ಜಾರ್ಜಿಯಾದಲ್ಲಿ ಭೀಕರ ದುರಂತ; ವಿಷಾನಿಲ ಸೋರಿಕೆಯಿಂದ 12 ಭಾರತೀಯರ ಸಾವು

ಜಾರ್ಜಿಯಾ(Georgia) ದೇಶದ ಗುಡೌರಿಯಲ್ಲಿರುವ ಭಾರತೀಯ ಹೋಟೆಲ್‌ ಒಂದರಲ್ಲಿ ವಿಷಾನಿಲ ಸೋರಿಕೆಯಾಗಿ 12 ಭಾರತೀಯರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಹೋಟೆಲ್‌ನ 2ನೇ ಮಹಡಿಯಲ್ಲಿರುವ ಕೋಣೆಗಳಲ್ಲಿ 12 ಮಂದಿಯ ಮೃತದೇಹ ಪತ್ತೆಯಾಗಿದೆ. ಕಾರ್ಬನ್ ಮೊನೋಕ್ಸೈಡ್ ಅನಿಲದಿಂದಾಗಿ ಈ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಮೃತದೇಹಗಳ ಪರಿಶೀಲನೆ ನಡೆಸಲಾಗಿದ್ದು, ಮೇಲ್ನೋಟಕ್ಕೆ ಯಾವುದೇ ಗಾಯಗಳು ಅಥವಾ ಹಿಂಸಾಚಾರದ ಚಿಹ್ನೆಗಳು ಕಂಡುಬಂದಿಲ್ಲ … Continued

ಇವಿಎಂ ಹೇಗೆ ತಿರುಚಬಹುದು ಎಂಬುದನ್ನು ತೋರಿಸಿ : ಒಮರ್‌ ಅಬ್ದುಲ್ಲಾ ನಂತರ ಕಾಂಗ್ರೆಸ್‌ ನಿಲುವು ಪ್ರಶ್ನಿಸಿದ ಟಿಎಂಸಿ

ನವದೆಹಲಿ: ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ವಿರುದ್ಧ ಕಾಂಗ್ರೆಸ್ ನೇತೃತ್ವದ ಆರೋಪವನ್ನು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಕಸದ ಬುಟ್ಟಿಗೆ ಹಾಕಿರುವ ಬೆನ್ನಲ್ಲೇ ಮತ್ತೊಂದು ಪ್ರಮುಖ ವಿಪಕ್ಷವು ಇವಿಎಂ ಸುತ್ತಲಿನ ಕಾಂಗ್ರೆಸ್‌ ಪ್ರಶ್ನೆಗಳನ್ನು ತಳ್ಳಿಹಾಕಿದೆ. ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ) ತಿರುಚುವ ಬಗ್ಗೆ ಯಾವುದೇ ಪುರಾವೆ ಇದ್ದರೆ ಅದನ್ನು ಚುನಾವಣಾ ಆಯೋಗಕ್ಕೆ ತೋರಿಸಬೇಕು ಎಂದು ತೃಣಮೂಲ ಕಾಂಗ್ರೆಸ್ … Continued

ಮದುವೆ ಸಂಭ್ರಮ ಕೆಲವೇ ಗಂಟೆಗಳಲ್ಲಿ ಮಾಯ : ಮೊದಲ ರಾತ್ರಿಯೇ ಮದುಮಗ ಆಸ್ಪತ್ರೆ ಸೇರಿದ…ಮದುಮಗಳು ಚಿನ್ನಾಭರಣ-ಹಣದೊಂದಿಗೆ ಪರಾರಿ…!

ಮದುವೆಯ ಸಂಭ್ರಮದ ಮೊದಲರಾತ್ರಿಯೇ ಮದುಮಗಳೇ ನವವಿವಾಹಿತನಿಗೆ ವಿಲನ್‌ ಆಗಿದ್ದು,ಪ್ರಜ್ಞಾಹೀನನಾದ ಮದುಮಗ ಆಸ್ಪತ್ರೆಗೆ ದಾಖಲಾಗಿದ್ದಾನೆ…! ಮದುಮಗನಿಗೆ ನೀಡುವ ಹಾಲಿನಲ್ಲಿ ನಿದ್ದೆ ಬರುವ ವಸ್ತು ಹಾಕಿ ಆತನ ಪ್ರಜ್ಞೆ ತಪ್ಪಿಸಿದ ವಧುವು ಲಕ್ಷಾಂತರ ರೂ.ಗಳ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಬೆಳಗಾಗುವಷ್ಟರಲ್ಲಿ ಪರಾರಿಯಾಗಿದ್ದಾಳೆ…!! ಮಧ್ಯಪ್ರದೇಶದ  ಛತ್ತರ್‌ಪುರ ಜಿಲ್ಲೆಯ ನೌಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. … Continued

ವೀಡಿಯೊ…| ಕಾರಿನ ಬಾಗಿಲಿಗೆ ಹೆಬ್ಬೆರಳು ಸಿಕ್ಕಿಬಿದ್ದರೂ ವ್ಯಕ್ತಿಯನ್ನು ರಸ್ತೆಯಲ್ಲಿ ಅರ್ಧ ಕಿಮೀ ಎಳೆದೊಯ್ದ ಚಾಲಕ…!

ವಯನಾಡು: ಎರಡು ಗುಂಪುಗಳ ನಡುವಿನ ಜಗಳ ಬಿಡಿಸಲು ಹೋದ ಆದಿವಾಸಿ ವ್ಯಕ್ತಿಯೊಬ್ಬರನ್ನು ಕಾರಿನಲ್ಲಿ ರಸ್ತೆಯುದ್ದಕ್ಕೂ ಅಮಾನುಷವಾಗಿ ಎಳೆದೊಯ್ದ ಘಟನೆ ವಯನಾಡಿನ ಮಾನಂತವಾಡಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ವ್ಯಕ್ತಿಯನ್ನು ಮಥನ್ ಎಂದು ಗುರುತಿಸಲಾಗಿದ್ದು, ಕಾರಿನ ಬಾಗಿಲಿಗೆ ಕೈ ಸಿಕ್ಕಿಕೊಂಡ ಆತನನ್ನು ಸುಮಾರು ಅರ್ಧ ಕಿಲೋಮೀಟರ್ ಎಳೆದೊಯ್ದಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರು ಆರೋಪಿಗಳನ್ನು ಗುರುತಿಸಿದ್ದು, ಕೃತ್ಯದಲ್ಲಿ … Continued

ವೀಡಿಯೊ : ಶಾಲೆಗೆ ತೆರಳುತ್ತಿದ್ದ ಶಿಕ್ಷಕನ ಅಪಹರಿಸಿ ಗನ್ ತೋರಿಸಿ ಯುವತಿ ಜೊತೆ ಬಲವಂತದ ಮದುವೆ..!

ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರನ್ನು ಅಪಹರಿಸಿ ‘ಪಕಡುವಾ ವಿವಾಹ’ ಎಂಬ ಪದ್ಧತಿಯಂತೆ ಗನ್‌ ತೋರಿಸಿ ಯುವತಿಯೊಬ್ಬಳ ಜೊತೆ ಬಲವಂತವಾಗಿ ಮದುವೆ ಮಾಡಿದ ಘಟನೆ ಬಿಹಾರದ ಬೇಗುಸರಾಯ್ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಗಂಡಸರ ಗುಂಪೊಂದು ತನ್ನನ್ನು ಅಪಹರಿಸಿ ಬಲವಂತವಾಗಿ ಮದುವೆ ಮಾಡಿದ್ದಾರೆ ಎಂದು ಶಿಕ್ಷಕ ಅವ್ನಿಶ್ ಆರೋಪಿಸಿದ್ದಾರೆ. ಆದರೆ ವಧು ಗುಂಜನ್ ಎಂಬವಳು ನಾವಿಬ್ಬರು ನಾಲ್ಕು ವರ್ಷಗಳಿಂದ … Continued

ವೀಡಿಯೊ…| ಕೈಕೋಳ ಹಾಕಿಕೊಂಡು ಹೆಲ್ಮೆಟ್‌ ಇಲ್ಲದೆ ಬೈಕ್‌ ಚಲಾಯಿಸಿದ ಕ್ರಿಮಿನಲ್ ಆರೋಪಿ ; ಹಿಂದಿನ ಸೀಟಿನಲ್ಲಿ ಕಾನ್‌ಸ್ಟೆಬಲ್…!

ಉತ್ತರ ಪ್ರದೇಶದ ಮೈನ್‌ಪುರಿಯ ಬೀದಿಗಳಲ್ಲಿ ಒಬ್ಬ ಕ್ರಿಮಿನಲ್, ಹಗ್ಗದ ಕೈಕೋಳ ಹಾಕಿಕೊಂಡು, ಹಿಂಬದಿಗೆ ಪೊಲೀಸ್ ಪೇದೆ ಕುಳ್ಳಿರಿಸಿಕೊಂಡು ಮೋಟಾರ್‌ಬೈಕ್‌ನಲ್ಲಿ ಹೋಗುತ್ತಿರುವುದು ಕಂಡುಬಂದಿದೆ. ಕಾರಿನಲ್ಲಿ ಹೋಗುವವರೊಬ್ಬರು ಈ ದೃಶ್ಯವನ್ನು ರೆಕಾರ್ಡ್‌ ಮಾಡಿದ್ದಾರೆ. ಚಿಕ್ಕ ವೀಡಿಯೊ ಕ್ಲಿಪ್ ವಾಹನ ನಿಬಿಡ ರಸ್ತೆಯಲ್ಲಿ ಸಂಚರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಸವಾರನ ಕೈ ಮಣಿಕಟ್ಟಿನಿಂದ ಆತನ ಹಿಂದೆ ಕುಳಿತಿರುವ ಕಾನ್‌ಸ್ಟೆಬಲ್‌ನ ಕೈ ವರೆಗೆ ಹಗ್ಗ … Continued

ಸಿಗದ ಸಚಿವ ಸ್ಥಾನ ; ಪಕ್ಷದ ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ ಶಿವಸೇನೆ ಶಾಸಕ

ಮುಂಬೈ: ಮಹಾರಾಷ್ಟ್ರದ ಮಹಾಯುತಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ವೇಳೆ ಸಚಿವ ಸ್ಥಾನ ಸಿಗದ ಕಾರಣಕ್ಕೆ ಶಿವಸೇನೆಯ ಏಕನಾಥ ಶಿಂಧೆ ಬಣದ ಶಾಸಕರೊಬ್ಬರು ಪಕ್ಷದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನರೇಂದ್ರ ಭೋಂಡೇಕರ್ ಅವರು ಶಿವಸೇನೆಯ ಉಪನಾಯಕ ಮತ್ತು ವಿದರ್ಭದ ಪಕ್ಷದ ಸಂಯೋಜಕರಾಗಿದ್ದರು, ಅಲ್ಲಿ ಬಿಜೆಪಿ ನೇತೃತ್ವದ ಆಡಳಿತಾರೂಢ ಮೈತ್ರಿಕೂಟದ ಮಹಾಯುತಿ 62 ಸ್ಥಾನಗಳಲ್ಲಿ 47 ಸ್ಥಾನಗಳನ್ನು … Continued

“ಒಂದೊಮ್ಮೆ ಪ್ರಣವ್ ಮುಖರ್ಜಿ ಪ್ರಧಾನಿಯಾಗಿದ್ದರೆ…”: ಕಾಂಗ್ರೆಸ್ 2014ರ ಹೀನಾಯ ಸೋಲಿನ ಬಗ್ಗೆ ಹಿರಿಯ ನಾಯಕ ಮಣಿಶಂಕರ ಅಯ್ಯರ್

ನವದೆಹಲಿ : ಯುಪಿಎ-2 ಸರ್ಕಾರದ ಅವಧಿಯಲ್ಲಿ ಪ್ರಣಬ್‌ ಮುಖರ್ಜಿ ಅವರನ್ನು ಪ್ರಧಾನಿ ಮತ್ತು ಡಾ. ಮನಮೋಹನ್‌ ಸಿಂಗ್‌ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡಿದ್ದರೆ, 2014ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶವೇ ಬೇರೆಯಾಗುತ್ತಿತ್ತು ಮತ್ತು ಕಾಂಗ್ರೆಸ್‌ ಅಷ್ಟು ಹೀನಾಯ ಸೋಲನ್ನು ಅನುಭವಿಸುತ್ತಿರಲಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ ಅಯ್ಯರ್ ಹೇಳಿದ್ದಾರೆ. ಮಾಜಿ ಕೇಂದ್ರ ಸಚಿವರಾದ ಮಣಿಶಂಕರ ಅಯ್ಯರ್ ಅವರು, … Continued

ವೀಡಿಯೊ..| ಪರೀಕ್ಷಾ ಕೇಂದ್ರದಲ್ಲಿ ಗದ್ದಲ ; ಪರೀಕ್ಷೆ ಬರೆಯುತ್ತಿದ್ದವರಿಂದ ಪ್ರಶ್ನೆ ಪತ್ರಿಕೆಗಳನ್ನು ಕಸಿದುಕೊಂಡು ಹರಿದು ಹಾಕಿದ ಗುಂಪು..!!

ಶುಕ್ರವಾರ ಪಾಟ್ನಾದಲ್ಲಿರುವ ಬಿಹಾರ ಸಾರ್ವಜನಿಕ ಸೇವಾ ಆಯೋಗದ (ಬಿಪಿಎಸ್‌ಸಿ) ಪರೀಕ್ಷಾ ಹಾಲ್‌ಗೆ ಕೆಲವು ಆಕಾಂಕ್ಷಿಗಳು ಸೇರಿದಂತೆ ದೊಡ್ಡ ಗುಂಪು ನುಗ್ಗಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ಮತ್ತು ಹಾಜರಿದ್ದ ಇನ್ವಿಜಿಲೇಟರ್‌ಗಳ ಬಳಿಯಿದ್ದ ಪೇಪರ್‌ಗಳನ್ನು ಕಸಿದುಕೊಂಡ ಹಾಗೂ ಪ್ರಶ್ನೆ ಪತ್ರಿಕೆಗಳನ್ನು ಹರಿದು ಹಾಕಿದ ಘಟನೆಯ ವೀಡಿಯೊ ಹೊರಹೊಮ್ಮಿವೆ. ಬಿಹಾರ ಸಾರ್ವಜನಿಕ ಸೇವಾ ಆಯೋಗದ (BPSC) ಪ್ರಶ್ನೆ ಪತ್ರಿಕೆಗಳು ಮತ್ತು … Continued

ಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ ಇನ್ನಿಲ್ಲ

ನವದೆಹಲಿ : ಖ್ಯಾತ ತಬಲಾ ವಾದಕ ಜಾಕೀರ್ ಹುಸೇನ್ (73) ಅವರು ಡಿಸೆಂಬರ್ 15 ರಂದು (ಭಾನುವಾರ) ಅಮೆರಿಕದಲ್ಲಿ ನಿಧನರಾಗಿದ್ದಾರೆ. ತಹೃದಯ ಸಂಬಂಧಿ ಸಮಸ್ಯೆಗಳಿಂದ ಸ್ಯಾನ್ ಫ್ರಾನ್ಸಿಸ್ಕೋ ಮೂಲದ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾದ ನಂತರ ಅವರು ನಿಧನರಾದರು. ಜಾಕೀರ್‌ ಹುಸೇನ್ ಅವರ ಮ್ಯಾನೇಜರ್ ಪ್ರಕಾರ, ಅವರು ರಕ್ತದೊತ್ತಡದ ಸಮಸ್ಯೆಗಳಿಂದ ಬಳಲುತ್ತಿದ್ದರು. ತಬಲಾವನ್ನು … Continued