ಮಹಾರಾಷ್ಟ್ರದಲ್ಲಿ ಮಳೆ ಕೋಪ: 149 ಮಂದಿ ಸಾವು, 60 ಮಂದಿ ನಾಪತ್ತೆ, 50ಗೆ ಮಂದಿ ಗಾಯ

ಮುಂಬೈ; ಕಳೆದ ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಭಾರೀ ಮಳೆಯಿಂದ ಅನೇಕ ಕಡೆ ಭೂಕುಸಿತ ಮತ್ತು ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟು 149 ಜನರು ಮೃತಪಟ್ಟಿದ್ದಾರೆ ಮತ್ತು 50 ಮಂದಿ ಗಾಯಗೊಂಡಿದ್ದಾರೆ ಎಂದು ರಾಜ್ಯ ಸರ್ಕಾರ ಭಾನುವಾರ ಸಂಜೆ ಅಧಿಸೂಚನೆಯಲ್ಲಿ ತಿಳಿಸಿದೆ. 64 ಜನರು ಇನ್ನೂ ಕಾಣೆಯಾಗಿದ್ದಾರೆ ಎಂದು ಅದು ಹೇಳಿದೆ. ರಾಯಗಡ್‌ನಲ್ಲಿ 60, ರತ್ನಾಗಿರಿಯಲ್ಲಿ 2, … Continued

ಲೋಕಸಭೆ ಸದಸ್ಯರ ಬಲವ 1,000 ಕ್ಕೆ ಹೆಚ್ಚಿಸಲು ಬಿಜೆಪಿ ಯೋಜಿಸಿದೆ, ಸಾರ್ವಜನಿಕ ಸಮಾಲೋಚನೆ ಆಗಬೇಕು-ಮನೀಶ್ ತಿವಾರಿ

ನವದೆಹಲಿ: 2024 ಕ್ಕಿಂತ ಮೊದಲು ಲೋಕಸಭೆಯ ಸದಸ್ಯರ ಬಲವನ್ನು 1,000 ಅಥವಾ ಅದಕ್ಕಿಂತ ಹೆಚ್ಚಿಗೆ ಮಾಡಲು ಬಿಜೆಪಿ ಯೋಜಿಸುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಹೇಳಿದ್ದಾರೆ ಮತ್ತು ಗಂಭೀರ ಸಾರ್ವಜನಿಕ ಸಮಾಲೋಚನೆಗೆ ಅವರು ಕರೆ ನೀಡಿದ್ದಾರೆ. ಸಂಸತ್ತಿನ ಕೆಳಮನೆ ಸ್ಥಾನಗಳ ಸಂಖ್ಯೆ ಹೆಚ್ಚಿಸುವ ಪ್ರಸ್ತಾಪವಿದೆ ಎಂದು ಬಿಜೆಪಿಯಲ್ಲಿ ತಮ್ಮ ಸಂಸದೀಯ ಸಹೋದ್ಯೋಗಿಗಳಿಂದ ವಿಶ್ವಾಸಾರ್ಹ ಮಾಹಿತಿ … Continued

ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ರಿಯಾ ಮಲಿಕಗೆ ಚಿನ್ನ

ಹಂಗೇರಿ : ಹಂಗೇರಿಯಿಂದ ನಡೆಯುತ್ತಿರುವ ವಿಶ್ವ ಕೆಡೆಟ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಪ್ರಿಯಾ ಮಲಿಕ್ ಚಿನ್ನ ಗೆದ್ದಿದ್ದಾರೆ. ಈ ಮೂಲಕ ಭಾರತದ ಕೀರ್ತಿ ಪತಾಕೆ ಯನ್ನು ಹಾರಿಸಿದ್ದಾರೆ. ವಿಶ್ವ ಕೆಡೆಟ್ ವ್ರೆಸ್ಲಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಿಯಾ ಮಲಿಕ್ ಅವರು ಮಹಿಳೆಯರ 73 ಕೆಜಿ ತೂಕ ವಿಭಾಗದ ಅಂತಿಮ ಸ್ಪರ್ಧೆಯಲ್ಲಿ 5-0 ಅಂತರದಿಂದ ಬೆಲಾರೂಸ್ ಕುಸ್ತಿಪಟು ಕ್ಸೆನಿಯಾ ಪಟಪೋವಿಚ್ ಸೋಲಿಸಿ … Continued

ತೆಲಂಗಾಣದ 13ನೇ ಶತಮಾನದ ರಾಮಪ್ಪ ದೇವಾಲಯ ಯುನೆಸ್ಕೋ ವಿಶ್ವ ಪರಂಪರೆ ಪಟ್ಟಿಗೆ ಹೊಸದಾಗಿ ಸೇರ್ಪಡೆ

ನವದೆಹಲಿ:ಯುನೆಸ್ಕೋ ವಿಶ್ವ ಪರಂಪರೆಯ ಸಮಿತಿಯ ವಿಸ್ತೃತ 44ನೇ ಅಧಿವೇಶನವು ಪ್ರಸ್ತುತ ಚೀನಾದ ಫುಝೌನಲ್ಲಿ ನಡೆಯುತ್ತಿದೆ. ಅಧಿವೇಶನವು ಜುಲೈ 16 ರಂದು ಪ್ರಾರಂಭವಾಗಿದ್ದು, ಜುಲೈ 31ರಂದು ಮುಕ್ತಾಯಗೊಳ್ಳಲಿದೆ. ಭಾನುವಾರ, ತೆಲಂಗಾಣದ ಅಪ್ರತಿಮ ಕಾಕತೀಯ ರುದ್ರೇಶ್ವರ (ರಾಮಪ್ಪ) ದೇವಾಲಯವನ್ನು ಸಮಿತಿಯು ವಿಶ್ವ ಪರಂಪರೆಯ ತಾಣವೆಂದು ಘೋಷಿಸಿದೆ. ಇದು ವಿಶ್ವ ಪರಂಪರೆಯ ಪಟ್ಟಿಯಲ್ಲಿ ಸೇರ್ಪಡೆಗೊಂಡ ಭಾರತದ ಇತ್ತೀಚಿನ ತಾಣವಾಗಿದೆ . … Continued

ಬೆಟ್ಟದಿಂದ ಉರುಳಿದ ದೊಡ್ಡದೊಡ್ಡ ಬಂಡೆಗಳು; ಮುರಿದು ಬಿದ್ದ ಬ್ರಿಡ್ಜ್, 9 ಜನರ ಸಾವು, ..ವಿಡಿಯೊದಲ್ಲಿ ಸೆರೆಯಾಯ್ತು ದೃಶ್ಯ

ಹಿಮಾಚಲ ಪ್ರದೇಶ : ಹಿಮಾಚಲ ಪ್ರದೇಶದ ಸಾಂಗ್ಲಾ ಕಣಿವೆಯಲ್ಲಿ ಭಾನುವಾರ ಸಂಭವಿಸಿದ ಭಾರಿ ಭೂಕುಸಿತದಲ್ಲಿ ಕನಿಷ್ಠ ಒಂಭತ್ತು ಜನರು ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನೆಟ್ಟಿಗರು ಶೇರ್ ಮಾಡಿರುವ ವಿಡಿಯೊದಲ್ಲಿ, ಬಂಡೆಗಳ ದೊಡ್ಡ ಭಾಗ ಕೆಳಗಿನ ಕಣಿವೆಯಲ್ಲಿ ಉರುಳುತ್ತಿರುವುದನ್ನು ಕಾಣಬಹುದು. ದೊಡ್ಡ ಬಂಡೆಗಳು ಉರುಳಿ ಸೇತುವೆಯ ಒಂದು ಭಾಗವು ಮುರಿದು ನದಿಗೆ ಬೀಳುತ್ತಿರುವುದು ಕೂಡಾ … Continued

ಭಾರತೀಯ ಸಾಗರ ಮೀನುಗಾರಿಕೆ ಮಸೂದೆ-2021:ಸಾಂಪ್ರದಾಯಿಕ ಮೀನುಗಾರಿಕೆ ತೊಂದರೆ ಆಗುತ್ತದೆಯೇ..?

ತೂತುಕುಡಿ: ಈಗ ನಡೆಯುತ್ತಿರುವ ಸಂಸತ್ತಿನ ಮಾನ್ಸೂನ್ ಅಧಿವೇಶನದಲ್ಲಿ ಅಂಗೀಕರಿಸಬೇಕಾದ 2021ರ ಭಾರತೀಯ ಸಾಗರ ಮೀನುಗಾರಿಕೆ ಮಸೂದೆ (Indian Marine Fisheries Bill, 2021)ಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಪಟ್ಟಿ ಮಾಡಿದೆ. ಇದಕ್ಕೆ ಮೀನುಗಾರರು ತೀವ್ರವಾಗಿ ಆಕ್ಷೇಪಿಸಿದ್ದು, ಇದು ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭವಾಗಲಿದೆ ಮತ್ತು ಸಾಂಪ್ರದಾಯಿಕ ಮೀನುಗಾರರಿಂದ ಅವರ ಜೀವನೋಪಾಯವನ್ನು ಕಸಿದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ. ತಮಿಳುನಾಡು … Continued

ಪತಿಯೊಂದಿಗೆ ದೂರವಾಣಿಯಲ್ಲಿ ಜಗಳ : ನಾಲ್ವರಲ್ಲಿ ಮೂವರ ಅಪ್ರಾಪ್ತೆಯರನ್ನು ಕೊಳಕ್ಕೆ ನೂಕಿ ಕೊಂದ ತಾಯಿ

ಲಕ್ನೋ: ಪತಿಯ ಜೊತೆ ಜಗಳವಾಡಿದ ಪತ್ನಿ ಆ ಸಿಟ್ಟಿನಿಂದ ತನ್ನ ನಾಲ್ವರು ಅಪ್ರಾಪ್ತೆಯರನ್ನು ಕೊಳಕ್ಕೆ ತಳ್ಳಿದ್ದು, ಅದರಲ್ಲಿ ಮೂವರು ಮೃತಪಟ್ಟ ಘಟನೆ ಬಿಹಾರದಲ್ಲಿ ನಡೆದಿದೆ. ಗಿಲಬ್ಸಾ (8),ನುಸಬಾ ಖತೂನ್(3) ಮತ್ತು ಸಹೆಬಾ ಖತೂನ್ (2) ಮೃತರಾಗಿದ್ದಾರೆ. ನೂರ್ಜಹಾನ್ ನಿಸಾನ್ ಮತ್ತು ಅಸ್ಲಾಮ್ ಅಲಂ ದಂಪತಿ ನಡುವೆ ಜಗಳವಾಗಿದ್ದಕ್ಕೆ ತನ್ನ ನಾಲ್ವರು ಹೆಣ್ಣು ಮಕ್ಕಳನ್ನು ತಾಯಿ ಕೊಳಕ್ಕೆ … Continued

ಭಾರತದ 10ವರ್ಷದ ಮಕ್ಕಳಲ್ಲಿ 38% ರಷ್ಟು ಫೇಸ್‌ಬುಕ್ ಖಾತೆ ಹೊಂದಿದ್ದಾರೆ, 24% ಇನ್‌ಸ್ಟಾಗ್ರಾಮ್ ನಿಯಮ ಉಲ್ಲಂಘಿಸಿದ್ದಾರೆ: ಎನ್‌ಸಿಪಿಸಿಆರ್ ಅಧ್ಯಯನ

ನವದೆಹಲಿ: ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಆಯೋಗ (ಎನ್‌ಸಿಪಿಸಿಆರ್) ನಿಯೋಜಿಸಿದ ಅಧ್ಯಯನವು 10 ವರ್ಷ ವಯಸ್ಸಿನ 37.8% ಮಕ್ಕಳು ಫೇಸ್‌ಬುಕ್ ಖಾತೆಯನ್ನು ಹೊಂದಿದ್ದರೆ, 24.3% ಜನರು ಇನ್‌ಸ್ಟಾಗ್ರಾಮ್ ಖಾತೆಯನ್ನು ಹೊಂದಿದ್ದಾರೆ ಎಂದು ಕಂಡುಹಿಡಿದಿದೆ. ಇದು ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳು ರೂಪಿಸಿರುವ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದು ಶಿಶು ಹಕ್ಕುಗಳ ಸಂಸ್ಥೆ ಕಂಡುಹಿಡಿದಿದೆ. ಫೇಸ್‌ಬುಕ್ ಅಥವಾ ಇನ್‌ಸ್ಟಾಗ್ರಾಮ್ ಖಾತೆಯನ್ನು … Continued

2018 ರ ಪ್ರಕರಣದಲ್ಲಿ ಮತದಾರರಿಗೆ ಲಂಚ ನೀಡಿದ್ದಕ್ಕಾಗಿ ಟಿಆರ್‌ ಎಸ್‌ ಸಂಸದೆ ಕವಿತಾಗೆ 6 ತಿಂಗಳ ಜೈಲು ಶಿಕ್ಷೆ

ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಸಂಸದೆ ಮಾಲೋತ್ ಕವಿತಾ ಅವರನ್ನು 2018 ರ ಲಂಚ ಪ್ರಕರಣದಲ್ಲಿ ಸಂಸದರ ಮತ್ತು ಶಾಸಕ ವಿಶೇಷ ನ್ಯಾಯಾಲಯ ಶಿಕ್ಷೆಗೊಳಪಡಿಸಿದೆ.ನ್ಯಾಯಾಲಯವು 6 ತಿಂಗಳ ಸರಳ ಜೈಲು ಶಿಕ್ಷೆ ಮತ್ತು 10,000 ರೂ. ದಂಡ ವಿಧಿಸಿದೆ. ತೆಲಂಗಾಣದಲ್ಲಿ ನಡೆದ 108 ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮತದಾರರಿಗೆ ಲಂಚ ನೀಡಿದ ಆರೋಪದ ಮೇಲೆ … Continued

ಗುಜರಾತ್: ಮೊಬೈಲ್ ಫೋನ್‌ಗಳಲ್ಲಿ ಮಾತನಾಡಿದ್ದಕ್ಕಾಗಿ ಇಬ್ಬರು ಹುಡುಗಿಯರಿಗೆ ಥಳಿಸಿದ ಗುಂಪು..!

ದಾಹೋಡ್ (ಗುಜರಾತ್)‌: ಗುಜರಾತ್‌ನ ದಾಹೋಡ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಹದಿಹರೆಯದ ಇಬ್ಬರು ಬಾಲಕಿಯರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಮಾತನಾಡಿದ್ದಕ್ಕಾಗಿ ಸಂಬಂಧಿಕರು ಸೇರಿದಂತೆ ಹದಿನೈದು ಜನರ ಗುಂಪು ಅವರನ್ನು ಥಳಿಸಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಜೂನ್ 25 ರಂದು ಭುವೇರಾ ಗ್ರಾಮದಲ್ಲಿ ನಡೆದ ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಹಿನ್ನೆಲೆಯಲ್ಲಿ ಬಾಲಕಿ … Continued