ ಕುಟುಂಬಕ್ಕೆ ಬೆದರಿಕೆ ಉಂಟಾದ ಬಗ್ಗೆ ವಿವರಿಸಿದಾಗ ಉಮ್ಮಳಿಸಿದರು. ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಶಿಂಧೆ, ನಾವು … Continued

ಭ್ರಷ್ಟಾಚಾರ ಆರೋಪ : ಐಎಎಸ್‌ ಅಧಿಕಾರಿ ಮಂಜುನಾಥ ಬಂಧಿಸಿದ ಎಸಿಬಿ

ಬೆಂಗಳೂರು: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಮೊನ್ನೆಯಷ್ಟೇ ಬೆಂಗಳೂರು ಜಿಲ್ಲಾಧಿಕಾರಿ ಹುದ್ದೆಯಿಂದ ಎತ್ತಂಗಡಿಯಾಗಿದ್ದ ಐಎಎಸ್ ಅಧಿಕಾರಿ ಜೆ. ಮಂಜುನಾಥ್ ಅವರನ್ನು ಇಂದು, ಸೋಮವಾರ ಎಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದಾಗ ಭ್ರಷ್ಟಾಚಾರ ಆರೋಪಕ್ಕೆ ಒಳಗಾಗಿದ್ದ ಐಎಎಸ್​ ಅಧಿಕಾರಿ ಜೆ. ಮಂಜುನಾಥ ಬಂಧನವಾಗಿದೆ. ಅವರನ್ನು ಸರ್ಕಾರ ಕೆಲವೇ ದಿನಗಳ ಹಿಂದೆ ಇಂಟಿಗ್ರೇಟೆಡ್ ಚೈಲ್ಡ್ ಪ್ರೊಟೆಕ್ಷನ್ ಸ್ಕೀಂ ಡೈರೆಕ್ಟರ್ … Continued