ವೀಡಿಯೊ…| ತಮಗೆ ತಾವೇ ಆರು ಬಾರಿ ಚಾವಟಿಯಿಂದ ಹೊಡೆದುಕೊಂಡ ಬಿಜೆಪಿ ತಮಿಳುನಾಡು ಮುಖ್ಯಸ್ಥ ಅಣ್ಣಾಮಲೈ…!

ಚೆನ್ನೈ: ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಶುಕ್ರವಾರ ಬೆಳಗ್ಗೆ ತಮಗೆ ತಾವೇ ಬಾರುಕೋಲಿನಿಂದ ಹೊಡೆದುಕೊಂಡಿದ್ದಾರೆ. ವೀಡಿಯೊದಲ್ಲಿ, ಅಣ್ಣಾಮಲೈ ಅವರು ಹಸಿರು ಲುಂಗಿಯಲ್ಲಿ ಶರ್ಟ್ ಇಲ್ಲದೆ, ಕೈಯಲ್ಲಿ ದೊಡ್ಡ ಚಾವಟಿಯೊಂದಿಗೆ ನಿಂತಿದ್ದಾರೆ. ಅವರು ಆರು ಬಾರಿ ತಮ್ಮನ್ನು ತಾವೇ ಚಾವಟಿಯಿಂದ ಹೊಡೆದುಕೊಂಡಿದ್ದಾರೆ. ಏಳನೇ ಬಾರಿಗೆ ಚಾವಟಿಯಿಂದ ಹೊಡೆದುಕೊಳ್ಳುವಾಗ ಅವರ ಬೆಂಬಲಿಗನೊಬ್ಬ ಓಡಿಹೋಗಿ ನಿಲ್ಲಿಸಿದ್ದಾನೆ. 2026 ರ … Continued

ನಾಳೆ ಸರ್ಕಾರಿ ಗೌರವದೊಂದಿಗೆ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅಂತ್ಯಕ್ರಿಯೆ ; ಕಾಂಗ್ರೆಸ್‌

ನವದೆಹಲಿ: ಆಧುನಿಕ ಭಾರತದ ಆರ್ಥಿಕ ಸುಧಾರಣೆಯ ಹರಿಕಾರ ಹಾಗೂ ಆರ್ಥಿಕ ತಜ್ಞ ಮಾಜಿ ಪ್ರಧಾನಿ ಮನಮೋಹನ ಸಿಂಗ್ (92) ಅವರು ಗುರುವಾರ ರಾತ್ರಿ 9:51ಕ್ಕೆ ನಿಧನರಾಗಿದ್ದು, ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಶನಿವಾರ (ಡಿಸೆಂಬರ್‌ ೨೮) ನಡೆಯಲಿದೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ಪ್ರಧಾನ ಕಾರ್ಯಕರ್ಶಿ ಕೆ.ಸಿ.ವೇಣುಗೋಪಾಲ ಅವರು ಮಾತನಾಡಿ, ಮಾಜಿ ಪ್ರಧಾನಿ ಡಾ. ಮನಮೋಹನ್ … Continued

ಮನಮೋಹನ ಸಿಂಗ್ ರನ್ನು ರಾಜಕೀಯಕ್ಕೆ ಕರೆತಂದ ತಡರಾತ್ರಿಯ ಆ ಫೋನ್‌ ಕರೆ….

ನವದೆಹಲಿ: ಗುರುವಾರ ರಾತ್ರಿ ನಿಧನರಾದ ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ಅವರು 1970 ಮತ್ತು 1980 ರ ದಶಕದುದ್ದಕ್ಕೂ, ಸರ್ಕಾರದೊಳಗೆ ಅನೇಕ ಪ್ರಮುಖ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಅವರು ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರಾಗಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಮತ್ತು ಯೋಜನಾ ಆಯೋಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಆದರೂ, ಇದು 1991 ರಲ್ಲಿ … Continued

ಮನಮೋಹನ ಸಿಂಗ್ ನಿಧನ; 7 ದಿನಗಳ ರಾಷ್ಟ್ರೀಯ ಶೋಕಾಚರಣೆ

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಗೌರವಾರ್ಥ ಕೇಂದ್ರ ಸರ್ಕಾರ ಗುರುವಾರ ಏಳು ದಿನಗಳ ಶೋಕಾಚರಣೆಯನ್ನು ಘೋಷಿಸಿದೆ. ಎರಡು ಅವಧಿಗೆ (2004 ರಿಂದ 2014 ರವರೆಗೆ) ಪ್ರಧಾನಿಯಾಗಿದ್ದ ಮನಮೋಹನ ಸಿಂಗ್‌ ಗುರುವಾರ ರಾತ್ರಿ ದೆಹಲಿಯ ಏಮ್ಸ್ ನಲ್ಲಿ ಕೊನೆಯುಸಿರೆಳೆದರು. ಸಿಂಗ್ ಅವರ ಅಂತ್ಯಕ್ರಿಯೆಯನ್ನು ಸಂಪೂರ್ಣ ಸರ್ಕಾರಿ ಗೌರವಗಳೊಂದಿಗೆ ನಡೆಸಲಾಗುತ್ತದೆ. ಸರ್ಕಾರದ ಮೂಲಗಳ ಪ್ರಕಾರ, ಶುಕ್ರವಾರ … Continued

ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಇನ್ನಿಲ್ಲ

ನವದೆಹಲಿ : ಎರಡು ಅವಧಿಗಳ ಕಾಲಕ್ಕೆ ದೇಶದ ಪ್ರಧಾನಿಯಾಗಿದ್ದ ಮನಮೋಹನ್‌ ಸಿಂಗ್‌ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ 92 ವರ್ಷದ ಮನಮೋಹನ್ ಸಿಂಗ್ ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು, ಅವರು ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಮಾಜಿ ಪ್ರಧಾನಿ ಅವರು ಪತ್ನಿ ಗುರುಚರಣ್ ಸಿಂಗ್ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ. … Continued

ಮಾಜಿ ಪ್ರಧಾನಿ ಮನಮೋಹನ ಸಿಂಗ್ ದೆಹಲಿ ಆಸ್ಪತ್ರೆಗೆ ದಾಖಲು

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 92 ವರ್ಷದ ಮಾಜಿ ಪ್ರಧಾನಿ ಮನಮೋಹನ ಸಿಂಗ್‌ ಅವರನ್ನು ರಾತ್ರಿ 8 ಗಂಟೆ ಸುಮಾರಿಗೆ ಆಸ್ಪತ್ರೆಯ ತುರ್ತು ಘಟಕಕ್ಕೆ ದಾಖಲಿಸಲಾಯಿತು ಎಂದು ಹೇಳಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿದ … Continued

ವೀಡಿಯೊ..| ಮುಂಬೈ ಬಳಿ 6 ವರ್ಷದ ಮಗುವಿನ ಮೇಲೆ ಚಲಿಸಿದ ಕಾರು ; ಪವಾಡಸದೃಶ ರೀತಿಯಲ್ಲಿ ಪಾರಾದ ಮಗು..!

ಮುಂಬೈ: ಮುಂಬೈ ಸಮೀಪದ ವಸಾಯಿ ಎಂಬಲ್ಲಿ ಕಾರೊಂದು ಢಿಕ್ಕಿ ಹೊಡೆದು 6 ವರ್ಷದ ಬಾಲಕ ಗಾಯಗೊಂಡಿದ್ದರೂ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವೀಡಿಯೊ ಕ್ಲಿಪ್‌ ಒಂದರಲ್ಲಿ ಕಾರು ಆಟವಾಡುತ್ತಿದ್ದ ಮಗುವಿಗೆ ಡಿಕ್ಕಿ ಹೊಡೆಯುವುದನ್ನು ತೋರಿಸುತ್ತದೆ. ಆತನನ್ನು ಸ್ವಲ್ಪದೂರ ಎಳೆದೊಯ್ದ ನಂತರ ಆತ ಕಾರಿನಿಂದ ಅಡಿಯಿಂದ ಹೊರಬೀಳುವುದು ಕಾಣುತ್ತದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ವಸಾಯಿ … Continued

ವೀಡಿಯೊ..| ಅನಾರೋಗ್ಯ ಪೀಡಿತ ಪತ್ನಿ ನೋಡಿಕೊಳ್ಳಲು ಸ್ವಯಂ ನಿವೃತ್ತಿ ಪಡೆದ ಗಂಡ ; ಆದರೆ ಆತನ ಬೀಳ್ಕೊಡುಗೆ ಸಮಾರಂಭದಲ್ಲೇ ಪ್ರಾಣಬಿಟ್ಟ ಪತ್ನಿ…!

ಸರ್ಕಾರಿ ನೌಕರನ ನಿವೃತ್ತಿಯ ಬೀಳ್ಕೊಡುಗೆ ಸಮಾರಂಭವು ದುರಂತವಾಗಿ ಮಾರ್ಪಟ್ಟ ಘಟನೆ ನಡೆದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯ ಸಲುವಾಗಿ ಸ್ವಯಂ ನಿವೃತ್ತಿ ಪಡೆದ ನಂತರ ನೌಕರನಿಗೆ ಏರ್ಪಡಿಸಲಾಗಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಹಾಜರಿದ್ದ ಪತ್ನಿ ಅವರ ಕಣ್ಣೆದುರೇ ಸಾವಿಗೀಡಾಗಿದ್ದಾಳೆ…! ರಾಜಸ್ಥಾನದ ಕೋಟಾದಲ್ಲಿ ನಡೆದ ಘಟನೆಯ ಮನಕಲಕುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಪತಿಯ ಬೀಳ್ಕೊಡುಗೆ ಸಮಾರಂಭದಲ್ಲಿ ಪತಿ-ಪತ್ನಿಯರಿಬ್ಬರಿಗೂ … Continued

6 ಜನರನ್ನು ಮದುವೆಯಾದ ಮಹಿಳೆ ; ನಂತರ ನಗದು-ಚಿನ್ನಾಭರಣಗಳೊಂದಿಗೆ ಪರಾರಿ; 7ನೇ ಮದುವೆಗೆ ಯತ್ನಿಸಿದಾಗ ಸಿಕ್ಕಿಬಿದ್ದ ಗ್ಯಾಂಗ್‌…!

ನವದೆಹಲಿ : ಒಬ್ಬಂಟಿ ಪುರುಷರನ್ನು ಮದುವೆಯಾಗಿ ನಂತರ ಅವರ ಮನೆಯಿಂದ ಹಣ ಮತ್ತು ಚಿನ್ನಾಭರಣ ಕದಿಯುತ್ತಿದ್ದ ಗ್ಯಾಂಗ್ ಅನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಮತ್ತು ಇಬ್ಬರು ಪುರುಷರನ್ನು ಬಂಧಿಸಲಾಗಿದೆ. ಇಬ್ಬರು ಮಹಿಳೆಯರಲ್ಲಿ, ಪೂನಂ ವಧುವಿನಂತೆ ಪೋಸ್ ಕೊಡುತ್ತಿದ್ದರೆ ಇನ್ನೊಬ್ಬಳು ಸಂಜನಾ ಗುಪ್ತಾ ಎಂಬವಳು ತಾಯಿಯಂತೆ ಪೋಸ್ ನೀಡುತ್ತಿದ್ದಳು. ವಿಮಲೇಶ … Continued

ಸಂಸತ್‌ ಭವನದ ಬಳಿ ಬೆಂಕಿ ಹಚ್ಚಿಕೊಂಡ ವ್ಯಕ್ತಿ ; ಸ್ಥಿತಿ ಗಂಭೀರ

ನವದೆಹಲಿ: ದೆಹಲಿಯ ಸಂಸತ್ ಭವನದ (Parliament Building) ಬಳಿ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ತಕ್ಷಣವೇ ರೈಲ್ವೆ ಪೊಲೀಸ್, ಅಲ್ಲಿದ್ದವರು ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ಹಚ್ಚಿಕೊಂಡಿದ್ದ ವ್ಯಕ್ತಿಯನ್ನು ರಾಮಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶೇ.95 ರಷ್ಟು ದೇಹ ಸುಟ್ಟುಹೋಗಿದೆ. ಉತ್ತರ ಪ್ರದೇಶದ ಬಾಗ್‌ಪತ್‌ನ ಜಿತೇಂದ್ರ ಎಂದು ಗುರುತಿಸಲಾದ ವ್ಯಕ್ತಿ, … Continued