ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶಿಷ್ಟ ದಾಖಲೆ ಬರೆದ ಸ್ಪಿನ್ನರ್‌ ಆರ್.‌ ಅಶ್ವಿನ್

ಚೆನ್ನೈ: ಟೆಸ್ಟ್‌ ಕ್ರಿಕೆಟ್‌ನ ಇತಿಹಾಸದಲ್ಲಿ ೨೦೦ ಎಡಗೈ ಬ್ಯಾಟ್ಸ್‌ಮನ್‌ಗಳ ವಿಕೆಟ್‌ ಪಡೆದ ಮೊದಲ ಬೌಲರ್‌ ಎಂಬ ವಿಶೇಷ ದಾಖಲೆಯನ್ನು ಭಾರತ ತಂಡದ ಆಫ್‌ ಸ್ಪಿನ್ನರ್‌ ಆರ್.‌ ಅಶ್ವಿನ್‌ ಸೋಮವಾರ ತಮ್ಮದಾಗಿಸಿಕೊಂಡರು. ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಇಂಗ್ಲೆಂಡ್‌ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ ದ್ವಿತೀಯ ಇನಿಂಗ್ಸ್‌ನಲ್ಲಿ ಅಶ್ವಿನ್‌ ಈ ನೂತನ ವಿಶ್ವ ದಾಖಲೆ … Continued

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಈಗ ಕೃಷಿ ಇಲಾಖೆ ಹೊಸ ರಾಯಭಾರಿ

ಬೆಂಗಳೂರು: ಕೃಷಿ ಇಲಾಖೆಯ ನೂತನ ರಾಯಭಾರಿಯಾಗಿ ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್ ಸ್ಟಾರ್‌ ನಟ ದರ್ಶನ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕೃಷಿ ಇಲಾಖೆಯು ರೈತರ ಹಿತಕ್ಕಾಗಿ ಕೈಗೊಂಡಿರುವ ಕಾರ್ಯಕ್ರಮಗಳ ಪ್ರಚಾರ ಹಾಗೂ ಕೃಷಿಕರಲ್ಲಿ ಸ್ಪೂರ್ತಿ ತುಂಬಲು ಕನ್ನಡ ಚಲನಚಿತ್ರರಂಗದ ಪ್ರಸಿದ್ಧ ನಟರಾದ ದರ್ಶನ್ ಅವರನ್ನು ಕೃಷಿ ಇಲಾಖೆಯ ರಾಯಭಾರಿಯಾಗಿ ನೇಮಿಸಲಾಗಿದೆ. ಅವರು ಯಾವುದೇ … Continued

ಗುಜರಾತ ಸಿಎಂ ವಿಜಯ ರೂಪಾಣಿಗೆ ಕೊರೊನಾ ದೃಢ

ಗುಜರಾತ ಮುಖ್ಯಮಂತ್ರಿ ವಿಜಯ ರೂಪಾಣಿ ಅವರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದೆ. ಭಾನುವಾರ ರೂಪಾಣಿ ಅವರ ಮಾದರಿ ಪಡೆದು ಪರೀಕ್ಷೆಗೆ ಕಳಿಸಲಾಗಿತ್ತು. ಅವರಿಗೆ ಕೋವಿಡ್‌-೧೯ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಯು.ಎನ್‌.ಮೆಹ್ತಾ ಆಸ್ಪತ್ರೆ ತಿಳಿಸಿದೆ. ವಡೋದರಾದ ನಿಜಾಮ್‌ಪುರ ಪ್ರದೇಶದಲ್ಲಿ ಸ್ಥಳಿಯ ಸಂಸ್ಥೆಗಳ ಚುನಾವಣೆ ಪ್ರಚಾರಸಭೆಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ವಿಜಯ ರೂಪಾಣಿ ಕುಸಿದು ಬಿದ್ದಿದ್ದರು. ಅವರನ್ನು ತಕ್ಷಣ … Continued

ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಗೆ ಸಿಎಂ ಯಡಿಯೂರಪ್ಪ ಚಾಲನೆ

ವಿಜಯಪುರ ಸಮೀಪದ ಮದಬಾವಿಯಲ್ಲಿ ವಿಮಾನ ನಿಲ್ದಾಣ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನಡೆಯಿತು. ಸಿಎಂ ಯಡಿಯೂರಪ್ಪ ವರ್ಚುವಲ್‌ ತಂತ್ರಜ್ಞಾನದ ಮೂಲಕ ವಿಮಾನ ನಿಲ್ದಾಣ ಕಾಮಗಾರಿಗೆ ಚಾಲನೆ ನೀಡಿದರು. ಅವರು ಮಾತನಾಡಿ, ಐತಿಹಾಸಿಕ ಕೇಂದ್ರ, ತೋಟಗಾರಿಕೆ ಉತ್ಪನ್ನಗಳಿಗೆ ಪ್ರಸಿದ್ಧಿಗಳಿಸಿದ ವಿಜಯಪುರದಲ್ಲಿ ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮ ಬೆಳವಣಿಗೆ ಹಾಗೂ ರಫ್ತು ಉತ್ತೇಜನಕ್ಕೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು. ಮದಬಾವಿಯಲ್ಲಿ ೭೨೭ ಎಕರೆ … Continued

ಹೊಸ ಕೃಷಿ ಕಾನುನು ಅಸ್ತವ್ಯಸ್ತತೆಗೆ ಕೇಂದ್ರದ ಮೊಂಡುತನದ ಧೋರಣೆ ಕಾರಣ

ಹೊಸ ಕೃಷಿ ಕಾನೂನುಗಳ ಅಸ್ತವ್ಯಸ್ತತೆಗೆ ಕೇಂದ್ರದ “ಮೊಂಡುತನದ ಮನೋಭಾವ” ಕಾರಣ ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸಮನ್ವಯ ಸಮಿತಿ ಸದಸ್ಯ ಶಿವ ಕುಮಾರ್ ಶರ್ಮಾ ಹೇಳಿದ್ದಾರೆ. ರೈತರೊಂದಿಗೆ ಮಾತುಕತೆ ನಡೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಭರವಸೆ ನೀಡಿದ್ದರೂ, ಮುಂದಿನ ಸುತ್ತಿನ ಮಾತುಕತೆಗಾಗಿ ಯಾವುದೇ ದಿನಾಂಕವನ್ನು ಸರ್ಕಾರ ತಿಳಿಸಿಲ್ಲ. 40 ರೈತ ಸಂಘಟನೆಗಳ ಮೈತ್ರಿ … Continued

ಮತ್ತೆ ಕಾಣಿಸಿಕೊಂಡ ಎಬೊಲಾ: ಮೂವರ ಸಾವು

3 ಜನರು ಗಿನಿಯಾದಲ್ಲಿ ಎಬೊಲದಿಂದ ಮೃತಪಟ್ಟಿದ್ದಾರೆ. 2016 ರ ನಂತರದಲ್ಲಿ ಇದು ಎಬೊಲಾದಿಂದ ಮೃತಪಟ್ಟ ಮೊದಲ ಪ್ರಕರಣವಾಗಿದೆ. ಗಿನಿಯಾದ ಆರೋಗ್ಯ ಅಧಿಕಾರಿಗಳು ಭಾನುವಾರ ಅಲ್ಲಿ ಕನಿಷ್ಠ ಮೂವರು ಎಬೊಲಾದಿಂದ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಐದು ವರ್ಷಗಳ ಹಿಂದೆ ಕೊನೆಗೊಂಡ ವಿಶ್ವದ ಮಾರಕ ಎಬೊಲ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಿದ ಮೂರು ಪಶ್ಚಿಮ ಆಫ್ರಿಕಾದ ರಾಷ್ಟ್ರಗಳಲ್ಲಿ ಗಿನಿಯಾ ಕೂಡ … Continued

ಶ್ರೀಲಂಕಾ ತಮಿಳರ ಸಮಾನತೆ-ನ್ಯಾಯಕ್ಕೆ ಭಾರತ ಬದ್ಧ: ಮೋದಿ

ಶ್ರೀಲಂಕಾದಲ್ಲಿ ವಾಸಿಸುವ ತಮಿಳರ ಹಕ್ಕುಗಳ ವಿಷಯವನ್ನು ಭಾರತವು ನೆರೆಯ ದೇಶದ ಸರ್ಕಾರದೊಂದಿಗೆ ಸತತವಾಗಿ ಕೈಗೆತ್ತಿಕೊಳ್ಳುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ. ‘ಅವರು ಸಮಾನತೆ, ನ್ಯಾಯದೊಂದಿಗೆ ಬದುಕುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ತಮ್ಮ ಆಡಳಿತವು ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ. ತಮಿಳುನಾಡಿನಲ್ಲಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದ ನಂತರ ಭಾಷಣ ಮಾಡಿದ ಮೋದಿ, ಶ್ರೀಲಂಕಾದಲ್ಲಿ ‘ತಮಿಳು … Continued

ಫೆ.೧೫ರ ಮಧ್ಯರಾತ್ರಿಯಿಂದ ಫಾಸ್ಟ್ಯಾಗ್ ಬಳಕೆ ಕಡ್ಡಾಯ

ನವದೆಹಲಿ: ವಾಹನಗಳ ಚಾಲಕರು, ಮಾಲೀಕರು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವಾಗ ಟೋಲ್‌ ಪ್ಲಾಜಾಗಳಲ್ಲಿ ಶುಲ್ಕ ಪಾವತಿಸಲು ಸೋಮವಾರ (ಫೆ.೧೫ರ ಮಧ್ಯರಾತ್ರಿ)ಮಧ್ಯರಾ‌ತ್ರಿಯಿಂದ ಜಾರಿಗೆ ಬರುವಂತೆ ಫಾಸ್ಟ್ಯಾಗ್ ಬಳಸುವುದು ಕಡ್ಡಾಯವಾಗಲಿದೆ. ಫಾಸ್ಟ್ಯಾಗ್ ಇಲ್ಲದಿದ್ದರೆ ಅಂಥ ವಾಹನಗಳ ಮಾಲೀಕರು, ಚಾಲಕರು ನಿಗದಿತ ಶುಲ್ಕದ ದುಪ್ಪಟ್ಟು ಮೊತ್ತವನ್ನು ಪಾವತಿಸಬೇಕಾಗುತ್ತದೆ ಎಂದು ಕೇಂದ್ರ ಭೂ ಸಾರಿಗೆ ಸಚಿವಾಲಯವು ತಿಳಿಸಿದೆ. ಶುಲ್ಕ ಸಂಗ್ರಹದ ವ್ಯಾಪ‍್ತಿಗೆ ಬರುವ … Continued

ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಮೊದಲ ಭಾರತದ ಹುಡುಗಿ

ಉಡುಪಿ: ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎಂಐಟಿ) ಹಳೆಯ ವಿದ್ಯಾರ್ಥಿ ರಶ್ಮಿ ಸಮಂತ್ ಗುರುವಾರ ಆಕ್ಸ್‌ಫರ್ಡ್ ಸ್ಟೂಡೆಂಟ್ ಯೂನಿಯನ್ ಪ್ರೆಸಿಡೆನ್ಸಿಯ ಪ್ರತಿಷ್ಠಿತ ಸ್ಥಾನವನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದರು. ಆಕ್ಸ್‌ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆ ಇವರು. ಪ್ರಾಸಂಗಿಕವಾಗಿ, ಐತಿಹಾಸಿಕ ಗೆಲುವಿನಲ್ಲಿ, ಅವರು ಈ ಹುದ್ದೆಗೆ ಇತರ ಮೂರು ಅಭ್ಯರ್ಥಿಗಳ … Continued

ರೈತರ ಬೇಡಿಕೆ ಈಡೇರುವ ವರೆಗೂ ಸರ್ಕಾರಕ್ಕೆ ಶಾಂತಿಯಿಂದಿರಲು ಬಿಡಲ್ಲ

ರೈತರ ಬೇಡಿಕೆಗಳನ್ನು ಈಡೇರಿಸುವವರೆಗೂ ಶಾಂತಿಯಿಂದ ಕುಳಿತುಕೊಳ್ಳಲು ಬಿಡುವುದಿಲ್ಲ ಎಂದು ಸರ್ಕಾರದ ವಿರುದ್ಧ ಮುಂಚೂಣಿಯಲ್ಲಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯಿತ್‌ ಹೇಳಿದ್ದಾರೆ. ರೈತರ “ಮಹಾಪಂಚಾಯತ್” ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರದ ಕೃಷಿ ಕಾನೂನುಗಳ ವಿರುದ್ಧದ ಆಂದೋಲನಕ್ಕೆ ಮುಂದಾಗಿರುವ 40 ನಾಯಕರು ಇಡೀ ದೇಶದಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ಹೇಳಿದ್ದಾರೆ. ಸರ್ಕಾರವು ನಮ್ಮ ಪರವಾಗಿ ತೀರ್ಮಾನಿಸುವ … Continued