ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ: ಸಿಐಡಿ ಅಧಿಕಾರಿಗಳಿಂದ ಎಡಿಜಿಪಿ ಅಮೃತ್ ಪೌಲ್ ಬಂಧನ

ಬೆಂಗಳೂರು: ಬೆಂಗಳೂರು: ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮ ನೇಮಕಾತಿ ವಿಭಾಗದ ಮುಖ್ಯಸ್ಥರಾಗಿದ್ದ ಹಿರಿಯ ಐಪಿಎಸ್ ಅಧಿಕಾರಿ ಅಮೃತ್ ಪೌಲ್ ಅವರನ್ನು ಇಂದು, ಸೋಮವಾರ ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಕರ್ನಾಟಕದಲ್ಲಿ ಬಾರಿಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಎಡಿಜಿಪಿ(ADGP) ಶ್ರೇಣಿಯ ಐಪಿಎಸ್ ಅಧಿಕಾರಿಯನ್ನು ಪೊಲೀಸರು ಬಂಧಿಸಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಒಂದನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರುಪಡಿಸಿದ ನಂತರ … Continued

ಅಂಕೋಲಾ: ಟ್ರಾನ್ಸಫಾರ್ಮರ್‌ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಕಾರು, ಓರ್ವ ಸಾವು

ಅಂಕೋಲಾ: ಅಂಕೋಲಾ: ಸ್ವಿಪ್ಟ್ ಕಾರೊಂದು ನಿಯಂತ್ರಣ ತಪ್ಪಿ ವಿದ್ಯುತ್ ಟ್ರಾನ್ಸಫಾರ್ಮರ್‌ಗೆ ಡಿಕ್ಕಿ ಹೊಡೆದ ನಂತರ ಸಂಪೂರ್ಣವಾಗಿ ಹೊತ್ತಿ ಉರಿದ ಘಟನೆ ತಾಲೂಕಿನ ಹಾರವಾಡದ ರೈಲ್ವೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 17ರಲ್ಲಿ ಸಂಭವಿಸಿದೆ. ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಪ್ರಯಾಣಿಕ ಮೃತಪಟ್ಟಿದ್ದು, ಉಳಿದ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವುದಾಗಿ ಮಾಹಿತಿ ದೊರಕಿದೆ. ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಅಗ್ನಿಶಾಮಕ … Continued

ನಾಯಿ ಬೊಗಳಿತೆಂದು ನಾಯಿ, ಅದರ ಮಾಲೀಕರು, ಇತರ ಮೂವರ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿದ ದೆಹಲಿ ವ್ಯಕ್ತಿ : ದೃಶ್ಯ ಸಿಸಿಟಿಯಲ್ಲಿ ಸೆರೆ

ನವದೆಹಲಿ: ನೆರೆಮನೆಯ ನಾಯಿ ಬೊಗಳಿತು ಎಂಬ ಕ್ಷುಲ್ಲಕ ಕಾರಣ ವ್ಯಕ್ತಿಯೊಬ್ಬ ಮೂವರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿರುವ ಘಟನೆ ದೆಹಲಿಯ ಪಶ್ಚಿಮ್ ವಿಹಾರ್‌ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ವ್ಯಕ್ತಿ ನಾಯಿಗೂ ಹೊಡೆದು ಗಾಯಗೊಳಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಡೀ ಘಟನೆ ಆ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮುಂಜಾನೆ ಧರ್ಮವೀರ್ … Continued

‘ಕಾಳಿ’ ಸಿಗರೇಟ್‌ ಸೇದುತ್ತಿರುವ ಸಾಕ್ಷ್ಯ ಚಿತ್ರದ ಪೋಸ್ಟರ್‌ : ಧಾರ್ಮಿಕ ಭಾವನಗೆಗಳಿಗೆ ಧಕ್ಕೆ, ಪೋಸ್ಟರ್‌ ವಿರುದ್ಧ ದೂರು ದಾಖಲು

ನವದೆಹಲಿ:  ‘ಕಾಳಿ’ ಸಾಕ್ಷ್ಯಚಿತ್ರದ ವಿವಾದಾತ್ಮಕ ಪೋಸ್ಟರ್ ಕುರಿತು ಕೋಲಾಹಲದ ನಡುವೆ, “ಅತ್ಯಂತ ಆಕ್ಷೇಪಾರ್ಹ” ಪೋಸ್ಟರ್ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ದೆಹಲಿ ಮೂಲದ ವಕೀಲ ವಿನೀತ್ ಜಿಂದಾಲ್ ಅವರು ಜುಲೈ 2ರಂದು ಲೀನಾ ಅವರು ಹಂಚಿಕೊಂಡ ವಿವಾದಾತ್ಮಕ ಪೋಸ್ಟರ್ ಬಗ್ಗೆ ದೂರು ದಾಖಲಿಸಿದ್ದಾರೆ. … Continued

ಆಮ್​ ಆದ್ಮಿ ಪಕ್ಷದ ಜನಸಂಪರ್ಕ-ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮುಖ್ಯಮಂತ್ರಿ ಚಂದ್ರು ನೇಮಕ

ಬೆಂಗಳೂರು: ಆಮ್‌ ಆದ್ಮಿ ಪಕ್ಷದ ರಾಜ್ಯ ಜನಸಂಪರ್ಕ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಖ್ಯಾತ ನಟ, ಮಾಜಿ ಶಾಸಕ ಮುಖ್ಯಮಂತ್ರಿ ಚಂದ್ರು ಅವರನ್ನು ನೇಮಕ ಮಾಡಲಾಗಿದೆ. ಆಮ್‌ ಆದ್ಮಿ ಪಕ್ಷದ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್‌ ಪಾಂಡೆ ಅವರ ಸೂಚನೆಯಂತೆ ಮುಖ್ಯಮಂತ್ರಿ ಚಂದ್ರು ಅವರನ್ನು ರಾಜ್ಯಾಧ್ಯಕ್ಷ ಪೃಥ್ವಿರೆಡ್ಡಿ ನೇಮಕ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಮುಖ್ಯಮಂತ್ರಿ … Continued

ಕ್ಯಾಮರಾ ಮುಂದೆ ಉದ್ಧವ್ ಠಾಕ್ರೆಗಾಗಿ ಕಣ್ಣೀರಿಟ್ಟ ಶಾಸಕ: ವಿಶ್ವಾಸ ಮತದ ವೇಳೆ ಸಿಎಂ ಏಕನಾಥ ಶಿಂಧೆಗೆ ಮತ | ವೀಕ್ಷಿಸಿ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಬಲಾಬಲ ಪರೀಕ್ಷೆಯ ಮುನ್ನಾದಿನ ರಾತ್ರಿ, ಉದ್ಧವ್‌ ಠಾಕ್ರೆ ಬಣಕ್ಕೆ ಸೇರಿದ ಮತ್ತೊಬ್ಬ ಶಿವಸೇನೆ ಶಾಸಕ ಮುಖ್ಯಮಂತ್ರಿ ಏಕನಾಥ ಶಿಂಧೆ ಬಣದೊಂದಿಗೆ ಸೇರಿಕೊಂಡರು, ಈಗಾಗಲೇ ಖಚಿತವಾದ ಬಹುಮತಕ್ಕೆ ಮತ್ತೊಬ್ಬರು ಸೇರಿದರು. ಶಾಸಕ ಸಂತೋಷ್ ಬಂಗಾರ್ ಅವರು ಒಂದು ವಾರದ ಹಿಂದೆ ಉದ್ಧವ್ ಠಾಕ್ರೆ ಅವರನ್ನು ಬೆಂಬಲಿಸಿ ಸಾರ್ವಜನಿಕವಾಗಿ ಕಣ್ಣೀರು … Continued

ಕಾಳಿ ಸಿಗರೇಟ್ ಸೇದುತ್ತಿರುವುದನ್ನು ತೋರಿಸುವ ಸಾಕ್ಷ್ಯಚಿತ್ರದ ಪೋಸ್ಟರ್…!: ಹಿಂದೂ ದೇವತೆ ಅಪಮಾನಕ್ಕೆ ನಿರ್ಮಾಪಕಿ ಬಂಧನಕ್ಕೆ ಒತ್ತಾಯ

ಹಿಂದೂ ದೇವತೆ ಕಾಳಿ ಸಿಗರೇಟ್ ಸೇದುತ್ತಿರುವುದನ್ನು ತೋರಿಸುವ ಸಾಕ್ಷ್ಯಚಿತ್ರದ ಪೋಸ್ಟರ್ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಚಿತ್ರ ನಿರ್ಮಾಪಕರ ಬಂಧನಕ್ಕೆ ಹಲವರು ಒತ್ತಾಯಿಸುತ್ತಿದ್ದಾರೆ. ಕಾಳಿ ಎಂಬ ಸಾಕ್ಷ್ಯಚಿತ್ರವು ವಿವಾದದ ಮಧ್ಯಭಾಗದಲ್ಲಿರುವ ಎಲ್ಲಾ ತಪ್ಪು ಕಾರಣಗಳಿಗಾಗಿ ವೈರಲ್ ಆಗುತ್ತಿದೆ. ಚಿತ್ರದ ಪೋಸ್ಟರ್ ಹಿಂದೂ ದೇವತೆಗೆ ಅವಮಾನ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ನೆಟ್ಟಿಗರು … Continued

ಡಿಎಂಕೆ ಪ್ರತ್ಯೇಕ ತಮಿಳುನಾಡು ಬೇಡಿಕೆ ಇಡುವಂತೆ ಮಾಡಬೇಡಿ: ಸಿಎಂ ಸ್ಟಾಲಿನ್ ವೇದಿಕೆಯಲ್ಲಿದ್ದಾಗಲೇ ಸ್ವಾಯತ್ತತೆ ಬೇಡಿಕೆ ಇಟ್ಟ ಎ ರಾಜಾ

ನಮಕ್ಕಲ್ (ತಮಿಳುನಾಡು): ರಾಜ್ಯ ಸ್ವಾಯತ್ತತೆಯನ್ನು ನಿರಾಕರಿಸುವ ಮೂಲಕ ಪ್ರತ್ಯೇಕ ತಮಿಳುನಾಡು ಬೇಡಿಕೆಯನ್ನು ಪುನರುಜ್ಜೀವನಗೊಳಿಸಲು ಡಿಎಂಕೆಯನ್ನು ಒತ್ತಾಯಿಸಬೇಡಿ ಎಂದು ಡಿಎಂಕೆ ಸಂಸದ ಎ ರಾಜಾ ಕೇಂದ್ರಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಾನುವಾರ ನಾಮಕ್ಕಲ್‌ನಲ್ಲಿ ನಡೆದ ಡಿಎಂಕೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಮಾವೇಶದಲ್ಲಿ ಮಾತನಾಡಿದ, ಎ ರಾಜಾ, ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಉಪಸ್ಥಿತಿಯಲ್ಲಿ ರಾಜ್ಯ ಸ್ವಾಯತ್ತತೆ ನೀಡುವಂತೆ … Continued

ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ಸಿಎಂ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ

ಮುಂಬೈ: ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇಂದು, ಸೋಮವಾರ ನಡೆದ ವಿಶ್ವಾಸಮತ ಗೆದ್ದು ಸದನದಲ್ಲಿ ತನ್ನ ಬಹುಮತವನ್ನು ಸಾಬೀತುಪಡಿಸಿದೆ. ಹೊಸದಾಗಿ ಪ್ರಮಾಣ ವಚನ ಸ್ವೀಕರಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರ 164 ಮತಗಳನ್ನು ಪಡೆಯುವ ಮೂಲಕ ಬಹುಮತ ಸಾಬೀತುಪಡಿಸಿತು. 288 ಸದಸ್ಯ ಬಲದ ಸದನದಲ್ಲಿ 164 ಶಾಸಕರು ವಿಶ್ವಾಸಮತದ ಪರ … Continued

ಹೊನ್ನಾವರ: ಕರ್ಕಿ ಮಠದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮಿಗಳ ಚಾತುರ್ಮಾಸ್ಯ ಗಾಣಗಾಪುರದಲ್ಲಿ

ಹೊನ್ನಾವರ: ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕರ್ಕಿಯ ಶ್ರೀ ಜ್ಞಾನೇಶ್ವರೀ ಮಠದ ಪೀಠಾಧೀಶರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮಿಗಳ 37ನೇ ಚಾತುರ್ಮಾಸ್ಯ ವ್ರತ ಆಶಾಢ ಪೂರ್ಣಿಮೆ( ಗುರುಪೂರ್ಣಿಮೆ)ಯ ಜುಲೈ 13ರಿಂದ  ಶ್ರೀ ದತ್ತಾತ್ರೇಯ ಕ್ಷೇತ್ರವಾದ ಭೀಮಾ ಅಮರಜಾ ಸಂಗಮವಾದ ಶ್ರೀ ಕ್ಷೇತ್ರ ಗಾಣಗಾಪುರದಲ್ಲಿ ನಡೆಯಲಿದೆ. ಗಾಣಗಾಪುರದ ಸಂಗಮ ರಸ್ತೆಯಲ್ಲಿರುವ ಜಗದ್ಗುರು ಶ್ರೀ ಶಂಕರಾಚಾರ್ಯರ … Continued