ಅದ್ಭುತ ವೀಡಿಯೊ..| ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತು ಕಾರನ್ನು ನಿಲ್ಲಿಸಿದ ಹಸುಗಳ ಗುಂಪು…!

ರಾಯಗಢ: ಛತ್ತೀಸ್‌ಗಢ ರಾಜ್ಯದ ರಾಯಗಢದ ಜನನಿಬಿಡ ರಸ್ತೆಯ ಮಧ್ಯೆ ಕಾರಿನಡಿ ಸಿಲುಕಿದ್ದ ಕರುವನ್ನು ರಕ್ಷಿಸಲು ಗೋವುಗಳ ಹಿಂಡು ಕಾರಿಗೆ ಅಡ್ಡಲಾಗಿ ನಿಂತು ಅದನ್ನು ತಡೆದು ನಿಲ್ಲಿಸಿದ ಅಸಮಾನ್ಯ ಘಟನೆ ನಡೆದಿದೆ. ಸಾಮಾನ್ಯವಾಗಿ ಸೌಮ್ಯವಾಗಿರುವ ಗೋವುಗಳ ಹಿಂಡು ಕಾರನ್ನು ಹಿಂಬಾಲಿಸಿಕೊಂಡು ಬಂದು ಕಾರಿಗೆ ಅಡ್ಡಲಾಗಿ ನಿಂತಿವೆ. ಕಾರು ಆಕಳು ಕರುವನ್ನು ಸುಮಾರು 200 ಮೀಟರ್ ಎಳೆದುಕೊಂಡು ಬಂದಿದೆ. … Continued

ಉತ್ತರ ಪ್ರದೇಶದ ಅತ್ಯಂತ ಜನಪ್ರಿಯ ಪ್ರವಾಸಿ ಸ್ಥಳ ; ತಾಜ್ ಮಹಲ್ ಹಿಂದಿಕ್ಕಿ ನಂ.1 ಸ್ಥಾನಕ್ಕೆ ಏರಿದ ಅಯೋಧ್ಯೆ ರಾಮಮಂದಿರ

ನವದೆಹಲಿ: ಈಗ ಅಯೋಧ್ಯೆಯು ಆಗ್ರಾದ ತಾಜ್ ಮಹಲ್‌ ಅನ್ನು ಹಿಂದಿಕ್ಕಿ ಈಗ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಭೇಟಿ ನೀಡುವ ಸ್ಥಳವಾಗಿ ಹೊರಹೊಮ್ಮಿದೆ. ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಪ್ರಕಾರ, 2024 ರ ಜನವರಿ-ಸೆಪ್ಟೆಂಬರ್ ನಡುವೆ ಅಯೋಧ್ಯೆಗೆ 13.55 ಕೋಟಿ ದೇಶೀಯ ಪ್ರವಾಸಿಗರು ಮತ್ತು 3,153 ವಿದೇಶಿಯರು ಭೇಟಿ ನೀಡಿದ್ದಾರೆ. ಇದು ಹೊಸ ದಾಖಲೆಯಾಗಿದೆ. ನಿರೀಕ್ಷಿತ … Continued

ರಾಮಾಯಣ, ಮಹಾಭಾರತವನ್ನು ಅರೇಬಿಕ್ ಭಾಷೆಗೆ ಅನುವಾದಿಸಿದವರನ್ನು ಭೇಟಿಯಾದ ಪ್ರಧಾನಿ ಮೋದಿ

ಕುವೈತ್‌: ಎರಡು ದಿನಗಳ ಕಾಲ ಕುವೈತ್‌ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಮೊದಲ ದಿನವಾದ ಶನಿವಾರ ಭಾರತದ ಎರಡು ಅಪ್ರತಿಮ ಮಹಾಕಾವ್ಯಗಳಾದ ಮಹಾಭಾರತ ಮತ್ತು ರಾಮಾಯಣವನ್ನು ಅರೇಬಿಕ್ ಭಾಷೆಗೆ ಅನುವಾದಿಸಿ ಪ್ರಕಟಿಸಿದ ಇಬ್ಬರು ಕುವೈತ್ ಪ್ರಜೆಗಳನ್ನು ಭೇಟಿ ಮಾಡಿದ್ದಾರೆ. ಲೇಖಕರನ್ನು ಭೇಟಿ ಮಾಡಿದ ಪ್ರಧಾನಿ ಮೋದಿ ಎರಡು ಮಹಾಕಾವ್ಯಗಳ ಅರೇಬಿಕ್ ಆವೃತ್ತಿಗಳಿಗೆ ಸಹಿ ಹಾಕಿದ್ದಾರೆ. “ರಾಮಾಯಣ … Continued

ದೇಗುಲದ ಹುಂಡಿಯಲ್ಲಿ ಆಕಸ್ಮಿಕವಾಗಿ ಐಫೋನ್ ಬೀಳಿಸಿಕೊಂಡ ವ್ಯಕ್ತಿ ; ಅದನ್ನು ವಾಪಸ್‌ ಕೊಡಲ್ಲ ಎಂದ ಆಡಳಿತ ಮಂಡಳಿ ; ಯಾಕೆಂದರೆ…

ಚೆನ್ನೈ: ತಮಿಳುನಾಡಿನ ದೇವಸ್ಥಾನದ ಹುಂಡಿಯಲ್ಲಿ ಆಕಸ್ಮಿಕವಾಗಿ ಐಫೋನ್ ಬಿದ್ದ ವ್ಯಕ್ತಿಯೊಬ್ಬ ತನ್ನ ಫೋನ್ ಅನ್ನು ಮರಳಿ ಪಡೆಯಲು ಸಾಧ್ಯವಾಗಿಲ್ಲ. ಯಾಕೆಂದರೆ ತಮಿಳುನಾಡು ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆಯು ಅವರ ಮನವಿಯನ್ನು ನಯವಾಗಿ ತಿರಸ್ಕರಿಸಿದ್ದು, ದೇವಾಲಯದ ಹುಂಡಿಗೆ ಬಿದ್ದಿದ್ದು ಈಗ ಅದು ದೇವಾಲಯದ ಆಸ್ತಿ ಎಂದು ಹೇಳಿದೆ. ಹುಂಡಿ ನಿಯಮಗಳ ಸ್ಥಾಪನೆ, ಸುರಕ್ಷತೆ ಮತ್ತು ಲೆಕ್ಕಪತ್ರ … Continued

ವೀಡಿಯೊ…| 8 ಬಾರಿ ಪಲ್ಟಿಯಾಗಿ ಬಿದ್ದ ಕಾರು ; ಭೀಕರ ಅಪಘಾತದಲ್ಲಿ ಸಿಲುಕಿದವರು ಹೊರಬಂದು ಟೀ ಕೇಳಿದರು…!

ಬಿಕಾನೇರ್: ಕಾರೊಂದು ಎಂಟು ಸಲ ಪಲ್ಟಿ ಹೊಡೆದರೂ ಅದರೊಳಗಿದ್ದ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ರಾಜಸ್ಥಾನದ ನಗೌರ್‌ನ ಹೆದ್ದಾರಿಯಲ್ಲಿ ಶುಕ್ರವಾರ ನಡೆದಿದೆ. ಭೀಕರ ಅಪಘಾತದ ದೃಶ್ಯ ವೀಡಿಯೊದಲ್ಲಿ ಸೆರೆಯಾಗಿದ್ದು, ಕಾರು ಎಂಟು ಬಾರಿ ಪಲ್ಟಿಯಾಗಿದ್ದರೂ ಅದರೊಳಗಿದ್ದ ಐವರು ಪ್ರಯಾಣಿಕರು ಸುರಕ್ಷಿತವಾಗಿ ಪಾರಾಗಿದ್ದಾರೆ. ಅಲ್ಲದೆ, ಅಲ್ಲೆ ಇದ್ದ ಶೋರೂಂಗೆ ಹೋಗಿ ಚಹಾ ಕೇಳಿದ್ದಾರೆ…! ಸಿಸಿಟಿವಿ ದೃಶ್ಯಾವಳಿಯು … Continued

ಅರವಿಂದ್ ಕೇಜ್ರಿವಾಲಗೆ ಸಂಕಷ್ಟ ; ವಿಚಾರಣೆಗೆ ಒಳಪಡಿಸಲು ಇ.ಡಿ.ಗೆ ಅನುಮತಿ ನೀಡಿದ ದೆಹಲಿ ಲೆಫ್ಟಿನೆಂಟ್ ಗವರ್ನರ್

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ, ದೆಹಲಿಯ ಮಾಜಿ ಮುಖ್ಯಮಂತ್ರಿ ಮತ್ತು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರಿಗೆ ಹೊಸ ತೊಂದರೆಗಳು ಎದುರಾಗಿದೆ. ಮದ್ಯನೀತಿ ಪ್ರಕರಣದಲ್ಲಿ ಅರವಿಂದ ಕೇಜ್ರಿವಾಲ್‌ ಅವರನ್ನು ವಿಚಾರಣೆಗೆ ಒಳಪಡಿಸಲು ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿನಯ ಸಕ್ಸೇನಾ ಅವರು ಜಾರಿ ನಿರ್ದೇಶನಾಲಯ(ಇ.ಡಿ.)ಕ್ಕೆ ಅನುಮತಿ ನೀಡಿದ್ದಾರೆ. ಲೋಕಸಭೆ ಚುನಾವಣೆಯ ಸೋಲಿನ ನಂತರ ಕೇಜ್ರಿವಾಲ್‌ ಅವರಿಗೆ … Continued

ಮಹಿಳೆಗೆ ಬಂದ ಪಾರ್ಸೆಲ್‌ ನಲ್ಲಿ ಇತ್ತು ಅಪರಿಚಿತ ವ್ಯಕ್ತಿಯ ಶವ…! ₹ 1.3 ಕೋಟಿ ಹಣದ ಬೇಡಿಕೆಯ ಪತ್ರ…!!

ಅಮರಾವತಿ: ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ಮಹಿಳೆಯೊಬ್ಬರಿಗೆ ಅಪರಿಚಿತ ವ್ಯಕ್ತಿಯ ಶವವಿದ್ದ ಪಾರ್ಸೆಲ್ ಬಂದಿದ್ದು, ಅದನ್ನು ನೋಡಿ ಮಹಿಳೆ ಆಗಾತಕ್ಕೆ ಒಳಗಾಗಿದ್ದಾಳೆ…! ಪಶ್ಚಿಮ ಗೋದಾವರಿ ಜಿಲ್ಲೆಯ ಉಂಡಿ ಮಂಡಲದ ಯಂಡಗಂಡಿ ಗ್ರಾಮದಲ್ಲಿ ಈ ಭಯಾನಕ ಘಟನೆ ವರದಿಯಾಗಿದೆ. ನಾಗ ತುಳಸಿ ಎಂಬ ಮಹಿಳೆಯೊಬ್ಬರು ಮನೆ ನಿರ್ಮಿಸಲು ಆರ್ಥಿಕ ಸಹಾಯಕ್ಕಾಗಿ ಕ್ಷತ್ರಿಯ ಸೇವಾ ಸಮಿತಿಗೆ ಅರ್ಜಿ ಸಲ್ಲಿಸಿದ್ದರು. … Continued

ವಿದ್ಯುತ್ ಕಳ್ಳತನದ ಆರೋಪ ; ಸಮಾಜವಾದಿ ಪಕ್ಷದ ಸಂಸದರಿಗೆ ₹ 1.9 ಕೋಟಿ ದಂಡ..!

ಲಕ್ನೋ:  ಸಮಾಜವಾದಿ ಪಕ್ಷದ ಉತ್ತರ ಪ್ರದೇಶದ  ಸಂಭಾಲ್ ಸಂಸದ ಜಿಯಾ ಉರ್ ರೆಹಮಾನ್ ಬಾರ್ಕ್ ತಮ್ಮ ನಿವಾಸದಲ್ಲಿ ವಿದ್ಯುತ್ ಕಳ್ಳತನ ಮಾಡಿದ ಆರೋಪಿತ ಪ್ರಕರಣದಲ್ಲಿ ಅವರಿಗೆ ₹ 1.91 ಕೋಟಿ ದಂಡ ವಿಧಿಸಲಾಗಿದೆ. ಸಂಸದರ ನಿವಾಸದಲ್ಲಿ ಎರಡು ವಿದ್ಯುತ್ ಮೀಟರ್‌ಗಳನ್ನು ಟ್ಯಾಂಪರಿಂಗ್ ಮಾಡಿರುವ ಪುರಾವೆಗಳು ಕಂಡುಬಂದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ವಿದ್ಯುತ್ ಇಲಾಖೆ ಈ ದಂಡ … Continued

ಒಬ್ಬನೇ ಚಾಲಕ, 24 ಅಪಘಾತಗಳು…: ಬೃಹತ್ ವಿಮಾ ಹಗರಣ ಬೆಳಕಿಗೆ ಬಂದಿದ್ದು ಹೇಗೆ ಗೊತ್ತಾ..?

ಅಹಮದಾಬಾದ್: ಗುಜರಾತಿನ ಪಂಚಮಹಲ್, ದಾಹೋದ್ ಮತ್ತು ಮಹಿಸಾಗರ್ ಜಿಲ್ಲೆಗಳಲ್ಲಿ ಸಂಭವಿಸಿದ 24 ಪ್ರತ್ಯೇಕ ಅಪಘಾತಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಬೃಹತ್ ವಿಮಾ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಚಾಲಕನೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಅಸ್ಲಂ ಮೊಹಮ್ಮದ್ ಚುಂಚಲ ಎಲ್ಲ 24 ಪ್ರಕರಣಗಳಲ್ಲಿ ಪಾಲ್ಗೊಂಡಿದ್ದ ಚಾಲಕ ಎಂದು ಗುರುತಿಸಲಾಗಿದೆ. ಗೋಧ್ರಾ ಪೊಲೀಸ್ ಠಾಣೆಯಲ್ಲಿ ಅಪಘಾತ ಪ್ರಕರಣವೊಂದರಲ್ಲಿ … Continued

2024ರಲ್ಲಿ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ 2,200 ಹಿಂಸಾಚಾರ ಪ್ರಕರಣಗಳು : ಸರ್ಕಾರ

ನವದೆಹಲಿ: 2024 ರಲ್ಲಿ ವಿಶೇಷವಾಗಿ ನೆರೆಯ ದೇಶದಲ್ಲಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸರ್ಕಾರ ಪತನದ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳ ವಿರುದ್ಧ 2,200 ಹಿಂಸಾಚಾರದ ಪ್ರಕರಣಗಳು ನಡೆದಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಶುಕ್ರವಾರ ಬಹಿರಂಗಪಡಿಸಿದೆ. ಇದೇ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಇಂತಹ 112 ಪ್ರಕರಣಗಳು ವರದಿಯಾಗಿವೆ ಎಂದು ಸರ್ಕಾರ ಗಮನಿಸಿದೆ. ರಾಜ್ಯಸಭೆಯಲ್ಲಿ ಅಂಕಿಅಂಶಗಳನ್ನು … Continued