ಬಿಜೆಪಿ ಸಂಸದೀಯ ಮಂಡಳಿಗೆ ನೇಮಕ: ಯಡಿಯೂರಪ್ಪ ಕಮ್‌ಬ್ಯಾಕ್, 2023ಕ್ಕೆ ಬಿಜೆಪಿ ಅಧಿಕಾರಕ್ಕೆ ತರುವುದಾಗಿ ಪ್ರತಿಜ್ಞೆ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಬಿಜೆಪಿಯಲ್ಲಿ ಕಡೆಗಣಿಸಲಾಗಿದೆ, ದೂರವಿಡಲಾಗಿದೆ ಎಂದು ಕೇಳಿಬರುತ್ತಿರುವಾಗಲೇ ಬಿಜೆಪಿಯ ಅತ್ಯಂತ ಉನ್ನತ ಸಮಿತಿಯಾದ ಸಂಸದೀಯ ಮಂಡಳಿಗೆ ಯಡಿಯೂರಪ್ಪ ಅವರನ್ನು ಬುಧವಾರ ನೇಮಕ ಮಾಡಿ ಅವರಿಗೆ ಮಹತ್ವದ ಹೊಣೆಗಾರಿಕೆ ನೀಡಲಾಗಿದೆ. ತಮ್ಮ ಹೊಸ ಹುದ್ದೆ ನೀಡಿದ್ದಕ್ಕಾಗಿ ಯಡಿಯೂರಪ್ಪ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕತ್ವಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಹಾಗೂ … Continued

ಮೇ ತಿಂಗಳಲ್ಲಿ ನಡೆದಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು: ಮೇ ತಿಂಗಳಲ್ಲಿ ನಡೆದಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ (ಪದವೀಧರ) ನೇಮಕಾತಿ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ತಿಳಿಸಿದ್ದಾರೆ. 2022ರ ಮೇ ತಿಂಗಳಲ್ಲಿ ನಡೆದಿದ್ದ ಪ್ರಾಥಮಿಕ ಶಾಲಾ ಶಿಕ್ಷಕರ (ಪದವೀಧರ) ಹುದ್ದೆಗಳ ನೇಮಕ ಪರೀಕ್ಷೆ ಫಲಿತಾಂಶವನ್ನು ಇಂದು ಸಂಜೆ 6 ಗಂಟೆ ನಂತರ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು … Continued

ಮುಧೋಳ ನಾಯಿಗಳು ಪ್ರಧಾನಿ ಮೋದಿ ಭದ್ರತೆಗೆ ಸೇರ್ಪಡೆ ಬಹುತೇಕ ಖಚಿತ : ಎಸ್‌ಪಿಜಿಯಿಂದ ನಡೆಯುತ್ತಿದೆ ಪ್ರಯೋಗ

ಬೆಂಗಳೂರು: ರಾಜ್ಯದ ಬಾಗಲಕೋಟೆ ಜಿಲ್ಲೆಯ ಕಾರವಾನ್‌ ಹೌಂಡ್‌ ಎಂದು ಕರೆಯಲ್ಪಡುವ ಮುಧೋಳ ನಾಯಿಗಳು ಪ್ರಧಾನಿ ನರೇಂದ್ರ ಮೋದಿಯವರ ಭದ್ರತೆಯ ಹೊಣೆ ಹೊತ್ತಿರುವ ವಿಶೇಷ ರಕ್ಷಣಾ ಗುಂಪಿನ (ಎಸ್‌ಪಿಜಿ) ಭಾಗವಾಗುವ ಎಲ್ಲ ಸಾಧ್ಯೆತಗಳೂ ಇವೆ ಎಂದು ವರದಿಗಳು ತಿಳಿಸಿವೆ. ಈ ಬೆಳವಣಿಗೆಯನ್ನು ದೃಢೀಕರಿಸಿರುವ ತಿಮ್ಮಾಪುರದ ಕೋರೆಹಲ್ಲು ಸಂಶೋಧನೆ ಮತ್ತು ಮಾಹಿತಿ ಕೇಂದ್ರದ ಮುಖ್ಯಸ್ಥ ಡಾ ಸುಶಾಂತ್ ಹಂಡಗೆ … Continued

ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಬರಲಿದೆ ವಿಶ್ವದ ಅತಿ ದೊಡ್ಡ ಪ್ರಯಾಣಿಕ ವಿಮಾನ

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ದಕ್ಷಿಣ ರನ್ ವೇ ಸೂಪರ್ ಜಂಬೋ ವಿಮಾನ ಸ್ವೀಕರಿಸಲು ಸಜ್ಜಾಗಿದೆ. ಯುಎಇ ವಿಮಾನಯಾನ ಸಂಸ್ಥೆ ಎಮಿರೇಟ್ಸ್‌ ತನ್ನ ಹೇಳಿಕೆಯನ್ನು ಬಿಡುಗಡೆ ಮಾಡಿ, ಅಕ್ಟೋಬರ್‌ 30 ರಿಂದ ಪ್ರತಿನಿತ್ಯ ಬೆಂಗಳೂರಿನಿಂದ ದುಬೈಗೆ ಸೇವೆ ನೀಡಲಾಗುತ್ತದೆ ಎಂದು ತಿಳಿಸಿದೆ. ಎಮಿರೇಟ್ಸ್‌ ಸಂಸ್ಥೆಯ ಏರ್‌ಬಸ್‌ ಎ380 ವಿಮಾನ ಲ್ಯಾಂಡ್‌ ಆಗುವ ಎರಡನೇ ನಿಲ್ದಾಣ … Continued

ಭಯದ ವಾತಾವರಣ ಸೃಷ್ಟಿಸುವುದೇ ಪ್ರವೀಣ್ ನೆಟ್ಟಾರು ಹತ್ಯೆಯ ಹಿಂದಿನ ಉದ್ದೇಶವಾಗಿತ್ತು : ಎನ್‌ಐಎ ಎಫ್‌ಐಆರ್‌ನಲ್ಲಿ ಉಲ್ಲೇಖ

ನವದೆಹಲಿ: ಭಯದ ವಾತಾವರಣ ಸೃಷ್ಟಿಸುವುದು ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ ನೆಟ್ಟಾರು ಅವರ ಹತ್ಯೆಯ ಉದ್ದೇಶವಾಗಿತ್ತು ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಹೇಳಿದೆ. ಸುತ್ತಲಿನ ಪರಿಸರದಲ್ಲಿ ಭಯದ ವಾತಾವರಣ ಮೂಡಿಸುವ ಉದ್ದೇಶದಿಂದ ಈ ಕೊಲೆ ಮಾಡಿರುವ ಶಂಕೆ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.ಭಾರತೀಯ ಜನತಾ ಪಕ್ಷದ (ಬಿಜೆಪಿ) ಯುವ ಮೋರ್ಚಾ ನಾಯಕ ಪ್ರವೀಣ ನೆಟ್ಟಾರು … Continued

ಆಗಸ್ಟ್‌ 19ರಿಂದ ಎಂ.ಬಿ. ಪಾಟೀಲ ರಾಜ್ಯ ಪ್ರವಾಸ : ಮಠ, ಮಸೀದಿ, ಚರ್ಚ್‌ಗಳ ಭೇಟಿ ಸಾಧ್ಯತೆ

ಬೆಂಗಳೂರು: ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಪರ ಆಗಸ್ಟ್‌ 19 ಶುಕ್ರವಾರದಿಂದ ಮೊದಲ ಹಂತದ ರಾಜ್ಯ ಪ್ರವಾಸ ಆರಂಭಿಸುತ್ತಿದ್ದು, ಕಾಂಗ್ರೆಸ್‌ ಚುನಾವಣಾ ತಯಾರಿ ಆರಂಭಿಸಿದೆ. 2023ರ ವಿಧಾನಸಭೆ ಚುನಾವಣೆಗೆ ಪ್ರಚಾರ ಸಾರಥ್ಯ ವಹಿಸಿಕೊಂಡು ಸುಮಾರು 6 ತಿಂಗಳ ಬಳಿಕ ಎಂ.ಬಿ. ಪಾಟೀಲ್‌ ಅಖಾಡಕ್ಕೆ ಇಳಿದಿದ್ದು, ಪ್ರಚಾರ ಸಮಿತಿಯ … Continued

ಉಡುಪಿಯ ಬೀದಿಯಲ್ಲಿ ಹುಲಿವೇಷದವರ ಜೊತೆ ಹೆಜ್ಜೆ ಹಾಕಿ ಗಮನ ಸೆಳೆದ ಪುಟ್ಟ ಬಾಲಕಿ; ಹೃದಯ ಗೆಲ್ಲುವ ಚೂಟಿ ಹುಡುಗಿ | ವೀಕ್ಷಿಸಿ

ಮಕ್ಕಳು ಮತ್ತು ಅವರ ತುಂಟಾಟಗಳನ್ನು ನೋಡಲು ಖುಷಿಯಾಗುತ್ತದೆ. ರಾಜ್ಯದ ಉಡುಪಿಯಲ್ಲಿ ಸಾಂಪ್ರದಾಯಿಕ ನೃತ್ಯದ ಬೀದಿ ಪ್ರದರ್ಶನದ ಸಂದರ್ಭದಲ್ಲಿ ಪುಟ್ಟ ಬಾಲಕಿಯೊಬ್ಬಳು ಪೂರ್ವಸಿದ್ಧತೆಯಿಲ್ಲದ ಹಲಿ ನೃತ್ಯಕ್ಕೆ ಹೆಜ್ಜೆ ಹಾಕುತ್ತಿರುವುದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೀಡಿಯೊ ತೋರಿಸುತ್ತದೆ. ಕರಾವಳಿ ಭಾಗದ ದಕ್ಷಿಣ ಕನ್ನಡ, ಉಡುಪಿಯಲ್ಲಿ ಈ ಹುಲಿವೇಷವೆಂಬ ಜನಪದ ನೃತ್ಯ ಬಹಳ ಪ್ರಸಿದ್ಧಿ ಪಡೆದಿದೆ.ವಿಸಿಟ್ ಉಡುಪಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ … Continued

ಸರ್ಕಾರಿ ಉದ್ಯೋಗದಲ್ಲಿ ಕ್ರೀಡಾಪಟುಗಳಿಗೆ ಮೀಸಲಾತಿ ಎಲ್ಲ ಇಲಾಖೆಗಳಿಗೂ ವಿಸ್ತರಣೆ: ಸಿಎಂ ಬೊಮ್ಮಾಯಿ ಘೋಷಣೆ

ಬೆಂಗಳೂರು : ಸರ್ಕಾರ ಕ್ರೀಡಾಪಟುಗಳಿಗೆ ಪೋಲೀಸ್ ಮತ್ತು ಅರಣ್ಯ ಇಲಾಖೆಗಳಲ್ಲಿ ಈಗಾಗಲೇ 2% ರಷ್ಟು ಉದ್ಯೋಗ ಮೀಸಲು ನಿಗದಿ ಮಾಡಲಾಗಿದೆ. ಈಗ ಕ್ರೀಡಾಪಟುಗಳ ಉದ್ಯೋಗದ ಈ ಮೀಸಲಾತಿಯನ್ನು ಇತರೆ ಇಲಾಖೆಗಳಿಗೂ ವಿಸ್ತರಣೆ ಮಾಡುವ ಕಡತವನ್ನು ಅನುಮೋದಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇಂದು, ಮಂಗಳವಾರ ಬರ್ಮಿಂಗ್ ಹ್ಯಾಂ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಿ ಪದಕ … Continued

ಕ್ಯಾಂಟರ್‌-ಬೈಕ್‌ ಡಿಕ್ಕಿ: ಅಂತ್ಯಸಂಸ್ಕಾರಕ್ಕೆ ಹೊರಟಿದ್ದ ಒಂದೇ ಕುಟುಂಬದ ಮೂವರು ಸಾವು

ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಹೊಕ್ರಾಣಿ ಕ್ರಾಸ್ ಬಳಿ ಮಂಗಳವಾರ ಐಶರ್‌ ಕ್ಯಾಂಟರ್‌ ವಾಹನ ಮತ್ತು ಬೈಕ್ ನಡುಬೆ ಭೀಕರ ಅಪಘಾತ ಸಂಭವಿಸಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದ ವರದಿಯಾಗಿದೆ. ಮೃತರನ್ನು ಬಸವರಾಜ ಮಾಸಳಿ(40), ಬಸವರಾಜ ಅವರ ಪುತ್ರ ನರೇಶ್(8) ಮತ್ತು ಚಿಕ್ಕಮ್ಮ ಭೀಮವ್ವ ಮಾಸಳಿ(50) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಸಂಬಂಧಿಕರೊಬ್ಬರ … Continued

ಭದ್ರಾವತಿ: ನಿಷೇಧಾಜ್ಞೆಯ ಮಧ್ಯೆಯೂ ಯುವಕನ ಮೇಲೆ ಹಲ್ಲೆ

ಶಿವಮೊಗ್ಗ: ಫ್ಲೆಕ್ಸ್‌ ವಿಚಾರಕ್ಕೆ ಶಿವಮೊಗ್ಗದಲ್ಲಿ ನಡೆದ ಗಲಾಟೆಯ ನಂತರ ಈಗ ಭದ್ರಾವತಿಯಲ್ಲೂ ಹಲ್ಲೆ ಪ್ರಕರಣ ನಡೆದ ಬಗ್ಗೆ ವರದಿಯಾಗಿದೆ. ನಿಷೇಧಾಜ್ಞೆಯ ನಡುವೆಯೂ ಭದ್ರಾವತಿಯ ನಗರದ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಚಾಕು ಇರಿತಕ್ಕೆ ಯತ್ನ ಮಾಡಿದ್ದಾರೆ ಎಂದು ವರದಿಯಾಗಿದೆ. ಸುನೀಲ್​ (27) ಎಂಬವರ ಮೇಲೆ ಇಂದು, ಮಂಗಳವಾರ ಬೆಳಗ್ಗೆ ಭದ್ರಾವತಿಯಲ್ಲಿ ಏಕಾಏಕಿ ಹಲ್ಲೆ ಮಾಡಿದ್ದಾರೆ. … Continued