ತಪೋವನ ಸರಂಗ ರಕ್ಷಣಾ ಕಾರ್ಯ ತಾತ್ಕಾಲಿಕ ಸ್ಥಗಿತ

ಋಷಿಗಂಗಾ ನದಿಯ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದರಿಂದ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದೆ ಮತ್ತು ಹತ್ತಿರದ ಪ್ರದೇಶಗಳಲ್ಲಿ ವಾಸಿಸುವ ಜನರನ್ನು ಎಚ್ಚರಿಸಲಾಗುತ್ತಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಚಮೋಲಿಯ ತಪೋವನ್ ಸುರಂಗದೊಳಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಐಟಿಬಿಪಿಯ ಪಡೆಗಳು ಚಮೋಲಿಯಲ್ಲಿ ಸಂಪರ್ಕ ಕಡಿತಗೊಂಡ ಹಳ್ಳಿಗಳಿಗೆ ಸೇತುವೆಯನ್ನು … Continued

ಚುನಾವಣೆ ನಂತರ ಮಮತಾರಿಂದ ರಾಮ ಜಪ

ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಮುಗಿದಾಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಜೈ ಶ್ರೀರಾಮ ಎಂದು ಜಪ ಮಾಡಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು. ಅವರು ಕೂಚ್‌ಬೆಹಾರ್‌ನಲ್ಲಿ ಪರಿವರ್ತನ್‌ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಜೈ ಶ್ರೀರಾಮ ಪಠಣವು ಮಮತಾಗೆ ಮಾಡಿದ ಅವಮಾನವೇ ಎಂದು ಪ್ರಶ್ನಿಸಿದ ಶಾ, ಅನೇಕರು ರಾಮ ಜಪದಿಂದ … Continued

ಸ್ಥೂಲಕಾಯ, ವಯಸ್ಸು, ಕೊರೊನಾ ಸೋಂಕಿನ ಪ್ರಮಾಣ ವೈರಸ್‌ ಹರಡುವಿಕೆ ಮೇಲೆ ಪ್ರಭಾವ

ವ್ಯಕ್ತಿಯ ಸ್ಥೂಲಕಾಯ, ವಯಸ್ಸು ಹಾಗೂ ಕೊರೊನಾ ಸೋಂಕಿನ ಪ್ರಮಾಣ ಉಸಿರಾಡುವ ವೈರಸ್‌ ಕಣಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ. ೧೯೪ ವ್ಯಕ್ತಿಗಳ ಅಧ್ಯಯನ ನಡೆಸಿದ ಪಿಎನ್‌ಎಎಸ್‌ ಸಂಶೋಧನಾ ನಿಯತಕಾಲಿಕೆ ವರದಿ ಮಾಡಿದೆ. ಸಂಶೋಧನೆಯನ್ವಯ ಏರೋಸಾಲ್‌ ಕಣಗಳು ವ್ಯಕ್ತಿಯ ವಯಸ್ಸು, ವೈರಸ್‌ ಸ್ಥಿತಿ, ದೇಹದ ಸ್ಥೂಲತೆಯನ್ನು ಆಧರಿಸಿ ಬದಲಾವಣೆಯಾಗುತ್ತಿರುತ್ತದೆ. ಇತರ ಸಾಂಕ್ರಾಮಿಕ ರೋಗಗಳಲ್ಲಿ … Continued

ಗಣರಾಜ್ಯೋತ್ಸವದಂದು ರೈತನ ಸಾವು:ಎಸ್‌ಐಟಿ ತನಿಖೆಗೆ ಒತ್ತಾಯಿಸಿ ಕುಟುಂಬಸ್ಥರಿಂದ ಹೈಕೋರ್ಟಿಗೆ ಮೊರೆ

ಜನವರಿ ೨೬ರಂದು ನಡೆದ ರೈತರ ಟ್ರಾಕ್ಟರ್‌ ರ್ಯಾಲಿಯಲ್ಲಿ ಮೃತಪಟ್ಟ ರೈತನ ಕುಟುಂದವರು ವಿಶೇಷ ತನಿಖಾ ತಂಡದಿಂದ ತನಿಖೆಯಾಗಬೇಕೆಂದು ದೆಹಲಿ ಉಚ್ಚ ನ್ಯಾಯಾಲಯದ ಮೊರೆ ಹೋಗಿದ್ದಾರೆ. ೨೫ ವರ್ಷದ ನವೀತ್‌ ಸಿಂಗ್‌ ರ್ಯಾಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟಿದ್ದಾರೆ. ದೆಹಲಿ ಪೊಲೀಸರ ಪ್ರಕಾರ ನವೀತ್‌ ಸಿಂಗ್‌ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಆದರೆ ಕಟುಂಬದ ಸದಸ್ಯರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಪೊಲೀಸರು … Continued

ಪಾಂಗೋಂಗ್‌ ಲೇಕ್‌ನಿಂದ ಹಂಹಂತವಾಗಿ ಸೈನ್ಯ ಹಿಂತೆಗೆತ: ರಾಜನಾಥ್‌

ನವದೆಹಲಿ: ಭಾರತ ಹಾಗೂ ಚೀನಾ ದೇಶಗಳ ಮಾತುಕತೆಯಿಂದಾಗಿ ಪಾಂಗೋಂಗ್‌ ಸರೋವರದ ಉತ್ತರ ಹಾಗೂ ದಕ್ಷಿಣ ತೀರದಿಂದ ಸೈನ್ಯ ಹಿಂತೆಗೆಯುವ ಒಪ್ಪಂದಕ್ಕೆ ಕಾರಣವಾಗಿದ್ದು, ಉಭಯ ದೇಶಗಳು ಸಮನ್ವಯತೆಯಿಂದ ಹಂತ ಹಂತವಾಗಿ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಲಿವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೇಳಿದರು. ಪೂರ್ವ ಲಡಾಕ್‌ನ ಪಂಗೊಂಗ್ ಸರೋವರದ ದಕ್ಷಿಣ ಮತ್ತು ಉತ್ತರದ ದಡಗಳಲ್ಲಿ ಭಾರತೀಯ ಮತ್ತು … Continued

ಸೋಶಿಯಲ್‌ ಮೀಡಿಯಾ ವೇದಿಕೆಗಳ ಡಬಲ್ ಸ್ಟ್ಯಾಂಡರ್ಡ್‌ಗೆ ಅವಕಾಶವಿಲ್ಲ: ಟ್ವಿಟ್ಟರ್‌ಗೆ ಸಚಿವರ ಖಡಕ್‌ ಸಂದೇಶ

ನವ ದೆಹಲಿ; ಸಾಮಾಜಿಕ ಮಾಧ್ಯಮ (ಸೋಶಿಯಲ್‌ ಮೀಡಿಯಾ)ವೇದಿಕೆಗಳ ಡಬಲ್ ಸ್ಟ್ಯಾಂಡರ್ಡ್‌ಗೆ ಭಾರತದಲ್ಲಿ ಅವಕಾಶವಿಲ್ಲ ಎಂದು ಐಟಿ ಸಚಿವ ರವಿಶಂಕರ್ ಪ್ರಸಾದ್ ಗುರುವಾರ ಸಂಸತ್ತಿನಲ್ಲಿ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸುದ್ದಿ ಹಾಗೂ ದ್ವೇಷದ ಸುದ್ದಿ ಹರಡುವುದನ್ನು ಸರಕಾರ ಸಹಿಸುವುದಿಲ್ಲ ಸಾಮಾಜಿಕ ಜಾಲತಾಣಗಳ ದೈತ್ಯರಾದ ಟ್ವಿಟರ್‌, ಫೇಸ್‌ಬುಕ್‌ ಹಾಗೂ ವ್ಯಾಟ್ಸಪ್‌ ನಮ್ಮ ನೆಲದ ನಿಯಮವನ್ನು ಪಾಲನೆ ಮಾಡಬೇಕು … Continued

ತೆಂಡುಲ್ಕರ್‌, ಲತಾ ಮಂಗೇಶ್ಕರ್‌ ವಿರುದ್ಧ ತನಿಖೆಗೆ ಆದೇಶ:ರಾಜ್ಯಸಭೆಯಲ್ಲಿ ಚರ್ಚೆಗೆ ನೋಟಿಸ್‌

ನವ ದೆಹಲಿ: ಸಚಿನ್ ತೆಂಡೂಲ್ಕರ್ ಮತ್ತು ಲತಾ ಮಂಗೇಶ್ಕರ್ ವಿರುದ್ಧ ಮಹಾರಾಷ್ಟ್ರ ಸರ್ಕಾರ ಆದೇಶಿಸಿರುವ ತನಿಖೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಬಿಜೆಪಿ ಸಂಸದ ಭಗವತ್ ಕರದ್ ಗುರುವಾರ ರಾಜ್ಯಸಭೆಯಲ್ಲಿ ಶೂನ್ಯ ವೇಳೆ ನೋಟಿಸ್ ನೀಡಿದ್ದಾರೆ. ಶೂನ್ಯವೇಳೆಯಲ್ಲಿ ಸಂಸದರು ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ಸಮಸ್ಯೆಗಳನ್ನು ಎತ್ತಬಹುದಾಗಿದ್ದು, ರೈತರ ಪ್ರತಿಭಟನೆ ಕುರಿತು ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್, ಲತಾ … Continued

ಎಲ್‌ಎಸಿ: ಭಾರತ-ಚೀನಾ ಮಾತುಕತೆ ಮುಂದುವರಿಕೆ

ನವ ದೆಹಲಿ; ವಾಸ್ತವಿಕ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಎಲ್ಲಾ ಘರ್ಷಣೆ ಹಂತಗಳಲ್ಲಿ ಶಾಂತಿ ಪುನಃಸ್ಥಾಪಿಸಲು ಭಾರತವು ಚೀನಾದೊಂದಿಗೆ ಮಾತುಕತೆ ಮುಂದುವರಿಸಲಿದೆ ಎಂದು ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ ಮುರಲೀಧರನ್ ಬುಧವಾರ ಸಂಸತ್ತಿನಲ್ಲಿ ತಿಳಿಸಿದರು. ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದ ಮನೀಶ್ ತಿವಾರಿ ಪ್ರಶ್ನೆಗೆ ಉತ್ತರಿಸಿದ ಮುರಲೀಧರನ್, ಕಳೆದ ವರ್ಷದ ಏಪ್ರಿಲ್-ಮೇಯಿಂದ ಎಲ್‌ಎಸಿಯ ಪಶ್ಚಿಮ ವಲಯದಲ್ಲಿ … Continued

ಅಧಿಕಾರ ಬದಲಾವಣೆ ನಮ್ಮ ಗುರಿಯಲ್ಲ,ನಮ್ಮ ಸಮಸ್ಯೆಗಳಿಗೆ ಪರಿಹಾರ ಬೇಕು ಅಷ್ಟೆ 

ನವ ದೆಹಲಿ: ಆಂದೋಲನ ನಡೆಸುತ್ತಿರುವ ರೈತರು ಕೇಂದ್ರದಲ್ಲಿ ಯಾವುದೇ ಅಧಿಕಾರ ಬದಲಾವಣೆಯ ಗುರಿ ಹೊಂದಿಲ್ಲ, ಆದರೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಬೇಕಿದೆ ಎಂದು ಬಿಕೆಯು ಮುಖಂಡ ರಾಕೇಶ್ ಟಿಕಾಯಿತ್‌ ಬುಧವಾರ ಪ್ರತಿಪಾದಿಸಿದರು. ಅನೇಕ ರೈತ ನಾಯಕರು ಆಂದೋಲನವನ್ನು ವಿಸ್ತರಿಸಲು ದೇಶದ ವಿವಿಧ ಭಾಗಗಳಲ್ಲಿ ಪ್ರವಾಸ ಮಾಡುತ್ತಾರೆ ಎಂದರು. ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ಪ್ರದರ್ಶನದ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ … Continued

ಕಾಂಗ್ರೆಸ್‌ ಅಧಕಾರಕ್ಕೆ ಬಂದರೆ ಕೃಷಿ ಕಾಯ್ದೆ ರದ್ದು:ಪ್ರಿಯಾಂಕಾ

ಲಖನೌ: ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲಾಗುವುದು ಎಂದು ಕಾಂಗ್ರೆಸ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ. ಬುಧವಾರ ಉತ್ತರ ಪ್ರದೇಶದಲ್ಲಿ ಸಹಾರನ್ ಪುರದಲ್ಲಿ ಕಿಸಾನ್‌ ಪಂಚಾಯತ್ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರು ಅವಮಾನಿಸುತ್ತಿದ್ದಾರೆ … Continued