ಶೇನ್ ವಾರ್ನ್ ನಿಧನ: ಥಾಯ್ಲೆಂಡ್ ವಿಲ್ಲಾ ತಪಾಸಣೆಗೆ ಫೊರೆನ್ಸಿಕ್ ತಂಡ, ಸ್ನೇಹಿತರಿಂದ ಹೇಳಿಕೆ ಪಡೆಯಲಿರುವ ಪೊಲೀಸ್‌

ಬ್ಯಾಂಕಾಕ್‌: ಶೇನ್ ವಾರ್ನ್ ನಿಧನರಾದ ವಿಲ್ಲಾವನ್ನು ಫೋರೆನ್ಸಿಕ್ ತಂಡವು ಪರಿಶೀಲಿಸುತ್ತದೆ ಎಂದು ಥಾಯ್ಲೆಂಡ್ ಪೊಲೀಸರು ಶನಿವಾರ ಹೇಳಿದ್ದಾರೆ . ತಮ್ಮ ವೈಯಕ್ತಿಕ ಪ್ರವಾಸದ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಕ್ರಿಕೆಟ್‌ ದಂತಕಥೆ ಶೇನ್ ವಾರ್ನ್‌ ಥೈಲ್ಯಾಂಡಿನ ವಿಲ್ಲಾದಲ್ಲಿ ಶುಕ್ರವಾರ ತಮ್ಮ 52 ನೇ ವಯಸ್ಸಿನಲ್ಲಿ ಶಂಕಿತ ಹೃದಯಾಘಾತದಿಂದ ನಿಧನರಾದರು ಶುಕ್ರವಾರ ಕುಟುಂಬದ ಹೇಳಿಕೆಯು ಶಂಕಿತ ಹೃದಯಾಘಾತದಿಂದ ಶೇನ್ ವಾರ್ನ್ … Continued

ಕೇವಲ 27.08 ಸೆಕೆಂಡುಗಳಲ್ಲಿ 100 ಮೀಟರ್‌ ಓಡಿ ದಾಖಲೆ ಬರೆದ 102 ವರ್ಷದ ವ್ಯಕ್ತಿ…!- ವೀಕ್ಷಿಸಿ

ಬ್ಯಾಂಕಾಕ್‌: ಥಾಯ್ಲೆಂಡ್‌ನ 102 ವರ್ಷದ ವ್ಯಕ್ತಿ, ಸವಾಂಗ್ ಜನಪ್ರಮ್ ಅವರು ಕೇವಲ 27.08 ಸೆಕೆಂಡುಗಳಲ್ಲಿ 100 ಮೀಟರ್ ಓಟವನ್ನು ಪೂರ್ಣಗೊಳಿಸುವ ಮೂಲಕ ತಮ್ಮ ವಯಸ್ಸಿನ ಗುಂಪಿನಲ್ಲಿ ಹೊಸ ದಾಖಲೆ ನಿರ್ಮಿಸಿ ಬೆರಗುಗೊಳಿಸಿದ್ದಾರೆ. ನೈರುತ್ಯ ಸಮುತ್ ಸಾಂಗ್‌ಖ್ರಾಮ್ ಪ್ರಾಂತ್ಯದಲ್ಲಿ ಕಳೆದ ವಾರಾಂತ್ಯದಲ್ಲಿ ನಡೆದ ಥಾಯ್ಲೆಂಡ್ ಮಾಸ್ಟರ್ಸ್ ಅಥ್ಲೀಟ್ ಚಾಂಪಿಯನ್‌ಶಿಪ್‌ನಲ್ಲಿ ಜನಪ್ರಮ್ 100-105 ವರ್ಷಗಳ ವಿಭಾಗದಲ್ಲಿ ಎಲ್ಲ ಚಿನ್ನದ … Continued

ಪಾಕಿಸ್ತಾನವು ತಿನ್ನಲಾಗದ ಗೋಧಿ ದಾನ ಮಾಡಿದೆ, ಭಾರತ ಉತ್ತಮ ಗೋಧಿ ನೀಡಿದೆ ಎಂದ ತಾಲಿಬಾನ್ ಅಧಿಕಾರಿ, ಪಾಕಿಸ್ತಾನ ದೂಷಿಸಿದ್ದಕ್ಕೆ ಅಧಿಕಾರಿ ವಜಾ..!

ನವದೆಹಲಿ: ತಾಲಿಬಾನ್ ಕೂಡ ಪಾಕಿಸ್ತಾನದ ಬಗ್ಗೆ ಹೆಚ್ಚು ಸಂತೋಷವಾಗಿಲ್ಲ. ವರದಿಗಳ ಪ್ರಕಾರ, ಸಹಾಯದ ರೂಪದಲ್ಲಿ ಪಾಕಿಸ್ತಾನವು ಕಡಿಮೆ ಗುಣಮಟ್ಟದ ಗೋಧಿಯನ್ನು ನೀಡುತ್ತಿದೆ ಎಂದು ತಾಲಿಬಾನ್‌ ಟೀಕಿಸಿದೆ. ಇದೇವೇಳೆ ಉತ್ತಮ ಗುಣಮಟ್ಟದ ಗೋಧಿಯನ್ನು ಕಳುಹಿಸಿಕೊಟ್ಟ ಭಾರತವನ್ನು ಶ್ಲಾಘಿಸಿದೆ. ತಾಲಿಬಾನ್ ವಕ್ತಾರರು ಪಾಕಿಸ್ತಾನ ಕಳುಹಿಸಿದ ಗೋಧಿ ಕೊಳೆತದ್ದಾಗಿದೆ ಮತ್ತು ತಿನ್ನಲು ಯೋಗ್ಯವಾಗಿಲ್ಲ ಎಂದು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು. … Continued

ನಾಗರಿಕರಿಗೆ ತೆರಳಲು ಅನುಕೂಲವಾಗುವಂತೆ 2 ಉಕ್ರೇನಿಯನ್ ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಿಸಿದ ರಷ್ಯಾ

ಕೀವ್: ರಷ್ಯಾ-ಉಕ್ರೇನ್ ಯುದ್ಧವು ಹತ್ತನೇ ದಿನಕ್ಕೆ ಕಾಲಿಡುತ್ತಿದ್ದು, ಏತನ್ಮಧ್ಯೆ, ನಾಗರಿಕರು ಹೊರಹೋಗಲು ಅನುಕೂಲವಾಗಲು ರಷ್ಯಾವು ಉಕ್ರೇನ್‌ನಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಿಸಿತು. ರಷ್ಯಾದ ತಾತ್ಕಾಲಿಕ ಕದನ ವಿರಾಮವನ್ನು ಘೋಷಿಸಿತು ಮತ್ತು ನಾಗರಿಕರಿಗೆ ಮರಿಯುಪೋಲ್ ಮತ್ತು ವೋಲ್ನೋವಾಖಾವನ್ನು ತೊರೆಯಲು ಮಾನವೀಯ ಮಾರ್ಗಗಳನ್ನು ತೆರೆಯಲು ರಷ್ಯಾ ಈ ಕ್ರಮ ಕೈಗೊಂಡಿದೆ ಎಂದು ರಷ್ಯಾದ ಸುದ್ದಿ ಸಂಸ್ಥೆಗಳು ರಷ್ಯಾದ ರಕ್ಷಣಾ … Continued

2022ರಲ್ಲಿ ಚೀನಾದ ಮಿಲಿಟರಿ ಬಜೆಟ್‌ 7.1% ರಷ್ಟು ಹೆಚ್ಚಳ, ವಾರ್ಷಿಕ ಜಿಡಿಪಿ ಗುರಿ 5.5% ಕ್ಕೆ ಇಳಿಕೆ..!

ಬೀಜಿಂಗ್: ಅಮೆರಿಕದ ನಂತರ ನಂತರ ವಿಶ್ವದ ಎರಡನೇ ಅತಿದೊಡ್ಡ ಮಿಲಿಟರಿ ಬಜೆಟ್‌ ಆಗಿರುವ ಚೀನಾದ ಮಿಲಿಟರಿ ಬಜೆಟ್ 2022ರಲ್ಲಿ ಶೇಕಡಾ 7.1 ರಷ್ಟು ಹೆಚ್ಚಳವಾಗಲಿದೆ ಎಂದು ಬೀಜಿಂಗ್ ಶನಿವಾರ ಪ್ರಕಟಿಸಿದೆ. ಸರ್ಕಾರದ ಬಜೆಟ್ ವರದಿಯ ಪ್ರಕಾರ ರಾಷ್ಟ್ರೀಯ ರಕ್ಷಣೆಗಾಗಿ ಸುಮಾರು 1.45 ಟ್ರಿಲಿಯನ್ ಯುವಾನ್ ($230 ಬಿಲಿಯನ್) ಮೀಸಲಿಡಲಾಗಿದೆ. ಹೆಚ್ಚಳವು ಕಳೆದ ವರ್ಷ 6.8 ರಷ್ಟು … Continued

ಆಪರೇಷನ್ ಗಂಗಾ ಅಡಿ ಉಕ್ರೇನ್‌ನಿಂದ ಸುಮಾರು 11,000 ಭಾರತೀಯರು ವಾಪಸ್‌: ಸರ್ಕಾರ

ನವದೆಹಲಿ: ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ನಾಗರಿಕರನ್ನು ರಕ್ಷಿಸಲು ‘ಆಪರೇಷನ್ ಗಂಗಾ’ ಅಡಿಯಲ್ಲಿ, ಉಕ್ರೇನ್‌ನ ನೆರೆಯ ದೇಶಗಳಿಂದ 17 ವಿಶೇಷ ವಿಮಾನಗಳು ಶುಕ್ರವಾರ (ಮಾರ್ಚ್ 4) ದೇಶಕ್ಕೆ ಬಂದಿವೆ. ಈ ವಿಶೇಷ ವಿಮಾನಗಳಲ್ಲಿ 14 ನಾಗರಿಕ ವಿಮಾನಗಳು ಮತ್ತು 3 C-17 ಐಎಎಫ್‌ (IAF) ವಿಮಾನಗಳು ಸೇರಿವೆ. ಇನ್ನೂ ಒಂದು ನಾಗರಿಕ ವಿಮಾನವು ದಿನದ ನಂತರ ಆಗಮಿಸುವ … Continued

ಆಟೊದಲ್ಲಿ ಪ್ರಯಾಣಿಸಿದ ಪೇಜಾವರ ಶ್ರೀಗಳು…

ಉಡುಪಿ: ಕಾರ್ಯಕ್ರಮವೊಂದಕ್ಕೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ರಿಕ್ಷಾದಲ್ಲಿ ತೆರಳಿದ ವಿದ್ಯಾಮಾನದ ಬಗ್ಗೆ ವರದಿಯಾಗಿದೆ. ಉಡುಪಿಯ ಪ್ರಸಿದ್ಧ ಕಡಿಯಾಳಿ ದೇವಳಕ್ಕೆ ನೂತನ ಧ್ವಜಮರವನ್ನು ಹೊತ್ತು ತರುವ ಮೆರವಣಿಗೆಯಲ್ಲಿ ಭಾಗವಹಿಸಿದ ಶ್ರೀಗಳಿಗೆ ಮುಂದಿನ ಕಾರ್ಯಕ್ರಮಕ್ಕೆ ಹೋಗಬೇಕಿತ್ತು. ಅವರು ಅನಂತೇಶ್ವರ ದೇವಸ್ಥಾನದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಮೆರವಣಿಗೆಯ ಕಾರಣಕ್ಕೆ ರಸ್ತೆಯುದ್ದಕ್ಕೂ ವಾಹನಗಳು ಸಾಲು ಸಾಲು ಬರುತ್ತಿದ್ದರಿಂದ ಟ್ರಾಫಿಕ್ … Continued

ತನ್ನ ಸೇನೆ ಬಗ್ಗೆ ‘ನಕಲಿ ಸುದ್ದಿ’ ಹರಡುವವರ ವಿರುದ್ಧ 15 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಕಾನೂನಿಗೆ ಸಹಿ ಮಾಡಿದ ರಷ್ಯಾ ಅಧ್ಯಕ್ಷ ಪುತಿನ್‌

ಮಾಸ್ಕೋ: ಉಕ್ರೇನ್ ಆಕ್ರಮಣದ ಬಗ್ಗೆ ಹಲವಾರು ವರದಿಗಳು ಮತ್ತು ರಷ್ಯಾದ ಸೇನೆ ವಿರುದ್ಧ ಟೀಕೆಗಳ ನಡುವೆ, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದ ಸೈನ್ಯದ ಬಗ್ಗೆ ನಕಲಿ ಸುದ್ದಿಗಳನ್ನು ಹರಡುವುದು ಹಾಗೂ ಪ್ರಸಾರ ಮಾಡುವುದಕ್ಕಾಗಿ 15 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುವ ಕಾನೂನಿಗೆ ಸಹಿ ಹಾಕಿದ್ದಾರೆ ಎಂದು ರಷ್ಯಾದ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಇದು ಈಗಿರುವ … Continued

ಉಕ್ರೇನ್-ರಷ್ಯಾ ಯುದ್ಧ : ಯುದ್ಧ ಬೇಡ ಎಂದು ಘೋಷಿಸಿ ನೇರ ಪ್ರಸಾರ ಕಾರ್ಯಕ್ರಮದಲ್ಲೇ ಸಾಮೂಹಿಕ ರಾಜೀನಾಮೆ ನೀಡಿ ಹೊರ ನಡೆದ ರಷ್ಯಾದ ಟಿವಿ ಚಾನೆಲ್‌ನ ಸಂಪೂರ್ಣ ಸಿಬ್ಬಂದಿ..! ವೀಕ್ಷಿಸಿ

ಅಂತಿಮ ಟೆಲಿಕಾಸ್ಟ್‌ನಲ್ಲಿ “ಯುದ್ಧ ಬೇಡ” ಎಂದು ಘೋಷಿಸಿದ ನಂತರ ರಷ್ಯಾದ ದೂರದರ್ಶನ ಚಾನೆಲ್‌ನ ಸಂಪೂರ್ಣ ಸಿಬ್ಬಂದಿ ಟಿವಿಯಲ್ಲಿ ನೇರ ಪ್ರಸಾರ ನಡೆಯುತ್ತಿದ್ದಾಗಲೇ ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದಾರೆ…! ಉಕ್ರೇನ್ ಯುದ್ಧದ ಕವರೇಜ್‌ನ ಮೇಲೆ ರಷ್ಯಾದ ಅಧಿಕಾರಿಗಳು ಅದರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ನಂತರ ಟಿವಿ ರೇನ್ (ಡೊಜ್ಡ್) ಸಿಬ್ಬಂದಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಚಾನೆಲ್‌ನ ಸಂಸ್ಥಾಪಕರಲ್ಲಿ ಒಬ್ಬರಾದ ನಟಾಲಿಯಾ … Continued

ಶೇನ್ ವಾರ್ನ್ ಬದುಕಿಸಲು ಸ್ನೇಹಿತರು ’20 ನಿಮಿಷಗಳ ಕಾಲ ಹೋರಾಡಿದರು’: ಪೊಲೀಸರು

ಬ್ಯಾಂಕಾಕ್‌: ಆಸ್ಟ್ರೇಲಿಯಾದ ದಂತಕಥೆ ಶೇನ್ ವಾರ್ನ್ 52 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಶುಕ್ರವಾರ, ಮಾರ್ಚ್ 4 ರಂದು ನಿಧನರಾಗಿದ್ದಾರೆ, ಅವರಿಗೆ ಹೃದಯಾಘಾತವಾದಾಗ ಅವರ ನಾಲ್ವರು ಸ್ನೇಹಿತರು 20 ನಿಮಿಷಗಳ ಕಾಲ ಅವರ ಜೀವವನ್ನು ಉಳಿಸಲು ಪ್ರಯತ್ನಪಟ್ಟರು ಎಂದು ಥಾಯ್ ಪೊಲೀಸರು ತಿಳಿಸಿದ್ದಾರೆ. ವಾರ್ನ್ ಮತ್ತು ಇತರ ಮೂವರು ಸ್ನೇಹಿತರು ಕೊಹ್ ಸಮುಯಿಯಲ್ಲಿರುವ ಖಾಸಗಿ ವಿಲ್ಲಾದಲ್ಲಿ ಉಳಿದುಕೊಂಡಿದ್ದರು … Continued