ಉದ್ಯಮಿ ಭಾಸ್ಕರ್‌ ಶೆಟ್ಟಿ ಕೊಲೆ ಪ್ರಕರಣ: ಹೈಕೋರ್ಟಿನಿಂದ ಪತ್ನಿ ರಾಜೇಶ್ವರಿ ಶೆಟ್ಟಿಗೆ ಜಾಮೀನು

ಬೆಂಗಳೂರು: ರಾಜ್ಯದ ಜನತೆಯನ್ನು ಬೆಚ್ಚಿ ಬೀಳಿಸಿದ್ದ ಅನಿವಾಸಿ ಭಾರತೀಯ ಉದ್ಯಮಿ‌, ಉಡುಪಿ ಮೂಲದ ಭಾಸ್ಕರ್‌ ಶೆಟ್ಟಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಅವರ ಪತ್ನಿ ರಾಜೇಶ್ವರಿ ಶೆಟ್ಟಿ ಅವರಿಗೆ ಗುರುವಾರ ಕರ್ನಾಟಕ ಹೈಕೋರ್ಟ್‌ ಜಾಮೀನು ನೀಡಿದೆ. ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿರುವ ಜೀವಾವಧಿ ಶಿಕ್ಷೆ ರದ್ದುಪಡಿಸಬೇಕು ಮತ್ತು ಅಧೀನ ನ್ಯಾಯಾಲಯ ವಿಧಿಸಿರುವ … Continued

ಐಸಿಸ್‌, ಬೋಕೋ ಹರಾಂಗೆ ಹಿಂದುತ್ವ ಹೋಲಿಕೆ: ಸಲ್ಮಾನ್ ಖುರ್ಷಿದ್ ವಿರುದ್ಧ ಎಫ್ಐಆರ್ ದಾಖಲಿಸಲು ಉತ್ತರ ಪ್ರದೇಶ ಕೋರ್ಟ್‌ ಆದೇಶ

ಲಕ್ನೋ: ತಮ್ಮ ‘ಸನ್‌ರೈಸ್ ಓವರ್ ಅಯೋಧ್ಯಾ: ನೇಷನ್‌ಹುಡ್ ಇನ್ ಅವರ್ ಟೈಮ್ಸ್ʼ ಕೃತಿಯಲ್ಲಿ ಹಿಂದುತ್ವವನ್ನು ಬೋಕೋ ಹರಾಮ್ ಮತ್ತು ಐಸಿಸ್‌ನಂತಹ ಭಯೋತ್ಪಾದಕ ಸಂಘಟನೆಗಳಿಗೆ ಹೋಲಿಸಿದ ಆರೋಪದ ಮೇಲೆ ಹಿರಿಯ ವಕೀಲ ಹಾಗೂ ಕಾಂಗ್ರೆಸ್‌ ನಾಯಕ ಸಲ್ಮಾನ್ ಖುರ್ಷಿದ್ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಲಕ್ನೋ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಉತ್ತರ ಪ್ರದೇಶ ಪೊಲೀಸರಿಗೆ ಆದೇಶಿಸಿದೆ. ಎಫ್‌ಐಆರ್ ದಾಖಲಿಸಿ ಮೂರು … Continued

ಭಾರತದಲ್ಲಿ 300ರ ಗಡಿದಾಟಿದ ಓಮಿಕ್ರಾನ್ ಪ್ರಕರಣಗಳು: ಪ್ರಧಾನಿ ಮೋದಿಯಿಂದ ಪರಿಸ್ಥಿತಿ ಅವಲೋಕನ

ನವದೆಹಲಿ: ಭಾರತದಲ್ಲಿ ಓಮಿಕ್ರಾನ್ ಸಂಖ್ಯೆಯು 300ರ ಗಡಿ ದಾಟುತ್ತಿದ್ದಂತೆಯೇ ಕೋವಿಡ್‌ನ ಸಂಭವನೀಯ ಮೂರನೇ ಅಲೆಯ ದೃಷ್ಟಿಯಿಂದ ರ್ಯಾಲಿಗಳು, ರಾಜಕೀಯ ಸಭೆಗಳನ್ನು ನಿಷೇಧಿಸುವುದು ಮತ್ತು ಅಗತ್ಯವಿದ್ದರೆ ಮುಂಬರುವ ವಿಧಾನಸಭಾ ಚುನಾವಣೆಗಳನ್ನು ಮುಂದೂಡುವುದನ್ನು ಸರ್ಕಾರ ಪರಿಗಣಿಸಬೇಕು ಎಂದು ಅಲಹಾಬಾದ್ ಹೈಕೋರ್ಟ್ ಗುರುವಾರ ಸೂಚಿಸಿದೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಂಜೆ ದೇಶದ ಕೋವಿಡ್-19 ಪರಿಸ್ಥಿತಿಯ … Continued

ಕಾಂಗ್ರೆಸ್ ಸರ್ಕಾರ ಮತಾಂತರ ಬಿಲ್ ತರಲು ತಯಾರಿ ನಡೆಸಿತ್ತು ಎಂಬ ಬಿಜೆಪಿ ಆರೋಪಕ್ಕೆ ಉತ್ತರ ನೀಡಿದ ಸಿದ್ದರಾಮಯ್ಯ

ಬೆಳಗಾವಿ: 2016ರಲ್ಲಿ ಕಾಂಗ್ರೆಸ್ ಸರ್ಕಾರ ಮತಾಂತರ ಬಿಲ್ ತರಲು ತಯಾರಿ ನಡೆಸಿತ್ತು. ಅದನ್ನು ತಡೆದಿದ್ದು ಸೋನಿಯಾ ಗಾಂಧಿ. ಕುರ್ಚಿಗೆ ಕಂಟಕ ಬರುತ್ತದೆಯೆಂಬ ಭಯದಲ್ಲಿ ಸಿದ್ದರಾಮಯ್ಯ ಈ ಮಸೂದೆ ಜಾರಿಗೆ ಮುಂದಾಗಲಿಲ್ಲ ಎಂದು ಬಿಜೆಪಿ ಆರೋಪಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಬಲವಂತವಾಗಿ, ಆಸೆ ಆಮಿಷ ಒಡ್ಡಿ ಅಥವಾ ಮೋಸದಿಂದ ಮತಾಂತರ ಮಾಡಿದರೆ ಅದು ಶಿಕ್ಷಾರ್ಹ … Continued

ಮೀನುಗಾರನ ತಲೆಕೆಳಗಾಗಿ ನೇತು ಹಾಕಿ ಹಲ್ಲೆ : 6 ಜನರ ಬಂಧನ

ಮಂಗಳೂರು: ಮಂಗಳೂರಿನ ಮೀನುಗಾರಿಕಾ ಬಂದರಿನಲ್ಲಿ ಆಂಧ್ರಪ್ರದೇಶ ಮೂಲದ ಮೀನುಗಾರಿಕಾ ಕಾರ್ಮಿಕರು ವ್ಯಕ್ತಿಯೊಬ್ಬನನ್ನು ಉಲ್ಟಾ ನೇತು ಹಾಕಿ ಅಮಾನವೀಯವಾಗಿ ವರ್ತಿಸಿದ ಘಟನೆ ಸಂಬಂಧ ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ಕದ್ದ ಆರೋಪದಲ್ಲಿ ವೈಲ ಶೀನುನನ್ನು ಮೀನುಗಾರಿಕ ಬೋಟ್‍ನಲ್ಲಿಯೇ ಉಲ್ಟಾ ನೇತು ಹಾಕಿ ಆಂಧ್ರಪ್ರದೇಶ ಮೂಲದ ಆರು ಜನ ಮೀನುಗಾರಿಕಾ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ. ಈ ಬಗ್ಗೆ … Continued

ಅಮೃತಸರ ಸಂಯೋಜಿತ ಅವಳಿಗಳಿಗೆ ಸಿಕ್ಕಿತು ಸರ್ಕಾರಿ ಕೆಲಸ..! ಸಂಯೋಜಿತ ಅವಳಿಗಳ ವೀಕ್ಷಿಸಿ

ಅಮೃತಸರ ಸಂಯೋಜಿತ ಅವಳಿಗಳು, ಸೋಹ್ನಾ ಮತ್ತು ಮೋಹ್ನಾ, ಲ್ಯಾಂಡ್ ಎ ಸರ್ಕಾರಿ ಕೆಲಸ ನವದೆಹಲಿ: ಅಮೃತಸರದ ಸಂಯೋಜಿತ ಅವಳಿಗಳಾದ ಸೋಹ್ನಾ ಸಿಂಗ್‌ ಮತ್ತು ಮೋಹ್ನಾ ಸಿಂಗ್‌ ಅವರು ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಷನ್ ಲಿಮಿಟೆಡ್‌ನಲ್ಲಿ (ಪಿಎಸ್‌ಪಿಸಿಎಲ್) ಉದ್ಯೋಗ ಪಡೆದಿದ್ದಾರೆ. ಸೋಹ್ನಾ, 19, ಕೆಲಸ ಪಡೆದುಕೊಂಡರು ಮತ್ತು ಡಿಸೆಂಬರ್ 20 ರಂದು ಕೆಲಸ ಮಾಡಲು ಪ್ರಾರಂಭಿಸಿದರು. ಅವರು … Continued

ಓಮಿಕ್ರಾನ್ ಬೆದರಿಕೆ ಮಧ್ಯೆಯೇ ಡೆಲ್ಮಿಕ್ರಾನ್ ಹೆಸರು ಮೂಂಚೂಣಿಗೆ: ಡೆಲ್ಮಿಕ್ರಾನ್ ಹೆಸರು ಯಾಕೆ ಬಂತು? ಇದು ಓಮಿಕ್ರಾನ್‌ ಗಿಂತ ಭಿನ್ನವೇ..?

ನವದೆಹಲಿ: ಪ್ರಪಂಚದಲ್ಲಿ ‘ಹೆಚ್ಚು ರೂಪಾಂತರಗೊಂಡ’ ಓಮಿಕ್ರಾನ್ ಪ್ರಕರಣಗಳ ಪ್ರಕರಣಗಳ ಆತಂಕದ ಮಧ್ಯೆ, ಡೆಲ್ಟಾ ರೂಪಾಂತರದಿಂದ ಬೆದರಿಕೆ ಇನ್ನೂ ಇರುವಾಗ, ಈಗ ಮತ್ತೊಂದು ರೂಪಾಂತರವು ಮುಂಚೂಣಿಗೆ ಬಂದಿದೆ. ಕೋವಿಡ್‌-19 ನ ಡಬಲ್ ರೂಪಾಂತರದ ಈ ವ್ಯತ್ಯಾಸಕ್ಕೆ ಡೆಲ್ಮಿಕ್ರಾನ್ ಎಂಬ ಹೆಸರನ್ನು ನೀಡಲಾಗಿದೆ. ವರದಿಗಳ ಪ್ರಕಾರ, ಯುರೋಪ್ ಮತ್ತು ಅಮೆರಿಕದಲ್ಲಿ ಡೆಲ್ಟಾ ಮತ್ತು ಓಮಿಕ್ರಾನ್‌ನ ಅವಳಿ ಸ್ಪೈಕ್‌ಗಳಾದ ಡೆಲ್ಮಿಕ್ರಾನ್ … Continued

ಸ್ನೇಹಿತರಿಂದಲೇ ಬಾಲಕನ ಹತ್ಯೆ, ಕತ್ತು ಕೊಯ್ದು ಕೈಕಾಲು ಕತ್ತರಿಸಿ, ಮೂಟೆಕಟ್ಟಿ ಕಾಡಿನಲ್ಲಿ ಶವ ಎಸೆದರು..!

ದಿಯೋಘರ್: ಆಘಾತಕಾರಿ ಘಟನೆಯೊಂದರಲ್ಲಿ ಜಗಳದ ಹಿನ್ನೆಲೆಯಲ್ಲಿ 14ರ ಹರೆಯದ ಬಾಲಕನೊಬ್ಬನನ್ನು ಆತನ ಸ್ನೇಹಿತರೇ ಕತ್ತು ಕೊಯ್ದು, ಕೈಕಾಲುಗಳನ್ನು ಕತ್ತರಿಸಿ, ಶವವನ್ನು ಗೋಣಿಚೀಲಗಳಲ್ಲಿ ತುಂಬಿ ಕಾಡಿನಲ್ಲಿ ಎಸೆದಿದ್ದಾರೆ ಎಂದು ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯಲ್ಲಿ ಪೊಲೀಸರು ಗುರುವಾರ ತಿಳಿಸಿದ್ದಾರೆ. . ಮೃತ ಬಾಲಕನ ಕುಟುಂಬದವರು ಬುಧವಾರ ದೂರು ದಾಖಲಿಸಿದ್ದು, ಹಿಂದಿನ ರಾತ್ರಿ ನಿಗೂಢವಾಗಿ ನಾಪತ್ತೆಯಾಗಿದ್ದಾನೆ ಎಂದು ಉಪವಿಭಾಗೀಯ ಪೊಲೀಸ್ … Continued

ತೆಲಂಗಾಣದಲ್ಲಿ ಕೊರೆಯುವ ಚಳಿ, ಕೇವಲ 3.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲು…! 125 ವರ್ಷಗಳಲ್ಲಿ 2ನೇ ಬಾರಿಗೆ ಅತಿ ಕಡಿಮೆ ತಾಪಮಾನ

ಹೈದರಾಬಾದ್​ (ತೆಲಂಗಾಣ): 125 ವರ್ಷಗಳ ಕಾಲಾವಧಿಯಲ್ಲಿ ತೆಲಂಗಾಣ ರಾಜ್ಯದಲ್ಲಿ ಎರಡನೇ ಬಾರಿಗೆ ಅತ್ಯಂತ ಕಡಿಮೆ ತಾಪಮಾನ ದಾಖಲಾಗಿದೆ ಎಂದು ಹವಾಮಾನ ವರದಿಗಳು ತಿಳಿಸಿವೆ. ಕುಮುರಂ ಭೀಮ್ ಜಿಲ್ಲೆಯ ಗಿನ್ನೆಧಾರಿ ಪ್ರದೇಶದಲ್ಲಿ ಮಂಗಳವಾರ ಕೇವಲ 3.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, 1897ರ ನಂತರ ಎರಡನೇ ಬಾರಿಗೆ ದಾಖಲಾದ ಅತ್ಯಂತ ಕಡಿಮೆ ತಾಪಮಾನ ಇದಾಗಿದೆ ಎಂದು ವರದಿಗಳು … Continued

ವಿಪಕ್ಷಗಳ ವಿರೋಧದ ನಡುವೆಯೇ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ

ಸುವರ್ಣಸೌಧ(ಬೆಳಗಾವಿ): ಚರ್ಚೆಗೆ ಅವಕಾಶ ನೀಡಬೇಕೆಂದು ವಿಪಕ್ಷಗಳ ಕೆಲ ಶಾಸಕರು ಬಾವಿಗಿಳಿದು ಪ್ರತಿಭಟನೆ ಮಾಡಿದರು. ಈ ನಡುವೆಯೇ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಕ ವಿಧೇಯಕ -2021 ಅನ್ನು ವಿಧಾನಸಭೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಗಿದೆ. ಪ್ರತಿಪಕ್ಷಗಳ ತೀವ್ರ ಆಕ್ಷೇಪ, ಗದ್ದಲದ ನಡುವೆಯೂ ಮತಾಂತರ ನಿಷೇಧ ವಿಧೇಯಕವನ್ನು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಧ್ವನಿಮತಕ್ಕೆ ಹಾಕಿದರು. ಧ್ವನಿಮತದ ಮೂಲಕವೇ … Continued