ರಾಜಾಹುಲಿ, ಬೆಟ್ಟದ ಹುಲಿಯಾರೆಂದು ಜನ ತೀರ್ಮಾನ ಮಾಡ್ತಾರೆ: ಯತ್ನಾಳ

ತುಮಕೂರು: ಭವಿಷ್ಯದಲ್ಲಿ ಯಾರು ರಾಜಾಹುಲಿ ಆಗ್ತಾರೆ ಯಾರು ಬೆಟ್ಟದ ಹುಲಿ ಆಗ್ತಾರೆ ಎಂಬುದನ್ನು ರಾಜ್ಯದ ಜನರೇ ತೀರ್ಮಾನ ಮಾಡುತ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಹೇಳಿದ್ದಾರೆ. ರಾಜ್ಯದಲ್ಲಿ ಲೂಟಿ ಮಾಡಿರುವ ಹಣದಲ್ಲಿ ಎಲ್ಲರನ್ನೂ ಖರೀದಿಸಲಾಗುವುದಿಲ್ಲ. ಹಣದಿಂದ ಎಲ್ಲವನ್ನೂ ಖರೀದಿ ಮಾಡುವುದು ಸಾಧ್ಯವಿದ್ದರೆ ಟಾಟಾ, ಬಿರ್ಲಾರಂಥ ಉದ್ಯಮಿಗಳು ಈ ದೇಶದ ಪ್ರಧಾನಿಗಳು ಆಗಬೇಕಿತ್ತು. ರೈಲಿನಲ್ಲಿ ಚಹಾ … Continued

ಜಮ್ಮು ಬಸ್‌ ನಿಲ್ದಾಣದಲ್ಲಿ ಸುಧಾರಿತ ಸ್ಫೋಟಕ ಸಾಧನ ಪತ್ತೆ: ತಪ್ಪಿದ ಅನಾಹುತ

ಜಮ್ಮು: ಜಮ್ಮು ಬಸ್‌ ನಿಲ್ದಾಣದಲ್ಲಿ ೭ಕೆಜಿ ಸುಧಾರಿತ ಸ್ಫೋಟಕ ಸಾಧನ ಪತ್ತೆಯಾಗಿದೆ. ಜನಸಂದಣಿ ಪ್ರದೇಶದಲ್ಲಿ ಸ್ಫೋಟಕ ಸಾಧನವನ್ನು ಪತ್ತೆ ಮಾಡಲಾಗಿದ್ದು, ಅನಾಹುತ ತಪ್ಪಿಸಿದಂತಾಗಿದೆ. ಪುಲ್ವಾಮಾ ದಾಳಿಯ ೨ನೇ ವರ್ಷಾಚರಣೆ ಸಂದರ್ಭದಲ್ಲಿ ಭಯೋತ್ಪಾದಕರು ದಾಳಿ ನಡೆಸುವ ಸಾಧ್ಯತೆಯನ್ನು ವಿಫಲಗೊಳಿಸಲಾಗಿದೆ. ನಿರ್ದಿಷ್ಟ ಮಾಹಿತಿಯನ್ನಾಧರಿಸಿ ನಡೆದ ಕಾರ್ಯಚರಣೆಯಲ್ಲಿ ಸ್ಫೋಟಕವನ್ನು ಪತ್ತೆ ಮಾಡಲಾಗಿದೆ. ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ೨೦೧೯ರ ಫೆಬ್ರವರಿ ೧೪ರಂದು … Continued

ಮೈತ್ರಿ ಸಹವಾಸ ಸಾಕಾಗಿದೆ: ಜೆಡಿಎಸ್‌ ಮುಖಂಡ ಬಂಡೆಪ್ಪ ಕಾಶಂಪೂರ

ಬೆಂಗಳೂರು: ಬೇರೆ ಪಕ್ಷದವರ ಜೊತೆ ಮೈತ್ರಿ ಸಾಕಾಗಿದೆ. ನಮಗೆ ಯಾರ ಸಹವಾಸವೂ ಬೇಡ ಎಂದು ಮಾಜಿ ಸಚಿವ ಬಂಡೆಪ್ಪ ಕಾಶಂಪೂರ ಹೇಳಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಮೈತ್ರಿ ಸಹವಾಸ ಬೇಡ ಎಂದು ವರಿಷ್ಠರಿಗೆ ಮನವಿ ಮಾಡಿದ ಅವರು, ನಮಗೆ ಯಾರ ಸಹವಾಸವೂ ಬೇಡ. ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ … Continued

ಟೂಲ್‌ಕಿಟ್‌ ಸಂಪಾದನೆ ಆರೋಪ: ದಿಶಾ ರವಿ ೫ ದಿನ ಪೊಲೀಸ್‌ ವಶಕ್ಕೆ

ದೆಹಲಿ: ರೈತರ ಪ್ರತಿಭಟನೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಟೂಲ್‌ಕಿಟ್‌ ಹಂಚಿಕೆ ಹಾಗೂ ಸಂಪಾದನೆ ಆರೋಪಕ್ಕಾಗಿ ಬಂಧಿತ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ದೆಹಲಿ ನ್ಯಾಯಾಲಯ ೫ ದಿನಗಳ ಪೊಲೀಸ್‌ ವಶಕ್ಕೆ ನೀಡಿದೆ. ಬೆಂಗಳೂರಿನಿಂದ ದೆಹಲಿ ಪೊಲೀಸರ ಸೈಬರ್ ಸೆಲ್ ತಂಡವು ೨೧ರ ಹರೆಯದ ದಿಶಾ ರವಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿತು. ಕೇಂದ್ರ ಸರ್ಕಾರದ ವಿರುದ್ಧ … Continued

ತುಳಿತಕ್ಕೊಳಗಾದವರಿಗೆ ಮೀಸಲಾತಿ ಸಿಗಲಿ: ಸುತ್ತೂರು ಶ್ರೀ

ಮೈಸೂರು: ಎಲ್ಲ ಸಮುದಾಯಗಳಲ್ಲಿಯೂ ತುಳಿತಕ್ಕೊಳಗಾದವರಿದ್ದು, ಅಂಥವರಿಗೆ ಮೀಸಲಾತಿ ಸೌಲಭ್ಯ ದೊರೆಯಬೇಕು ಎಂದು ಸುತ್ತೂರು ಶ್ರೀ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ರಾಜ್ಯದಲ್ಲಿ ಮೀಸಲಾತಿಗಾಗಿ ಹಲವು ಸಮುದಾಯದವರು ಹೋರಾಟ ನಡೆಸುತ್ತಿದ್ದಾರೆ. ಸೌಲಭ್ಯ ವಂಚಿತರಿಗೆ ಸೌಲಭ್ಯ ಒದಗಿಸುವ ಕೆಲಸವನ್ನು ಸರಕಾರ ಸಮರ್ಪಕವಾಗಿ ಮಾಡಬೇಕು ಎಂದರು. ಒಂದು ಸಮುದಾಯದಲ್ಲಿ ನಾಲ್ಕಾರು ಜನರು ಸೌಲಭ್ಯ ಪಡೆದುಕೊಂಡಿದ್ದಾರೆಂದರೆ ಎಲ್ಲರೂ ಸೌಲಭ್ಯ ಪಡೆದುಕೊಂಡಂತಲ್ಲ. ತುಳಿತಕ್ಕೊಳಗಾದವರನ್ನು ಗುರುತಿಸಿ … Continued

ಸಂಘ ಪರಿವಾರ ಸಾಮಾಜಿಕ ನ್ಯಾಯ ಹೋರಾಟದ ದಾರಿ ತಪ್ಪಿಸುತ್ತಿದೆ: ಸಿದ್ದರಾಮಯ್ಯ ಆರೋಪ

ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂದು ಹೇಳುತ್ತಿದ್ದ ಸಂಘ ಪರಿವಾರ ಈಗ ಯಾಕೆ ಜಾತಿ ಸಮಾವೇಶಗಳಿಗೆ ಪ್ರಾಯೋಜಕತ್ವ ವಹಿಸುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕಾಂಗ್ರೆಸ್‌ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮೀಸಲಾತಿಯನ್ನು ನೇರವಾಗಿ ವಿರೋಧಿಸದ ಸಂಘ ಪರಿವಾರದ ಮುಖಂಡರು ಜಾತಿ ಜಾತಿಗಳ ಮಧ್ಯೆ ವಿವಾದ ಸೃಷ್ಟಿಸಿ ಸಾಮಾಜಿಕ ನ್ಯಾಯ ಹೋರಾಟದ ದಾರಿ ತಪ್ಪಿಸುತ್ತಿದ್ದಾರೆ. … Continued

ಪುಲ್ವಾಮಾ ಘಟನೆಗೆ ೨ ವರ್ಷ: ಹುತಾತ್ಮರಿಗೆ ಪ್ರಧಾನಿ ಗೌರವ

ನವದೆಹಲಿ: ಪುಲ್ವಾಮಾ ಭಯೋತ್ಪಾದಕರ ದಾಳಿಯ ೨ನೇ ವಾರ್ಷಿಕೋತ್ಸವದಂದು ಪ್ರಧಾನಿ ಮೋದಿ ದುರ್ಘಟನೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದರು. ಯಾವುದೇ ಭಾರತೀಯನು ಈ ಕರಾಳ ದಿನವನ್ನು ಮರೆಯಲು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದೆ, ಪುಲ್ವಾಮಾ ದಾಳಿ ಸಂಭವಿಸಿದೆ. ಆ ದಾಳಿಯಲ್ಲಿ ನಾವು ಕಳೆದುಕೊಂಡ ಎಲ್ಲ ಹುತಾತ್ಮರಿಗೆ ನಾವು ಗೌರವ ಸಲ್ಲಿಸುತ್ತೇವೆ. ನಮ್ಮ ಭದ್ರತಾ … Continued

ಹಿಂದಿ ಹೇರಿದರೆ ರಕ್ತಪಾತವಾದೀತು: ಸಿದ್ದರಾಮಯ್ಯ ಅಬ್ಬರ

ಮಂಡ್ಯ: ಹಿಂದಿ ರಾಷ್ಟ್ರೀಯ ಭಾಷೆಯಲ್ಲ, ಅದನ್ನು ಬಲವಂತವಾಗಿ ರಾಜ್ಯದ ಜನರ ಮೇಲೆ ಹೇರಿದರೆ ರಕ್ತಪಾತ ಉಂಟಾಗುವ ಸಾಧ್ಯತೆಯಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಬ್ಬರಿಸಿದ್ದಾರೆ. ಉತ್ತರ ಭಾರತದ ಐದಾರು ರಾಜ್ಯಗಳನ್ನು ಹೊರತುಪಡಿಸಿದರೆ ಪಂಜಾಬ್‌, ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಹಿಂದಿ ಮಾತಾಡುವವರೇ ಇಲ್ಲ. ಇದರಿಂದಾಗಿ ಹಿಂದಿ ರಾಷ್ಟ್ರ ಭಾಷೆಯಾಗಲು … Continued

ಜಪಾನ್‌ನಲ್ಲಿ ಭೂಕಂಪನಕ್ಕೆ ೧೨೦ ಜನರಿಗೆ ಗಾಯ

ಈಶಾನ್ಯ ಜಪಾನ್‌ನಲ್ಲಿ ಶನಿವಾರ ತಡರಾತ್ರಿ ಭೂಕಂಪನ ಸಂಭವಿಸಿದ್ದು, ಸುಮಾರು ೧೨೦ ಜನರು ಗಾಯಗೊಂಡಿರುವುದು ವರದಿಯಾಗಿದೆ. ಭೂ ಕಂಪನದಿಂದಾಗಿ ಬುಲೆಟ್‌ ರೈಲು ಮಾರ್ಗಗಳು, ಹಲವು ಕಟ್ಟಡಗಳು, ರಸ್ತೆಗಳು ಹಾನಿಗೀಡಾಗಿವೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪನದ ತೀವ್ರತೆ ೭.೩ ರಷ್ಟು ದಾಖಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದ್ದು, ಯಾವುದೇ ಜೀವಹಾನಿಯಾಗಿರುವುದು ವರದಿಯಾಗಿಲ್ಲ ಸಮುದ್ರದ ಆಳದಲ್ಲಿ ಭೂ ಕಂಪನದ ಕೇಂದ್ರ ಪತ್ತೆಯಾಗಿದ್ದು, ಯಾವುದೇ … Continued

ಮುಂದಿನ ಚುನಾವಣೆಯಲ್ಲಿ ನಿಮ್ಮ ತಾಕತ್‌ ತೋರಿಸಿ: ಕಾರ್ಯಕರ್ತರಿಗೆ ದೇವೆಗೌಡ ಮನವಿ

ಬೆಂಗಳೂರು: ಮುಂಬರುವ ಚುನಾವಣೆಯಲ್ಲಿ ನಮ್ಮ ತಾಕತ್ತು ಏನು ಎಂಬುದನ್ನು ತೋರಿಸಬೇಕಿದೆ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಕಾರ್ಯಕರ್ತರಲ್ಲಿ ಕೋರಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಜೆಡಿಎಸ್ ಸಮಾವೇಶವನ್ನು ಉದ್ಘಾಟಿಸಿದ ನಂತರ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಪಕ್ಷ ಸಂಘಟನೆಗೆ ಆದ್ಯತೆ ನೀಡಬೇಕೆಂದು ಕಾರ್ಯಕರ್ತರು, ಮುಖಂಡರಲ್ಲಿ ಮನವಿ ಮಾಡಿದರು. ನಾನು ಮುಂದೆ ನಿಮಗೆ ಮಾರ್ಗದರ್ಶನ ಮಾಡಬಹುದು … Continued