ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ತೊರೆದು ಈಗ ಪೋಲೆಂಡ್‌ನಲ್ಲಿದ್ದಾರೆ: ರಷ್ಯಾ ಹೇಳಿಕೆ

ಮಾಸ್ಕೋ: ಉಕ್ರೇನ್ ಆಕ್ರಮಣದ 9 ನೇ ದಿನದ ಯುದ್ಧದ ತೀವ್ರತೆಯ ಮಧ್ಯೆ, ರಷ್ಯಾದ ಸ್ಟೇಟ್ ಡುಮಾ ಸ್ಪೀಕರ್ ವ್ಯಾಚೆಸ್ಲಾವ್ ವೊಲೊಡಿನ್ ಶುಕ್ರವಾರ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್ ತೊರೆದು ಪೋಲೆಂಡ್‌ನಲ್ಲಿದ್ದಾರೆ ಎಂದು ಹೇಳಿದ್ದಾರೆಂದು ಸ್ಪುಟ್ನಿಕ್ ವರದಿ ಮಾಡಿದೆ. “ಅಧ್ಯಕ್ಷ ಝೆಲೆನ್ಸ್ಕಿ ಉಕ್ರೇನ್ ತೊರೆದಿದ್ದಾರೆ ಎಂದು ತಮ್ಮ ಟೆಲಿಗ್ರಾಮ್ ಚಾನೆಲ್‌ನಲ್ಲಿ ಬರೆದಿದ್ದಾರೆ. ಆದರೆ ಉಕ್ರೇನ್ ಅಧ್ಯಕ್ಷರ … Continued

ಉಕ್ರೇನ್‌ನಲ್ಲಿ ದಿನಗಟ್ಟಲೆ ಆಹಾರ-ನೀರಿಲ್ಲದೆ ಪರಿತಪಿಸುತ್ತಿರುವ ಭಾರತೀಯ ವಿದ್ಯಾರ್ಥಿಗಳು ಈಗ ನೀರಿಗಾಗಿ ಹಿಮವನ್ನೇ ಕರಗಿಸುತ್ತಿದ್ದಾರೆ… | ವೀಕ್ಷಿಸಿ

ಕೀವ್‌: ಉಕ್ರೇನ್ ಆಕ್ರಮಣದ ನಂತರ ಆಹಾರ ಮತ್ತು ನೀರಿಲ್ಲದೆ ದಿನಗಟ್ಟಲೆ ಸಿಲುಕಿರುವ ಈಶಾನ್ಯ ನಗರದ ಸುಮಿಯ ಹಾಸ್ಟೆಲ್‌ನಲ್ಲಿ ಕೆಲವು ಭಾರತೀಯ ವಿದ್ಯಾರ್ಥಿಗಳು ನೀರಿಗಾಗಿ ಹಿಮವನ್ನೇ ಕರಗಿಸಲು ಹಿಮವನ್ನು ಸಂಗ್ರಹಿಸುತ್ತಿರುವುದು ವೀಡಿಯೊದಲ್ಲಿ ಕಂಡುಬಂದಿದೆ. ಎನ್‌ಡಿಟಿವಿ ವರದಿಯ ಪ್ರಕಾರ, ಅವರಲ್ಲಿ ಸುಮಾರು 800-900 ವಿದ್ಯಾರ್ಥಿಗಳು ಒಂದು ವಾರದಿಂದ ಸುಮಿ ಸ್ಟೇಟ್ ಯೂನಿವರ್ಸಿಟಿಯ ವೈದ್ಯಕೀಯ ಸಂಸ್ಥೆಯ ಹಾಸ್ಟೆಲ್‌ಗಳಲ್ಲಿ ಬಂಧಿಯಾಗಿದ್ದಾರೆ ಮತ್ತು … Continued

ಲೆಗ್ ಸ್ಪಿನ್ ಮಾಂತ್ರಿಕ ಶಕ್ತಿಯನ್ನು ಪುನರುಜ್ಜೀವನಗೊಳಿಸಿದ ಕ್ರಿಕೆಟ್‌ ದಂತಕಥೆ ಶೇನ್ ವಾರ್ನ್

ಆಸ್ಟ್ರೇಲಿಯಾದ ಮಾಜಿ ಸ್ಪಿನ್ನರ್ ಶೇನ್ ವಾರ್ನ್, ನಿಸ್ಸಂದೇಹವಾಗಿ ಕ್ರಿಕೆಟ್‌ನಲ್ಲಿ ಸ್ಪಿನ್ ಬೌಲಿಂಗ್ ಅನ್ನು ಮರು ವ್ಯಾಖ್ಯಾನಿಸಿದ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರು. 52 ವರ್ಷ ವಯಸ್ಸಿನ ಶೇನ್‌ ವಾರ್ನ್‌ ಥಾಯ್ಲೆಂಡ್‌ನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಅವರ ನಿರ್ವಣೆಯ ಕಂಪನಿ ಹೇಳಿಕೆ ನಂತರ ವಿಶ್ವ ಕ್ರಿಕೆಟ್‌ ಅವರ ಹಠಾತ್‌ ನಿಧನದಿಂದ ದಿಗ್ಭ್ರಮೆಗೆ ಒಳಗಾಗಿದೆ. ಇಡೀ ಕ್ರಿಕೆಟ್ ವಲಯವು ಶೋಕದಲ್ಲಿದೆ … Continued

ರಷ್ಯಾ-ಉಕ್ರೇನ್ ಬಿಕ್ಕಟ್ಟು : ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಮತದಾನದಿಂದ ದೂರ ಉಳಿದ ಭಾರತ

ನವದೆಹಲಿ: ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣದ ಪರಿಣಾಮವಾಗಿ ಸ್ವತಂತ್ರ ಅಂತಾರಾಷ್ಟ್ರೀಯ ತನಿಖಾ ಆಯೋಗವನ್ನು ತುರ್ತಾಗಿ ಸ್ಥಾಪಿಸಲು ನಿರ್ಧರಿಸಿದ ವಿಶ್ವಸಂಸ್ಥೆ ಮಾನವ ಹಕ್ಕುಗಳ ಕೌನ್ಸಿಲ್‌ನಲ್ಲಿನ ಮತದಾನದ ವೇಳೆ ಭಾರತವು ದೂರ ಉಳಿದಿದೆ. 47 ಸದಸ್ಯರ ಕೌನ್ಸಿಲ್ ಉಕ್ರೇನ್‌ನಲ್ಲಿ ಮಾನವ ಹಕ್ಕುಗಳ ಪರಿಸ್ಥಿತಿಯ ಕರಡು ನಿರ್ಣಯದ ಮೇಲೆ ಮತ ಚಲಾಯಿಸಿತು. ಈ ನಿರ್ಣಯವನ್ನು ಪರವಾಗಿ 32 ಮತಗಳು, ಎರಡು … Continued

ಗಣಿಗಾರಿಕೆಯಲ್ಲಿ ಬಿಳಿಕಲ್ಲು ಗುಡ್ಡ ಕುಸಿತ: 7 ಜನರ ರಕ್ಷಣೆ, ಇಬ್ಬರು ನಾಪತ್ತೆ ಶಂಕೆ

ಗುಂಡ್ಲುಪೇಟೆ (ಚಾಮರಾಜನಗರ ಜಿಲ್ಲೆ): ತಾಲೂಕಿನ ಮಡಹಳ್ಳಿ ಹತ್ತಿರವಿರುವ ಬಿಳಿಕಲ್ಲು ಗಣಿಗಾರಿಕೆಯಿಂದ ಗುಡ್ಡವೊಂದು ಕುಸಿದಿರುವ ಘಟನೆ ಶುಕ್ರವಾರ ಬೆಳಿಗ್ಗೆ 11:30ರಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಸುಮಾರು 7 ಮಂದಿಯನ್ನು ರಕ್ಷಣೆ ಮಾಡಲಾಗಿದ್ದು, ಇದರಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ. ಘಟನೆಯಲ್ಲಿ 6 ಟಿಪ್ಪರುಗಳು, 5 ಜೆಸಿಬಿಗಳು, 4 ಟ್ರ್ಯಾಕ್ಟರ್‌ಗಳು ಮಣ್ಣಿನಡಿ ಸಿಲುಕಿವೆ. ಈ ಇಬ್ಬರು … Continued

ಪಾಕಿಸ್ತಾನದ ಮಸೀದಿಯಲ್ಲಿ ಸ್ಫೋಟ: ಸಾವಿನ ಸಂಖ್ಯೆ 56 ಕ್ಕೆ ಏರಿಕೆ, 190 ಕ್ಕೂ ಹೆಚ್ಚು ಜನರಿಗೆ ಗಾಯ

ಪೇಶಾವರ: ಶುಕ್ರವಾರದ ಪ್ರಾರ್ಥನೆಯ ಸಮಯದಲ್ಲಿ ಪಾಕಿಸ್ತಾನದ ವಾಯವ್ಯ ನಗರವಾದ ಪೇಶಾವರ್‌ನಲ್ಲಿರುವ ಶಿಯಾ ಮುಸ್ಲಿಂ ಮಸೀದಿಯೊಳಗೆ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಸಾವಿನ ಸಂಖ್ಯೆ 56ಕ್ಕೆ ಏರಿದ್ದು, 194 ಜನರು ಗಾಯಗೊಂಡಿದ್ದಾರೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ದಾಳಿಯ ಹೊಣೆಯನ್ನು ತಕ್ಷಣವೇ ಯಾವುದೇ ಉಗ್ರಗಾಮಿ ಸಂಘಟನೆ ಹೊತ್ತುಕೊಂಡಿಲ್ಲ. ಇಸ್ಲಾಮಿಕ್ ಸ್ಟೇಟ್ ಗುಂಪು ಮತ್ತು ಪಾಕಿಸ್ತಾನಿ ತಾಲಿಬಾನ್ ಎರಡೂ … Continued

ಸರ್ಕಾರದ ನಿಯಂತ್ರಣದಿಂದ ದೇವಾಲಯಗಳಿಗೆ ಮುಕ್ತಿ, ಸ್ವಾಯತ್ತತೆ: ಬಜೆಟ್‌ನಲ್ಲಿ ಬೊಮ್ಮಾಯಿ ಪ್ರಸ್ತಾಪ

ಬೆಂಗಳೂರು: ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿರುವ ದೇವಾಲಯಗಳಿಗೆ ಸ್ವಾಯತ್ತತೆ ನೀಡಿ ಅಭಿವೃದ್ಧಿ ಕಾಮಗಾರಿಗಳ ವಿವೇಚನೆಯನ್ನ ದೇವಾಲಯಗಳಿಗೆ ಪ್ರತ್ಯಾ ಯೋಜಿಸಲು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು, ಶುಕ್ರವಾರ ಮಂಡಿಸಿದ 2022-23ನೇ ಸಾಲಿನ ಬಜೆಟ್‍ನಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ದೇವಾಲಯಗಳನ್ನು ಸರ್ಕಾರದ ನಿಯಂತ್ರಣದಿಂದ … Continued

ಅಪ್ರಚೋದಿತ, ನ್ಯಾಯಸಮ್ಮತವಲ್ಲ: ಸಾಯುವ ಕೆಲವೇ ದಿನಗಳ ಮೊದಲು ಉಕ್ರೇನ್‌ನ ಮೇಲೆ ರಷ್ಯಾ ದಾಳಿ ಬಗ್ಗೆ ಶೇನ್ ವಾರ್ನ್ ಟೀಕಿಸಿದ್ದರು..

ಶೇನ್ ವಾರ್ನ್, 52 ನೇ ವಯಸ್ಸಿನಲ್ಲಿ ಶುಕ್ರವಾರ ಹೃದಯಘಾತದಿಂದ ಹಠಾತ್‌ ನಿಧನರಾಗಿದ್ದು, ಕೆಲವೇ ದಿನಗಳ ಮೊದಲು ಟ್ವೀಟ್‌ಗಳಲ್ಲಿ, ಉಕ್ರೇನ್‌ನ ಮೇಲೆ ರಷ್ಯಾದ ಆಕ್ರಮಣವನ್ನು “ಪ್ರಚೋದಿತ” ಮತ್ತು “ನ್ಯಾಯಸಮ್ಮತವಲ್ಲದ ಆಕ್ರಮಣ ಎಂದು ಟೀಕಿಸಿದ್ದರು. “ರಷ್ಯಾದ ಮಿಲಿಟರಿ ಪಡೆಗಳಿಂದ ಅಪ್ರಚೋದಿತ ಮತ್ತು ಅನ್ಯಾಯದ ದಾಳಿಯಿಂದ ಬಳಲುತ್ತಿರುವ ಉಕ್ರೇನ್ ಜನರೊಂದಿಗೆ ಇಡೀ ಜಗತ್ತು ಇದೆ. ಚಿತ್ರಗಳು ಭಯಾನಕವಾಗಿವೆ ಮತ್ತು ಇದನ್ನು … Continued

ಹರ್ಯಾಣ ವಿಧಾನಸಭೆಯಲ್ಲಿ ಮತಾಂತರ ವಿರೋಧಿ ಮಸೂದೆ ಮಂಡಿಸಿದ ಸರ್ಕಾರ, ಕೋಲಾಹಲ

ಚಂಡೀಗಡ: ಹರ್ಯಾಣ ಸರ್ಕಾರ ಶುಕ್ರವಾರ ವಿಧಾನಸಭೆಯಲ್ಲಿ ಮತಾಂತರ ವಿರೋಧಿ ಮಸೂದೆಯನ್ನು ಮಂಡಿಸಿದ್ದು, ಧಾರ್ಮಿಕ ತಾರತಮ್ಯವನ್ನು ಉಲ್ಲೇಖಿಸಿ ಪ್ರತಿಪಕ್ಷಗಳು ಮಸೂದೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೋಲಾಹಲಕ್ಕೆ ಕಾರಣವಾಯಿತು. ಇಂದು, ಶುಕ್ರವಾರ ಬಜೆಟ್ ಅಧಿವೇಶನದಲ್ಲಿ ಕಾನೂನುಬಾಹಿರ ಮತಾಂತರ ತಡೆ ಮಸೂದೆಯನ್ನು ಮಂಡಿಸಲಾಯಿತು. ತಪ್ಪು ನಿರೂಪಣೆ, ಬಲವಂತ, ಅನಗತ್ಯ ಪ್ರಭಾವ, ಬಲಾತ್ಕಾರ, ಆಮಿಷ ಅಥವಾ ಯಾವುದೇ ಮೋಸದ ವಿಧಾನದಿಂದ ಅಥವಾ … Continued

ಆಸ್ಟ್ರೇಲಿಯಾದ ಕ್ರಿಕೆಟ್‌ ದಂತಕಥೆ ಶೇನ್ ವಾರ್ನ್ ಹೃದಯಾಘಾತದಿಂದ ನಿಧನ

ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಶೇನ್ ವಾರ್ನ್ ಥಾಯ್ಲೆಂಡ್‌ನಲ್ಲಿ ಶಂಕಿತ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 52 ವರ್ಷ ವಯಸ್ಸಾಗಿತ್ತು. ವಾರ್ನ್ ಅವರು ಟೆಸ್ಟ್ ಕ್ರಿಕೆಟ್‌ನ ಎರಡನೇ ಅತ್ಯಂತ ಹೆಚ್ಚು ವಿಕೆಟ್-ಪಡೆದ ಆಟಗಾರರಾಗಿದ್ದಾರೆ. ಅವರನ್ನು ವಿಶ್ವದ ಶ್ರೇಷ್ಠ ಬೌಲರ್‌ಗಳಲ್ಲಿ ಒಬ್ಬರು ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ಶುಕ್ರವಾರ ಬಿಡುಗಡೆ ಮಾಡಿದ ಸಂಕ್ಷಿಪ್ತ ಹೇಳಿಕೆಯಲ್ಲಿ ವಾರ್ನ್ ಅವರ ನಿರ್ವಹಣಾ ಕಂಪನಿಯು ಥೈಲ್ಯಾಂಡ್‌ನ … Continued