ಉಕ್ರೇನ್‌- ರಷ್ಯಾ ಯುದ್ಧ: ಭಾರತದಲ್ಲಿ ಮುಂದಿನ ವಾರದಿಂದ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಗುವ ಸಾಧ್ಯತೆ..

ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವು ಜಾಗತಿಕವಾಗಿ ಕಚ್ಚಾ ತೈಲ ಬೆಲೆಗಳಲ್ಲಿ ಹೆಚ್ಚಳ ಮಾಡಿದೆ. ಅಲ್ಪಾವಧಿಯಲ್ಲಿ ಪ್ರತಿ ಬ್ಯಾರೆಲ್‌ಗೆ $ 95 ರಿಂದ 125 ಅಮೆರಿಕನ್‌ ಡಾಲರ್‌ ವರೆಗೆ ಇದು ಏರಬಹುದು ಎಂದು ಅಂದಾಜಿಸಲಾಗಿದೆ. ಕಚ್ಚಾ ತೈಲ ಬೆಲೆಯಲ್ಲಿ ಜಾಗತಿಕ ಹೆಚ್ಚಳವು ಭಾರತದ ದೇಶೀಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಪ್ರತಿ ಲೀಟರ್‌ಗೆ 15-22 … Continued

ಕರ್ನಾಟಕದಲ್ಲಿ ದೈನಂದಿನ ಕೊರೊನಾ ಸೋಂಕು, ಸಕ್ರಿಯ ಪ್ರಕರಣಗಳು ಇಳಿಕೆ

ಬೆಂಗಳೂರು: ಕರ್ನಾಟಕದಲ್ಲಿ ದೈನಂದಿನ ಕೊರೊನಾ ಸೋಂಕು ಹಾಗೂ ಸಕ್ರಿಯ ಪ್ರಕರಣಗಳಲ್ಲಿ ಇಳಿಕೆಯಾಗುತ್ತಿದೆ. ರಾಜ್ಯದಲ್ಲಿ ಇಂದು, ಶನಿವಾರ ಹೊಸದಾಗಿ 278 ಸೋಂಕು ದಾಖಲಾಗಿದ್ದು, ಮೂವರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇದೇ ಸಮಯದಲ್ಲಿ 458 ಮಂದಿ ಗುಣಮುಖರಾಗಿ ವಿವಿಧ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದ ಸಕ್ರಿಯ ಪ್ರಕರಣಗಳ ಸಂಖ್ಯೆ 3,286ಕ್ಕೆ ಇಳಿಕೆಯಾಗಿದೆ ರಾಜ್ಯದ ಸಕಾರಾತ್ಮಕತೆ ದರ 0.53% ಮತ್ತು ಮರಣ … Continued

ಹೃದಯ ವಿದ್ರಾವಕ ಘಟನೆ: 2 ವರ್ಷದ ಮಗುವನ್ನು ಕೊಂದ ಬೆಕ್ಕು…!

ಜಬಲ್‌ಪುರ (ಮಧ್ಯಪ್ರದೇಶ): ಜಬಲ್‌ಪುರದ ಬರೇಲಾದಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಭೀಕರ ಘಟನೆಯೊಂದರಲ್ಲಿ ಬೆಕ್ಕೊಂದು ಎರಡು ವರ್ಷದ ಬಾಲಕನ ಮೇಲೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಜಬಲ್‌ಪುರ ಜಿಲ್ಲೆಯ ಬರೇಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ನಡೆದಿದೆ. ಜಿಲ್ಲೆಯ ಮಹಗೋನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಗಳು ತಿಳಿಸಿವೆ. ವರದಿಗಳ … Continued

ಬೃಹತ್ ಸೈಬರ್‌ ದಾಳಿ ನಂತರ ಯುರೋಪಿನಲ್ಲಿ ಇಂಟರ್ನೆಟ್ ಇಲ್ಲದೆ ಪರದಾಡಿದ ಸಾವಿರಾರು ಜನರು: ವರದಿ

ಪ್ಯಾರಿಸ್: ಉಕ್ರೇನ್‌ನಲ್ಲಿ ರಷ್ಯಾದ ಆಕ್ರಮಣದ ಆರಂಭದಲ್ಲಿ ಶುಕ್ರವಾರ ಸೈಬರ್‌ ಅಟಾಕ್ ಆಗಿರಬಹುದು ಎಂದು ಮೂಲಗಳು ಹೇಳಿದ ನಂತರ ಯುರೋಪಿನಾದ್ಯಂತ ಸಾವಿರಾರು ಇಂಟರ್ನೆಟ್ ಬಳಕೆದಾರರನ್ನು ಆಫ್‌ಲೈನ್‌ನಲ್ಲಿಗೆ ಬಂದಿದ್ದಾರೆ. ಆರೆಂಜ್ ಪ್ರಕಾರ, ಫ್ರಾನ್ಸ್‌ನಲ್ಲಿ ಅದರ ಅಂಗಸಂಸ್ಥೆಯಾದ ನಾರ್ಡ್‌ನೆಟ್ ಒದಗಿಸಿದ ಉಪಗ್ರಹ ಇಂಟರ್ನೆಟ್ ಸೇವೆಯ ಸುಮಾರು 9,000 ಚಂದಾದಾರರು ಫೆಬ್ರವರಿ 24 ರಂದು ಅಮೆರಿಕ ಉಪಗ್ರಹ ಆಪರೇಟರ್ ಆಗಿರುವ ವಿಯಾಸ್ಯಾಟ್‌ನಲ್ಲಿ … Continued

ಉಕ್ರೇನ್‌ನಲ್ಲಿ ಸಾವಿಗೀಡಾದ ನವೀನ್ ಮನೆಗೆ ಸಿಎಂ ಭೇಟಿ, ಸಾಂತ್ವನ: ಪರಿಹಾರ ಚೆಕ್‌ ವಿತರಣೆ

ಹಾವೇರಿ: ಯುದ್ಧಪೀಡಿತ ಉಕ್ರೇನ್​ನಲ್ಲಿ ರಷ್ಯಾ ಪಡೆ ನಡೆಸಿದ ಶೆಲ್​ ದಾಳಿಯಲ್ಲಿ ಮೃತಪಟ್ಟ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡರ ಅವರ ಮನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶನಿವಾರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ನವೀನಗೆ ಸಲ್ಲಿಸಿದ ಬೊಮ್ಮಾಯಿ, ಮೃತನ ತಂದೆ ಶೇಖರಗೌಡ, ತಾಯಿ ವಿಜಯಲಕ್ಷ್ಮೀ ಹಾಗೂ ಸಹೋದರನಿಗೆ ಸಾಂತ್ವನ ಹೇಳಿದರು. ರಾಜ್ಯ ಸರ್ಕಾರದಿಂದ … Continued

ಕೋವಿಡ್ ಲಾಕ್‌ಡೌನ್‌ಗಳ ಸಮಯದಲ್ಲಿ ಆನ್‌ಲೈನ್ ತರಗತಿಗಳಿಗೆ ಹಾಜರಾಗದ 67%ರಷ್ಟು ಹುಡುಗಿಯರು : ವರದಿಗಳು

ನವದೆಹಲಿ: ದೇಶಾದ್ಯಂತ ನಾಲ್ಕು ರಾಜ್ಯಗಳಲ್ಲಿ ಕೋವಿಡ್‌-19 ಲಾಕ್‌ಡೌನ್‌ಗಳ ಸಮಯದಲ್ಲಿ ಕನಿಷ್ಠ 68%ರಷ್ಟು ಹದಿಹರೆಯದ ಹುಡುಗಿಯರು ಆರೋಗ್ಯ ಮತ್ತು ಪೌಷ್ಟಿಕಾಂಶದ ಸವಾಲುಗಳನ್ನು ಎದುರಿಸುತ್ತಿದ್ದಾರೆ ಮತ್ತು 67%ರಷ್ಟು ಆನ್‌ಲೈನ್ ತರಗತಿಗಳಿಗೆ ಹಾಜರಾಗಲಿಲ್ಲ ಎಂದು ಎನ್‌ಜಿಒ ವರದಿ ಹೇಳಿದೆ. ಸೇವ್ ದಿ ಚಿಲ್ಡ್ರನ್‌ನ ‘ದಿ ವರ್ಲ್ಡ್ ಆಫ್ ಇಂಡಿಯಾಸ್ ಗರ್ಲ್ಸ್- ವಿಂಗ್ಸ್ 2022’ ಎಂಬ ವರದಿಯು 2020-2021 ರ ಅವಧಿಯಲ್ಲಿ … Continued

ಕಾಂಗ್ರೆಸ್ ನಾಯಕನ ಮಗನ ಮದುವೆಯಲ್ಲಿ ಊಟ ಮಾಡಿದ 1,200 ಕ್ಕೂ ಹೆಚ್ಚು ಮಂದಿ ಆಸ್ಪತ್ರೆಗೆ ದಾಖಲು

ಮೆಹ್ಸಾನಾ: ಗುಜರಾತ್‌ನ ಮೆಹ್ಸಾನಾ ಜಿಲ್ಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕನ ಮಗನ ಮದುವೆಯಲ್ಲಿ ಆಹಾರ ಸೇವಿಸಿದ 1,200 ಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ವಿಸ್ನಗರ ತಾಲೂಕಿನ ಸವಲ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದೆ ಎಂದು ವಿಸ್ನಗರ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಮದುವೆಯಲ್ಲಿ ಆಹಾರ … Continued

ಆತ್ಮನಿರ್ಭರ ಭಾರತಕ್ಕೆ ಮತ್ತೊಂದು ಗರಿ: ಬ್ರಹ್ಮೋಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದ ಭಾರತೀಯ ನೌಕಾಪಡೆ

ನವದೆಹಲಿ: ಭಾರತೀಯ ನೌಕಾಪಡೆಯು ತನ್ನ ಮುಂಚೂಣಿ ಹಡಗಿನಲ್ಲಿ ಯುದ್ಧ ಸನ್ನದ್ಧತೆಯನ್ನು ಪ್ರದರ್ಶಿಸುವ ಬ್ರಹ್ಮೋಸ್ ಕ್ಷಿಪಣಿಯ ಸುಧಾರಿತ ಆವೃತ್ತಿಯನ್ನು ಶನಿವಾರ ಯಶಸ್ವಿಯಾಗಿ ಪರೀಕ್ಷಿಸಿದೆ. ರಕ್ಷಣಾ ವಲಯದಲ್ಲಿ ಆತ್ಮ ನಿರ್ಭರ ಮತ್ತೊಂದು ಅವತರಣಿಕೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಯು ಪಿನ್ ಪಾಯಿಂಟ್ ನಿಖರತೆಯೊಂದಿಗೆ ಗುರಿಯನ್ನು ಮುಟ್ಟಿತು ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.ಬ್ರಹ್ಮೋಸ್ ಕ್ಷಿಪಣಿಯ ಸುಧಾರಿತ ಆವೃತ್ತಿಯ ದೀರ್ಘ-ಶ್ರೇಣಿಯ ನಿಖರವಾದ ಸ್ಟ್ರೈಕ್ ಸಾಮರ್ಥ್ಯವನ್ನು … Continued

ಮೇಕೆದಾಟು ಯೋಜನೆ: ಕರ್ನಾಟಕ-ತಮಿಳುನಾಡು ಮಾತುಕತೆಗೆ ಆಸಕ್ತಿ ತೋರಿದರೆ ಮಧ್ಯಸ್ಥಿಕೆಗೆ ಕೇಂದ್ರ ಸಿದ್ಧ

ಬೆಂಗಳೂರು: ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಹಾಗೂ ಕರ್ನಾಟಕ ರಾಜ್ಯಗಳು ಮಾತುಕತೆಗೆ ಆಸಕ್ತಿ ವ್ಯಕ್ತಪಡಿಸಿದರೆ ಕೇಂದ್ರ ಮಧ್ಯಪ್ರವೇಶಕ್ಕೆ ಸಿದ್ಧವಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಕಾಂಗ್ರೆಸ್ ಹೋರಾಟಕ್ಕೆ ಪ್ರತಿಕ್ರಿಯೆ ನೀಡಿ ಈ ವಿವಾದ ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಾಗಿ … Continued

ಅಂತಾರಾಜ್ಯ ಜಲವಿವಾದ ಕಾಯ್ದೆಗೆ ತಿದ್ದುಪಡಿ ಅಗತ್ಯ : ಸಿಎಂ ಬೊಮ್ಮಾಯಿ ಪ್ರತಿಪಾದನೆ

ಬೆಂಗಳೂರು: ರಾಜ್ಯಗಳ ಜಲ ವಿವಾದಗಳಿಗೆ ಅಂತ್ಯ ಹಾಡಲು ಅಂತಾರಾಜ್ಯ ಜಲವಿವಾದ ಕಾಯ್ದೆಗೆ ಸಂಪೂರ್ಣವಾಗಿ ತಿದ್ದುಪಡಿ ಮಾಡುವ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿಂದು ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಗಳ ಕುರಿತಂತೆ ದಕ್ಷಿಣ ಭಾರತದ ರಾಜ್ಯಗಳ ಪ್ರಾದೇಶಿಕ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಲ ವಿವಾದಗಳಿಗೆ … Continued