ಮಹಾರಾಷ್ಟ್ರ ಸಂಪುಟ ವಿಸ್ತರಣೆ: ಬಿಜೆಪಿಯ 19, ಶಿವಸೇನೆಯ 11, ಎನ್‌ಸಿಪಿಯ 9 ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಮುಂಬೈ : ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರದ ಸಂಪುಟ ವಿಸ್ತರಣೆ ಭಾನುವಾರ ನಡೆದಿದ್ದು, ಬಿಜೆಪಿ, ಶಿವಸೇನೆ (ಶಿಂಧೆ ಬಣ) ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಅಜಿತ್ ಪವಾರ್) 39 ಸಚಿವರು ಭಾನುವಾರ ನಾಗ್ಪುರದ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಹಾರಾಷ್ಟ್ರ ಸಂಪುಟದಲ್ಲಿ ಬಿಜೆಪಿಯ 19, ಶಿಂಧೆ ಸೇನೆಯ 11 ಮತ್ತು ಅಜಿತ್ ಪವಾರ್ ಅವರ ಎನ್‌ಸಿಪಿಯ … Continued

ಹೆಸರಾಂತ ತಬಲಾ ವಾದಕ ಜಾಕಿರ್ ಹುಸೇನ್ ಆಸ್ಪತ್ರೆಗೆ ದಾಖಲು; ಐಸಿಯುವಿನಲ್ಲಿ ಚಿಕಿತ್ಸೆ

ನವದೆಹಲಿ: ಹೆಸರಾಂತ ತಬಲಾ ವಾದಕ ಜಾಕಿರ್ ಹುಸೇನ್ ಅವರು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಅವರ ಕುಟುಂಬದ ಪ್ರಕಾರ, ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಹೃದಯ ಸಂಬಂಧಿ ತೊಂದರೆಗಳು ಎಉದರಾದ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿದೆ ಎಂದು ವರದಿಯಾಗಿದೆ. ಖ್ಯಾತ ಕೊಳಲು ವಾದಕ … Continued

ವೀಡಿಯೊ…| ಬರೋಬ್ಬರಿ 46 ವರ್ಷಗಳ ನಂತರ 500 ವರ್ಷಗಳ ಪುರಾತನ ದೇಗುಲ ಓಪನ್‌…!

ಲಕ್ನೋ: ಮಹತ್ವದ ಬೆಳವಣಿಗೆಯೊಂದರಲ್ಲಿ, ಉತ್ತರ ಪ್ರದೇಶದ ಸಂಭಾಲ್‌ನ ಖಗ್ಗು ಸರೈ ಪ್ರದೇಶದಲ್ಲಿ 46 ವರ್ಷಗಳ ನಂತರ ಶಿವ ದೇವಾಲಯವನ್ನು ಶನಿವಾರ ಪುನಃ ತೆರೆಯಲಾಗಿದೆ. ದಶಕಗಳಷ್ಟು ಹಳೆಯದಾದ ದೇವಾಲಯವು ಪ್ರಸ್ತುತ ಶಿಥಿಲಗೊಂಡಿದೆ. ಇದು ಅತಿಕ್ರಮಣಕ್ಕೆ ಒಳಗಾಗಿದ್ದು, 1978 ರಿಂದ ಮುಚ್ಚಲಾಗಿದೆ. ಪೊಲೀಸರೊಂದಿಗೆ ನಗರಾಡಳಿತವು ಅತಿಕ್ರಮಣ ವಿರೋಧಿ ಮತ್ತು ವಿದ್ಯುತ್ ಕಳ್ಳತನದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವಾಗ ದೇವಾಲಯ ಕಂಡುಬಂದಿದೆ. … Continued

ವೆಂಕಟದತ್ತ ಸಾಯಿ ಜೊತೆ ಖ್ಯಾತ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಮದುವೆ ನಿಶ್ಚಿತಾರ್ಥ

ಡಬಲ್ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧು ಅವರು ಪೋಸಿಡೆಕ್ಸ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಹೈದರಾಬಾದ್ ಮೂಲದ ವೆಂಕಟ ದತ್ತ ಸಾಯಿ ಅವರೊಂದಿಗೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶನಿವಾರ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ನಿಶ್ಚಿತಾರ್ಥ ಸಮಾರಂಭದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ, ಸಿಂಧು ಮತ್ತು ವೆಂಕಟ ತಮ್ಮ ಕೈಯಲ್ಲಿ ನಿಶ್ಚಿತಾರ್ಥದ ಉಂಗುರ ಧರಿಸಿ ಒಟ್ಟಿಗೆ ನಗುತ್ತಿರುವುದನ್ನು … Continued

ಕಂಪ್ಯೂಟರ್ ಆಪರೇಟರ್ ಕೆಲಸದಿಂದ ತಪ್ಪಿಸಿಕೊಳ್ಳಲು ತನ್ನ ಬೆರಳುಗಳನ್ನು ತಾನೇ ಕತ್ತರಿಸಿಕೊಂಡ ವ್ಯಕ್ತಿ…!

ಸೂರತ್ : ತನ್ನ ಸಂಬಂಧಿಕರ ವಜ್ರ ಸಂಸ್ಥೆಯಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುವುದಕ್ಕೆ ಅನರ್ಹಗೊಳ್ಳಳು ವ್ಯಕ್ತಿಯೊಬ್ಬ ತನ್ನ ಎಡಗೈಯ ನಾಲ್ಕು ಬೆರಳುಗಳನ್ನು ಹರಿತವಾದ ಚಾಕುವಿನಿಂದ ಕತ್ತರಿಸಿಕೊಂಡಿರುವ ವಿಲಕ್ಷಣ ಘಟನೆ ಗುಜರಾತಿನ ಸೂರತ್ ನಗರದಲ್ಲಿ ಶನಿವಾರ ನಡೆದಿದೆ ಎಂದು ವರದಿಯಾಗಿದೆ. ಮಯೂರ ತಾರಾಪರಾ (32) ಈ ಹಿಂದೆ ರಸ್ತೆಯ ಪಕ್ಕದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದ ನಂತರ … Continued

75 ಬಾರಿ ಸಂವಿಧಾನ ಬದಲಾಯಿಸಿರುವ ಕಾಂಗ್ರೆಸ್…ಅದಕ್ಕೆ ತುರ್ತು ಪರಿಸ್ಥಿತಿ ಕಳಂಕ ಅಳಿಸಿಹಾಕಲು ಸಾಧ್ಯವಿಲ್ಲ ; ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂವಿಧಾನ ರಚನೆಕಾರರು ಭಾರತದ ವಿವಿಧತೆಯಲ್ಲಿ ಏಕತೆಯ ಬಲವನ್ನು ಆಚರಿಸಿದರೆ, ಕೆಲವರು ವಿಭಿನ್ನ ಮಾರ್ಗವನ್ನು ಆರಿಸಿಕೊಂಡರು ಎಂದು ಹೇಳಿದ್ದಾರೆ. “ಸಂವಿಧಾನವನ್ನು ಅಳವಡಿಸಿಕೊಳ್ಳುವ ಬದಲು, ಅವರು (ಕಾಂಗ್ರೆಸ್) ಅಪಶ್ರುತಿ ಮತ್ತು ನಕಾರಾತ್ಮಕತೆಯ ಬೀಜಗಳನ್ನು ಬಿತ್ತಿದ್ದಾರೆ” ಎಂದು ಸಂವಿಧಾನದ ಚರ್ಚೆಗೆ ಉತ್ತರಿಸಿದ ಪ್ರಧಾನಿ ಲೋಕಸಭೆಯಲ್ಲಿ … Continued

ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಆಸ್ಪತ್ರೆಗೆ ದಾಖಲು

ನವದೆಹಲಿ: ಬಿಜೆಪಿ ಹಿರಿಯ ನಾಯಕ ಎಲ್‌.ಕೆ. ಅಡ್ವಾಣಿ ಅವರನ್ನು ನವದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ಪ್ರಸ್ತುತ ಅವರ ಸ್ಥಿತಿ ಸ್ಥಿರವಾಗಿದೆ, ಆದರೆ ಅವರು ನಿಗಾದಲ್ಲಿದ್ದಾರೆ. ವರದಿ ಪ್ರಕಾರ, 96 ವರ್ಷ ವಯಸ್ಸಿನ ಅಡ್ವಾಣಿ ಅವರನ್ನು ಆಸ್ಪತ್ರೆಯ ನರವಿಜ್ಞಾನ ವಿಭಾಗದಲ್ಲಿ ಹಿರಿಯ ಮಟ್ಟದ ಸಲಹೆಗಾರರಾಗಿರುವ ಡಾ ವಿನೀತ ಸೂರಿ ಅವರ ಆರೈಕೆ ಮತ್ತು … Continued

ರೈತರಿಗೆ ಅಡಮಾನ ರಹಿತ ಕೃಷಿ ಸಾಲದ ಮೊತ್ತ ₹2ಲಕ್ಷಕ್ಕೆ ಹೆಚ್ಚಿಸಿದ ಆರ್‌ಬಿಐ ; ಜ.1ರಿಂದಲೇ ಜಾರಿ

ನವದೆಹಲಿ : ರೈತರಿಗೆ ಅಡಮಾನ ರಹಿತವಾಗಿ ನೀಡಲಾಗುವ ಕೃಷಿ ಸಾಲದ ಮೊತ್ತವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ 2 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ. ಇದು ಮುಂಬರುವ ಜನವರಿಂದಲೇ 1ರಿಂದಲೇ ಜಾರಿಗೆ ಬರಲಿದೆ. ಈ ಮೊದಲು ಅಡಮಾನವಿಲ್ಲದೇ 1.6 ಲಕ್ಷವರೆಗೆ ಸಾಲ ನೀಡಲಾಗುತ್ತಿತ್ತು. ರಿಸರ್ವ್ ಬ್ಯಾಂಕ್‌ ಹೊಸ ನಿರ್ದೇಶನದ ಮೂಲಕ, ರಾಷ್ಟ್ರವ್ಯಾಪಿ ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತರು ಪಡೆಯುವ … Continued

ವೀಡಿಯೊ..| ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬಂದ ಅಲ್ಲು ಅರ್ಜುನಗೆ ಕುಟುಂಬಸ್ಥರಿಂದ ಭಾವುಕ ಸ್ವಾಗತ

ಹೈದರಾಬಾದ್‌ : ಜೈಲಿನಲ್ಲಿ ಒಂದು ರಾತ್ರಿ ಕಳೆದ ನಂತರ ಶನಿವಾರ ಬೆಳಿಗ್ಗೆ ಬಿಡುಗಡೆಯಾಗಿ ಹೈದರಾಬಾದಿನ ತಮ್ಮ ನಿವಾಸಕ್ಕೆ ಆಗಮಿಸಿದಾಗ ಅವರ ಕುಟುಂಬಸ್ಥರು ಭಾವುಕರಾಗಿ ಅವರನ್ನು ಸ್ವಾಗತಿಸಿದ್ದಾರೆ. ಬಿಡುಗಡೆಯಾದ ನಂತರ ನೇರವಾಗಿ ತಂದೆಯ ಕಚೇರಿಯಾದ ಗೀತಾ ಆರ್ಟ್ಸ್‌ಗೆ ತೆರಳಿದರು. ಹಲವಾರು ವೀಡಿಯೊಗಳು ನಟ ಮನೆಗೆ ಆಗಮಿಸಿದ ನಂತರ ಅವರ ಪತ್ನಿ ಸ್ನೇಹಾ ರೆಡ್ಡಿ ಮತ್ತು ಮಗ ಹಾಗೂ … Continued

ವೀಡಿಯೊ..| ತರಗತಿಯಲ್ಲಿ ಪಾಠ ಕೇಳುತ್ತಿದ್ದಾಗಲೇ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು ; ಶಾಕಿಂಗ್‌ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದುರಂತ ಘಟನೆಯೊಂದರಲ್ಲಿ, ತಮಿಳುನಾಡಿನ ರಾಣಿಪೇಟ್‌ನಲ್ಲಿ 9 ನೇ ತರಗತಿಯ ವಿದ್ಯಾರ್ಥಿ ತರಗತಿಯ ಸಮಯದಲ್ಲಿ ಪಾಠ ಕೇಳುತ್ತಿರುವಾಗ ಕುಳಿತಲ್ಲೇ ಕುಸಿದು ಸಾವಿಗೀಡಾಗಿದ್ದಾರೆ. ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಡಿಸೆಂಬರ್ 10ರಂದು ಬೆಳಿಗ್ಗೆ 11:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 14 ವರ್ಷದ ಮೃತ ವಿದ್ಯಾರ್ಥಿನಿ ಅದ್ವಿತಾ … Continued