ವೀಡಿಯೊ…| ಪ್ರಯಾಣಿಕರಿದ್ದ ಬೋಟ್‌ ಗೆ ನೌಕಾ ಪಡೆ ಸ್ಪೀಡ್‌ ಬೋಟ್ ಡಿಕ್ಕಿ ; 13 ಪ್ರಯಾಣಿಕರು ಸಾವು

ಮುಂಬೈ: ಮಹಾರಾಷ್ಟ್ರದ ಮುಂಬೈ ಕರಾವಳಿಯಲ್ಲಿ ನಡೆದ ಬೋಟ್‌ ಅಪಘಾತದಲ್ಲಿ 13 ಮಂದಿ ಸಾವಿಗೀಡಾಗಿದ್ದಾರೆ. ಮುಂಬೈಯ ಐಕಾನಿಕ್ ಗೇಟ್‌ವೇ ಆಫ್ ಇಂಡಿಯಾ (Iconic Gateway of India)ದಿಂದ ಎಲಿಫೆಂಟಾ ದ್ವೀಪಕ್ಕೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ನೀಲ್‌ ಕಮಲ್‌ ಹೆಸರಿನ ಬೋಟ್‌ಗೆ ಸ್ಪೀಡ್‌ ಬೋಟ್‌ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್‌ … Continued

ಉತ್ತರಾಖಂಡದಲ್ಲಿ 2025ರ ಜನವರಿಯಿಂದ ಏಕರೂಪ ನಾಗರಿಕ ಸಂಹಿತೆ ಜಾರಿಗೆ

ಡೆಹ್ರಾಡೂನ್‌ : 2025ರ ಜನವರಿಯಿಂದ ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆ (UCC) ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಪುಷ್ಕರ ಸಿಂಗ್ ಧಾಮಿ ಪ್ರಕಟಿಸಿದ್ದಾರೆ. ವರದಿಗಳ ಪ್ರಕಾರ, ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ ಮತ್ತು ಸ್ವಾತಂತ್ರ್ಯದ ನಂತರ ಉತ್ತರಾಖಂಡವು ಏಕರೂಪ ನಾಗರಿಕ ಸಂಹಿತೆ(UCC)ಯನ್ನು ಜಾರಿಗೆ ತರುವ ಮೊದಲ ರಾಜ್ಯವಾಗಲಿದೆ. ಬುಧವಾರ (ಡಿಸೆಂಬರ್ 18) ಸೆಕ್ರೆಟರಿಯೇಟ್‌ನಲ್ಲಿ ನಡೆದ ಉತ್ತರಾಖಂಡ ಹೂಡಿಕೆ ಮತ್ತು … Continued

ರೈಲಿನ ಮಹಿಳಾ ಬೋಗಿಗೆ ಬೆತ್ತಲೆಯಾಗಿ ನುಗ್ಗಿದ ವ್ಯಕ್ತಿ ; ಕಿರುಚಾಡಿದ ಮಹಿಳಾ ಪ್ರಯಾಣಿಕರು

ಮುಂಬೈ: ಮುಂಬೈ ಲೋಕಲ್ ರೈಲಿನಲ್ಲಿ ಮಹಿಳೆಯರಿಗಾಗಿ ಮೀಸಲಿಟ್ಟಿದ್ದ ಬೋಗಿಗೆ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ನುಗ್ಗಿದ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆ ವ್ಯಕ್ತಿ ಸ್ವಲ್ಪ ಹೊತ್ತು ರೈಲಿನ ಬೋಗಿಯ ಕೈಕಂಬ ಹಿಡಿದುಕೊಂಡು ನಿಂತಿದ್ದ ಹಾಗೂ ಮಹಿಳೆಯರು ಚೀರಾಡಿದರೂ ಆತ ಅಲ್ಲಿಂದ ಹೊರಡಲು ಒಪ್ಪಲಿಲ್ಲ. ನಂತರ ಅವರನ್ನು ರೈಲ್ವೇ ಅಧಿಕಾರಿಯೊಬ್ಬರು ರೈಲಿನಿಂದ ಹೊರಗೆ ಹಾಕಿದ್ದಾರೆ ಎಂದು ಹೇಳಲಾಗಿದೆ. … Continued

ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ನಿವೃತ್ತಿ ಘೋಷಿಸಿದ ಸ್ಪಿನ್ ದಿಗ್ಗಜ ಭಾರತದ ಆರ್ ಅಶ್ವಿನ್

ನವದೆಹಲಿ: ಬುಧವಾರ ಬ್ರಿಸ್ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ ನಂತರ ಭಾರತೀಯ ಕ್ರಿಕೆಟ್ ತಂಡದ ಸ್ಪಿನ್ನರ್ ಆರ್. ಅಶ್ವಿನ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ನಂತರ ನಾಯಕ ರೋಹಿತ್ ಶರ್ಮಾ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಅಶ್ವಿನ್ ಈ ಘೋಷಣೆ ಮಾಡಿದರು. ಅಶ್ವಿನ್ ಅಡಿಲೇಡ್‌ನಲ್ಲಿ ಐದು ಟೆಸ್ಟ್‌ಗಳ ಸರಣಿಯ ಎರಡನೇ ಪಂದ್ಯವನ್ನು ಆಡಿದರು … Continued

1.7 ಕೆಜಿ ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದಾಗ ಸಿಕ್ಕಿಬಿದ್ದ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿ

ಚೆನ್ನೈ: ಚೆನ್ನೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನಿಗೆ 1.7 ಕೆಜಿ 24 ಕ್ಯಾರೆಟ್ ಚಿನ್ನವನ್ನು ಕಳ್ಳಸಾಗಣೆ ಮಾಡಲು ಸಹಾಯ ಮಾಡಿದ್ದಕ್ಕಾಗಿ ಏರ್ ಇಂಡಿಯಾದ ಕ್ಯಾಬಿನ್ ಸಿಬ್ಬಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಭಾನುವಾರ ದುಬೈನಿಂದ ಏರ್ ಇಂಡಿಯಾ ವಿಮಾನದಲ್ಲಿ ಚೆನ್ನೈಗೆ ಆಗಮಿಸಿದಾಗ ಕ್ಯಾಬಿನ್ ಸಿಬ್ಬಂದಿ ಮತ್ತು ಪ್ರಯಾಣಿಕನನ್ನು ಅಧಿಕಾರಿಗಳು ತಡೆದರು. ವಿಮಾನದೊಳಗೆ ಕ್ಯಾಬಿನ್ ಸಿಬ್ಬಂದಿಗೆ ಚಿನ್ನವನ್ನು … Continued

ಮುದ್ದಿನ ಗಿಳಿ ಕಾಣೆಯಾಗಿದೆ…ಅದನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ಘೋಷಿಸಿದ ಮಾಲೀಕ

ಉತ್ತರ ಪ್ರದೇಶದ ಬುಲಂದ್‌ಶಹರ್ ನಿವಾಸಿಯೊಬ್ಬರು ತನ್ನ ಕಾಣೆಯಾದ ಗಿಳಿ ಬಗ್ಗೆ ಸರಿಯಾದ ಮಾಹಿತಿ ನೀಡಿದವರಿಗೆ ಅಥವಾ ಹಿಡಿದು ತಂದುಕೊಟವಟರಿಗೆ 1 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ನವೀನ್ ಪಾಠಕ್ ಅವರು ಗಿಳಿಯೊಂದಿಗೆ ಇರುವ ಫೋಟೋವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, ಡಿಸೆಂಬರ್ 10 ರಂದು ಗಿಳಿ ಕಾಣೆಯಾಗಿದೆ ಎಂದು ಹೇಳಿದ್ದಾರೆ. ಹಾಗೂ ನಾಪತ್ತೆಯಾದ ಗಿಳಿ ಬಗ್ಗೆ ಮಾಹಿತಿ … Continued

ಜೀವಂತ ಕೋಳಿಮರಿ ನುಂಗಿದ ವ್ಯಕ್ತಿ ಸಾವು ; ಆದ್ರೆ ದೇಹದೊಳಗೆ ಬದುಕುಳಿದ ಕೋಳಿಮರಿ…!!

ವಿಚಿತ್ರ ಘಟನೆಯೊಂದರಲ್ಲಿ ಛತ್ತೀಸ್‌ಗಢದ ವ್ಯಕ್ತಿಯೊಬ್ಬ ಜೀವಂತ ಕೋಳಿಮರಿಯನ್ನು ನುಂಗಿ ಉಸಿರುಗಟ್ಟಿ ಸಾವಿಗೀಡಾಗಿದ್ದಾನೆ. ಆದರೆ ವಿಚಿತ್ರವೆಂದರೆ ಆತ ನುಂಗಿದ ಕೋಳಿಮರಿ ದೇಹದೊಳಗೆ ಜೀವಂತವಾಗಿ ಪತ್ತೆಯಾಗಿದೆ…! ಗ್ರಾಮಸ್ಥರ ಪ್ರಕಾರ ಇದು ನಿಗೂಢ ಕ್ಷುದ್ರ ಆಚರಣೆ ಭಾಗವಾಗಿ ನಡೆದ ವಿದ್ಯಮಾನವಾಗಿದೆ. ಛತ್ತೀಸ್‌ಗಢದ ಅಂಬಿಕಾಪುರದ ಚಿಂಡ್ಕಾಲೋ ಗ್ರಾಮದ ಆನಂದ ಯಾದವ ಎಂಬ 35 ವರ್ಷದ ವ್ಯಕ್ತಿ, ಸ್ನಾನ ಮುಗಿಸಿ ಬಂದ ಸ್ವಲ್ಪ … Continued

ವೀಡಿಯೊ..| ವೃದ್ಧ ದಂಪತಿಯನ್ನು ಬಹಳ ಹೊತ್ತು ಕಾಯಿಸಿದ ನೋಯ್ಡಾ ಪ್ರಾಧಿಕಾರದ ಸಿಬ್ಬಂದಿ ; ಅವರಿಗೆ 20 ನಿಮಿಷ ನಿಲ್ಲುವ ಶಿಕ್ಷೆ ನೀಡಿದ ಸಿಇಒ…!

ನವದೆಹಲಿ : ಕೆಲಸಕ್ಕಾಗಿ ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಿದ್ದ ವೃದ್ಧ ದಂಪತಿಯನ್ನು ಬಹಳ ಹೊತ್ತಿನವರೆಗೆ ಕಾಯುವಂತೆ ಮಾಡಿದ್ದಕ್ಕಾಗಿ ನೋಯ್ಡಾ ಪ್ರಾಧಿಕಾರದ ಅಧಿಕಾರಿಗಳಿಗೆ ಸುಮಾರು 20 ನಿಮಿಷಗಳ ಕಾಲ ನಿಂತುಕೊಂಡೇ ಕೆಲಸ ಮಾಡುವ ಶಿಕ್ಷೆ ವಿಧಿಸಲಾಗಿತ್ತು ಎಂದು ವರದಿಯಾಗಿದೆ. ಕಚೇರಿಗೆ ಬಂದ ವೃದ್ಧ ದಂಪತಿಯನ್ನು ನಿರ್ಲಕ್ಷಿಸಿ 50 ನಿಮಿಷಗಳ ಕಾಲ ಅನಗತ್ಯವಾಗಿ ಕಾಯುವಂತೆ ಮಾಡಿದ್ದನ್ನು ಗಮನಿಸಿದ ನೋಯ್ಡಾ … Continued

ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥಗೆ ಕೊಲೆ ಬೆದರಿಕೆ ; ಬಾಂಗ್ಲಾದೇಶದ ವಲಸಿಗನ ಬಂಧನ

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಶಿರಚ್ಛೇದ ಮಾಡುವುದಾಗಿ ವೀಡಿಯೊ ಮೂಲಕ ಬಹಿರಂಗವಾಗಿ ಬೆದರಿಕೆ ಹಾಕಿದ ಬಾಂಗ್ಲಾದೇಶದ ವಲಸಿಗ ಶೇಖ್ ಅತಾಲ್ ಎಂಬಾತನನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಆತನಿಂದ ಆಯುಧವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಆರೋಪಿಯು ಯೋಗಿ ಆದಿತ್ಯನಾಥ ಅವರನ್ನು ಕೊಲ್ಲುವ ಬಗ್ಗೆ ಮಾತನಾಡುತ್ತಿರುವುದು ಮತ್ತು ಉದ್ರೇಕಕಾರಿ ಹೇಳಿಕೆಗಳನ್ನು ನೀಡಿರುವುದು … Continued

ವಿಪರೀತ ಚಳಿಯಿಂದಾಗಿ ಮದುವೆ ಮಂಟಪದಲ್ಲಿ ಮೂರ್ಛೆ ಹೋದ ವರ…! ಮದುವೆಯನ್ನೇ ರದ್ದುಗೊಳಿಸಿದ ವಧು…!!

ಜಾರ್ಖಂಡದ ದಿಯೋಗರ್‌ನಲ್ಲಿ ಭಾನುವಾರ ರಾತ್ರಿ ವಿಪರೀತ ಚಳಿಯಿಂದಾಗಿ ಮದುಮಗ ಮೂರ್ಛೆ ಹೋಗಿದ್ದು, ನಂತರ ಮದುಮಗಳು ವರನನ್ನು ಮದುವೆಯಾಗಲು ನಿರಾಕರಿಸಿದ್ದರಿಂದ ಮದುವೆಯೇ ರದ್ದುಗೊಂಡ ಘಟನೆ ನಡೆದ ವರದಿಯಾಗಿದೆ. ಡಿಸೆಂಬರ್ 15 ರಂದು, ದಿಯೋಘರ್‌ನ ಘೋರ್ಮಾರಾದಿಂದ ವರ ಅರ್ನವ್‌ ಬಿಹಾರದ ಭಾಗಲ್‌ಪುರದ ಅಂಕಿತಾ ಅವರನ್ನು ವಿವಾಹ ಆಗಬೇಕಿತ್ತು. ಆದರೆ, ಅರ್ನವ್‌ ಅವರಿಗೆ ಚಳಿ ತಡೆದುಕೊಳ್ಳಲು ಸಾಧ್ಯವಾಗದ ಕಾರಣ ಅವರಿಗೆ … Continued