ಪ್ರಾಣಿಗಳಿಗೂ ಬಂತು ಕೊರೊನಾ ವೈರಸ್‌ ಲಸಿಕೆ…! ವಿಶ್ವದ ಮೊದಲನೇ ಪ್ರಾಣಿ ಕೋವಿಡ್ ಲಸಿಕೆ ನೋಂದಣಿ..!!

ಕೊರೊನಾ ವೈರಸ್‌ ವಿರುದ್ಧ ವಿಶ್ವದ ಮೊದಲ ಪ್ರಾಣಿ ಲಸಿಕೆಯನ್ನು ರಷ್ಯಾದಲ್ಲಿ ನೋಂದಾಯಿಸಲಾಗಿದೆ ಎಂದು ದೇಶದ ಕೃಷಿ ಸುರಕ್ಷತಾ ವಾಚ್‌ಡಾಗ್‌ನ ರೊಸೆಲ್ಖೋಜ್ನಾಡ್ಜೋರ್ ಬುಧವಾರ ಹೇಳಿದೆ. ಪ್ರಾಣಿಗಳಿಗೆ ಲಸಿಕೆ, ರೊಸೆಲ್ಖೋಜ್ನಾಡ್ಜೋರ್ ನಿಂದ (ಫೆಡರಲ್ ಸರ್ವಿಸ್ ಫಾರ್ ಪಶುವೈದ್ಯಕೀಯ ಮತ್ತು ಫೈಟೊಸಾನಟರಿ ಕಣ್ಗಾವಲು) ಅಭಿವೃದ್ಧಿಪಡಿಸಲಾಗಿದೆ, ಇದನ್ನು ಕಾರ್ನಿವಾಕ್-ಕೋವ್ ಎಂದು ಹೆಸರಿಸಲಾಗಿದೆ ಎಂದು ವಾಚ್‌ಡಾಗ್‌ನ ಉಪ ಮುಖ್ಯಸ್ಥ ಕಾನ್‌ಸ್ಟಾಂಟಿನ್ ಸಾವೆಂಕೋವ್ ಹೇಳಿದ್ದಾರೆ. … Continued

ಭಾರತದೊಂದಿಗೆ ವ್ಯಾಪಾರ ಸಂಬಂಧ ಪುನರಾರಂಭ: ಇಂದು ಪಾಕಿಸ್ತಾನ್‌ ಕ್ಯಾಬಿನೆಟ್‌ ಸಮಿತಿ ಸಭೆ

ಭಾರತದೊಂದಿಗಿನ ಸಂಬಂಧಗಳ ಪುನರುಜ್ಜೀವನಕ್ಕೆ ಯತ್ನಿಸುವ ಪಾಕಿಸ್ತಾನದ ಮೊದಲ ಪ್ರಮುಖ ಹೆಜ್ಜೆಯಾಗಿ ಪಾಕಿಸ್ತಾನ ಸರ್ಕಾರ ಬುಧವಾರ ಭಾರತದೊಂದಿಗೆ ವ್ಯಾಪಾರ ಸಂಬಂಧವನ್ನು ಪುನರಾರಂಭಿಸುವುದನ್ನು ಪರಿಗಣಿಸಲಿದೆ ಎಂದು ಹೇಳಲಾಗಿದೆ. ಭಾರತದಿಂದ ಸಕ್ಕರೆ ಮತ್ತು ಹತ್ತಿ ಆಮದು ಮಾಡಿಕೊಳ್ಳುವ ಬಗ್ಗೆ ಪಾಕಿಸ್ತಾನದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ತೀರ್ಮಾನಿಸಲಿದೆ ಎಂದು ಮೂಲಗಳು ತಿಳಿಸಿವೆ. ಸಮಿತಿ ಸಭೆ ಪಾಕಿಸ್ತಾನದ ಸಮಯ ಬೆಳಿಗ್ಗೆ 11.30 … Continued

ಭಾರತದೊಂದಿಗೆ ಉತ್ತಮ ಬಾಂಧವ್ಯ, ಪಾಕ್‌ ಬಯಕೆ ;ಮೋದಿಗೆ ಪಾಕ್‌ ಪ್ರಧಾನಿ ಪತ್ರ

ನವದೆಹಲಿ: ಪಾಕಿಸ್ತಾನ ಹಾಗೂ ಭಾರತದ ನಡುವಿನ ಎಲ್ಲಾ ಸಮಸ್ಯೆಗಳನ್ನು, ಬಹುಮುಖ್ಯವಾಗಿ ಜಮ್ಮು ಹಾಗೂ ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಲು ರಚನಾತ್ಮಕಸಂವಾದಕ್ಕೆ ಶಕ್ತವಾದ ವಾತಾವರಣ ನಿರ್ಮಿಸಬೇಕಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಪಾಕಿಸ್ತಾನ ದಿನಕ್ಕೆ ಶುಭಾಶಯ ಕೋರಿ ಪತ್ರ ಬರೆದಿದ್ದಕ್ಕೆ ಧನ್ಯವಾದ. ಸಾರ್ವಭೌಮ ರಾಜ್ಯ ಸೃಷ್ಟಿಯಲ್ಲಿ ನಮ್ಮ … Continued

ಮಹತ್ವದ ಬೆಳವಣಿಗೆ…ವುಹಾನ್ ಲ್ಯಾಬ್ ಸೋರಿಕೆ ಸಾಧ್ಯತೆ ಬಗ್ಗೆ ಮತ್ತೊಮ್ಮೆ ಅಧ್ಯಯನ ಅಗತ್ಯ ಎಂದ ಡಬ್ಲುಎಚ್‌ಒ ಮುಖ್ಯಸ್ಥ..!

ವಾಷಿಂಗ್ಟನ್: ಚೀನಾದಲ್ಲಿನ ಕೊರೊನಾ ವೈರಸ್ ಮೂಲದ ಅಧ್ಯಯನವು ರೋಗ ಕಾರಕವು ಬಾವಲಿಗಳಿಂದ ಮನುಷ್ಯರಿಗೆ ಮತ್ತೊಂದು ಪ್ರಾಣಿಗಳ ಮೂಲಕ ಹರಡಬಹುದು ಎಂದು ತೀರ್ಮಾನಿಸುವ ಮೊದಲು ಲ್ಯಾಬ್ ಸೋರಿಕೆಯಾಗುವ ಸಾಧ್ಯತೆಯನ್ನು ಸಮರ್ಪಕವಾಗಿ ವಿಶ್ಲೇಷಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ. ಸಾಂಕ್ರಾಮಿಕ ರೋಗದ ಉಗಮಕ್ಕೆ ಸೋರಿಕೆ ಕಡಿಮೆ ಸಾಧ್ಯತೆ ಎಂದು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವು ನಿರ್ಧರಿಸಿದ್ದರೂ ಸಹ, … Continued

ಸುಯೆಜ್‌ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಎವರ್‌ ಗ್ರೀನ್‌ ದೈತ್ಯ ಕಂಟೇನರ್‌ ಚಲನೆ ಆರಂಭ

ಕಳೆದೊಂದು ವಾರದಿಂದ ಸುಯೆಜ್‌ ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಕಂಟೇನರ್‌ ಹಡಗು “ಎವರ್‌ ಗ್ರೀನ್‌” ಮತ್ತೆ ಚಲಿಸಲಾರಂಭಿಸಿದೆ ಎಂದು ವರದಿಯಾಗಿದೆ. ಕಡಲ ಸೇವಾ ಪೂರೈಕೆದಾರ – ಇಂಚ್‌ಕೇಪ್ ಪ್ರಕಾರ, ಸೂಯೆಜ್ ಕಾಲುವೆಯಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಸಿಲುಕಿಕೊಂಡಿದ್ದ ‘ಎವರ್ ಗ್ರೀನ್‌ʼ ಎಂಬ ದೈತ್ಯ ಹಡಗನ್ನು ರಕ್ಷಿಸಿಕೊಳ್ಳುವಲ್ಲಿ ರಕ್ಷಣಾ ತಂಡಗಳು ಯಶಸ್ವಿಯಾಗಿವೆ. ಈ ಸರಕು ಹಡಗು ವಿಶ್ವದ ಪ್ರಮುಖ … Continued

ಬಾಂಗ್ಲಾ ಹಿಂಸಾಚಾರಕ್ಕೆ ೧೧ ಸಾವು: ಇಸ್ಲಾಮಿಸ್ಟ್‌ ಮೂಲಭೂತವಾದಿಗಳಿಂದ ಹಿಂದೂ ದೇವಾಲಯಗಳ ಮೇಲೆ ದಾಳಿ

ಪ್ರಧಾನಿ ನರೇಂದ್ರ ಮೋದಿ ಅಧಿಕೃತ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಬಾಂಗ್ಲಾದೇಶದ ಮೂಲಭೂತವಾದಿ ಇಸ್ಲಾಮಿಸ್ಟ್‌ ಸಂಘಟನೆ ಹೆಫಜತ್-ಎ-ಇಸ್ಲಾಮಿ ಹಿಂದೂ ದೇವಾಲಯಗಳ ಮೇಲೆ ದಾಳಿ ನಡೆಸಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ.ಉಸ್ತಾದ್ ಅಲಾವುದ್ದೀನ್ ಖಾನ್ ಮ್ಯೂಸಿಕ್ ಅಕಾಡೆಮಿಗೆ ಬೆಂಕಿ ಹಚ್ಚಲಾಗಿದೆ ಎಂದು ಢಾಕಾ ಟ್ರಿಬ್ಯೂನ್ ವರದಿ ಮಾಡಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿ ವಿರೋಧಿಸಿ ಬಾಂಗ್ಲಾದೇಶದಲ್ಲಿ … Continued

ಕೆನಡಾ ವ್ಯಾಂಕೋವರ್ ಗ್ರಂಥಾಲಯದಲ್ಲಿ ವ್ಯಕ್ತಿಯಿಂದ ಹಲವರಿಗೆ ಇರಿತ: ಮಹಿಳೆ ಸಾವು, ಆರು ಮಂದಿಗೆ ಗಾಯ

ಅಮೆರಿಕದ ಅಮೆರಿಕದ ಕೊಲೊರಾಡೋದ ಬೌಲ್ಡರ್‌ನ ಸೂಪರ್‌ ಮಾರ್ಕೆಟ್‌ನಲ್ಲಿ ಬೇಕಾಬಿಟ್ಟಿ ಗುಂಡುಹಾರಿಸಿ ೧೦ ಜನರು ಮೃತಪಟ್ಟ ಘಟನೆ ಮಾಸುವ ಮುನ್ನವೇ ಕೆನಡಾದ ವ್ಯಾಂಕೋವರ್‌ನಲ್ಲಿ ಶನಿವಾರ ಇಂಥದ್ದೇ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ದಾಳಿ ಮಾಡಿ ಚೂರಿಯಿಂದ ಇರಿದ ಪರಿಣಾಮ ಓರ್ವ ಮಹಿಳೆ ಮೃತಪಟ್ಟಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಬ್ರಿಟಿಷ್ ಕೊಲಂಬಿಯಾದ ಉತ್ತರ ವ್ಯಾಂಕೋವರ್‌ನಲ್ಲಿರುವ ಗ್ರಂಥಾಲಯದೊಳಗೆ ವ್ಯಕ್ತಿಯೊಬ್ಬ … Continued

ಬಾಂಗ್ಲಾಕ್ಕೆ ಭಾರತದಿಂದ 12 ಲಕ್ಷ ಕೊರೊನಾ ಲಸಿಕೆ ಕೊಡುಗೆ

ಢಾಕಾ : ಭಾರತವು ಶನಿವಾರ ಬಾಂಗ್ಲಾದೇಶಕ್ಕೆ 12 ಲಕ್ಷ ಕೋವಿಡ್-19 ಲಸಿಕೆಯ ಡೋಸ್‌ಗಳನ್ನು ಕೊಡುಗೆಯಾಗಿ ನೀಡಿದೆ. ಎರಡು ದಿನಗಳ ಪ್ರವಾಸಕ್ಕಾಗಿ ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಲಸಿಕೆಗಳನ್ನೊಳಗೊಂಡ ಪ್ರಾತಿನಿಧಿಕ ಪೆಟ್ಟಿಗೆಯೊಂದನ್ನು ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರಿಗೆ ಹಸ್ತಾಂತರಿಸಿದರು. ಅದೇ ವೇಳೆ, ಮೋದಿ 109 ಅಂಬುಲೆನ್ಸ್‌ಗಳ ಪ್ರಾತಿನಿಧಿಕ ಕೀ ಹಸೀನಾರಿಗೆ ನೀಡಿದರು. ಉಭಯ ನಾಯಕರು … Continued

ಮೋದಿ ಭೇಟಿ ವಿರೋಧಿಸಿ ನಡೆದ ಹಿಂಸಾಚಾರಕ್ಕೆ ನಾಲ್ವರು ಸಾವು: ಫೇಸ್‌ಬುಕ್‌ ಸೇವೆ ಸ್ಥಗಿತಗೊಳಿಸಿದ ಬಾಂಗ್ಲಾ ಸರ್ಕಾರ

ಢಾಕಾ; ಭಾರತದ ಪ್ರಧಾನಿ ನರೇಂದ್ರ ಮೋದಿ ಭೇಟಿಯನ್ನು ವಿರೋಧಿಸಿ ಇಸ್ಲಾಮಿಕ್‌ ಮೂಲಭೂತ ಸಂಘಟನೆಗಳು ಪ್ರತಿಭಟಿಸುತ್ತಿರುವುದರಿಂದ ಬಾಂಗ್ಲಾದೇಶದಲ್ಲಿ ಫೇಸ್‌ಬುಕ್ ಸೇವೆ ಕಡಿತಗೊಳಿಸಲಾಗಿದೆ. ಬೀದಿಗಳಲ್ಲಿ ಹಿಂಸಾಚಾರ ನಡೆದಿದ್ದರಿಂದ ಪೊಲೀಸ್‌ ಗೋಲಿಬಾರಿನಲ್ಲಿ ನಾಲ್ವರು ಹೆಫಜತ್-ಇ-ಇಸ್ಲಾಮಿ ಸದಸ್ಯರು ಶುಕ್ರವಾರ ಮೃತಪಟ್ಟಿದ್ದರು. ನಮ್ಮ ಸೇವೆಗಳನ್ನು ಬಾಂಗ್ಲಾದೇಶದಲ್ಲಿ ನಿರ್ಬಂಧಿಸಲಾಗಿದೆ ಎಂದು ತಿಳಿದಿದೆ. ನಾವು ಇನ್ನಷ್ಟು ಅರ್ಥಮಾಡಿಕೊಳ್ಳಲು ಕೆಲಸ ಮಾಡುತ್ತಿದ್ದೇವೆ ಮತ್ತು ಸಾಧ್ಯವಾದಷ್ಟು ಬೇಗ ಪೂರ್ಣ … Continued

ಮೋದಿ ಭೇಟಿ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ನಾಲ್ವರು ಸಾವು

ನವ ದೆಹಲಿ: ಇಸ್ಲಾಮಿಕ್ ಮೂಲಭೂತವಾದಿ ಗುಂಪಿನ ಹೆಫಜತ್-ಎ-ಇಸ್ಲಾಂನ ಕಾರ್ಯಕರ್ತರು ಮತ್ತು ಎಡ ಪಕ್ಷಗಳ ಸಂಯೋಜಿತ ವಿದ್ಯಾರ್ಥಿಗಳು ಪ್ರಧಾನಿ ಮೋದಿ ಬಾಂಗ್ಲಾದೇಶ ಭೇಟಿ ವಿರೊಧಿಸಿ ನಡೆದ ಪ್ರತಿಭಟನೆ ಪೊಲೀಸರೊಂದಿಗೆ ಘರ್ಷಣೆಗೆ ತಿರುಗಿದಾಗ ಚಿತ್ತಗಾಂಗ್‌ನಲ್ಲಿ ಕನಿಷ್ಠ ನಾಲ್ಕು ಜನರು ಮೃತಪಟ್ಟಿದ್ದಾರೆ. ಮೋದಿಯವರ ನಿಗದಿತ ಭೇಟಿಯ ವಿರುದ್ಧ ಈಗಾಗಲೇ ಬಾಂಗ್ಲಾದೇಶದಲ್ಲಿ ನಡೆಯುತ್ತಿದ್ದ ಪ್ರತಿಭಟನೆಗಳು, ಬಾಂಗ್ಲಾದೇಶದ ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ … Continued