ಇನ್‌ಸ್ಟಂಟ್ ಲೋನ್ ಆ್ಯಪ್‌ನಿಂದ ₹ 2,000 ಸಾಲ ಪಡೆದ ನಂತರ ನಿರಂತರ ಕಿರುಕುಳ ; 47 ದಿನಗಳ ಹಿಂದೆ ವಿವಾಹವಾದ ಯುವಕ ಆತ್ಮಹತ್ಯೆ…!

ಹೈದರಾಬಾದ್ : ಇನ್‌ಸ್ಟಂಟ್ (ತ್ವರಿತ) ಲೋನ್ ಆ್ಯಪ್‌ನಿಂದ ಕೇವಲ ₹ 2,000 ಸಾಲ ತೆಗೆದುಕೊಂಡ ನಂತರ ನಿರಂತರವಾಗಿ ಕಿರುಕುಳ ಎದುರಿಸುತ್ತಿದ್ದ 27 ವರ್ಷದ ಯುವಕ ವಿವಾಹವಾದ 47 ದಿನಗಳ ನಂತರ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ. ಜೀವನೋಪಾಯಕ್ಕಾಗಿ ಮೀನು ಹಿಡಿಯುತ್ತಿದ್ದ ನರೇಂದ್ರ ಎಂಬವರು ಪ್ರತಿಕೂಲ ಹವಾಮಾನದ ಕಾರಣದಿಂದ ಕೆಲವು ತಿಂಗಳ ಹಿಂದೆ ಮೀನುಗಾರಿಕೆಗೆ … Continued

ವೀಡಿಯೊ..| ಹೆದ್ದಾರಿ ಬದಿ ಇದ್ದ ಹೊಟೇಲ್‌ ಒಳಗೆ ನುಗ್ಗಿದ ಕಾರು ; ಮೂವರಿಗೆ ಗಾಯ

ಅಹಮದಾಬಾದ್ : ಕಾರೊಂದು ರಸ್ತೆ ಬದಿಯ ರೆಸ್ಟೋರೆಂಟಿಗೆ ನುಗ್ಗಿದ ಘಟನೆ ಗುಜರಾತ್‌ ಛೋಟಾ ಉದಯಪುರ (Chhota Udaipur) ಜಿಲ್ಲೆಯಿಂದ ವರದಿಯಾಗಿದ್ದು, ಸಿಸಿ ಕೆಮರಾದಲ್ಲಿ ದಾಖಲಾಗಿದ್ದ ಈ ಅಪಘಾತದ ವೀಡಿಯೊದಲ್ಲಿ ಸೆರೆಯಾಗಿದೆ. ರೆಸ್ಟೊರೆಂಟ್ ಒಂದರಲ್ಲಿ ಗ್ರಾಹಕರು ಆಹಾರ ಸೇವಿಸುತ್ತ ಕುಳಿತಿದ್ದಾಗ ಕಾರೊಂದು ಸೀದಾ ರೆಸ್ಟೊರೆಂಟ್ ಒಳಗೇ ನುಗ್ಗಿದೆ. ಕ್ಷಣಮಾತ್ರದಲ್ಲಿ ಆ ಹೊಟೇಲನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ. ಡಿ.10ರ ಬೆಳ್ಳಂಬೆಳಗ್ಗೆ … Continued

ರಾಜ್ಯಸಭೆ ಚೇರ್ಮನ್‌ ಜಗದೀಪ್ ಧನಕರ ವಿರುದ್ಧ ವಿಪಕ್ಷಗಳಿಂದ ಅವಿಶ್ವಾಸ ಮಂಡನೆ

ನವದೆಹಲಿ: ಸದನದಲ್ಲಿ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಇಂಡಿಯಾ ಮೈತ್ರಿಕೂಟವು ರಾಜ್ಯಸಭಾ ಚೇರ್ಮನ್‌ ಜಗದೀಪ ಧನಕರ ವಿರುದ್ಧ ಮಂಗಳವಾರ ಬೆಳಿಗ್ಗೆ ಅವಿಶ್ವಾಸ ನಿರ್ಣಯ ಮಂಡಿಸಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್‌, ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ, ಡಿಎಂಕೆ ಮತ್ತು ರಾಷ್ಟ್ರೀಯ ಜನತಾ ದಳದ 50ಕ್ಕೂ ಹೆಚ್ಚು ಸಂಸದರ ಸಹಿಯೊಂದಿಗೆ ನೋಟಿಸ್ ಅನ್ನು … Continued

ವೀಡಿಯೊ..| ಬೃಹತ್ ಗಾತ್ರದ ಹೆಬ್ಬಾವಿನ ಜೊತೆ ಹಾಸಿಗೆಯ ಮೇಲೆ ಮಲಗಿ ಆರಾಮವಾಗಿ ಪುಸ್ತಕ ಓದುವ ವ್ಯಕ್ತಿ…!

ಹಾವುಗಳನ್ನು ಸಾಮಾನ್ಯವಾಗಿ ಭಯ ಮತ್ತು ಆಕರ್ಷಣೆಯ ಮಿಶ್ರಣ ಎಂದು ಪರಿಗಣಿಸಲಾಗುತ್ತದೆ. ಆದರೂ, ಕೆಲವು ವ್ಯಕ್ತಿಗಳು ಸಾಮಾಜಿಕ ರೂಢಿಗಳನ್ನು ಧಿಕ್ಕರಿಸುತ್ತಾರೆ, ಆಗಾಗ್ಗೆ ತಪ್ಪಾಗಿ ಅರ್ಥೈಸಿಕೊಳ್ಳುವ ಈ ಪ್ರಾಣಿಗಳೊಂದಿಗೆ ಅಸಾಧಾರಣ ಬಾಂಧವ್ಯವನ್ನು ಬೆಸೆಯುತ್ತಾರೆ, ಇದು ಅವುಗಳ ಬಗ್ಗೆ ನಮ್ಮ ಗ್ರಹಿಕೆಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇತ್ತೀಚೆಗಷ್ಟೇ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡ ವೀಡಿಯೊವೊದು ಸಾಮಾಜಿಕ ಜಾಲತಾಣ ಬಳಕೆದಾರರನ್ನು ಬೆಚ್ಚಿ ಬೀಳಿಸಿದೆ. ಕ್ಲಿಪ್‌ನಲ್ಲಿ ಮೈಕ್ … Continued

ವೀಡಿಯೊ | ರೆಸ್ಟೋರೆಂಟ್‌ನಲ್ಲಿ ಭಾರೀ ಬೆಂಕಿ ಅವಘಡ ; ಜೀವ ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದ ಜನರು

ನವದೆಹಲಿ: ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್‌ನಲ್ಲಿರುವ ರೆಸ್ಟೋರೆಂಟ್‌ನಲ್ಲಿ ಸೋಮವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಹಲವಾರು ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಕಟ್ಟಡದಿಂದ ಜಿಗಿದಿದ್ದಾರೆ ಎಂದು ವರದಿಯಾಗಿದೆ. ರಾಜೌರಿ ಗಾರ್ಡನ್‌ನಲ್ಲಿರುವ ಜಂಗಲ್ ಜಾಂಬೋರಿ ರೆಸ್ಟೋರೆಂಟ್‌ನಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿದ್ದು, ನಂತರ ಭಯಭೀತರಾದ ಜನರು ಹತ್ತಿರದ ಕಟ್ಟಡದ ಛಾವಣಿಗೆ ಹಾರಿ ಬಚಾವ್‌ ಆಗಿದ್ದಾರೆ. ಗಾಯವಾದ ವ್ಯಕ್ತಿಯೊಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ … Continued

ಆರ್‌ ಬಿಐ (RBI) ನೂತನ ಗವರ್ನರ್‌ ಆಗಿ ಸಂಜಯ ಮಲ್ಹೋತ್ರಾ ನೇಮಕ

ನವದೆಹಲಿ : ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI)ದ ನೂತನ ಗವರ್ನರ್‌ ಆಗಿ ಕಂದಾಯ ಕಾರ್ಯದರ್ಶಿ ಸಂಜಯ ಮಲ್ಹೋತ್ರಾ (Sanjay Malhotra) ಅವರು ಸೋಮವಾರ ನೇಮಕವಾಗಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಗೆ ಅವರು ಆರ್‌ಬಿಐ ಗವರ್ನರ್‌ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಡಿಸೆಂಬರ್‌ 11ರಂದು ಅವರು ಬುಧವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಾಲಿ ಗವರ್ನರ್‌ ಶಕ್ತಿಕಾಂತ ದಾಸ್‌ ಅವರ ಅಧಿಕಾರಾವಧಿ … Continued

ದೆಹಲಿಯ 40ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್‌ ಬೆದರಿಕೆ ;$30,000 ಹಣಕ್ಕೆ ಬೇಡಿಕೆ

ನವದೆಹಲಿ : ಇಮೇಲ್‌ ಮೂಲಕ ದೆಹಲಿಯ ಸುಮಾರು 40 ಶಾಲೆಗಳಿಗೆ ಸೋಮವಾರ (ಡಿ. 9)ರ ಬೆಳಗ್ಗೆ ಬಾಂಬ್‌ ಬೆದರಿಕೆ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿದ್ದು, ತನಿಖೆ ನಡೆಯುತ್ತಿದೆ. ʼʼಪಶ್ಚಿಮ ವಿಹಾರದ ಜಿಕೆ ಗೋಯೆಂಕಾ ಮತ್ತು ಡಿಪಿಎಸ್‌ ಆರ್‌ಕೆ ಪುರಂ ಶಾಲೆ ಸೇರಿದಂತೆ 40 ಶಾಲೆಗಳಿಗೆ ಇಮೇಲ್‌ ಮೂಲಕ ಬಾಂಬ್‌ ಬೆದರಿಕೆ ಸಂದೇಶ … Continued

ಸುಳ್ಳು ಭರವಸೆ, ವಂಚನೆ ಮಾಡುವ ಚೀನಾ ಕಾಲ್‌ ಸೆಂಟರ್‌ಗಳ ಕೆಲಸಕ್ಕೆ ಬಲವಂತವಾಗಿ ದೂಡುತ್ತಿದ್ದ ವಂಚಕನನ್ನು 2500 ಕಿಮೀ ಬೆನ್ನಟ್ಟಿ ಹಿಡಿದ ಪೊಲೀಸರು…!

ನವದೆಹಲಿ : ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ನಕಲಿ ಕಾಲ್‌ ಸೆಂಟರ್‌ಗಳ ಮೂಲಕ ಸೈಬರ್‌ ಅಪರಾಧ ಎಸಗಲು ಭಾರತದ ಯುವಕರನ್ನು ಬಲವಂತಪಡಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಶನಿವಾರ ಹೈದರಾಬಾದ್‌ನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ. ದೆಹಲಿ ಪೊಲೀಸರು ಇದಕ್ಕಾಗಿ 2,500 ಕಿ.ಮೀ. ದೂರದ ವರೆಗೆ ಆತನನ್ನು ಬೆನ್ನು ಹಿಡಿದುಬಂದು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ ಎಂದು ಹೇಳಲಾಗಿದೆ. ಬಂಧಿತ ಕಮ್ರಾನ್ ಹೈದರ್ ಅಲಿಯಾಸ್ … Continued

ದುಷ್ಕರ್ಮಿಗಳ ದಾಳಿಗೆ ಹೊಟ್ಟೆಗೆ ಗುಂಡೇಟು ಬಿದ್ದರೂ ಹಲವಾರು ಕಿಲೋ ಮೀಟರ್‌ ಜೀಪ್‌ ಓಡಿಸಿ 15 ಪ್ರಯಾಣಿಕರ ಜೀವ ಕಾಪಾಡಿದ ಚಾಲಕ..!

ಬಿಹಾರದ ಭೋಜಪುರ ಜಿಲ್ಲೆಯ ಜೀಪ್ ಚಾಲಕನೊಬ್ಬ ಅಸಾಧಾರಣ ಶೌರ್ಯ ಮತ್ತು ಸಾಹಸ ಪ್ರದರ್ಶನದಲ್ಲಿ, ಹೊಟ್ಟೆಗೆ ಗುಂಡೇಟು ತಗುಲಿದ ನಂತರವೂ ಹಲವಾರು ಕಿಲೋಮೀಟರ್‌ಗಳಷ್ಟು ಜೀಪ್‌ ಓಡಿಸುವ ಮೂಲಕ 14-15 ಪ್ರಯಾಣಿಕರ ಜೀವಗಳನ್ನು ಉಳಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಗಂಭೀರ ಗಾಯದ ನಡುವೆಯೂ ಅವರ ಅಚಲ ಧೈರ್ಯಕ್ಕೆ ಎಲ್ಲರೂ ಬೆರಗಾಗಿದ್ದಾರೆ. ರಾತ್ರಿಯ ವೇಳೆ ಈ ಭಯಾನಕ ಘಟನೆ … Continued

ವೀಡಿಯೊ..| ಫಿಕ್ಸಡ್‌ ಡಿಪಾಸಿಟ್‌ ಮೇಲೆ ತೆರಿಗೆ ಕಡಿತ ಮಾಡಿದ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಜೊತೆ ಹೊಡೆದಾಡಿದ ಗ್ರಾಹಕ…!

ಅಹಮದಾಬಾದ್‌ನ ಯೂನಿಯನ್ ಬ್ಯಾಂಕ್‌ನಲ್ಲಿ ಬ್ಯಾಂಕ್ ಮ್ಯಾನೇಜರ್ ಮತ್ತು ಗ್ರಾಹಕರ ನಡುವಿನ ಹೊಡೆದಾಟದ ವೀಡಿಯೊ ವೈರಲ್ ಆಗಿದೆ. ಫಿಕ್ಸಡ್‌ ಠೇವಣಿಯ ಮೇಲೆ ತೆರಿಗೆ ಕಡಿತ ಮಾಡಿದ್ದು ಹೆಚ್ಚಾಗಿದೆ ಎಂದು ಗ್ರಾಹಕ ಜೈಮನ್ ರಾವಲ್ ಅಸಮಾಧಾನಗೊಂಡಿದ್ದರು. ಇದು. ಗ್ರಾಹಕ ಮತ್ತು ಬ್ಯಾಂಕ್ ಮ್ಯಾನೇಜರ್ ನಡುವಿನ ವಾಗ್ವಾದಕ್ಕೆ ಕಾರಣವಾಗಿ ಅದು ವಿಕೋಪಕ್ಕೆ ಹೋಗಿ ಹೊಡೆದಾಟಕ್ಕೆ ಕಾರಣವಾಯಿತು ಎಂದು ವರದಿಯಾಗಿದೆ. 43 … Continued