ಸಾಹಿತ್ಯ ಕ್ಷೇತ್ರ ಸಮಾಜ ಪರಿವರ್ತನೆಗೆ ಪೂರಕ: ಕಾಗೇರಿ

ಸಿದ್ದಾಪುರ:ಸಾಹಿತ್ಯ ಕ್ಷೇತ್ರ ಸಮಾಜದ ಪರಿವರ್ತನೆಗೆ ಹಾಗೂ ಮೌಲ್ಯಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಬಹುದೊಡ್ಡ ಕೊಡುಗೆ ನೀಡಿದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರ ಬಗ್ಗೆ ಯಾವತ್ತೂ ಗೌರವವಿದೆ ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಅವರು ಪಟ್ಟಣದ ಬಾಲಭವನದಲ್ಲಿ ನಡೆದ ಗಂಗಾಧರ ಕೊಳಗಿಯವರ ಯಾನ- ಅಲೆಮಾರಿಯ ಅನುಭವ ಕಥನ ಕೃತಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಹಿತ್ಯ … Continued

ಒಬಾಮಾಗೆ ನೀಡಿದಂತೆ ಪ್ರಧಾನಿ ಮೋದಿ ರೈತರಿಗೂ ಆತಿಥ್ಯ ನೀಡಲಿ

ಭರೂಚ್: ಅಮೆರಿಕದ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾಗೆ ೨೦೧೫ರಲ್ಲಿ ಆತಿಥ್ಯ ನೀಡಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಭಟನಾ ನಿರತ ರೈತರನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಬೇಕು ಹಾಗೂ ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಎಂದು ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಒವೈಸಿ ಹೇಳಿದ್ದಾರೆ. ಭಾನುವಾರ ಗುಜರಾತ್‌ನ ಸ್ಥಳೀಯ ಸಂಸ್ಥೆಗಳಿಗೆ ಮುಂಬರುವ ಚುನಾವಣೆಗಾಗಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಎರಡು … Continued

ಟ್ವಿಟರ್ ಇಂಡಿಯಾ ಪಾಲಿಸಿ ಮುಖ್ಯಸ್ಥೆ ಮಹಿಮಾ ಕೌಲ್‌ ರಾಜೀನಾಮೆ

  ನವ ದೆಹಲಿ: ಟ್ವಿಟರ್ ಇಂಡಿಯಾದ ಸಾರ್ವಜನಿಕ ನೀತಿ ಮುಖ್ಯಸ್ಥರಾದ ಮಹಿಮಾ ಕೌಲ್ ವೈಯಕ್ತಿಕ ಕಾರಣಗಳನ್ನು ಉಲ್ಲೇಖಿಸಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾರ್ಚ್ ಅಂತ್ಯದವರೆಗೆ ಕೌಲ್ ತನ್ನ ಸ್ಥಾನದಲ್ಲಿ ಮುಂದುವರಿಲಿದ್ದಾರೆ ಎಂದು ಟ್ವಿಟರ್ ಹೇಳಿಕೆಯಲ್ಲಿ ತಿಳಿಸಿದೆ. ಒಂದು ವರ್ಷದೊಳಗೆ ಇದು ಇಂತಹ ಎರಡನೆಯ ರಾಜೀನಾಮೆಯಾಗಿದ್ದು, 2020ರ ಅಕ್ಟೋಬರ್‌ನಲ್ಲಿ ಫೇಸ್‌ಬುಕ್‌ನ ಭಾರತ ನೀತಿ ಮುಖ್ಯಸ್ಥರಾಗಿ ಅಂಕಿ … Continued

ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕ್ರೈಸ್ತರಿಂದ ೧ ಕೋಟಿ ರೂ.ದೇಣಿಗೆ

ಬೆಂಗಳೂರು : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ರಾಜ್ಯದ ಕ್ರೈಸ್ತ ಸಮುದಾಯ ಕೈಜೋಡಿಸಿದ್ದು, ಒಂದು ಕೋಟಿ ರೂ.ಗಳಿಗೂ  ಹೆಚ್ಚು ದೇಣಿಗೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ   ಆಯೋಜಿಸಿದ್ದ ಸಭೆಯಲ್ಲಿ ಕ್ರೈಸ್ತ ಸಮುದಾಯದ  ಶಿಕ್ಷಣ ತಜ್ಞರು, ಉದ್ಯಮಿಗಳು,ಅನಿವಾಸಿ ಭಾರತೀಯರು, ಸಿಇಒಗಳು, ಮಾರ್ಕೆಟಿಂಗ್ ತಜ್ಞರು, ಸಮಾಜ ಸೇವಕರು, ಸಮುದಾಯದ ಮುಖಂಡರು ಭಾಗಿಯಾಗಿ ರಾಮ ಮಂದಿರ ನಿರ್ಮಾಣಕ್ಕೆ ತಮ್ಮ … Continued

ಶಶಿಕಲಾ ವಿರುದ್ಧ ಎಐಎಡಿಎಂಕೆ ದೂರು ದಾಖಲು

ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಆಪ್ತ ಸಹಾಯಕಿ ಶಶಿಕಲಾ ಹಾಗೂ ಅಮ್ಮ ಮಕ್ಕಳ ಮುನೇತ್ರ ಕಜಗಮ್‌ ಪ್ರಧಾನ ಕಾರ್ಯದರ್ಶಿ ದಿನಕರನ್‌ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತಿದ್ದಾರೆಂದು ಹಿರಿಯ ಸಚಿವರು ಸೇರಿದಂತೆ ಎಐಎಡಿಎಂಕೆ ಮುಖಂಡರು ಪೊಲೀಸ್‌ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ. ಸಚಿವರಾದ ಡಿ.ಜಯಕುಮಾರ, ಪಿ.ತಂಗಮಣಿ ಅಲ್ಲದೇ ಪಕ್ಷದ ಅಧ್ಯಕ್ಷ ಇ. ಮಧುಸೂಧನ್‌ ಪೊಲೀಸ್‌ ಮಹಾನಿರ್ದೇಶಕ ಸಿ.ವಿ.ತ್ರಿಪಾಠಿ ಅವರನ್ನು … Continued

ತೆಂಡುಲ್ಕರ್‌ ಹೇಳಿಕೆಗೆ ಪವಾರ್‌ ಆಕ್ಷೇಪ

ಮುಂಬೈ: ಪ್ರತಿಭಟನೆ ನಡೆಸುತ್ತಿರುವ ರೈತರ ಬಗ್ಗೆ ಹೇಳಿಕೆ ನೀಡುವಾಗ ಜಾಗರೂಕವಾಗಿರಿ ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖ್ಯಸ್ಥ ಶರದ್ ಪವಾರ್ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್‌ಗೆ ಸಲಹೆ ನೀಡಿದ್ದಾರೆ. ರೈತರ ಪ್ರತಿಭಟನೆ ಕುರಿತು ಅಂತಾರಾಷ್ಟ್ರೀಯ ಗಣ್ಯರು ನೀಡಿದ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ಸಚಿನ್, ಭಾರತದ ಸಾರ್ವಭೌಮತ್ವದೊಂದಿಗೆ ರಾಜಿ ಮಾಡಲು ಸಾಧ್ಯವಿಲ್ಲ ಮತ್ತು ಬಾಹ್ಯ ಶಕ್ತಿಗಳು ಪ್ರೇಕ್ಷಕರಾಗಬಹುದು, … Continued

ಶ್ರೀರಾಮ ಮಂದಿರ ನಿಧಿ ಸಮರ್ಪಣೆ: ಡಿಕೆಶಿ ಭೇಟಿ ಮಾಡಿದ ವಿಎಚ್‌ಪಿ ಪ್ರಮುಖರು

ಬೆಂಗಳೂರು: ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ನಿಮಿತ್ತ ವಿಶ್ವ ಹಿಂದೂ ಪರಿಷತ್ ಮುಖಂಡರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರನ್ನು ಭೇಟಿಯಾದರು. ವಿಎಚ್‌ಪಿ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ .ಶಿವಕುಮಾರ ಮತ್ತು ಸಂಸದ ಡಿ.ಕೆ ಸುರೇಶ ಅವರನ್ನು ಭೇಟಿಯಾದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ತೆರಳಿದ ವಿಶ್ವ ಹಿಂದು ಪರಿಷತ್ತಿನ … Continued

ಪಿಎಸ್‌ಯು ಉತ್ತಮ ನಿರ್ವಹಣೆ ಸರ್ಕಾರದ ಬಯಕೆ: ನಿರ್ಮಲಾ

ನವದೆಹಲಿ: ತೆರಿಗೆದಾರರ ಹಣವನ್ನು ಬುದ್ಧಿವಂತಿಕೆಯಿಂದ ಖರ್ಚು ಮಾಡಲು ಕೇಂದ್ರ ಸರಕಾರ ಸ್ಪಷ್ಟ ಕಾರ್ಯತಂತ್ರ ರೂಪಿಸಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ. ಬಜೆಟ್‌ ಕುರಿತು ಕುಟುಂಬದ ಬೆಳ್ಳಿಯನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಪ್ರತಿ ಪಕ್ಷಗಳ ಆರೋಪವನ್ನು ವಿತ್ತ ಸಚಿವೆ ತಿರಸ್ಕರಿಸಿದ್ದಾರೆ. ನಿಗದಿತ ಕ್ಷೇತ್ರಗಳಲ್ಲಿನ ಕೆಲವು ಸಾರ್ವಜನಿಕ ವಲಯದ ಉದ್ಯಮಗಳು ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದು ಸರ್ಕಾರ ಬಯಸಿದೆ, … Continued

ಶಾಂತರೀತಿ ಪ್ರತಿಭಟನೆಗೆ ರೈತರಿಗೆ ಅವಕಾಶ ನೀಡಿ:ಅಮರಿಕ

ವಾಷಿಂಗ್ಟನ್‌ (ಅಮೆರಿಕ): ಭಾರತದ ಪ್ರಧಾನಿ ನರೇಂದ್ರ ಮೋದಿ ಪ್ರಜಾಪ್ರಭುತ್ವದ ಮೌಲ್ಯಗಳ ಪಾಲನೆಯಾಗಬೇಕು ಮತ್ತು ಪ್ರತಿಭಟನಾನಿರತರು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸಲು ಅವಕಾಶ ಕಲ್ಪಿಸಬೇಕಲ್ಲದೆ ಇಂಟರ್‌ನೆಟ್‌ಗೆ ತಡೆಯಾಗದಂತೆ ನೋಡಿಕೊಳ್ಳಬೇಕೆಂದು ಅಮೆರಿಕದ ಕಾಂಗ್ರೆಶ್ನಲ್‌ ಇಂಡಿಯಾ ಆಗ್ರಹಿಸಿದೆ. ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರಿಯೊಂದಿಗೆ ಮಾತನಾಡಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಶ್ನಲ್‌ ಇಂಡಿಯಾ ಸಹ ಅಧ್ಯಕ್ಷ ಬ್ರಾಡ್ ಶೆರ್ಮನ್ ತಿಳಿಸಿದ್ದಾರೆ. … Continued

ಅಸ್ಸಾಂ ಚಹಾ ವಿರುದ್ಧ ವಿದೇಶಿ ಶಕ್ತಿಗಳ ಪಿತೂರಿ: ಮೋದಿ

ಆಸ್ಸಾಂ: ಕೆಲ ವಿದೇಶಿ ಶಕ್ತಿಗಳು ನಮ್ಮ ಭಾರತೀಯ ಚಹಾದ ಘನತೆ ಕುಂದಿಸುಲ್ಲಿ ನಿರತವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಅವರು ಆಸ್ಸಾಂನಲ್ಲಿ ಚಹಾ ತೋಟಗಳ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿ, ಅಸ್ಸಾಂ ಚಹಾದ ವಿರುದ್ಧ ಕೆಲ ವಿದೇಶಿ ಶಕ್ತಿಗಳು ಪಿತೂರಿ ನಡೆಸಿವೆ. ಭಾರತೀಯ ಚಹಾದ ಘನತೆಯನ್ನು ವಿಶ್ವಾದ್ಯಂತ ವ್ಯವಸ್ಥಿತವಾಗಿ ಹಾಳು ಮಾಡುವಲ್ಲಿ ಕೆಲ ಶಕ್ತಿಗಳು ನಿರತವಾಗಿವೆ ಎಂದರು. … Continued