ಭಾರತದಲ್ಲಿ ಓಮಿಕ್ರಾನ್ ಪ್ರಕರಣದ ಸಂಖ್ಯೆ 126ಕ್ಕೆ ಏರಿಕೆ ; ಕರ್ನಾಟಕ, ಕೇರಳ, ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಕರಣಗಳು ವರದಿ

ನವದೆಹಲಿ: ಕರ್ನಾಟಕ ಮತ್ತು ಕೇರಳ ಕ್ರಮವಾಗಿ ಆರು ಮತ್ತು ನಾಲ್ಕು ಪ್ರಕರಣಗಳನ್ನು ವರದಿ ಮಾಡಿದ್ದು, ಮಹಾರಾಷ್ಟ್ರದಲ್ಲಿ ಇನ್ನೂ ಮೂರು ಜನ ಓಮಿಕ್ರಾನ್‌ ರೂಪಾಂತರದ ಸೋಂಕಿಗೆ ಒಳಗಾಗಿದ್ದಾರೆ. ಈಗ ಭಾರತದ ಓಮಿಕ್ರಾನ್ ಕೋವಿಡ್ ಸಂಖ್ಯೆ ಶನಿವಾರ 126 ಕ್ಕೆ ಏರಿದೆ. ಕೇಂದ್ರ ಮತ್ತು ರಾಜ್ಯ ಅಧಿಕಾರಿಗಳ ಪ್ರಕಾರ, 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ – ಮಹಾರಾಷ್ಟ್ರ … Continued

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಸರಣಿಗೆ ಕನ್ನಡಿಗ ಕೆ.ಎಲ್.ರಾಹುಲ್‌ ಭಾರತದ ತಂಡದ ಉಪನಾಯಕ

ಮುಂಬೈ : ಟೀಂ ಇಂಡಿಯಾ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದು, ಟೆಸ್ಟ್‌ ತಂಡದ ಉಪನಾಯಕನಾಗಿರುವ ರೋಹಿತ್‌ ಶರ್ಮಾ ಗಾಯಗೊಂಡು ಟೆಸ್ಟ್‌ ಸರಣಿಯಿಂದ ಹೊರಬಿದ್ದ ಕಾರಣ ಕೆ.ಎಲ್.ರಾಹುಲ್‌ ಅವರನ್ನು ಮೂರು ಟೆಸ್ಟ್‌ ಪಂದ್ಯಗಳ ಸರಣಿಗೆ ಉಪನಾಯಕನನ್ನಾಗಿ ಬಿಸಿಸಿಐ ನೇಮಕ ಮಾಡಿದೆ. ರೋಹಿತ್‌ ಶರ್ಮಾ ಅವರನ್ನು ಏಕದಿನ ಹಾಗೂ ಟಿ20 ಸರಣಿಗೆ ನಾಯಕನ್ನಾಗಿ ನೇಮಿಸಲಾಗಿದ್ದು, ಟಿ20 ಸರಣಿಗೆ ಕನ್ನಡಿಗ … Continued

ಮಂಗಗಳ ಇದೆಂಥ ಸೇಡು… 250ಕ್ಕೂ ಹೆಚ್ಚು ನಾಯಿಮರಿಗಳನ್ನ ಕೊಂದು ಪ್ರತೀಕಾರ ತೀರಿಸಿಕೊಂಡ ಮಂಗಗಳು…!!

ಮಹಾರಾಷ್ಟ್ರದಿಂದ ವರದಿಯಾಗಿರುವ ವಿಲಕ್ಷಣ ಘಟನೆಯಲ್ಲಿ, ಕೋಪಗೊಂಡ ಕೋತಿಗಳ ಗುಂಪು “ಸೇಡು” ತೀರಿಸಿಕೊಳ್ಳಲು ಸುಮಾರು 250 ನಾಯಿಗಳನ್ನು ಕೊಂದಿವೆ ಎಂದು ಹೇಳಲಾಗಿದೆ. ಈ ಘಟನೆಯು ರಾಜ್ಯದ ಬೀಡ್ ಜಿಲ್ಲೆಯ ಮಜಲಗಾಂವ್‌ನಿಂದ ವರದಿಯಾಗಿದೆ. ಕಳೆದೊಂದು ತಿಂಗಳಿನಿಂದ ಮಂಗಗಳು ನಾಯಿ ಮರಿಗಳನ್ನು ಕೊಂದು ಹಾಕುವ ಮೂಲಕ ಅಟ್ಟಹಾಸ ಮೆರೆದಿವೆ. ಮಂಗಗಳ ಗುಂಪು ನಾಐಇ ಮರಿಗಳನ್ನು ಕಟ್ಟಡಗಳು ಮತ್ತು ಮರಗಳ ಮೇಲಕ್ಕೆ … Continued

ಸ್ಥಳೀಯ ಪ್ರಸರಣವಿರುವ ಪ್ರದೇಶಗಳಲ್ಲಿ ಓಮಿಕ್ರಾನ್ ಪ್ರಕರಣಗಳು 3 ದಿನಗಳಲ್ಲಿ ದ್ವಿಗುಣ: ಡಬ್ಲ್ಯುಎಚ್‌ಒ

ಜಿನೇವಾ: ಕೊರೊನಾ ವೈರಸ್‌ನ ಓಮಿಕ್ರಾನ್ ರೂಪಾಂತರದ ಪ್ರಕರಣವು ಸಮುದಾಯ ಪ್ರಸರಣವಿರುವ ಪ್ರದೇಶಗಳಲ್ಲಿ 1.5 ರಿಂದ 3 ದಿನಗಳಲ್ಲಿ ದ್ವಿಗುಣಗೊಳ್ಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಶನಿವಾರ ತಿಳಿಸಿದೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ. ಕೊರೊನಾವೈರಸ್‌ನ ಹೊಸ ರೂಪಾಂತರದ ಪ್ರಕರಣಗಳು ಇಲ್ಲಿಯವರೆಗೆ ಕನಿಷ್ಠ 89 ದೇಶಗಳಲ್ಲಿ ವರದಿಯಾಗಿದೆ. “ಓಮಿಕ್ರಾನ್ ಹೆಚ್ಚಿನ ಮಟ್ಟದ ಜನರು ರೋಗನಿರೋಧಕ ಶಕ್ತಿ … Continued

ರೋಹಿಣಿ ಕೋರ್ಟ್​​ ಸ್ಫೋಟ ಪ್ರಕರಣ: ನೆರೆಯವನ ಕೊಲ್ಲಲು ಸ್ಫೋಟಕ ಇಟ್ಟಿದ್ದ ಡಿಆರ್ ಡಿಒ ವಿಜ್ಞಾನಿಯ ಬಂಧನ…!

ನವದೆಹಲಿ: ಡಿಸೆಂಬರ್ 9 ರಂದು ದೆಹಲಿಯ ರೋಹಿಣಿ ಜಿಲ್ಲಾ ನ್ಯಾಯಾಲಯದಲ್ಲಿ ಸಂಭವಿಸಿದ ಕಡಿಮೆ ತೀವ್ರತೆಯ ಸ್ಫೋಟಕ್ಕೆ ಸಂಬಂಧಿಸಿದಂತೆ 47 ವರ್ಷದ ಡಿಆರ್‌ಡಿಒ ವಿಜ್ಞಾನಿಯೊಬ್ಬರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಬಂಧಿತ ವಿಜ್ಞಾನಿ ವಿಚಾರಣೆ ವೇಳೆ ತಪ್ಪೊಪ್ಪಿಕೊಡಿದ್ದು, ಕೋರ್ಟ್ ಗೆ ವಿಚಾರಣೆಗೆ ಹಾಜರಾಗಬೇಕಿದ್ದ ವಕೀಲರನ್ನು ಕೊಲ್ಲುವ ಉದ್ದೇಶಕ್ಕೆ ಟಿಫಿನ್ ಬಾಕ್ಸ್ ನಲ್ಲಿ ಬಾಂಬ್ … Continued

ಮಹಾರಾಷ್ಟ್ರದಲ್ಲಿ, ಕನ್ನಡಿಗರ ವಾಹನಗಳ ಮೇಲೆ ಕಲ್ಲು ತೂರಾಟ; ಗಡಿಭಾಗದ ವರೆಗೆ ಮಾತ್ರ ಬಸ್ ಸಂಚಾರ

ಸಾಂಗ್ಲಿ/ಬೆಳಗಾವಿ: ಕರ್ನಾಟಕ ಹಾಗೂ ಮಹಾರಾಷ್ಟ್ರದ ನಡುವಿನ ಸಂಬಂಧದ ಬಿರುಕು ಹೆಚ್ಚಾಗುತ್ತಿದೆ. ಶಿವಸೇನಾ ಕಾರ್ಯಕರ್ತರು ಕರ್ನಾಟಕದ ಬಸ್‌ಗಳು ಹಾಗೂ ಖಾಸಗಿ ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಹಾಗೆಯೇ ಅಂಗಡಿಗಳನ್ನೂ ಧ್ವಂಸಗೊಳಿಸಿದ್ದಾರೆ. ಬೆಂಗಳೂರಿನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಅವಮಾನ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ಕಂಡುಬಂದಿದೆ. ಪರಿಣಾಮ ಮಹಾರಾಷ್ಟ್ರದಲ್ಲಿ ಶಿವಸೇನಾ ಕಾರ್ಯಕರ್ತರು ಕನ್ನಡಿಗರ ಹಾಗೂ ಕರ್ನಾಟಕದ … Continued

ಹೆಣ್ಣು ಮಕ್ಕಳ ಮದುವೆ ವಯಸ್ಸು ಹೆಚ್ಚಳಕ್ಕೆ ಎಸ್‌ಪಿ ಸಂಸದ ಹಸನ್ ವಿರೋಧ:‌ ಪಕ್ಷಕ್ಕೂ ಹಸನ್ ಹೇಳಿಕೆಗೂ ಸಂಬಂಧವಿಲ್ಲ‌ ಎಂದ ಅಖಿಲೇಶ್‌ ಯಾದವ್‌

ನವದೆಹಲಿ: ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದ ಎಸ್‌.ಟಿ. ಹಸನ್ ಭಾರತದಲ್ಲಿ ಕನಿಷ್ಠ ವಿವಾಹ ವಯೋಮಿತಿ ಹೆಚ್ಚಳದ ಕುರಿತುಹೆಣ್ಣು ಮಗುವಿಗೆ ಫಲವತ್ತತೆಯ ವಯಸ್ಸನ್ನು (age of fertility)ತಲುಪಿದಾಗ ಮದುವೆ ಮಾಡಬೇಕು ಎಂದು ಆಘಾತಕಾರಿ ಹೇಳಿಕೆ ನೀಡಿದ ನಂತರ, ಎಸ್‌ಪಿ ವರಿಷ್ಠ ಅಖಿಲೇಶ್ ಯಾದವ್ ಅವರ ಹೇಳಿಕೆಯಿಂದ ದೂರ ಸರಿದಿದ್ದಾರೆ. ಅವರ ಪಕ್ಷವು ಯಾವಾಗಲೂ ಮಹಿಳೆಯರು ಮತ್ತು ಹುಡುಗಿಯರ … Continued

ಸೀರಮ್ ಇನ್‌ಸ್ಟಿಟ್ಯೂಟ್‌ನ ಮತ್ತೊಂದು ಕೋವಿಡ್‌ ಲಸಿಕೆ ಕೊವಿವ್ಯಾಕ್ಸ್‌ ತುರ್ತು ಬಳಕೆಗಾಗಿ ಡಬ್ಲ್ಯುಎಚ್‌ಒ ಅನುಮೋದನೆ

ನವದೆಹಲಿ: ಮತ್ತೊಂದು ಕೊರೊನಾ ಲಸಿಕೆ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿದೆ. SARS-CoV-2 ವೈರಸ್ ವಿರುದ್ಧ ವಿಶ್ವ ಆರೋಗ್ಯ ಸಂಸ್ಥೆ (WHO)-ಶುಕ್ರವಾರ CovovaxTM ಲಸಿಕೆಗೆ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ನೊವಾವ್ಯಾಕ್ಸ್‌ (Novavax)ನಿಂದ ಪರವಾನಗಿ ಅಡಿಯಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ತಯಾರಿಸಲ್ಪಟ್ಟಿದೆ, CovovaxTM EUL ನೊಂದಿಗೆ ವಿಶ್ವಾದ್ಯಂತ ತುರ್ತು ಅನುಮೋದನೆ ಪಡೆದ … Continued

ಮೊಬೈಲ್ ಕಸಿದುಕೊಳ್ಳಲು ಬೈಕಿನಲ್ಲಿ ಕುಳಿತು ಮಹಿಳೆಯನ್ನು ರಸ್ತೆಯಲ್ಲಿ 200 ಮೀಟರ್ ಎಳೆದೊಯ್ದ ಸ್ನಾಚರ್‌ಗಳು..! ದೃಶ್ಯ ಸೆರೆ

ನವದೆಹಲಿ: ಆಘಾತಕಾರಿ ಘಟನೆಯೊಂದರಲ್ಲಿ, ದೆಹಲಿಯ ಶಾಲಿಮಾರ್ ಬಾಗ್‌ನಲ್ಲಿ ಸ್ನಾಚರ್‌ಗಳು ಮಹಿಳೆಯ ಮೊಬೈಲ್ ಫೋನ್ ಕದಿಯುವ ಪ್ರಯತ್ನದಲ್ಲಿ ಮಹಿಳೆಯನ್ನು ಸುಮಾರು 200 ಮೀಟರ್‌ಗಳಷ್ಟು ರಸ್ತೆಯಲ್ಲಿ ಎಳೆದೊಯ್ದಿದ್ದಾರೆ. ದ್ವಿಚಕ್ರವಾಹನದಲ್ಲಿ ಬಂದ ಸರಗಳ್ಳರು ಮಹಿಳೆಯನ್ನು ರಸ್ತೆಯಲ್ಲಿ ಎಳೆದೊಯ್ದಿದ್ದಾರೆ. ಗುರುವಾರ ನಡೆದ ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ಪ್ರದೇಶದಲ್ಲಿನ ಅಂಗಡಿಯೊಂದರ ಸಿಸಿಟಿವಿ ದೃಶ್ಯಗಳಲ್ಲಿ ಇಬ್ಬರು ಪುರುಷರು ಬೈಕ್‌ನಲ್ಲಿ ಮಹಿಳೆಯನ್ನು … Continued

ಫ್ಯೂಚರ್ ಗ್ರೂಪ್‌ನೊಂದಿಗಿನ 2019ರ ಒಪ್ಪಂದ ಅಮಾನತು ಮಾಡಿ, ಅಮೆಜಾನ್‍ಗೆ 202 ಕೋಟಿ ರೂ. ದಂಡ ವಿಧಿಸಿದ ಸ್ಪರ್ಧಾತ್ಮಕ ಆಯೋಗ

ನವದೆಹಲಿ: ಆನ್‍ಲೈನ್ ಶಾಪಿಂಗ್‍ನಲ್ಲಿ ಅಮೆರಿಕದ ಇ-ಕಾಮರ್ಸ್ ದೈತ್ಯ ಅಮೆಜಾನ್ ಮತ್ತು ಭಾರತದ ಫ್ಯೂಚರ್ ಗ್ರೂಪ್ ಜೊತೆಗಿನ 2019ರ ಒಪ್ಪಂದವನ್ನು ಭಾರತೀಯ ಸ್ಪರ್ಧಾತ್ಮಕ ಆಯೋಗ(ಸಿಸಿಐ) ಅಮಾನತುಗೊಳಿಸಿದ್ದು, ಅಮೆಜಾನ್‍ಗೆ 202 ಕೋಟಿ ರೂ.ಗಳ ದಂಡ ವಿಧಿಸಿದೆ. ಭಾರತದ ಫ್ಯೂಚರ್ ಗ್ರೂಪ್ ಜೊತೆ ಅಮೆರಿಕಾದ ಅಮೆಜಾನ್ 2019ರಲ್ಲಿ ಹೂಡಿಕೆ ಒಪ್ಪಂದ ಮಾಡಿಕೊಂಡಿತ್ತು. ಈ ನಡುವೆ ಫ್ಯೂಚರ್ ಗ್ರೂಪ್ 2019ರಲ್ಲಿ 24,713 … Continued