ಹೊಸ ವರ್ಷದ ಆರಂಭದ ದಿನವೇ ಇಸ್ರೋದಿಂದ ಮತ್ತೊಂದು ಮೈಲಿಗಲ್ಲು : ಕಪ್ಪು ಕುಳಿಗಳ ಅಧ್ಯಯನಕ್ಕೆ ಎಕ್ಸ್‌ಪೋಸ್ಯಾಟ್‌ ಉಪಗ್ರಹದ ಯಶಸ್ವಿ ಉಡಾವಣೆ

ನವದೆಹಲಿ: 2023 ರಲ್ಲಿ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿದ ವಿಶ್ವದ ಮೊದಲ ದೇಶವೆಂಬ ಹೆಗ್ಗಳಿಕೆ ಪಡೆದ ನಂತರ ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಹೊಸ ವರ್ಷದ ಮೊದಲ ದಿನವೇ ಮತ್ತೊಂದು ಐತಿಹಾಸಿಕ ಉಡಾವಣೆ ಮಾಡಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2024ರ ಆರಂಭದ ದಿನವೇ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) … Continued

4 ಮಾಸ್ಟರ್​ ಡಿಗ್ರಿ, 1 ಪಿಎಚ್​ಡಿ ಪದವಿ ಪಡೆದಿದ್ರೂ ಮನೆ ಮನೆಗೆ ತರಕಾರಿ ಮಾರ್ತಾರೆ ಈ ಪ್ರತಿಭಾವಂತ…!

ಚಂಡೀಗಢ: ನಾಲ್ಕು ಸ್ನಾತಕೋತ್ತರ ಪದವಿ ಮತ್ತು ಪಿಎಚ್‌ಡಿ ಪದವಿ ಪಡೆದಿರುವ ವ್ಯಕ್ತಿಯೊಬ್ಬರು ತಮ್ಮ ಜೀವನ ನಿರ್ವಹಣೆಗೆ ತರಕಾರಿ ಮಾರುತ್ತಿರುವ ವಿದ್ಯಮಾನದ ಬಗ್ಗೆ ವರದಿಯಾಗಿದೆ. 39 ವರ್ಷದ ಡಾ. ಸಂದೀಪ ಸಿಂಗ್ ಅವರು ಪಂಜಾಬಿನ ಪಟಿಯಾಲಾದ ಪಂಜಾಬಿ ವಿಶ್ವವಿದ್ಯಾಲಯದಲ್ಲಿ ಗುತ್ತಿಗೆ ಪ್ರಾಧ್ಯಾಪಕರಾಗಿದ್ದರು. ಆದಾಗ್ಯೂ, ದುರದೃಷ್ಟಕರ ಸಂದರ್ಭಗಳು ಅವರು ಕೆಲಸವನ್ನು ತೊರೆಯುವಂತೆ ಮಾಡಿತು. ಅದು ನಂತರದಲ್ಲಿ ಅವರು ಹಣ … Continued

ರಾಮಮಂದಿರ ಹೆಸರಿನಲ್ಲಿ ಕ್ಯೂಆರ್ ಕೋಡ್ ಮೂಲಕ ವಂಚನೆ : ಭಕ್ತರಿಗೆ ವಿ ಎಚ್‌ ಪಿ ಎಚ್ಚರಿಕೆ

ಅಯೋಧ್ಯಾ : ಅಯೋಧ್ಯಾ ರಾಮಮಂದಿರ ಉದ್ಘಾಟನೆಗೆ ಇನ್ನು ಕೆಲವೇ ಕೆಲವು ದಿನಗಳಿದ್ದು, ದೇವಸ್ಥಾನದ ಹೆಸರಿನಲ್ಲಿ ವಂಚಕರ ಜಾಲಗಳು ಸಕ್ರಿಯಗೊಂಡಿದೆ. ಮಂದಿರಕ್ಕೆ ದೇಣಿಗೆ ನೀಡುವಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವಂಚಕರು ಸಂದೇಶಗಳು ಹಾಗೂ ಕ್ಯೂಆರ್ ಕೋಡ್ ಹಂಚಿಕೊಳ್ಳುವ ಮೂಲಕ ವಂಚನೆಗೆ ಮುಂದಾಗಿದ್ದು, ಈ ಬಗ್ಗೆ ಜನರು ಜಾಗರೂಕರಾಗಿ ಇರಬೇಕು ಎಂದು ವಿಎಚ್‌ಪಿ ಮನವಿ ಮಾಡಿದೆ. ದೇವಾಲಯದ ಹೆಸರಿನಲ್ಲಿ ಸೈಬರ್ … Continued

ಭಾರತ ವಿರೋಧಿ ಪ್ರಚಾರ ; ತೆಹ್ರೀಕ್-ಎ-ಹುರಿಯತ್ ಸಂಘಟನೆ ನಿಷೇಧಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA) ಅಡಿಯಲ್ಲಿ ತೆಹ್ರೀಕ್-ಎ-ಹುರಿಯತ್ (TeH) ಅನ್ನು ‘ಕಾನೂನುಬಾಹಿರ ಸಂಘಟನೆ’ ಎಂದು ಕೇಂದ್ರ ಸರ್ಕಾರ ಭಾನುವಾರ ಘೋಷಿಸಿದೆ. ಮೃತ ಪ್ರತ್ಯೇಕತಾವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ ಈ ಹಿಂದೆ ಈ ಸಂಘಟನೆಯ ನೇತೃತ್ವ ವಹಿಸಿದ್ದರು. ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಲು ಮತ್ತು ಇಸ್ಲಾಮಿಕ್ ಆಡಳಿತವನ್ನು ಸ್ಥಾಪಿಸಲು ನಿಷೇಧಿತ … Continued

ವೀಡಿಯೊ…| ಪ್ರಧಾನಿ ಮೋದಿಯತ್ತ ಪುಷ್ಪವೃಷ್ಟಿ ಗೈದ ರಾಮಜನ್ಮಭೂಮಿ ವಿವಾದದ ಮುಸ್ಲಿಂ ಪರ ಪ್ರಮುಖ ಅರ್ಜಿದಾರ ಇಕ್ಬಾಲ್ ಅನ್ಸಾರಿ

ಅಯೋಧ್ಯೆ : ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಅಯೋಧ್ಯಾದಲ್ಲಿ ಶನಿವಾರ (ಡಿಸೆಂಬರ್ 30) ರೋಡ್‌ ಶೋದಲ್ಲಿ ಭಾಗವಹಿಸಿದ ವೇಳೆ ರಾಮ ಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದ ಪ್ರಕರಣದ ಪ್ರಮುಖ ಅರ್ಜಿದಾರರಲ್ಲಿ ಒಬ್ಬರಾಗಿದ್ದ ಇಕ್ಬಾಲ್ ಅನ್ಸಾರಿ ಅವರು ಪ್ರಧಾನಿ ಮೋದಿಗೆ ಪುಷ್ಪವೃಷ್ಟಿ ಮಾಡಿದ್ದು ಅಚ್ಚರಿಗೆ ಕಾರಣವಾಗಿದೆ. ಇಕ್ಬಾಲ್ ಅನ್ಸಾರಿ ಮತ್ತು ಇತರರು ರಸ್ತೆಬದಿಯಲ್ಲಿ ನಿಂತಿದ್ದರು. … Continued

ವೀಡಿಯೊ…| ಕರ್ತವ್ಯದ ಪಥದ ಪಾದಚಾರಿ ಮಾರ್ಗದಲ್ಲಿ ಖೇಲ್ ರತ್ನ, ಅರ್ಜುನ ಪ್ರಶಸ್ತಿ ಇಟ್ಟು ಹೋದ ಮಹಿಳಾ ಕುಸ್ತಿಪಟು ವಿನೇಶ್ ಫೋಗಟ್

ನವದೆಹಲಿ: ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಘೋಷಿಸಿದ ನಾಲ್ಕು ದಿನಗಳ ನಂತರ, ಕುಸ್ತಿಪಟು ವಿನೇಶ್ ಫೋಗಟ್ ಶನಿವಾರ ನವದೆಹಲಿಯ ಕರ್ತವ್ಯ ಪಥದ ಪಾದಚಾರಿ ಮಾರ್ಗದಲ್ಲಿ ಪ್ರಶಸ್ತಿಯನ್ನು ಇಟ್ಟು ಹೋಗಿದ್ದಾರೆ. ಪ್ರಧಾನಿ ಕಚೇರಿಗೆ ಹೋಗದಂತೆ ದೆಹಲಿ ಪೊಲೀಸರು ತಡೆದ ನಂತರ ಆಕೆ ಪಾದಚಾರಿ ಮಾರ್ಗದಲ್ಲಿ ಪ್ರಶಸ್ತಿಯನ್ನು ಇಟ್ಟು ಹೋಗಿದ್ದಾರೆ. ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ … Continued

ಮರಗಳ್ಳತನ ಆರೋಪ: ಪ್ರತಾಪ ಸಿಂಹ ಸಹೋದರ ವಿಕ್ರಂ ಸಿಂಹ ಅರಣ್ಯಾಧಿಕಾರಿಗಳ ವಶಕ್ಕೆ

ಬೆಂಗಳೂರು : ಮರಗಳ್ಳತನ ಪ್ರಕರಣದ ಆರೋಪ ಎದುರಿಸುತ್ತಿರುವ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಅವರ ಸಹೋದರ ವಿಕ್ರಂ ಸಿಂಹನನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. .ಹಾಸನ ಜಿಲ್ಲೆಯ ಬೇಲೂರು ಬಳಿಯ ನಂದಗೊಂಡನಹಳ್ಳಿಯಲ್ಲಿ 126 ಮರಗಳನ್ನು ಕಡಿದ ಆರೋಪದಡಿ ವಿಕ್ರಂ ಸಿಂಹ ಅವರನ್ನು ಅಧಿಕಾರಿಗಳು ಬಂಧಿಸಿದ್ದಾರೆ ಎನ್ನಲಾಗಿದೆ. ನಂದಗೋಡನಹಳ್ಳಿಯಲ್ಲಿ ತಾವು ಲೀಸ್‌ಗೆ ಪಡೆದಿದ್ದ ಜಮೀನಿನಲ್ಲಿ … Continued

ಲೋಕಸಭೆ ಚುನಾವಣೆಗೆ ಬಿಜೆಪಿ ತಯಾರಿ : ಜನವರಿ 2ರಿಂದ ‘ಶುಕ್ರಿಯಾ ಮೋದಿ ಭಾಯಿಜಾನ್’ ಅಭಿಯಾನ ಆರಂಭ

ಲಕ್ನೋ : 2024 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಮುಸ್ಲಿಂ ಮಹಿಳೆಯರನ್ನು ಪಕ್ಷದತ್ತ ಸೆಳೆಯಲು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾವು ಉತ್ತರ ಪ್ರದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಮುಂದಿನ ವಾರ ”ಶುಕ್ರಿಯಾ ಮೋದಿ ಭಾಯಿಜಾನ್” ಅಭಿಯಾನ ಪ್ರಾರಂಭಿಸಲಿದೆ. ಜನವರಿ 2ರಿಂದ ಅಭಿಯಾನ ಆರಂಭವಾಗಲಿದ್ದು, ಜನವರಿ 20ರವರೆಗೆ ನಡೆಯಲಿದೆ. “ನಾ ದೂರಿ ಹೈ, ನಾ ಖೈ ಹೈ, ಮೋದಿ … Continued

“ಭಾರತದ ಹಸ್ತಾಂತರದ ವಿನಂತಿ ಸ್ವೀಕರಿಸಲಾಗಿದೆ, ಆದರೆ…”: ಮುಂಬೈ ದಾಳಿ ‘ಮಾಸ್ಟರ್ ಮೈಂಡ್’ ಹಫೀಜ್ ಸಯೀದ್ ಹಸ್ತಾಂತರದ ಬಗ್ಗೆ ಪಾಕಿಸ್ತಾನ

ಇಸ್ಲಾಮಾಬಾದ್ : 26/11 ಮುಂಬೈ  ದಾಳಿಯ ‘ಮಾಸ್ಟರ್ ಮೈಂಡ್’ ಹಫೀಜ್ ಸಯೀದ್ ನನ್ನು ಹಸ್ತಾಂತರಿಸುವಂತೆ ಭಾರತದ ವಿನಂತಿಯನ್ನು ಪಾಕಿಸ್ತಾನವು ಸ್ವೀಕರಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಮುಮ್ತಾಜ್ ಜಹ್ರಾ ಬಲೋಚ್ ಹೇಳಿದ್ದಾರೆ. ಆದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯಾವುದೇ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದ ಅಸ್ತಿತ್ವದಲ್ಲಿಲ್ಲ ಎಂದು ಅವರು ಹೇಳಿದರು. ಮುಮ್ತಾಜ್ ಜಹ್ರಾ … Continued

ಶ್ರೀರಾಮ ಹಿಂದೂಗಳಿಗೆ ಮಾತ್ರವಲ್ಲ, ಇಡೀ ಜಗತ್ತಿಗೆ ಸೇರಿದವನು : ಫಾರೂಕ್ ಅಬ್ದುಲ್ಲಾ

ಅಯೋಧ್ಯಾ : ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಹಕರಿಸಿದ ಜನರನ್ನು ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಶನಿವಾರ ಅಭಿನಂದಿಸಿದ್ದಾರೆ. ರಾಮಮಂದಿರದ ಮಹಾ ಉದ್ಘಾಟನೆ ಜನವರಿ 22 ರಂದು ನಡೆಯಲಿದೆ. “ಅಯೋಧ್ಯೆ ರಾಮ ಮಂದಿರವು ಉದ್ಘಾಟನೆಗೊಳ್ಳಲಿದೆ. ದೇವಾಲಯಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರನ್ನು ನಾನು ಅಭಿನಂದಿಸಲು ಬಯಸುತ್ತೇನೆ. ಅದು ಈಗ ಸಿದ್ಧವಾಗಿದೆ” ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ … Continued