ಭಾರತದಲ್ಲೇ ನಡೆದ ಪವಾಡ..70ನೇ ವರ್ಷಕ್ಕೆ ಮೊದಲ ಮಗುವನ್ನು ಹೆತ್ತಳಾ ಮಹಾತಾಯಿ..!

ಸಾಮಾನ್ಯವಾಗಿ ಮೊಮ್ಮಕ್ಕಳೋ ಮರೊಮೊಕ್ಕಳನ್ನೋ ಪಡೆಯುವ ವಯಸ್ಸಿನ ಅಜ್ಜಿಯೊಬ್ಬಳು ತಾಯಿಯಾಗಿದ್ದಾಳೆ. ಬರೋಬ್ಬರಿ 70 ವರ್ಷ ವಯಸ್ಸಿನ ಮಹಿಳೆಯು ತನ್ನ ಮೊಮ್ಮಕ್ಕಳು ಮತ್ತು ಮರಿ ಮೊಮ್ಮಕ್ಕಳೊಂದಿಗೆ ಸಮಯ ಕಳೆಯ ಬೇಕಾದ ವಯಸ್ಸಿನಲ್ಲಿ ಮೊದಲ ಮಗುವಿಗೆ ಜನ್ಮ (Delivery) ನೀಡಿದ್ದಾರೆ…! ಅದೂ ಭಾರತದಲ್ಲಿ..!! ಇದನ್ನು ಒಮ್ಮೆಗೇ ನಂಬುವುದು ಕಷ್ಟ. ಆದರೆ ಇದು ಒಂದು ತಿಂಗಳ ಹಿಂದೆ ಗುಜುರಾತಿನ ಕಛ್‌ನಲ್ಲಿ ನಡೆದಿದೆ … Continued

ಭಾರತದಲ್ಲಿ 14,623 ಹೊಸ ಕೋವಿಡ್ -19 ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 14,623 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ನಿನ್ನೆಗಿಂತ 12 ಪ್ರತಿಶತ ಹೆಚ್ಚಾಗಿದೆ. ಹೊಸ ಪ್ರಕರಣಗಳೊಂದಿಗೆ, ದೇಶದ ಒಟ್ಟಾರೆ ಪ್ರಕರಣ ಈಗ 3,41,08,996 ಕ್ಕೆ ಏರಿದೆ ಎಂದು ಬುಧವಾರ ಮುಂಜಾನೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ಬಿಡುಗಡೆ ಮಾಡಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ … Continued

ಆಂಧ್ರಪ್ರದೇಶ ಸಿಎಂ ಜಗನ್ ವಿರುದ್ಧಆಕ್ಷೇಪಾರ್ಹ ಟೀಕೆ: ವೈಎಸ್‌ಆರ್‌ಸಿಪಿ ಕಾರ್ಯಕರ್ತರಿಂದ ಟಿಡಿಪಿ ಕಚೇರಿಗೆ ನುಗ್ಗಿ ದಾಂಧಲೆ

ಹೈದರಾಬಾದ್: ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಂಗಳವಾರ ಮಂಗಳಗಿರಿ, ವಿಶಾಖಪಟ್ಟಣಂ ಮತ್ತು ಇತರ ಸ್ಥಳಗಳಲ್ಲಿ ತೆಲುಗು ದೇಶಂ ಪಕ್ಷದ ಪ್ರಧಾನ ಕಚೇರಿಗೆ ನುಗ್ಗಿ ದಾಂಧಲೆ ಮಾಡಿದ್ದಾರೆ. ವಿರೋಧ ಪಕ್ಷದ ವಕ್ತಾರರು ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ (Y.S. Jagan Mohan Reddy) ವಿರುದ್ಧ ಆಕ್ಷೇಪಾರ್ಹ ಟೀಕೆ ಮಾಡಿದ್ದಾರೆ ಎಂದು ವೈಎಸ್‌ಆರ್ ಕಾಂಗ್ರೆಸ್ … Continued

ಶೆರ್ಲಿನ್ ಚೋಪ್ರಾ ಮೇಲೆ 50 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ ಶಿಲ್ಪಾ ಶೆಟ್ಟಿ-ರಾಜ ಕುಂದ್ರಾ ದಂಪತಿ

ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ದಂಪತಿ ನಟಿ ಶೆರ್ಲಿನ್ ಚೋಪ್ರಾ ಮೇಲೆ 50 ಕೋಟಿ ರೂ.ಗಳ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಲೈಂಗಿಕ ದೌರ್ಜನ್ಯ, ಮೋಸ, ಕ್ರಿಮಿನಲ್ ಬೆದರಿಕೆ ಆರೋಪ ಹೊರಿಸಿ ರಾಜ್ ಕುಂದ್ರಾ ವಿರುದ್ಧ ಅಕ್ಟೋಬರ್ 14ರಂದು ಶೆರ್ಲಿನ್ ಚೋಪ್ರಾ ದೂರು ನೀಡಿದ್ದರು. ಶೆರ್ಲಿನ್ ಚೋಪ್ರಾ , ಲೈಂಗಿಕ ದೌರ್ಜನ್ಯ, ಮೋಸ ಮಾಡಿದ್ದಾರೆ ಎಂದು … Continued

ಹೊಸ ಪಕ್ಷ ಸ್ಥಾಪನೆ ಮಾಡವುದನ್ನು ಪ್ರಕಟಿಸಿದ ಕ್ಯಾಪ್ಟನ್ಅಮರಿಂದರ್ ಸಿಂಗ್: ಬಿಜೆಪಿ ಜೊತೆ ಸ್ಥಾನ ಹಂಚಿಕೆಗೆ ಸಿದ್ಧ, ಆದರೆ ಷರತ್ತು ಅನ್ವಯ

ಚಂಡಿಗಡ: ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಪಂಜಾಬ್​ ರಾಜಕಾರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ಆಂತರಿಕ ಭಿನ್ನಮತದಿಂದ ಬೇಯುತ್ತಿರುವ ಕಾಂಗ್ರೆಸ್​ನ ಪ್ರಮುಖ ನಾಯಕ, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಈಗ ಪಕ್ಷದಿಂದ ಹೊರಹೋಗುವ ಸ್ಪಷ್ಟ ಸೂಚನೆ ನೀಡಿದ್ದು, ಹೊಸ ಪಕ್ಷ ಸ್ಥಾಪನೆ ಮಾಡುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಮರಿಂದರ್ … Continued

ಸರಣಿ ಹತ್ಯೆ: ಕಾಶ್ಮೀರದಿಂದ ಪಲಾಯನ ಮಾಡುತ್ತಿರುವ ವಲಸೆ ಕಾರ್ಮಿಕರು

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯರಲ್ಲದವರನ್ನು ಭಯೋತ್ಪಾದಕರು ಹತ್ಯೆ ಮಾಡುತ್ತಿರುವುದರಿಂದ ಆತಂಕಗೊಂಡ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಕುಟುಂಬಗಳೊಂದಿಗೆ ಮಂಗಳವಾರ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳ ಟಿಕೆಟ್ ಕೌಂಟರ್ ಗಳ ಹೊರಗೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜಮ್ಮು, ಉಧಂಪುರದ ರೈಲ್ವೆ ನಿಲ್ದಾಣ ಮತ್ತು ಬಸ್ ನಿಲ್ದಾಣಗಳ ಸುತ್ತಮುತ್ತ ಭದ್ರತೆ … Continued

ಮೂತ್ರಕೋಶದ ಕಲ್ಲುಗಳ ಬದಲಾಗಿ ಮೂತ್ರಪಿಂಡ ತೆಗೆದ ವೈದ್ಯರು.. ವ್ಯಕ್ತಿ ಸಾವು: 11 ಲಕ್ಷ ರೂ.ಪರಿಹಾರ ನೀಡುವಂತೆ ಆಸ್ಪತ್ರೆಗೆ ಆದೇಶ

ಗುಜರಾತ್‌ನ ಮಹಿಸಾಗರ್ ಜಿಲ್ಲೆಯ ಅಹೋಸ್ಪಾಲ್ಟಿಯಲ್ಲಿ ವೈದ್ಯರು ಎಡ ಮೂತ್ರಪಿಂಡವನ್ನು ತೆಗೆದ ನಂತರ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ 11 ಲಕ್ಷ ರೂಪಾಯಿ ಪರಿಹಾರ ನೀಡಲು ಆದೇಶಿಸಲಾಗಿದೆ. ಮೃತ ದೇವೇಂದ್ರಭಾಯ್ ರಾವಲ್ ಅವರನ್ನು 2011 ರಲ್ಲಿ ಮೂತ್ರಪಿಂಡದ ಕಲ್ಲುಗಳನ್ನು ತೆಗೆಯಲು ಬಾಲಸಿನೋರ್‌ನ ಕೆಎಂಜಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೃತರ ಸಂಬಂಧಿಯೊಬ್ಬರ ಮನವಿಯನ್ನು ಆಲಿಸಿದ ಗುಜರಾತ್ ರಾಜ್ಯ ಗ್ರಾಹಕರ ವಿವಾದ … Continued

ಉತ್ತರಾಖಂಡದಲ್ಲಿ ಮಳೆಯಿಂದ 42 ಜನರು ಸಾವು; ಮೃತರ ಕುಟುಂಬಕ್ಕೆ 4 ಲಕ್ಷ ರೂ. ಪರಿಹಾರ ಘೋಷಣೆ

ಡೆಹ್ರಾಡೂನ್‌: ಧಾರಾಕಾರ ಮಳೆಯು ಉತ್ತರಾಖಂಡದಲ್ಲಿ ನಿರಂತರವಾಗಿ ಸುರಿಯುತ್ತಿದ್ದು, ಮಂಗಳವಾರ ಕನಿಷ್ಠ 42 ಮಳೆ ಸಂಬಂಧಿತ ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ. ಮೇಘಸ್ಫೋಟದಿಂದ ಉಂಟಾದ ಭಾರೀ ಮಳೆಯು ಸರಣಿ ಭೂಕುಸಿತಕ್ಕೆ ಕಾರಣವಾದ ನೈನಿತಾಲ್ ಸೇರಿದಂತೆ ರಾಜ್ಯದ ಕೆಲವು ಭಾಗಗಳು ಉತ್ತರಾಖಂಡದ ಇತರ ಭಾಗಗಳಿಂದ ಸಂಪರ್ಕ ಕಡಿತಗೊಂಡಿವೆ. ಮಂಗಳವಾರ ವರದಿಯಾದ 42 ಸಾವುನೋವುಗಳಲ್ಲಿ, ನೈನಿತಾಲ್ ಮಾತ್ರ 28 ಸಾವುಗಳು … Continued

ಉತ್ತರಾಖಂಡ: ಭೋರ್ಗರೆವ ಪ್ರವಾಹದಲ್ಲಿ ಬಂಡೆಗಳ ಮಧ್ಯೆ ಸಿಲುಕಿದ್ದ ಕಾರಿಲ್ಲಿದ್ದವರ ರಕ್ಷಣೆ; ಸಾಹಸದ ವಿಡಿಯೋ ವೈರಲ್‌

ಡೆಹ್ರಾಡೂನ್‌:ಉತ್ತರಾಖಂಡದಲ್ಲಿ ಸುರಿಯುತ್ತಿರುವ ಮಳೆಗೆ 2 ದಿನದಲ್ಲಿ 17 ಜನರು ಮೃತಪಟ್ಟಿದ್ದಾರೆ. ಅನೇ ಕಡೆ ಭೂ ಕುಸಿತಗಳು ಸಂಭವಿಸಿವೆ. ಒಂದು ಭಯಾನಕ ಘಟನೆಯಲ್ಲಿ ರಸ್ತೆಯಲ್ಲಿ ಸಾಗುತ್ತಿದ್ದ ಕಾರೊಂದು ಏಕಾಏಕಿ ಸುರಿದ ಮಳೆಯಿಂದಾಗಿ ಉಂಟಾದ ಭಾರೀ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು. ಆ ಕಾರಿನಲ್ಲಿದ್ದ ಪ್ರಯಾಣಿಕರು ಪ್ರಾಣದ ಮೇಲಿನ ಆಸೆಯನ್ನು ಬಿಟ್ಟಾಗಿತ್ತು. ಭೂಕುಸಿತದಿಂದ ಕೊರೆದುಹೋಗಿದ್ದ ಜಾಗದಲ್ಲಿನ ಬಂಡೆಗಳ ನಡುವೆ ಆ … Continued

ಅಯೋಧ್ಯೆಗೆ ಉಚಿತ ವಿಮಾನ ಪ್ರಯಾಣ ಬೇಕೇ? ಮಧ್ಯಪ್ರದೇಶ ಸರ್ಕಾರದ ರಾಮಾಯಣ ರಸಪ್ರಶ್ನೆಯಲ್ಲಿ ಭಾಗವಹಿಸಿ

ಭೋಪಾಲ್​: ರಾಮ ಜನ್ಮ ಭೂಮಿ ಅಯೋಧ್ಯೆಗೆ ಹೋಗಬೇಕು ಜೀವನದಲ್ಲಿ ಒಮ್ಮೆಯಾದರೂ ಎಂಬ ಮನದಾಸೆ ಹಲವರಿಗೆ ಇರುತ್ತದೆ. ಇದಕ್ಕೆ ಅವಕಾಶ ನೀಡಲು ಈಗ ಮಧ್ಯಪ್ರದೇಶದ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಮುಂದಾಗಿದೆ. ಅಯೋಧ್ಯೆಗೆ ವಿಮಾನದಲ್ಲಿ ಉಚಿತ ಪ್ರಯಾಣ ಮಾಡಲು ಅದು ಅವಕಾಶ ನೀಡಿದೆ. ಹೀಗೆ ಹೋಗಲು ಅದು ಏಪಡಿಸಿರುವ ‘ರಾಮಾಯಣ’ ಕುರಿತು ಸಾಮಾನ್ಯ ಜ್ಞಾನ ರಸಪ್ರಶ್ನೆ ಸ್ಫರ್ಧೆಯಲ್ಲಿ ವಿಜೇತರಾಗಬೇಕು. … Continued