ಶ್ರೀಲಂಕಾ ತಮಿಳರ ಸಮಾನತೆ-ನ್ಯಾಯಕ್ಕೆ ಭಾರತ ಬದ್ಧ: ಮೋದಿ

ಶ್ರೀಲಂಕಾದಲ್ಲಿ ವಾಸಿಸುವ ತಮಿಳರ ಹಕ್ಕುಗಳ ವಿಷಯವನ್ನು ಭಾರತವು ನೆರೆಯ ದೇಶದ ಸರ್ಕಾರದೊಂದಿಗೆ ಸತತವಾಗಿ ಕೈಗೆತ್ತಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ‘ಅವರು ಸಮಾನತೆ, ನ್ಯಾಯದೊಂದಿಗೆ ಬದುಕುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ತಮ್ಮ ಆಡಳಿತವು ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ನಂತರ ಭಾಷಣ ಮಾಡಿದ ಮೋದಿ, ಶ್ರೀಲಂಕಾದಲ್ಲಿ ‘ತಮಿಳು … Continued

ಫೆ.೧೫ರ ಮಧ್ಯರಾತ್ರಿಯಿಂದ ಫಾಸ್ಟ್ಯಾಗ್ ಬಳಕೆ ಕಡ್ಡಾಯ

ನವದೆಹಲಿ: ವಾಹನಗಳ ಚಾಲಕರು, ಮಾಲೀಕರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವಾಗ ಟೋಲ್‌ ಪ್ಲಾಜಾಗಳಲ್ಲಿ ಶುಲ್ಕ ಪಾವತಿಸಲು ಸೋಮವಾರ (ಫೆ.೧೫ರ ಮಧ್ಯರಾತ್ರಿ)ಮಧ್ಯರಾ‌ತ್ರಿಯಿಂದ ಜಾರಿಗೆ ಬರುವಂತೆ ಫಾಸ್ಟ್ಯಾಗ್ ಬಳಸುವುದು ಕಡ್ಡಾಯವಾಗಲಿದೆ. ಫಾಸ್ಟ್ಯಾಗ್ ಇಲ್ಲದಿದ್ದರೆ ಅಂಥ ವಾಹನಗಳ ಮಾಲೀಕರು, ಚಾಲಕರು ನಿಗದಿತ ಶುಲ್ಕದ ದುಪ್ಪಟ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಭೂ ಸಾರಿಗೆ ಸಚಿವಾಲಯವು ತಿಳಿಸಿದೆ. ಶುಲ್ಕ ಸಂಗ್ರಹದ ವ್ಯಾಪ‍್ತಿಗೆ ಬರುವ … Continued

ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊದಲ ಭಾರತದ ಹುಡುಗಿ

ಉಡುಪಿ: ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಹಳೆಯ ವಿದ್ಯಾರ್ಥಿ ರಶ್ಮಿ ಸಮಂತ್ ಗುರುವಾರ ಆಕ್ಸ್‌ಫರ್ಡ್ ಸ್ಟೂಡೆಂಟ್ ಯೂನಿಯನ್ ಪ್ರೆಸಿಡೆನ್ಸಿಯ ಪ್ರತಿಷ್ಠಿತ ಸ್ಥಾನವನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆ ಇವರು. ಪ್ರಾಸಂಗಿಕವಾಗಿ, ಐತಿಹಾಸಿಕ ಗೆಲುವಿನಲ್ಲಿ, ಅವರು ಈ ಹುದ್ದೆಗೆ ಇತರ ಮೂರು ಅಭ್ಯರ್ಥಿಗಳ … Continued

ರೈತರ ಬೇಡಿಕೆ ಈಡೇರುವ ವರೆಗೂ ಸರ್ಕಾರಕ್ಕೆ ಶಾಂತಿಯಿಂದಿರಲು ಬಿಡಲ್ಲ

ರೈತರ ಬೇಡಿಕೆಗಳನ್ನು ಈಡೇರಿಸುವವರೆಗೂ ಶಾಂತಿಯಿಂದ ಕುಳಿತುಕೊಳ್ಳಲು ಬಿಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಮುಂಚೂಣಿಯಲ್ಲಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯಿತ್‌ ಹೇಳಿದ್ದಾರೆ. ರೈತರ “ಮಹಾಪಂಚಾಯತ್” ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ಆಂದೋಲನಕ್ಕೆ ಮುಂದಾಗಿರುವ 40 ನಾಯಕರು ಇಡೀ ದೇಶದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರವು ನಮ್ಮ ಪರವಾಗಿ ತೀರ್ಮಾನಿಸುವ … Continued

ಶೇಮ್‌ ಆನ್‌ ಯು: ಮ್ಯಾನ್ಮಾರ್‌ನಲ್ಲಿ ಚೀನಾ ವಿರುದ್ಧ ಪ್ರತಿಭಟನೆ

ಮ್ಯಾನ್ಮಾರ್‌: ಒಮ್ಮತದಿಂದ ‘ಶೇಮ್ ಆನ್ ಯು ಚೀನಾ’ ಎಂದು ಕೂಗುತ್ತ ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಸರ್ವಾಧಿಕಾರಕ್ಕೆ ಬೀಜಿಂಗ್ ಬೆಂಬಲ ನೀಡುವುದನ್ನು ವಿರೋಧಿಸಿ ಯುವಕರು ಭಾನುವಾರ ಯಾಂಗೊನ್‌ನಲ್ಲಿರುವ ಚೀನಾದ ರಾಯಭಾರ ಕಚೇರಿಯ ಹೊರಗೆ ಪ್ರತಿಭಟನೆ ನಡೆಸಿದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಮ್ಯಾನ್ಮಾರ್ ನೌ ಪ್ರಕಾರ, ಯುವ ಪ್ರತಿಭಟನಾಕಾರರು ಕೈಯಿಂದ ಮತ್ತು ಮುದ್ರಿತ ಫಲಕಗಳನ್ನು ಹಿಡಿದಿಕೊಂಡು ಚೀನಾವು … Continued

ದೇಶಿ ನಿರ್ಮಿತ ಯುದ್ಧ ಟ್ಯಾಂಕರ್‌ ಅರ್ಜುನ ಲೋಕಾರ್ಪಣೆ

ಚೆನ್ನೈ: ಸ್ವದೇಶಿ ನಿರ್ಮಿತ ಅರ್ಜುನ ಯುದ್ಧ ಟ್ಯಾಂಕರ್ (ಎಂಕೆ-೧ಎ) ಅನ್ನು ಪ್ರಧಾನಿ ನರೇಂದ್ರ ಮೋದಿ ಭಾರತೀಯ ಸೇನೆಗೆ ಹಸ್ತಾಂತರಿಸಿದರು. ಚೆನ್ನೈನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಸ್ವದೇಶಿ ನಿರ್ಮಿತ ಅರ್ಜುನ ಯುದ್ಧ ಟ್ಯಾಂಕರ್‌ನ ಭೂಸೇನೆಯ ಮುಖ್ಯಸ್ಥ ಜರ್ನಲ್ ಎಂ.ಎಂ ನರ್‌ವಾಣೆ ಅವರಿಗೆ ನೀಡಿದರು. ಈ ಅರ್ಜುನ ಯುದ್ಧ ಟ್ಯಾಂಕರ್‌ನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದ್ದು, ಸಿವಿಆರ್‌ಡಿಇ, ಡಿಆರ್‌ಡಿಓ … Continued

ಮೀಸಲಾತಿ ಹೋರಾಟ : ಕಾನೂನು ಚೌಕಟ್ಟಿನಲ್ಲಿ ಎಲ್ಲರಿಗೂ ಅವಕಾಶ

ದಾವಣಗೆರೆ:ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ ನಡೆಸುತ್ತಿರು ಹೋರಾಟ ನ್ಯಾಯಬದ್ಧವಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ದಾವಣಗೆರೆಯಲ್ಲಿ ರವಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾನೂನಿನ ಚೌಕಟ್ಟಿನಲ್ಲಿ ಅವರಿಗೆ ಹೇಗೆ ಮೀಸಲಾತಿ ಕಲ್ಪಿಸಬೇಕು ಎನ್ನುವ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಅವರು ಭರವಸೆ ನೀಡಿದ್ದಾರೆ. ವೀರಶೈವ- ಲಿಂಗಾಯತ, ವಾಲ್ಮೀಕಿ, ಕುರುಬ ಸಮುದಾಯ ಸೇರಿದಂತೆ ಮೀಸಲಾತಿಗಾಗಿ ಹೋರಾಟ … Continued

ಮತ್ತೆ ಏರಿದ ಪೆಟ್ರೋಲ್‌ ದರ

ಬೆಂಗಳೂರು: ಕಳೆದ ವಾರಪೂರ್ತಿ ದರ ಏರಿಕೆ ಕಂಡಿದ್ದ ಪೆಟ್ರೋಲ್ ಹಾಗೂ ಡೀಸೆಲ್ ದರ ರವಿವಾರ ಕೂಡ ಏರಿಕೆ ಕಂಡಿದೆ. 6 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ 2.16 ರೂ. ಏರಿಕೆಯಾಗಿದೆ. ಭಾರತೀಯ ರೂಪಾಯಿ ಮೌಲ್ಯವು ಡಾಲರ್ ಎದುರು ಕುಸಿತ ಕಂಡಿರುವುದು ತೈಲ ಬೆಲೆಯನ್ನು ಮತ್ತಷ್ಟು ಏರಿಸುವ ಸೂಚನೆ ನೀಡಿದೆ. ಪ್ರಸ್ತುತ ರೂಪಾಯಿ ಮೌಲ್ಯವು ಡಾಲರ್ … Continued

ರಾಜಾಹುಲಿ, ಬೆಟ್ಟದ ಹುಲಿಯಾರೆಂದು ಜನ ತೀರ್ಮಾನ ಮಾಡ್ತಾರೆ: ಯತ್ನಾಳ

ತುಮಕೂರು: ಭವಿಷ್ಯದಲ್ಲಿ ಯಾರು ರಾಜಾಹುಲಿ ಆಗ್ತಾರೆ ಯಾರು ಬೆಟ್ಟದ ಹುಲಿ ಆಗ್ತಾರೆ ಎಂಬುದನ್ನು ರಾಜ್ಯದ ಜನರೇ ತೀರ್ಮಾನ ಮಾಡುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಹೇಳಿದ್ದಾರೆ. ರಾಜ್ಯದಲ್ಲಿ ಲೂಟಿ ಮಾಡಿರುವ ಹಣದಲ್ಲಿ ಎಲ್ಲರನ್ನೂ ಖರೀದಿಸಲಾಗುವುದಿಲ್ಲ. ಹಣದಿಂದ ಎಲ್ಲವನ್ನೂ ಖರೀದಿ ಮಾಡುವುದು ಸಾಧ್ಯವಿದ್ದರೆ ಟಾಟಾ, ಬಿರ್ಲಾರಂಥ ಉದ್ಯಮಿಗಳು ಈ ದೇಶದ ಪ್ರಧಾನಿಗಳು ಆಗಬೇಕಿತ್ತು. ರೈಲಿನಲ್ಲಿ ಚಹಾ … Continued

ಜಮ್ಮು ಬಸ್‌ ನಿಲ್ದಾಣದಲ್ಲಿ ಸುಧಾರಿತ ಸ್ಫೋಟಕ ಸಾಧನ ಪತ್ತೆ: ತಪ್ಪಿದ ಅನಾಹುತ

ಜಮ್ಮು: ಜಮ್ಮು ಬಸ್‌ ನಿಲ್ದಾಣದಲ್ಲಿ ೭ಕೆಜಿ ಸುಧಾರಿತ ಸ್ಫೋಟಕ ಸಾಧನ ಪತ್ತೆಯಾಗಿದೆ. ಜನಸಂದಣಿ ಪ್ರದೇಶದಲ್ಲಿ ಸ್ಫೋಟಕ ಸಾಧನವನ್ನು ಪತ್ತೆ ಮಾಡಲಾಗಿದ್ದು, ಅನಾಹುತ ತಪ್ಪಿಸಿದಂತಾಗಿದೆ. ಪುಲ್ವಾಮಾ ದಾಳಿಯ ೨ನೇ ವರ್ಷಾಚರಣೆ ಸಂದರ್ಭದಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಯನ್ನು ವಿಫಲಗೊಳಿಸಲಾಗಿದೆ. ನಿರ್ದಿಷ್ಟ ಮಾಹಿತಿಯನ್ನಾಧರಿಸಿ ನಡೆದ ಕಾರ್ಯಚರಣೆಯಲ್ಲಿ ಸ್ಫೋಟಕವನ್ನು ಪತ್ತೆ ಮಾಡಲಾಗಿದೆ. ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ೨೦೧೯ರ ಫೆಬ್ರವರಿ ೧೪ರಂದು … Continued